Connect with us

Mandya

ಮೂರು ದಿನ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

Published

on

₹30 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ, ಪ್ರತಿದಿನ 4 ಲಕ್ಷ ಜನ ಸೇರುವ ನಿರೀಕ್ಷೆ

ಮಂಡ್ಯ: ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜೂ.7, 8, 9 ರಂದು ಮೂರು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

30 ವರ್ಷಗಳ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.

ಸಮ್ಮೇಳನ ಆಯೋಜಿಸುವ ಸಂಬಂಧ ಫೆ.1 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು ಮತ್ತು ಜಿಲ್ಲೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸದರಿ ಸಭೆಯಲ್ಲಿ ತೀರ್ಮಾನದಂತೆ ಜೂನ್‌ನಲ್ಲಿ ನಡೆಸಲಾಗುವುದು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಈ ಹಿಂದೆ ಪ್ರಥಮವಾಗಿ 1974 ರಲ್ಲಿ, 2ನೇ ಬಾರಿಗೆ 1994 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿರುತ್ತದೆ. ಇದೀಗ ಜಿಲ್ಲೆಯಲ್ಲಿ 3ನೇ ಬಾರಿಗೆ ಸುಮಾರು 30 ವರ್ಷಗಳ ನಂತರ ಈ ಅವಕಾಶ ದೊರೆತಿದೆ, ಬರಗಾಲ ಮತ್ತು ಕಾವೇರಿ ಚಳವಳಿ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿತ್ತು. ಜೂನ್ ವೇಳೆಗೆ ಲೋಕಸಭಾ ಚುನಾವಣೆಯು ಮುಗಿದಿರುತ್ತದೆ ಆದ್ದರಿಂದ ಜೂನ್ ತಿಂಗಳನ್ನು ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಾಹಿತ್ಯ ಪರಿಷತ್ತಿನ ಸಲಹೆಗಳೊಂದಿಗೆ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸುವ ಅಗತ್ಯವಿರುತ್ತದೆ. ಈ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಲು ಎಲ್ಲರನ್ನೂ ಒಳಗೊಂಡಂತ ಸುಮಾರು 25 ಸಮಿತಿಗಳನ್ನು ರಚಿಸಬೇಕಾಗಬಹುದು ಎಂಬುವುದನ್ನು ತೀರ್ಮಾನಿಸಲಾಗಿರುತ್ತದೆ. ಫೆ.15ರ ನಂತರ ಸಮಿತಿಗಳ ರಚನೆಗೆ ಚಾಲನೆ ನೀಡಲಾಗುವುದು, ಚಿಕ್ಕಮಂಡ್ಯ ಕೆರೆ ಬಯಲು, ಮೈಸೂರು ಬೆಂಗಳೂರು ರಸ್ತೆಯ ಮಾಂಡವ್ಯ ಕಾಲೇಜು ಹಿಂಭಾಗದ 50–60 ಎಕರೆ ಸ್ಥಳವನ್ನು ಗುರುತಿಸಲಾಗಿದೆ ಎಂದರು.

ಕೇಂದ್ರ ಕಸಾಪ ಅಧ್ಯಕ್ಷರ ಭೇಟಿಯ ನಂತರ ಅಂತಿಮಗೊಳಿಸಲಾಗುವುದು, ಕಳೆದ ಹಾವೇರಿ ಸಮ್ಮೇಳನಕ್ಕೆ ₹20 ಕೋಟಿ ನೀಡಲಾಗಿತ್ತು. ಮಂಡ್ಯ ಸಮ್ಮೇಳನಕ್ಕೆ 5 ಕೋಟಿ ರೂ.ಹೆಚ್ಚುವರಿ ಅನುದಾನ ನೀಡಬಹುದು. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ₹30 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದೆ ಮುಖ್ಯಮಂತ್ರಿಯವರು ಈ ಸಮ್ಮೇಳನದ ವೆಚ್ಚವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿರುತ್ತಾರೆ, ಸಮ್ಮೇಳನಕ್ಕೆ ಪ್ರತಿನಿತ್ಯ ಸುಮಾರು 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಹಿಂದೆ 1994 ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ನಂತರ ಉಳಿಕೆ ಹಣದಲ್ಲಿ ಬಂದೀಗೌಡ ಬಡಾವಣೆಯಲ್ಲಿ ಕಸಾಪ ಭವನ ನಿರ್ಮಿಸಲಾಗಿತ್ತು. ಈ ಭವನ ಚಿಕ್ಕದಾಗಿರುವ ಕಾರಣ ಹೊಸ ಕನ್ನಡ ಭವನಕ್ಕೆ ಬೇಡಿಕೆ ಇದೆ. ಹೊಸ ಕನ್ನಡ ಭವನವನ್ನು ನಿರ್ಮಿಸಲು ತಮ್ಮ ಸಹಮತ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಓ ಶೇಖ್ ತನ್‌ವೀರ್ ಆಸಿಫ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಯತೀಶ್ ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mandya

ಮುಂಡುಗದೊರೆ ಪಂಚಾಯ್ತಿಗೆ ಪದ್ಮ ಅಧ್ಯಕ್ಷೆ

Published

on

ಶ್ರೀರಂಗಪಟ್ಟಣ : ತಾಲೂಕಿನ ಮುಂಡುಗದೊರೆ ಗ್ರಾ. ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಪದ್ಮ ಡಿ.ಎಸ್.ಕೋಂ ಸೋಮೇಶ ಹಾಗು ಉಪಾಧ್ಯಕ್ಷರಾಗಿ ಗಾಯಿತ್ರಿ ಕೋಂ ಶಿವರಾಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷ ಸೋಮಣ್ಣ ಹಾಗು ಉಪಾಧ್ಯಕ್ಷೆ ಸುಗುಣ ರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಎಇಇ ಮಂಜುನಾಥ್ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮಸ್ಥರು ಹಾಗೂ ಮುಖಂಡರುಗಳು ಸನ್ಮಾನಿಸಿ ಅಭಿನಂಧಿಸಿದರು.

Continue Reading

Mandya

ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬ

Published

on

ಮಂಡ್ಯ: ಎಸ್.ಬಿ ಎಜುಕೇಶನ್ ಟ್ರಸ್ಟ್, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜು, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೆಹರು ನಗರ, ಮಂಡ್ಯ, ಈ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಬಿ ಶಿವಲಿಂಗಯ್ಯರವರ ಅಧ್ಯಕ್ಷತೆಯಲ್ಲಿ ಜರುಗಿತು.

ಎಸ್‌.ಬಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಮೀರಾ ಶಿವಲಿಂಗಯ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತ್ಯುನ್ನತ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಹಾಗೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಬಹುಮಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಮಾಂಡವ್ಯ ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ. ಚಂದ್ರಶೇಖರ್ ರವರು ಬಹುಮಾನವನ್ನು ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಸ್ಕೂಲ್ ನ ಕಾರ್ಯದರ್ಶಿ ಅಬ್ದುಲ್ ಮುನೀರ್, ಮಹದೇಶ್ವರ ಚಿಲ್ಡ್ರನ್ ಸ್ಕೂಲ್ ನ ಕಾರ್ಯದರ್ಶಿ ಎಂ. ರವಿ, ಶ್ರೀ ಗುರುವಿಜ್ಞಾನ ವಿದ್ಯಾಲಯದ ಅಧ್ಯಕ್ಷರಾದ ಎಮ್.ಸಿ. ಶಿವಕುಮಾರ್, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಹದೇವಯ್ಯ, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಪಾಲದಾರರಾದ ಎಂ. ಅವಿನಾಶ್ ಡಾ. ಎಂ. ಮೋಹನ್, ಡಿ.ಎಸ್. ರಾಘವೇಂದ್ರ (ವಿಜ್ಞಾನ ವಿಭಾಗ), ಶೈಕ್ಷಣಿಕ ಪಾಲುಗಾರರಾದ ವಾಣಿಜ್ಯ ವಿಭಾಗದ ಚನ್ನೇಶ್ ಹಾಗೂ ಅರ್ಚನಾರವರು ವೇದಿಕೆಯಲ್ಲಿ ಹಾಜರಿದ್ದರು.

ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Continue Reading

Mandya

ಜೆ.ಡಿ.ಎಸ್ ತೆಕ್ಕೆಗೆ ಹುಲಿಕೆರೆ ಪಂಚಾಯಿತಿ

Published

on

ನಾಗಮಂಗಲ : ಹುಲಿಕೆರೆ ಗ್ರಾಮ ಪಂಚಾಯಿತಿಯ ಈ ಹಿಂದೆ ಅಧ್ಯಕ್ಷರಾಗಿದ್ದ ಶಿವರಾಮು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ನೂತನ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು. ಎರಡು ನಾಮಪತ್ರ ಸಲ್ಲಿಕೆಯಾಗಿದ್ದು ಕಾಂತರಾಜು ಗೆ ಮೂರು ಮತಗಳು ಹಾಗೂ ಸುಮಾ ಚೇತನ್ ಕುಮಾರ್ ರವರಿಗೆ 9 ಮತಗಳ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಸತೀಶ್ ರವರು ಘೋಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸುಮ ಚೇತನಕುಮಾರ್ ರವರು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ ಹುಲಿಕೆರೆ ಗ್ರಾಮ ಪಂಚಾಯಿತಿಯು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿರುವಂತಹ ಪಂಚಾಯಿತಿ. ಇಲ್ಲಿ ನಾನು ಅಧ್ಯಕ್ಷರಾಗಿರುವುದಕ್ಕೆ ಸಂತಸದ ವಿಚಾರ ನನ್ನ ಆಯ್ಕೆ ಮಾಡಿದ ಪಂಚಾಯತಿ ಆತ್ಮೀಯ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಈ ಹುದ್ದೆಯನ್ನು ನೀಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಗ್ರಾಮೀಣ ಪ್ರದೇಶದ ಕುಡಿಯುವ ನೀರು ರಸ್ತೆ ಮತ್ತು ವಿದ್ಯುತ್ ದೀಪಕ್ಕೆ ಮೊದಲನೇ ಆದ್ಯತೆ ನೀಡಿ ಮಹಾತ್ಮ ಗಾಂಧಿಯ ನರೇಗಾ ಯೋಜನೆಗೆ ಉತ್ತಮ ರೀತಿ ನಿರ್ವಹಣೆ ಮಾಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು.

ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತೆ ಮುಖಂಡರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು

ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮೇಗೌಡ. ಲಕ್ಷ್ಮೀದೇವಮ್ಮ. ಶಿವಲಿಂಗಯ್ಯ. ಮಂಜುಳ. ತಿಮ್ಮೇಗೌಡ. ದಿನೇಶ್ ಕಲ್ಲೇನಹಳ್ಳಿ. ನರಗನಹಳ್ಳಿ ದೇವೇಗೌಡ.ಪುರಸಭೆ ಸದಸ್ಯ ಶಂಕರ್ಲಿಂಗೇಗೌಡ. ಪಡುವಲ ಪಟ್ಟಣ ಪುಟ್ಟರಾಜು.ಎಂ ಎನ್ ಸುರೇಶ್ ಜವರೇಗೌಡ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

Continue Reading

Trending

error: Content is protected !!