Mysore
ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯ
ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ: ಕಾನೂನು ಕ್ರಮಕ್ಕೆ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯ
ಸಾಲಿಗ್ರಾಮ : ಬೆಂಗಳೂರಿನಲ್ಲಿ ವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೃಷ್ಣರಾಜನಗರ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ತಾ.ಅಧ್ಯಕ್ಷ ವಿಶ್ವನಾಥ್ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯ ಮುಂಭಾಗ ಧರಣಿ ಕೈಗೊಂಡು ಗ್ರೇಡ್-೨ ತಹಸೀಲ್ದಾರ್ ಬಾಲಸುಬ್ರಮಣ್ಯ ಹಾಗೂ ಶಿರಸ್ತೆದಾರ್ ಅಕ್ರಂ ಭಾಷ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅಧ್ಯಕ್ಷರು ಮೇ.೧೮ ರಂದು ಬೆಂಗಳೂರಿನ ಶಿವಾಜಿನಗರದ ಶಮ್ಸ್ ಕಲ್ಯಾಣ ಮಂಟಪದಲ್ಲಿ
ನಡೆಯುತ್ತಿದ್ದ ಮದುವೆ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣಕ್ಕೆ ಹೋಗಿದ್ದ ಛಾಯಾಗ್ರಾಹಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿದ್ದ ಕೆಲವು ಪುಂಡರು ಮನಬಂದoತೆ ಹಲ್ಲೆ ನಡೆಸಿದವರ ವಿರುದ್ಧ ಸಂಘದ ಪದಾಧಿಕಾರಿಗಳು ನಿರ್ದೇಶಕರು ಹಾಗೂ ಸದಸ್ಯರು ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರಿಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಹೊಟ್ಟೆಪಾಡಿಗಾಗಿ ವಿಡಿಯೋ ಚಿತ್ರೀಕರಣ ಮಾಡುವ ಛಾಯಾಗ್ರಾ ಹಕನ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಘಟನೆ ಯಾಗಿದ್ದು, ಇದರಿಂದ ಛಾಯಾಗ್ರಹಕರಿಗೆ ಯಾವುದೇ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಕೃತ್ಯವನ್ನು ಖಂಡಿಸಿ ರಾಜ್ಯ ಛಾಯಾಗ್ರಹಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಲ್ಲೆ ನಡೆಸಿದ ಪುಂಡರ ಮೇಲೆ ಪೊಲೀಸರಿಗೆ ದೂರು ನೀಡಿದ್ದು, ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಹಲ್ಲೆ ಮಾಡಿದ ಪುಂಡರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಛಾಯಾಗ್ರಹಕರಿಗೆ ಸೂಕ್ತ ರಕ್ಷಣೆ ದೊರಕಿಸಿಕೊಡಬೇಕು ಹಾಗೂ ಹಲ್ಲೆಗೊಳಾಗಿರುವ ಛಾಯಾಗ್ರಹಕನಿಗೆ ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಎಂ.ಪಿ.ಮಹದೇವ, ಸಂತೋಷ್, ಕಾರ್ಯದರ್ಶಿ ಶ್ರೀನಿವಾಸ್‌ಗೌಡ, ಪದಾಧಿಕಾರಿಗಳಾದ ಯೋಗೇಶ್, ಜಯರಾಜ್, ಚೀರನಹಳ್ಳಿ ರವಿ, ನಿರ್ದೇಶಕರುಗಳಾದ ಉಮಾಶಂಕರ್, ಶುಭಂರವಿ, ಮಂಜುನಾಥ್, ರಘುಚಂದಗಾಲು, ವಿಜಯ್, ಸದಸ್ಯರಾದ ಶಿಲ್ಪಶ್ರೀನಿವಾಸ್, ತಿಪ್ಪೂರುರವಿ, ಶ್ರೀನಿವಾಸ್, ಸಾರಾ.ನಾಗೇಶ್, ಮಧುವನಹಳ್ಳಿ ರಘು, ದಯನಂದ್, ರಕ್ಷಿತ್, ಸುನೀಲ್, ಶರತ್, ಸುನೀಲ್ ಮೊದಲಿಯರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
Mysore
ದಲೈವಾಲಾ ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ಸ್ವಾಗತಾರ್ಹ: ಕುರುಬೂರು ಶಾಂತಕುಮಾರ್
ಮೈಸೂರು: ದೆಹಲಿ ಗಡಿಯಲ್ಲಿ ದೇಶದ ರೈತರ ಹಿತಕ್ಕಾಗಿ ಹೋರಾಡುತ್ತಿದ್ದ ದಲೈವಾಲಾ 53 ದಿನಗಳ ಉಪವಾಸ ಕೈ ಬಿಟ್ಟು ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರೈತರೆಲ್ಲ ಅವರ ಪ್ರಾಣದ ಬಗ್ಗೆ ಆತಂಕಗೊಂಡಿದ್ದರು ಎಂದು ಹೇಳುತ್ತ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಗಾಗಿ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚ ರಾಜಕೀಯೆತರ ಸಂಘಟನೆ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ಧಲೈವಾಲಾ 53 ದಿನದ ಉಪವಾಸ ಸತ್ಯಾಗ್ರಹ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಬೇಡಿಕೆ ಈಡೆರುವ ತನಕ ಚಳುವಳಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ. ಪೊಲೀಸ್ ಮಹಾ ನಿರ್ದೇಶಕರು ಅಧಿಕಾರಿಗಳ ತಂಡ ಚಳುವಳಿ ನಡೆಯುತ್ತಿರುವ ಕನೋರಿ ಬಾರ್ಡರ್ಗೆ ಮೂರು ದಿನಗಳ ಹಿಂದೆ ತೆರಳಿ ಫೆಬ್ರವರಿ 14 ರಂದು ಚಂಡೀಗಡದಲ್ಲಿ ರೈತರ ಸಮಸ್ಯೆಗಳಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ಕೇಂದ್ರ ಸರ್ಕಾರದ ಲಿಖಿತ ಪತ್ರ ನೀಡಿ 3 ಗಂಟೆಗಳ ಕಾಲ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗಿದೆ ಉಪವಾಸ ನಿರತ ದಲೆವಾಲ ನಿರ್ಧಾರ ರೈತರ ಹೋರಾಟದ ಶಕ್ತಿ ಹೆಚ್ಚಿಸಿದೆ. ಕಳೆದ ಮೂರು ದಿನಗಳಿಂದ 124 ರೈತರು ದಲೆವಾಲ ಉಪವಾಸ ಬೆಂಬಲಿಸಿ ನಾವು ಪ್ರಾಣ ತ್ಯಾಗಕ್ಕೆ ಸಿದ್ದ ಎಂದು ಉಪವಾಸ ಆರಂಭಿಸಿದರು. ಅವರು ಸಹ ಉಪವಾಸವನ್ನು ನಿನ್ನೆಯಿಂದ ಕೈಬಿಟ್ಟಿದ್ದಾರೆ. ಆದರೆ, ಸಮಸ್ಯೆ ಬಗೆಹರಿಯುವ ತನಕ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.
ಜನವರಿ 26 ರಂದು ದೇಶಾದ್ಯಂತ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಟ್ಯಾಕ್ಟರ್ ರಾಲಿ ನಡೆಸಲು ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿಯೂ ತಾಲೂಕು ಜಿಲ್ಲಾ ಮಟ್ಟದಲ್ಲಿ ಟ್ರ‍್ಯಾಕ್ಟರ್ ರ‍್ಯಾಲಿ ನಡೆಸಲಾಗುವುದು. ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ಕಳೆದುಕೊಂಡ ಸ್ವತಂತ್ರ ಹೋರಾಟಗಾರರ ದೇಶದ ಗಡಿಯಲ್ಲಿ ಗಡಿ ರಕ್ಷಣೆಗಾಗಿ ಹುತಾತ್ಮರಾದ. ದೇಶದ ಜನರ ಆಹಾರ ಭದ್ರತೆಯಾಗಿ ದುಡಿದು ಹುತಾತ್ಮರಾದ ರೈತರ ನೆನಪಿನ ದಿನ ರಾಜ್ಯಮಟ್ಟದಲ್ಲಿ 30 ರಂದು ದಾವಣಗೆರೆಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ವಿಶ್ವ ಕಪ್ ಗೆದ್ದು ಜಯಭೇರಿ ಬಾರಿಸಿದ ಪುರುಷ, ಮಹಿಳೆಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಮಹಿಳೆಯರ ಭಾರತ ತಂಡದಲಿ ಉತ್ತಮ ಆಟ ಆಡುವ ಮೂಲಕ ಪ್ರಶಸ್ತಿಗೆ ಬಾಜನರಾಗಿರುವ ನಮ್ಮ ರಾಜ್ಯದ ಹಿರಿಮೆ ಹೆಚ್ಚಿಸಿದ ನಮ್ಮ ಊರಿನ ಕು. ಚೈತ್ರಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಜ್ಯ ಸರ್ಕಾರ ಅಭಿನಂದನೆ ಹೇಳಿದರೆ ಸಾಲದು. ಇಂಥಹ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಬೇಕು. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ರೀಡಾಪಟುಗೆ 3 ಕೋಟಿ ರೂ. ಪ್ರೋತ್ಸಾಹ ಧನ ನೀಡುವ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು.
ಟಿ ನರಸೀಪುರ ತಾಲೂಕಿನ ಸರ್ವ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ನಾಳೆ (ಜ.21) ಚೈತ್ರಳನ್ನು ಅಭೂತಪೂರ್ವ ಸ್ವಾಗತ ನೀಡಿ ಅಭಿನಂದನಾ ಸಮಾರಂಭ ನಡೆಸಲಾಗುತ್ತಿ ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ದೇವನೂರು ವಿಜಯೇಂದ್ರ, ಸಾತಗಳ್ಳಿ ಬಸವರಾಜು, ಹಳ್ಳಿಕೆರೆಹುಂಡಿ ಪ್ರಭುಸ್ವಾಮಿ, ಕುರುಬೂರ್ ಪ್ರದೀಪ್, ವಾಜಮಂಗಲನಾಗೇಂದ್ರ ಉಪಸ್ಥಿತರಿದ್ದರು.
Mysore
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 2.5 ಲಕ್ಷ ಹಣ ಸಂಗ್ರಹ
ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ತುಂಬಾ ಯಶಸ್ವಿಯಾಗಿ ಪೂರ್ಣಗೊಂಡಿತು. ಒಟ್ಟಾರೆಯಾಗಿ 2.5 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ತಿಳಿಸಿದರು.
ರಂಗಾಯಣದ ಬಿ.ವಿ. ಕಾರಂತ್ ರಂಗ ಚಾವಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು . ಆರಂಭವಾದ ಮೊದಲೆರಡು ದಿನಗಳಲ್ಲಿ ಸಾರ್ವಜನಿಕರ ಸಂಖ್ಯೆಯು ಕಡಿಮೆಗೊಂಡಿದ್ದು. ತದನಂತರ ಕೊನೆಯದಿನದ ವರೆಗೂ ಕಲಾಮಂದಿರ ವರೆತು ಪಡಿಸಿ ಶೇ.80. 90 ರಂಗಾಯಣ ಕಲಾಪ್ರೇಕ್ಷರಿಂದ ತುಂಬಿ ತುಳುಕಿತು ವಾರಾಂತ್ಯ [ ಶನಿವಾರ ಮತ್ತು ಭಾನುವಾರ] ದಿನಗಳಲ್ಲಿ ಕಲಾಮಂದಿರನು ಸೇರಿ ಶೇ 100 ಸಾರ್ವಜನಿಕರಿಂದ ಕಂಗೊಳಿಸಿತು ಎಂದು ಹೇಳಿದರು.
ಪ್ರತಿವರ್ಷದಂತೆ ಈ ವರ್ಷವು ಬಹುಭಾಷೆಯ ನಾಟಕಗಳು, ಚಲನಚಿತ್ರಗಳು, ಬೀದಿನಾಟಕಗಳು, ಜನಪದ ಉತ್ಸವ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾದವು ಎಂದರು.
ಒಟ್ಟಾರೆಯಾಗಿ 6 ದಿನಗಳ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 1.200 ಕ್ಕು ಹೆಚ್ಚು ಕಲಾವಿದರು ಭಾಗವಹಿಸಿ ವಿಬಿನ್ನವಾಗಿ ಕಲೆ ಸಾಂಸ್ಕೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.
ಈ ವರ್ಷ ಬಹುರೂಪಿಯ ರಾಷ್ಟ್ರೀಯ ನಾಟಕೋತ್ಸವದಲ್ಲಿ ಬಹಳ ವಿಶೇಷವಾಗಿ ಮಕ್ಕಳ ಬಹುರೂಪಿ ವಿಶೇಷ ಕಾರ್ಯಕ್ರಮ ಆರಂಭಿಸಿದ್ದು. ಒಟ್ಟಾರೆಯಾಗಿ ಮಕ್ಕಳ ನಾಟಕವನ್ನು ಸುಮಾರು ಒಂದು ಸಾವಿರ ಮಕ್ಕಳು ವಿಕ್ಷಣೆ ಮಾಡಿದರು. ಚಲನಚಿತ್ರ ಮತ್ತು ಮಕ್ಕಳ ಚಲನಚಿತ್ರವನ್ನು ಎರಡು ಸಾವಿರ ಮಕ್ಕಳು ವಿಕ್ಷಿಸಿದ್ದಾರೆ ಎಂದು ತಿಳಿಸಿದರು.
ರಂಗಾಯಣದ ಉಪನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಉಪಸ್ಥಿತರಿದ್ದರು.
Mysore
ಮೈಸೂರಿನಲ್ಲಿ ಸಾಂಸ್ಕೃತಿಕ ಕಾವೇರಿ ರಾಜ್ಯ ಸಮ್ಮೇಳನ
ಮೈಸೂರು: ಮೈಸೂರಿನಲ್ಲಿ ಸಂಸ್ಕೃತ ಕಾವೇರಿ ರಾಜ್ಯ ಸಮ್ಮೇಳನವನ್ನು ಫೆಬ್ರವರಿ 1 ಮತ್ತು 2 ರಂದು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಲಾಗಿದೆ ಎಂದು ಕೃಷ್ಣ ರಾಜಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅವರು ತಿಳಿಸಿದರು.
ಈ ಕುರಿತು ನಗರದ ಪ್ರತಿಕಾಗೋಷ್ಠಿಯಲ್ಲಿ ಸೋಮವಾರ ಮತನಾಡಿದ ಅವರು ಯಾವುದೇ ಜಾತಿ ಧರ್ಮ ಬೇದವಿಲ್ಲದೆ ಎಲ್ಲರ ಮನೆಗಳಲ್ಲಿ ಸಂಸ್ಕೃತ ಪಾಠ ಶಾಲೆಗಳು ಆರಂಭ ಆಗಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಫೆಬ್ರವರಿ 1 ರಂದು ಸಂಸ್ಕೃತಿಕ ಕಾವೇರಿ ರಾಜ್ಯ ಸಮ್ಮೇಳನವನ್ನು ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಉದ್ಘಾಟನೆಯನ್ನು ನೆರವೇರಿಸುವರು. ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜಿ ಮಹರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು.
ಸಂಸ್ಕ್ರತ ಕಾವೇರಿ ರಾಜ್ಯ ಸಮ್ಮೇಳನದ ಆಕರ್ಷಣೆಗಳು: ವಿಶೇಷ ಉಪನ್ಯಾಸ, ವಿವಿಧ ಗೋಷ್ಠಿಗಳು, ವಿಜ್ಞಾನ ಪ್ರದರ್ಶಿನ, ವಸ್ತು ಪ್ರದರ್ಶಿನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಈ ಸಮ್ಮೇಳನದಲ್ಲಿ ಶೋಭಾಯಾತ್ರೆಯು ಫೆಬ್ರವರಿ 1 ರಂದು ಸಂಜೆ 5 ಗಂಟೆಗೆ ವಿದ್ಯಾರಂಣ್ಯ ಪುರಂ, ಚಾಮುಂಡಿಪುರಂ, ಮೂಲಕ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ನಡೆಸಿ ನಂತರ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದ್ದು ಸಂಸ್ಕೃತ ಭಾರತಿಯ ಅಖಿಲ ಭಾರತ ಉಪಾಧ್ಯಕ್ಷ ದಿನೇಶ್ ಕಾಮತ್ ಅವರಿ ಸಾರ್ವಜನಿಕ ಸಭೆ ಕುರಿತು ಭಾಷಣ ಮಾಡುವರು ಎಂದರು.
ಸಂಸದ ಯದುವೀರ್ ಒಡೆಯರ್ ಅವರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿ ಭಾಗವಹಿಸುವರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿ,ಶ್ರೀ ಶರಚ್ಚಂದ್ರ ಸ್ವಾಮೀಜಿ, ಮೈಸೂರು ವಿವಿ.ಯ ಕುಲಪತಿ ಪ್ರೊ, ಲೋಕನಾಥ್, ಸಂಗೀತ ವಿವಿ.ಯ ಕುಲಪತಿ ಪ್ರೊ, ವಿ ನಾಗೇಶ್ ಬೆಟ್ಟಕೋಟೆ, ಸಂಸ್ಕೃತ ವಿವಿ.ಯ ಕುಲಪತಿ ಡಾ. ಅಹಲ್ಯ ಶರ್ಮ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಸಂಸದ ಪ್ರತಾಪ್ ಸಿಂಹ, ಶ್ರೀ ನಿಧಿ ಗ್ರೂಫ್ಸ್ ನ ಪ್ರಭಾಕರ್ ರಾವ್ ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಫೆಬ್ರವರಿ 2 ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಸಂಸ್ಕೃತ ಭಾರತಿಯ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳಾದ ಜಯಪ್ರಕಾಶ್ ಗೌತಮ್ ಅವರು ಸಮಾರೋಪ ಭಾಷಣ ಮಾಡುವರು ಎಂದು ತಿಳಿಸಿದರು.
ಸಂಸ್ಕೃತ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್, ಅಖಿಲ ಭಾರತ ಪ್ರಚಾರ ಪ್ರಮುಖರಾದ ಡಾ,ಸಚಿನ್ ಕಟಾಳೆ, ರಾಜ್ಯ ಕಾರ್ಯದರ್ಶಿ ಗುರುರಾವ್ ಕುಲಕರ್ಣಿ, ರಾಜ್ಯದ ಸಂಸ್ಕೃತ ಪ್ರಧ್ಯಾಪಕರು ಸಂಸ್ಕೃತ ಸಾಹಿತಿಗಳು, ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಹೇಳಿದರು.
ಸಂಸ್ಕೃತ ಭಾರತಿ ಕರ್ನಾಟಕ ಸಮ್ಮೇಳನದ ಸಂಚಾಲಕ ಡಾ. ಬಿ.ಜೆ. ಭಾಗ್ಯಲಕ್ಷ್ಮಿ, ಸಂಸ್ಕೃತ ಕಾವೇರಿ ಸ್ವಾಗತ ಸಮಿತಿಯ ಕಾರ್ಯದರ್ಶಿ ಅ.ಮ. ಭಾಸ್ಕರ ಅವರು ಉಪಸ್ಥಿತರಿದ್ದರು.
-
Mysore22 hours ago
ಮೈಸೂರು ಮಹಾರಾಜರಿಗೆ ಮದುವೆ ಆಮಂತ್ರಣ ನೀಡಿದ ಡಾಲಿ
-
Sports21 hours ago
ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಸುರೇಶ್ ರೈನಾ
-
Sports20 hours ago
Kho Kho world cup 2025: ಭಾರತ ಮಹಿಳಾ ಹಾಗೂ ಪುರುಷ ತಂಡಗಳೇ ಚಾಂಪಿಯನ್
-
National - International20 hours ago
ಮಹಾ ಕುಂಭಮೇಳ ದರ್ಶನಕ್ಕಾಗಿ ಹುಬ್ಬಳ್ಳಿಯಿಂದ ವಿಶೇಷ ರೈಲು ವ್ಯವಸ್ಥೆ : ಈ ದಿನ ಮಾತ್ರ!
-
Mysore24 hours ago
ತಾಲೂಕು ಕಚೇರಿಗಳು ಪ್ರಾರಂಭವಾಗಲು ಒತ್ತಾಯ: ಹೊಸೂರು ಕುಮಾರ್
-
Hassan8 hours ago
ಅನುಮತಿ ಪಡೆಯೇ ಚಿತ್ರೀಕರಣ ಉಪಕರಣ ತಂದಿಟ್ಟಿದ್ದಕ್ಕೆ ದಂಡ ವಿಧಿಸಿಧ್ದ ಅರಣ್ಯ ಇಲಾಖೆ
-
Hassan8 hours ago
ಹಾಸನ : ಆನ್ಲೈನ್ ಗೇಮ್ಗೆ ಯುವಕ ಬಲಿ
-
Mysore23 hours ago
ಪ್ಲಾಸ್ಟಿಕ್ ತ್ಯಾಜ್ಯ ಕಾನನ ಪ್ರವೇಶಿಸದಂತೆ 2 ಹಂತದ ತಪಾಸಣೆ: ಈಶ್ವರ ಖಂಡ್ರೆ