Connect with us

Sports

WPL-2025ರ ಸಂಪೂರ್ಣ ವೇಳಾಪಟ್ಟಿ, ಆಡಲಿರುವ ತಂಡಗಳ ವಿವಿರ ಇಲ್ಲಿದೆ

Published

on

ವಡೋದರಾ: ಇದೇ ಫೆ.14 ರಂದು ಪ್ರೇಮಿಗಳ ದಿನಾಚರಣೆ ದಿನದಂದೇ ಡಬ್ಲ್ಯೂಪಿಎಲ್‌ (ವುಮೆನ್ಸ್‌ ಪ್ರೀಮಿಯರ್‌ ಲೀಗ್‌)ನ ಮೂರನೇ ಆವೃತ್ತಿ ಆರಂಭವಾಗಲಿದೆ.

ಈ ಟೂರ್ನಿಯ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳ ನಡುವೆ ನಡೆಯಲಿದೆ. ಉದ್ಘಾಟನಾ ಪಂದ್ಯ ವಡೋದರಾದಲ್ಲಿ ನಡೆದರೇ, ಮೂರನೇ ಆವೃತ್ತಿಯ ಫೈನಲ್ಸ್‌ ಪಂದ್ಯಾವಳಿಯ ಆತಿಥ್ಯವನ್ನು ಮುಂಬೈನ ವಾಂಖೆಡೆ ವಹಿಸಿಕೊಂಡಿದೆ.

ಫೆ.14 ರಿಂದ ಮಾ.15 ವರೆಗೆ WPL-2025ರ ಮೂರನೇ ಆವೃತ್ತಿ ನಡೆಯಲಿದ್ದು, ಈ ಬಾರಿಯೂ ಐದು ತಂಡಗಳು ಟ್ರೋಫಿಗಾಗಿ ಸೆಣೆಸಾಡಲಿವೆ. ಹಾಗೂ ಮೊದಲ ಬಾರಿಗೆ ನಾಲ್ಕು ಪ್ರಮುಖ ನಗರಗಳಲ್ಲಿ ಈ ಟೂರ್ನಿ ನಡೆಯಲಿದೆ.

WPL-2025ನಲ್ಲಿ ಭಾಗವಹಿಸಲಿರುವ ತಂಡಗಳಿವು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ ಸೂಪರ್‌ಜೈಂಟ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌.

ಯಾವೆಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ: ಕಳೆಡೆರೆಡು ಸೀಸನ್‌ಗಳಲ್ಲಿ ಕೇವಲ ಒಂದೇ ಒಂದು ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಪ್ರಮುಖ ನಾಲ್ಕು ನಗರಗಳ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲಾಗಿದೆ. ಅವುಗಳೆಂದರೇ ಬೆಂಗಳೂರು (ಚಿನ್ನಸ್ವಾಮಿ ಕ್ರೀಡಾಂಗಣ), ಮುಂಬೈ (ವಾಂಖೆಡೆ ಕ್ರೀಡಾಂಗಣ), ವಡೋದರ (ಬಿಸಿಎ ಕ್ರೀಡಾಂಗಣ), ಲಕ್ನೋ (ಏಕನಾ ಕ್ರೀಡಾಂಗಣ).

ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ: ಈ ಬಾರಿಯ ಟೂರ್ನಿ ಉದ್ಘಾಟನೆಗೆ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಐಸಿಸಿ ಅಧ್ಯಕ್ಷ ಜೈ ಶಾ, ಬಿಸಿಸಿಐ ಆಡಳಿತ ಮಂಡಳಿ ಪಾಲ್ಗೊಳ್ಳಲಿದೆ.

ಇನ್ನು ಸೆಲೆಬ್ರೆಟಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನ ಖ್ಯಾತ ಆಲ್ಬಂ ಸಿಂಗರ್‌ ಆಯುಷ್ಮಾನ್‌ ಖುರಾನಾ ಅವರು ಮಹಿಳಾ ಪ್ರೀಮಿಯರ್‌ನಲ್ಲಿ ಕಾಣಿಸಿಕೊಳ್ಳಲಿರುವ ಏಕೈಕ ಪ್ರದರ್ಶಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ಮಾಹಿತಿ: ಡಬ್ಲ್ಯೂಪಿಎಲ್‌ನ ಎಲ್ಲಾ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸ್ಪೋರ್ಟ್ಸ್‌ 18 ಪಡೆದುಕೊಂಡಿದ್ದು, ಅಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಜಿಯೋ ಸಿನಿಮಾ ಹಾಗೂ ಜಿಯೋ ಸಿನಿಮಾ ವೆಬ್‌ಸೈಟ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಲಭ್ಯವಿರಲಿದೆ.

ವೇಳಾಪಟ್ಟಿ ವಿವಿರ ಇಂತಿದೆ:

ಫೆ.14: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್‌ ಜೈಂಟ್ಸ್‌ (ವಡೋದರಾ)
ಫೆ.15: ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ವಡೋದರಾ)
ಫೆ.16: ಗುಜರಾತ್‌ ಜೈಂಟ್ಸ್‌ vs ಯುಪಿ ವಾರಿಯರ್ಸ್‌ (ವಡೋದರಾ)
ಫೆ.17: ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ವಡೋದರಾ)
ಫೆ.18: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ವಡೋದರಾ)
ಫೆ.19: ಯುಪಿ ವಾರಿಯರ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ವಡೋದರಾ)
ಫೆ.21: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಮುಂಬೈ ಇಂಡಿಯನ್ಸ್‌ (ಬೆಂಗಳೂರು)
ಫೆ.22: ಡೆಲ್ಲಿ ಕ್ಯಾಪಿಟಲ್ಸ್‌ vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.24: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.25: ಡೆಲ್ಲಿ ಕ್ಯಾಪಿಟಲ್ಸ್‌ vs ಗುಜರಾತ್‌ ಜೈಂಟ್ಸ್‌ (ಬೆಂಗಳೂರು)
ಫೆ.26: ಮುಂಬೈ ಇಂಡಿಯನ್ಸ್‌ vs ಯುಪಿ ವಾರಿಯರ್ಸ್‌ (ಬೆಂಗಳೂರು)
ಫೆ.27: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್‌ ಜೈಂಟ್ಸ್‌ (ಬೆಂಗಳೂರು)
ಫೆ.28: ಡೆಲ್ಲಿ ಕ್ಯಾಪಿಟಲ್ಸ್‌ vs ಮುಂಬೈ ಇಂಡಿಯನ್ಸ್‌ (ಬೆಂಗಳೂರು)
ಮಾ.1: ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಬೆಂಗಳೂರು)
ಮಾ.3: ಗುಜರಾತ್‌ ಜೈಂಟ್ಸ್‌ vs ಯುಪಿ ವಾರಿಯರ್ಸ್‌ (ಲಕ್ನೋ)
ಮಾ.6: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ಲಕ್ನೋ)
ಮಾ.7: ಗುಜರಾತ್‌ ಜೈಂಟ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ (ಲಕ್ನೋ)
ಮಾ.8: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌ (ಲಕ್ನೋ)
ಮಾ.10: ಗುಜರಾತ್‌ ಜೈಂಟ್ಸ್‌ vs ಮುಂಬೈ ಇಂಡಿಯನ್ಸ್‌ (ಮುಂಬೈ)
ಮಾ.11: ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಮುಂಬೈ)
ಮಾ.13: ಎಲಿಮಿನೇಟರ್‌ (ಮುಂಬೈ)
ಮಾ.15: ಫೈನಲ್ಸ್‌ (ಮುಂಬೈ)

ಡಬ್ಲ್ಯೂಪಿಎಲ್‌ನ ಮೂರನೇ ಆವೃತ್ತಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30 ಗಂಟೆಗೆ ಆರಂಭವಾಗಲಿವೆ.

Continue Reading

Sports

IPL 2025: ಲಖನೌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಡೆಲ್ಲಿ

Published

on

ವಿಶಾಖಪಟ್ಟಣಂ: ಇಂಪ್ಯಾಕ್ಟ್‌ ಪ್ಲೇಯರ್‌ ಅಶುತೋಷ್‌ ಶರ್ಮಾ ಅವರ ಅಮೋಘ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ತಂಡ ರೋಚಕ ಹಣಾಹಣಿಯಲ್ಲಿ ಒಂದು ವಿಕೆಟ್‌ಗಳ ಅಂತರದಿಂದ ಲಖನೌ ತಂಡವನ್ನು ಮಣಿಸುವ ಮೂಲಕ ಮೊದಲ ಗೆಲುವು ದಾಖಲಿಸಿ ಶುಭಾರಂಭ ಮಾಡಿತು.

ಇಲ್ಲಿನ ವೈ.ಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ ಕೆಲಹಾಕಿತು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ ಗಳಸಿ 1 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿತು.

ಲಖನೌ ಪರ ಮಿಚೆಲ್‌ ಮಾರ್ಷ್‌ 72(36), ನಿಕೋಲಸ್‌ ಪೂರನ್‌ 75(30) ರನ್‌ ಗಳ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ಸಹಕರಿಸಿದರು. ಮಾರ್ಕ್ರಂ 15, , ಮಿಲ್ಲರ್‌ 27, ಆಯುಷ್‌ ಬದೋನಿ 4, ಶಹಬಾಜ್‌ ಅಹ್ಮದ್‌ 9, ನಾಯಕ ಪಂತ್‌, ರವಿ ಬಿಷ್ಣೋಯ್‌ ಹಾಗೂ ಶಾರ್ದುಲ್‌ ಠಾಕೂರ್‌ ಸೇರಿದಂತೆ ಮೂವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್‌ ಆದರು.

ಡೆಲ್ಲಿ ಪರ ಮಿಚೆಲ್‌ ಸ್ಟಾರ್ಕ್‌ ಮೂರು, ಕುಲ್ದೀಪ್‌ ಯಾದವ್‌ ಎರಡು, ಮುಖೇಶ್‌ ಕುಮಾರ್‌ ಹಾಗೂ ವಿಪ್ರಾವ್‌ ನಿಗಮ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಜೇಕ್‌ ಫ್ರೆಸರ್‌ ಕೇವಲ ಒಂದು ರನ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ನಂತರ ಬಂದ ಅಭಿಷೇಕ್‌ ಪೂರೆಲ್‌ ಡಕ್‌ಔಟ್‌ ಹೊರನಡೆದರು. ಸಮೀರ್‌ ರಿಜ್ವಿ ನಾಲ್ಕು ರನ್‌ಗಳಿಗೆ ಸುಸ್ತಾಗುವ ಮೂಲಕ ತಂಡವನ್ನು ಸಂಕಷ್ಟಕ್ಕೆ ದೂಡಿದರು. ಡೆಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತು.

ಬಳಿಕ ಜೊತೆಯಾದ ಫಾಫ್‌ ಡು ಪ್ಲೆಸಿ ಹಾಗೂ ನಾಯಕ ಅಕ್ಷರ್‌ ಪಟೇಲ್‌ ತಂಡಕ್ಕೆ ಚೇತರಿಕೆ ಆಟವಾಡಿದರು. ಈ ಇಬ್ಬರು ಕ್ರಮವಾಗಿ 29(18) ಮತ್ತು 22(11) ರನ್‌ ಗಳಿಸಿ ಔಟಾದರು. ನಂತರ ಸ್ಟಬ್ಸ್‌ 34(22), ವಿಪ್ರಾಜ್‌ ನಿಗಮ್‌ 39(15), ಮಿಚೆಲ್‌ ಸ್ಟಾರ್ಕ್‌ 2, ಕಲ್ದೀಪ್‌ ಯಾದವ್‌ 5 ರನ್‌ ಗಳಿಸಿ ಔಟಾದರು.

ಆದರೆ ಮತ್ತೊಂದೆಡೆ ಛಲ ಬಿಡದೇ ಬ್ಯಾಟ್‌ ಬೀಸಿದ ಇಂಪ್ಯಾಕ್ಟ್‌ ಪ್ಲೇಯರ್‌ ಅಶುತೋಶ್‌ ಶರ್ಮಾ ಔಟಾಗದೇ 31 ಎಸತಗಳಲ್ಲಿ 5 ಬೌಂಡರಿ 5 ಸಿಕ್ಸರ್‌ ಸಹಿತ 66 ರನ್‌ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಮೋಹಿತ್‌ ಶರ್ಮಾ ಒಂದು ರನ್‌ ಗಳಿಸಿ ಔಟಾಗದೇ ಉಳಿದರು.

ಲಖನೌ ಪರ ಶಾರ್ದುಲ್‌ ಠಾಕೂರ್‌, ಸಿದ್ಧಾರ್ಥ್‌, ದಿಗ್ವೇಶ್‌ ಹಾಗೂ ರವಿ ಬಿಷ್ಣೋಯ್‌ ತಲಾ ಎರಡೆರೆಡು ವಿಕೆಟ್‌ ಕಬಳಿಸಿದರು.

Continue Reading

Sports

IPL 2025: ವಿರಾಟ್‌ ಕೊಹ್ಲಿ, ಸಾಲ್ಟ್‌ ಅರ್ಧ ಶತಕ; ಕೆಕೆಆರ್‌ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಆರ್‌ಸಿಬಿ

Published

on

ಕೊಲ್ಕತ್ತಾ: ಫಿಲ್‌ ಸಾಲ್ಟ್‌, ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಅವರ ಆಕರ್ಷಕ ಅರ್ಧಶತಕದಾಟದ ಬಲದಿಂದ ಆತಿಥೇಯ ಕೊಲ್ಕತ್ತಾ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದ ಆರ್‌ಸಿಬಿ ಐಪಿಎಲ್‌ ಸೀಸನ್‌ 18 ರಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಈಡೆನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ನಡುವಣ ಹಣಾಹಣಿಯಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್‌ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಆರ್‌ಸಿಬಿ 16.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 177 ರನ್‌ ಕಲೆಹಾಕಿ 7 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.

ಕೆಕೆಆರ್‌ ಇನ್ನಿಂಗ್ಸ್‌: ಡಿಕಾಕ್‌ ಮತ್ತು ಸುನೀಲ್‌ ನರೈನ್‌ ಕೆಕೆಆರ್‌ ಪರ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಡಿಕಾಕ್‌ 4 ರನ್‌ ಗಳಿಸಿ ಹೇಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಬಳಿಕ ಜೊತೆಯಾದ ನಾಯಕ ಅಜಿಂಕ್ಯ ರಹಾನೆ ಮತ್ತು ಸುನೀಲ್‌ ನರೈನ್‌ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.

ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 56 ರನ್‌ ಗಳಿಸಿದರು. ಸುನೀಲ್‌ ನರೈನ್‌ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ ಸಹಿತ 44 ರನ್‌ ಗಳಿಸಿ ಔಟಾಗಿ ಹೊರನಡೆದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾರೂ ಉತ್ತಮ ಇನ್ನಿಂಗ್ಸ್‌ ಕಟ್ಟಿಕೊಡಲಿಲ್ಲ.

ವೆಂಕಟೇಶ್‌ ಅಯ್ಯರ್‌ 6, ಕಿಂಕು 12, ರಸೆಲ್‌ 4 ರನ್‌ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಘುವಂಶಿ 30 ರನ್‌ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು. ಹರ್ಷಿತ್‌ ರಾಣಾ 5, ರಮಣದೀಪ್‌ ಹಾಗೂ ಸ್ಪೆನ್ಸರ್‌ ಔಟಾಗದೇ ತಲಾ 6 ಮತ್ತು 1 ರನ್‌ ಗಳಿಸಿ ಉಳಿದರು.

ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ ಮೂರು ವಿಕೆಟ್‌, ಹೆಜಲ್‌ವುಡ್‌ ಎರಡು ವಿಕೆಟ್‌, ಸುಯೇಶ್‌ ಶರ್ಮಾ, ರಸಿಕ್‌ ದಾರ್‌ ಹಾಗೂ ಯಶ್‌ ದಯಾಳ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಆರ್‌ಸಿಬಿ ಇನ್ನಿಂಗ್ಸ್‌: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕರಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ ಪವರ್‌ ಪ್ಲೇನಲ್ಲಿ ಬರೋಬ್ಬರಿ 80 ಚಚ್ಚಿದರು.

ಫಿಲ್‌ ಸಾಲ್ಟ್‌ 31 ಎಸೆತ, 9 ಬೌಂಡರಿ, 2 ಸಿಕ್ಸರ್‌ ಸಹಿತ 56 ರನ್‌ ಗಳಿಸಿ ಔಟಾದರು. ಬಳಿಕ ಬಂದ ದೇವದತ್‌ ಪಡಿಕ್ಕಲ್‌ 10, ನಾಯಕ ರಜತ್‌ ಪಟಿದಾರ್‌ 34 ರನ್‌ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದರು.

ಮತ್ತೊಂದೆಡೆ ಉಪಯುಕ್ತ ಆಟವಾಡಿದ ವಿರಾಟ್‌ ಕೊಹ್ಲಿ ಔಟಾಗದೇ 36 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 59 ರನ್‌ ಗಳಿಸಿದರೇ, ಇತ್ತ ಲಿವಿಂಗ್‌ಸ್ಟೋನ್‌ ಔಟಾಗದೇ 5 ಎಸೆತಗಳಲ್ಲಿ 15 ರನ್‌ ಬಾರಿಸಿ ಗೆಲುವಿನ ದಡ ಸೇರಿಸಿದರು.

ಕೆಕೆಆರ್‌ ಪರ ಸುನೀಲ್‌ ನರೈನ್‌, ವೈಭವ್‌ ಅರೋರಾ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದರು.

Continue Reading

Sports

IPL 2025: ಅಜಿಂಕ್ಯ ರಹಾನೆ ಅರ್ಧಶತಕ; ಆರ್‌ಸಿಬಿಗೆ 175ರನ್‌ ಟಾರ್ಗೆಟ್‌ ನೀಡಿದ ಕೆಕೆಆರ್‌

Published

on

ಕೊಲ್ಕತ್ತಾ: ಇಲ್ಲಿನ ಈಡೆನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಲ್‌ ಸೀಸನ್‌ 18ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ನಾಯಕ ಅಜಿಂಕ್ಯ ರಹಾನೆ ಅರ್ಧಶತಕದ ಬಲದಿಂದ ಆರ್‌ಸಿಬಿಗೆ 175 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಇತ್ತ ಬಿಗಿ ಬೌಲಿಂಗ್‌ ದಾಳಿ ಮಾಡಿದ ಆರ್‌ಸಿಬಿ ಬೃಹತ್‌ ಮೊತ್ತ ಕಲೆಹಾಕುವ ಯೋಜನೆಯಲ್ಲಿದ್ದ ಕೆಕೆಆರ್‌ಗೆ ತಮ್ಮ ಹೋಂ ಗ್ರೌಂಡ್‌ನಲ್ಲಿಯೇ ಟಕ್ಕರ್‌ ಕೊಟ್ಟಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೆಕೆಆರ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 174 ರನ್‌ ಗಳಿಸಿ ಆರ್‌ಸಿಬಿಗೆ 175 ರನ್‌ಗಳ ಟಾರ್ಗೆಟ್‌ ನೀಡಿದೆ.

ಕೆಕೆಆರ್‌ ಪರ ಇನ್ನಿಂಗ್ಸ್‌ ಆರಂಭಿಸಿದ ಕೆಕೆಆರ್‌ಗೆ ಆರಂಭಿಕ ಆಘಾತ ಎದುರಾಯಿತು. ಡಿಕಾಕ್‌ 4 ರನ್‌ ಗಳಿಸಿ ಹೇಜಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಬಳಿಕ ಜೊತೆಯಾದ ನಾಯಕ ಅಜಿಂಕೆ ರಹಾನೆ ಮತ್ತು ಸುನೀಲ್‌ ನರೈನ್‌ ಆರ್‌ಸಿಬಿ ಬೌಲರ್‌ಗಳನ್ನು ಕಾಡಿದರು.

ರಹಾನೆ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ ಸಹಿತ 56 ರನ್‌ ಗಳಿಸಿದರು. ಸುನೀಲ್‌ ನರೈನ್‌ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ ಸಹಿತ 44 ರನ್‌ ಗಳಿಸಿ ಔಟಾಗಿ ಹೊರನಡೆದರು. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಬಂದ ಯಾರೂ ಉತ್ತಮ ಇನ್ನಿಂಗ್ಸ್‌ ಕಟ್ಟಿಕೊಡಲಿಲ್ಲ.

ವೆಂಕಟೇಶ್‌ ಅಯ್ಯರ್‌ 6, ಕಿಂಕು 12, ರಸೆಲ್‌ 4 ರನ್‌ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ರಘುವಂಶಿ 30 ರನ್‌ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು. ಹರ್ಷಿತ್‌ ರಾಣಾ 5, ರಮಣದೀಪ್‌ ಹಾಗೂ ಸ್ಪೆನ್ಸರ್‌ ಔಟಾಗದೇ ತಲಾ 6 ಮತ್ತು 1 ರನ್‌ ಗಳಿಸಿ ಉಳಿದರು.

ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ ಮೂರು ವಿಕೆಟ್‌, ಹೆಜಲ್‌ವುಡ್‌ ಎರಡು ವಿಕೆಟ್‌, ಸುಯೇಶ್‌ ಶರ್ಮಾ, ರಸಿಕ್‌ ದಾರ್‌ ಹಾಗೂ ಯಶ್‌ ದಯಾಳ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Continue Reading

Trending

error: Content is protected !!