Hassan
ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರವ್ ಮಾಡುವ ಮೊದಲೆ ಬಂಧಿತರಾದ ಆರ್.ಪಿ.ಐ. ಸತೀಶ್ ಇತರರು
ಹಾಸನ: ರಾಮಚಂದ್ರಾಪುರ ಗ್ರಾಮದ ಸಿದ್ದಯ್ಯರವರಿಗೆ ನ್ಯಾಯ ಕೊಡಸಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರವ್ ಮಾಡಲು ಮುಂದಾಗಿದ್ದ ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ಹಾಗೂ ಇತರರು ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಬಂದಿಸಿದ ಘಟನೆ ಭಾನುವಾರದಂದು ಮದ್ಯಾಹ್ನ ನಡೆದಿದೆ.

ಸಿದ್ದಯ್ಯ ಅವರಿಗೆ ನ್ಯಾಯ ಕೊಡಿಸುವಂತೆ ಈ ಹಿಂದೆ ಹೇಳಿಕೆ ನೀಡಿದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು ಹಾಸನಕ್ಕೆ ಬಂದಾಗ ಘೇರವ್ ಮಾಡುವ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರು ಭಾನುವಾರದಂದು ಹಾಸನದ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಮಾಹಿತಿ ಆಧಾರಿಸಿ ಘೇರವ್ ಮಾಡಲು ಮೊದಲೆ ಸಿದ್ಧತೆಯಲ್ಲಿ ತೊಡಗಿದ್ದರು. ಇದನ್ನರಿತ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಬೆಳಗಿನಿಂದಲೇ ಹುಡುಕಾಟ ನಡೆಸಿದರೂ ಸತೀಶ್ ಸಿಕ್ಕಿರಲಿಲ್ಲ. ಇನ್ನೇನು ಸಚಿವರು ಆಗಮಿಸುವ ಕೆಲ ಸಮಯದಲ್ಲಿ ಆರ್.ಪಿ.ಐ. ಸತೀಶ್ ಅವರು ಜಿಲ್ಲಾ ಪಂಚಾಯತ್, ಅಂಬೇಡ್ಕರ್ ಪ್ರತಿಮೆ ಮುಂದೆ ವೃತ್ತಕ್ಕೆ ಆಗಮಿಸಿದಾಗ ಮೊದಲೆ ಕಾದಿದ್ದ ಡಿವೈಎಸ್ಪಿ ಹಾಗೂ ಪೊಲೀಸ್ ಅಧಿಕಾರಿಗಳು ಸುತ್ತುವರೆದರು. ಆ ಸಮಯಕ್ಕೆ ಜಿಲ್ಲಾ ಮಂತ್ರಿಗಳು ಪ್ರವಾಸಿ ಮಂದಿರಕ್ಕೆ ಹೋದ ಕೂಡಲೇ ಬಂಧಿಸಿ ಆವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದರು. ಬಂದಿಸುವ ಮೊದಲು ಆಗಿರುವ ಅನ್ಯಾಯದ ಬಗ್ಗೆ ಸತೀಶ್ ಮನವರಿಕೆ ಮಾಡಿದರು.

ಇದೆ ವೇಳೆ ತನಗೆ ಸಿದ್ದಯ್ಯ ರವರಿಗೆ ಆಗಿರುವ ಅನ್ಯಾಯದ ಬಗ್ಗೆ ತಮ್ಮ ಅಳಲು ತೋಡಿಕೊಳ್ಳುತ್ತಾ, ಬೇಲೂರು ತಾಲ್ಲೂಕು. ಮಾದಿಹಳ್ಳಿ ಹೋಬಳಿ ರಾಮಚಂದ್ರಾಪುರ ಗ್ರಾಮದ ಸಿದ್ದಯ್ಯರವರಿಗೆ ಗ್ರಾನೈಟ್ ರಾಜಶೇಖರ್ ಅವರು ಅನ್ಯಾಯ ಮಾಡಿ ದೌರ್ಜನ್ಯ ಎಸಗಿದ್ದಾರೆ. ಈಗಾಗಲೇ ಅವರ ಮೇಲೆ ದೂರು ಕೂಡ ದಾಖಲಾಗಿದ್ದರೂ ಕೂಡ ಬಂದಿಸಿರುವುದಿಲ್ಲ. ದುರಂತ ಎಂದರೇ ಇತ್ತಿಚಿಗೆ ನಡೆದಂತಹ ಗಣರಾಜ್ಯೋತ್ಸವದಲ್ಲಿ ವೇದಿಕೆ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಬಾಗವಹಿಸಿದ್ದು, ವೇದಿಕೆ ಮೇಲೆ ಇಂತಹ ಆರೋಪಿಯನ್ನು ಕೂರಿಸಿಕೊಂಡಿದ್ದರು. ಇದು ಪ್ರಜಾಪ್ರಭುತ್ವಕ್ಕೆ, ಗಣತಂತ್ರಕ್ಕೆ ಅವಮಾನ ಮಾಡಿದಂತೆ ಎಂದು ದೂರಿದರು. ಅಕ್ರಮ ಗಣಿಗಾರಿಕೆ ಮಾಡಿದರೂ ಕೂಡ ಅಧಿಕಾರಿ ಮಣ್ಣು ತೆಗೆದಿದೆ ಎಂದು ವರದಿ ಕೊಟ್ಟಿದ್ದಾರೆ. ಇನ್ನು ಜಿಲ್ಲಾಡಳಿತ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಗ್ರಾನೈಟ್ ರಾಜಶೇಖರ್ ಅವರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬೆಂಬಲವಾಗಿ ನಿಂತಿರುವುದರಿಂದ ನ್ಯಾಯ ಸಿಗುತ್ತಿಲ್ಲ ಎಂದರು. ವಡ್ಡರಹಳ್ಳಿ ಕೊಪ್ಪಲಿನಲ್ಲೂ ಕೂಡ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರ ಬಗ್ಗೆಯೂ ಕೂಡ ಇದುವರೆಗೂ ಯಾವ ಕ್ರಮಕೈಗೊಂಡಿರುವುದಿಲ್ಲ. ಸರಕಾರಕ್ಕೆ ಕಣ್ಣು ತೆರೆಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರವ್ ಮಾಡಿ ಪ್ರತಿಭಟನೆ ಮಾಡುವ ಮೂಲಕ ಎಚ್ಚರಿಕೆ ಕೊಡಲಾಗುತ್ತಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ರಾಮಚಂದ್ರಾಪುರ ಗ್ರಾಮದ ಸಿದ್ದಯ್ಯ ಮತ್ತು ಕುಟುಂಬದವರು ಸ್ಥಳದಲ್ಲಿದ್ದರು.
Hassan
ಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
ಅರಕಲಗೂಡು: ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿ ವಾಸವಾಗಿರುವ ಅರ್ಪಿತ ಎಂಬುವವರು ಸಹಾಯಕ್ಕಾಗಿ 112 ಕರೆ ಮಾಡಿದರೆ ಸಮಯಕ್ಕೆ ಸರಿಯಾಗಿ ವಾಹನ ಬಾರದೇ ಇದ್ದರಿಂದ ಪೊಲೀಸ್ ಠಾಣೆಗೆ ಕರೆ ಮಾಡಿದ್ದರು. ಆಗ ಎಎಸ್ಐ ದೇವರಾಜ್ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಏನಿದು ಘಟನೆ?
ಅಸಹಾಯಕ ಅರ್ಪಿತಾ ಅವರ ಅತ್ತೆ ಭಾಗ್ಯಮ್ಮ, ಅತ್ತಿಗೆ ಗೀತಾ, ನಾದಿನಿ ಜ್ಯೋತಿ, ಬಾವ ಲೋಕೇಶ್ ಎಲ್ಲಾ ಸೇರಿ ಗಂಡ ಇಲ್ಲದ ವೇಳೆ ಅವರ ಮೇಲೆ ದಾಳಿ ಮಾಡಿದ್ದರು. ಅಲ್ಲದೇ ಮನೆಯ ಮಹಡಿಯ ಮೇಲೆ ವಾಸವಿದ್ದ ಅವರ ಮನೆಗೆ ಬೀಗ ಹಾಕಿ ಅವರನ್ನು ಮನೆ ಇಂದ ಹೊರ ಹಾಕುವ ಪ್ರಯತ್ನ ಮಾಡಿದ್ದರು.
ಅರ್ಪಿತಾ ಅವರಿಗೆ ಪ್ರೀತಿಸಿ 5 ವರ್ಷದ ಹಿಂದೆ ಮದುವೆ ಆಗಿತ್ತು. ಆದರೆ ಒಂದು ವರ್ಷದಿಂದ ಚೆನ್ನಾಗಿ ನೋಡಿಕೊಳ್ಳದೆ ಹೆಂಡತಿ ಇದ್ದರಿಂದ ಗಂಡನಿಂದ ದೂರ ಉಳಿದ್ದರು. ಇದೀಗ ಅರ್ಪಿತಾ ಅವರನ್ನು ಮನೆ ಖಾಲಿ ಮಾಡಿಸೋದಕ್ಕೆ ಅವರ ಅತ್ತೆ ಬಂದಿದ್ದಾರೆ.

ಈ ವೇಳೆ ಪೊಲೀಸರು ಆಕೆಯ ಸಹಾಯಕ್ಕೆ ಬಾರದೇ ಹಲ್ಲೆ ಮಾಡಿದವರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಹಲ್ಲೆಗೊಳಗಾದ ಅಸಹಾಯಕ ಮಹಿಳೆ ದೂರು ತೆಗೆದುಕೊಳ್ಳಲು ಎಎಸ್ಐ ದೇವರಾಜ್ ನಿರಾಕರಿಸಿದ್ದಾರೆ. ಆ ಅಸಹಾಯಕ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ, ನ್ಯಾಯ ಸಿಗದೇ ಕಣ್ಣೀರು ಹಾಕಿಕೊಂಡು ತನ್ನ ಅಳಲನ್ನು ತೋಡಿಕೊಂಡು ಬೀದಿಗೆ ಬಿದ್ದಿದ್ದಾರೆ.

ಈ ಸಂತ್ರಸ್ಥೆಯೂ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Hassan
ಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
ಅರೇಹಳ್ಳಿ: ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಆಭರಣ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇಲೂರು ತಾಲೂಕು ಸ್ಕೂಲ್‌ಗರ್ಜೆ ಗ್ರಾಮದ ಯೋಗೇಶ(24) ಬಂಧಿತ ಆರೋಪಿ. ಈತನಿಂದ ಅಂದಾಜು 20 ಲಕ್ಷ ರೂ. ಮೌಲ್ಯದ 140 ಗ್ರಾಂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ ಏನು?
ಸಮೀಪದ ನಾಗೇನಹಳ್ಳಿ ಗ್ರಾಮದ ಹನುಮೇಗೌಡ ಎಂಬುವರ ಮನೆಯಲ್ಲಿ ಕಳೆದ ಜನವರಿ 23ರಂದು ಬರೋಬ್ಬರಿ 140 ಗ್ರಾಂ. ತೂಕದ ಚಿನ್ನದ ವಡನೆಗಳನ್ನು ಆರೋಪಿ ಕಳ್ಳತನ ಮಾಡಿದ್ದ.
ಪತ್ತೆಗಾಗಿ ಎಸ್‌ಪಿ ಶುಭಾನ್ವಿತಾ ಅವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಕೆ.ತಮ್ಮಯ್ಯ ಹಾಗೂ ಶ್ರೀನಿಧಿ ಅವರ ಮಾರ್ಗದರ್ಶನದಲ್ಲಿ ಅರಸೀಕೆರೆ ಉಪ ವಿಭಾಗದ ಡಿವೈಎಸ್‌ಪಿ ಬಿ.ಆರ್.ಗೋಪಿ, ಹಳೇಬೀಡು ವೃತ್ತಿ ನಿರೀಕ್ಷಿಕ ಜಗದೀಶ್ ಬಿ.ಆರ್. ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದರು.

ತಂಡದಲ್ಲಿ ಅರೇಹಳ್ಳಿ ಪಿಎಸ್‌ಐ ಶೋಭಾ, ಸಿಬ್ಬಂದಿಗಳಾದ ಪೃಥ್ವಿ , ಸುಪ್ರೀತ್, ಹೇಮಕಾಂತ್, ಫಕೃದ್ದೀನ್, ಸಮೀನಾ ತಾಜ್ ಇದ್ದರು.
ಈ ತಂಡವು ಕಳ್ಳತನ ನಡೆದ ಎರಡು ವಾರಗಳ ಅಂತರದಲ್ಲಿ ಆರೋಪಿ ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ 140 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಕೆಲ ವರ್ಷ ಬೇಕರಿ ಕೆಲಸ ಮಾಡಿಕೊಂಡಿದ್ದ ಖದೀಮ, ಅದಾದ ಬಳಿಕ ಕಾರು ಚಾಲಕನಾಗಿದ್ದ. ಈಗ್ಗೆ ಆರು ತಿಂಗಳ ಹಿಂದೆ ಊರಿಗೆ ಬಂದವನೇ ಕಳ್ಳತನದ ಕಸುಬಿಗೆ ಇಳಿದಿದ್ದ. ಈ ಹಿಂದೆಯೂ ಒಂದು ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
ಅಚ್ಚರಿ ಎಂದರೆ ಈತ ಜ.23 ರಂದು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮನೆಯಲ್ಲೇ ಇಟ್ಟಿದ್ದ ಎನ್ನಲಾಗಿದೆ. ಇದೀಗ ಮನೆಗಳ್ಳ ಖಾಕಿ ಕೈಗೆ ಸಿಕ್ಕಿ ಬಿದ್ದಿದ್ದಾನೆ. ತನಿಖಾ ತಂಡದ ಯಶಸ್ವಿ ಕಾರ್ಯಕ್ಕೆ ಎಸ್ಪಿ ಅವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
Hassan
ರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ದೇಶದ ಭವಿಷ್ಯವನ್ನು ರೂಪಿಸುವ ಯುವಕ-ಯುವತಿಯರು ರಾಷ್ಟ್ರೀಯ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಹಾನುಬಾಳು ವಿನಾಯಕ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾನಿಧಿ ಶಾಲೆಯ ವಾರ್ಷಿಕೋತ್ಸವ ‘ವಿದ್ಯಾನಿಧಿಯೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ನಮ್ಮ ಬದುಕಿನ ಮೂಲಮಂತ್ರವಾಗಬೇಕು. ಯಾವ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುವತ್ತ ವಿದ್ಯಾರ್ಥಿಗಳು ದೃಢಸಂಕಲ್ಪ ಹೊಂದಬೇಕು ಎಂದರು.

ಯುವಕರು ದುಶ್ಚಟಗಳಿಗೆ ದಾಸರಾಗದೆ, ಬದುಕನ್ನು ರೂಪಿಸುವ ಶಿಕ್ಷಣದ ಕಡೆಗೆ ಗಮನ ಹರಿಸಬೇಕು. ಸಹನೆ, ಸೌಹಾರ್ದತೆ, ಸಹಬಾಳ್ವೆ ಹಾಗೂ ಸಾಮಾಜಿಕ ಕಳಕಳಿಯನ್ನು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯಕ್ರಮಗಳ ಬೋಧನೆಗೆ ಸೀಮಿತವಾಗದೆ, ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾದ ಜ್ಞಾನವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಮೂಲಕ ಅವರ ಆಲೋಚನಾ ಸಾಮರ್ಥ್ಯವನ್ನು ವೃದ್ಧಿಸಬೇಕಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ. ಶಿಕ್ಷಣ, ತಂತ್ರಜ್ಞಾನ ಜ್ಞಾನ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಯುವಕರು ಬದಲಾವಣೆಯ ಹರಿಕಾರರಾಗಬಹುದು ಎಂದರು.
ಯುವಜನಾಂಗ ದೇಶದ ಅತಿ ದೊಡ್ಡ ಶಕ್ತಿಯಾಗಿದ್ದು, ದೃಢಸಂಕಲ್ಪ ಹಾಗೂ ಪ್ರಾಮಾಣಿಕತೆಯಿಂದ ಭ್ರಷ್ಟಾಚಾರ ಮುಕ್ತ ಭಾರತದ ಕನಸನ್ನು ನನಸಾಗಿಸಬಹುದು ಎಂದು ಹೇಳಿದರು.

ಭ್ರಷ್ಟಾಚಾರವನ್ನು ಕೇವಲ ಕಾನೂನಿನ ಮೂಲಕ ಸಂಪೂರ್ಣ ನಿರ್ಮೂಲನೆ ಮಾಡಲಾಗುವುದಿಲ್ಲ. ಆದರೆ ನಾಗರಿಕರ ಜಾಗೃತಿ ಮತ್ತು ಭ್ರಷ್ಟರನ್ನು ಸಮಾಜದಿಂದ ಬಹಿಷ್ಕರಿಸುವ ಮನೋಭಾವದ ಮೂಲಕ ಅದನ್ನು ನಿಯಂತ್ರಿಸಬಹುದು. ದುರಾಸೆಯೇ ಭ್ರಷ್ಟಾಚಾರದ ಮೂಲವೆಂದು ಅವರು ಅಭಿಪ್ರಾಯಪಟ್ಟರು.
ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ನಟಿ ಅಭಿನಯ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಇದೇ ಸಂದರ್ಭದಲ್ಲಿ ಹಾನುಬಾಳಿನಲ್ಲಿ ಕಳೆದ 28 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವಾಸು ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ವಿಶೇಷವಾಗಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರಪ್ಪ (ಹೂಡಿ ಚಿನ್ನಿ), ಸಾಮಾಜಿಕ ಹೋರಾಟಗಾರ ಯಡಹಳ್ಳಿ ಮಂಜುನಾಥ್, ಎಸ್‌ಡಿಎಂಸಿ ಸದಸ್ಯ ಗಣೇಶ್, ಉಪಾಧ್ಯಕ್ಷೆ ಅನ್ವಿತಾ, ವಿನಾಯಕ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಸವರಾಜು, ಕಾರ್ಯದರ್ಶಿ ಲಿಂಗದೇವರು, ಖಜಾಂಚಿ ಹರೀಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-
Chikmagalur11 hours agoವೈದ್ಯಕೀಯ ವಿಭಾಗದ ಕ್ಯಾಪ್ಟನ್ ಡಾ.ಸಾತ್ವಿಕ್ ಅರುಣ್ಗೆ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು
-
Hassan7 hours agoಅಸಹಾಯಕ ಮಹಿಳೆಗೆ ಧಮ್ಕಿ ಹಾಕಿದ ಎಎಸ್ಐ ದೇವರಾಜ್
-
Special18 hours agoಪಿ ಎಂ ಆವಾಸ್ ಯೋಜನೆಯಿಂದ ಮನೆಕಟ್ಟಲು ಸಬ್ಸಿಡಿ!
-
Hassan9 hours agoರಾಷ್ಟ್ರೀಯ ಚಿಂತನೆ ಮೈಗೂಡಿಸಿಕೊಳ್ಳಿ : ಶಾಸಕ ಸಿಮೆಂಟ್ ಮಂಜು
-
Chamarajanagar14 hours agoಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ: ಹನೂರಿನ ಶಾಲೆಗಳಲ್ಲಿ ಅರಿವು ಮೂಡಿಸಿದ ರೈತ ದಂಪತಿ
-
Kodagu7 hours agoಕುಂದಚೇರಿ ಗ್ರಾ.ಪಂ. ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ
-
State11 hours agoಉಳಿತಾಯದ ಹೂಡಿಕೆಗಳು MSIL ಸಂಸ್ಥೆಯಲ್ಲಿ ಸುಭದ್ರ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ
-
Hassan8 hours agoಮನೆಗಳ್ಳನ ಬಂಧನ : 140 ಗ್ರಾಂ.ಚಿನ್ನ ವಶ
