Connect with us

Kodagu

ಮಕ್ಕಳಿಂದ ಸಂತೆ, ಅಂಗಡಿ, ಮಂಟಪ, ಛದ್ಮವೇಶ, ಕ್ಲೇ ಮಾಡೆಲಿಂಗ್ ಸ್ಪರ್ಧೆಗಳ ಆಯೋಜನೆ

Published

on

ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಕ್ಕಳ ದಸರಾ ಅಂಗವಾಗಿ ಅ.20 ರಂದು ವಿವಿಧ ಸ್ಪರ್ಧೆಗಳು.

ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಅ.20 ರಂದು ಶುಕ್ರವಾರ ನಗರದ ಗಾಂಧಿ ಮೈದಾನದಲ್ಲಿ 10 ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ಅ. 20 ರಂದು ಶುಕ್ರವಾರ ಬೆಳಗ್ಗೆ 9.30 ಗಂಟೆಯಿAದ ಪ್ರಾರಂಭವಾಗಲಿದೆ.

ಮಕ್ಕಳಿAದ ಸಂತೆ ಮತ್ತು ಮಕ್ಕಳಿಂದ ಅಂಗಡಿ : ಎಸ್‌ಎಸ್‌ಎಲ್‌ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಟ 5 ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಮಕ್ಕಳ ಅಂಗಡಿಯಲ್ಲಿ ಗರಿಷ್ಟ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ.

ಮಕ್ಕಳಿಂದ ಮಂಟಪ : 10 ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ತಯಾರಿಕಾ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು.

ಛದ್ಮವೇಶ ಸ್ಪರ್ಧೆ : ಎಲ್ ಕೆ.ಜಿ.ಯಿಂದ 1 ನೇ ತರಗತಿ, 2 ನೇ ತರಗತಿಯಿಂದ 4 ನೇ ತರಗತಿ, 5 ರಿಂದ 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪರ್ಧೆಗಳು ನಡೆಯಲಿದ್ದು, ಗರಿಷ್ಠ 2 ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ.

ಕ್ಲೇ ಮಾಡೆಲಿಂಗ್ : 4 ರಿಂದ 6 ನೇ ತರಗತಿ ಮತ್ತು 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ.

ಅ. 20 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪರ್ಧೆಗಳು ಬೆಳಗ್ಗೆ 9.30 ಗಂಟೆಯಿAದ ಪ್ರಾರಂಭವಾಗುತ್ತದೆ.

ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಮಕ್ಕಳಿಂದ ಸಂತೆ ಶಫಾಲಿ ರೈ 9741523484, ಮಕ್ಕಳಿಂದ ಅಂಗಡಿ ಸ್ಪರ್ಧೆ ಪ್ರಿಯಾ ಪ್ರಶಾಂತ್ 9449915522, ಮಕ್ಕಳಿಂದ ಮಂಟಪ ಗಾನಾ ಪ್ರಶಾಂತ್ 9449713748, ಛದ್ಮವೇಶ ಸ್ಪರ್ಧೆ ಶಮ್ಮಿ ಪ್ರಭು 944 9833179, ನಮಿತಾ 9448976405 ಕ್ಲೇ ಮಾಡೆಲಿಂಗ್ ಸುಮನಾ ಶ್ರೀಹರಿ 7353078661, ರೀನಾ 9448793619 ಸಂಪರ್ಕಿಸಬಹುದು. ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಕೊನೆ ದಿನಾಂಕ ಅಕ್ಟೋಬರ್ 10.

Continue Reading
Click to comment

Leave a Reply

Your email address will not be published. Required fields are marked *

Kodagu

ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಸೂಕ್ತ ತನಿಖೆಗೆ ಹೆಚ್.ಡಿ ಕೆ ಒತ್ತಾಯ

Published

on

ಮಡಿಕೇರಿ : ಅಲೆಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಅತ್ಯಂತ ಆಘಾತಕಾರಿ ಹಾಗೂ ಅಮಾನವೀಯವಾದ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕೊಡಗಿನ ಹಾಕತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಸರ್ಕಾರಕ್ಕೆ ಈ ಪ್ರಕರಣದಲ್ಲಿ ಯಾರ ಯಾರ ಪಾತ್ರಗಳು ಇದೆ ಎಂಬುದು ಗೊತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕು. ಇದು ಸ್ಯಾಂಪಲ್ ಅಷ್ಟೇ, ಆರೋಗ್ಯ ಇಲಾಖೆ ಅಧಿಕಾರಿಗಳು ಗೊತ್ತೇ ಇಲ್ಲದಂತೆ ನಟಿಸ್ತಾರೆ. ಹೀಗಾಗಿ ಸರ್ಕಾರ ಎಲ್ಲವನ್ನು ಕೂಲಂಕೂಷವಾಗಿ ಪರಿಶೀಲನೆ ಮಾಡಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಏನು ಮಾಡಿಕೊಳ್ಳುತ್ತಾರೋ ಅದು ಅವರ ಪಕ್ಷಕ್ಕೆ ಬಿಟ್ಟಿರುವ ವಿಚಾರ. ಆದರೆ ನಮಗೆ ಬೇಕಾಗಿರುವುದು ರಾಜ್ಯದಲ್ಲಿ ಬರಗಾಲಕ್ಕೆ ಪರಿಹಾರ. ಆ ಬರಗಾಲಕ್ಕೆ ಒಂದು ಕಡೆ ದುಡ್ಡಿಲ್ಲ, ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಅರ್ಜಿ ಹಾಕಿಕೊಂಡಿದ್ದಾರೆ. ಆದರೆ ಈಗ ತಾನೆ ಎಲ್ಲಾ ಸಚಿವರಿಗೆ ಹೊಸ ಕಾರು ಕೊಡಿಸಿದ್ದಾರೆ, ಅದಕ್ಕೆ ಒಂಭತ್ತುವರೆ ಕೋಟಿ ಖರ್ಚು ಮಾಡಿದ್ದಾರೆ. ಮನೆ ರಿನೋವೇಷನ್‌ಗಾಗಿ ಕೋಟ್ಯಂತರ ಖರ್ಚು ಮಾಡಿದ್ದಾರೆ. ಇದಕ್ಕೆ ಹಣ ಎಷ್ಟೊಂದು ಖರ್ಚಾಗುತ್ತದೆ ಎಂದು ಪ್ರಶ್ನಿಸಿದರು.

೮೦೦ ಕೋಟಿ ಡಿಸಿ ಖಾತೆಗಳಲ್ಲಿ ಇರುವುದು ಬರಗಾಲ ಹಣ ಅಲ್ಲ. ಅದು ಕುಡಿಯುವ ನೀರು ಮತ್ತು ಮೇವಿಗಾಗಿ ಮೀಸಲಿರಿಸಿರುವ ಹಣ. ರೈತರ ಪರಿಸ್ಥಿತಿ ಏನು ಎನ್ನುವುದಕ್ಕೆ ಇವರು ಚಿಂತಿಸುತ್ತಿಲ್ಲ. ಈಗ ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿದರೆ ದುಡ್ಡು ಎಷ್ಟು ಖರ್ಚಾಗುತ್ತದೆ. ಇದಕ್ಕೆ ಕಾಂಗ್ರೆಸ್ ಪಕ್ಷದಿಂದ ಹಣ ಕೊಡುತ್ತಾರಾ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌ಡಿಕೆ ಗರಂ ಆದರು.

ನ.೨೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಜನತಾ ದರ್ಶನವನ್ನು ಜನಸ್ಪಂದನಾ ಎಂದಿದ್ದಾರೆ. ಸಿಎಂ ಅವರ ಜನ ಸ್ಪಂದನವನ್ನು ಅಭಿನಂದಿಸುತ್ತೇನೆ. ಅಧಿಕಾರಿಗಳನ್ನು ಬರಲು ಹೇಳಿ ನಾಡಿನ ಜನತೆಯ ಸಮಸ್ಯೆ ಆಲಿಸಿದ್ದಾರೆ. ಈಗಲಾದರೂ ಇವರಿಗೆ ರಾಜ್ಯದ ಜನತೆಯ ನೈಜ ಪರಿಸ್ಥಿತಿ ಅರ್ಥವಾಗಿದೆ ಎಂದುಕೊAಡಿದ್ದೇನೆ. ವಿವಿಧ ಸಮಸ್ಯೆಗಳು ಜನಸ್ಪಂದನದಲ್ಲಿ ಅರ್ಥವಾಗಿರಬಹುದು. ಒಬ್ಬ ಸಿಎಂ ಜನಸ್ಪಂದನಾ ಮಾಡುವುದನ್ನು ನಾನು ಅಭಿನಂದಿಸುತ್ತೇನೆ ಎಲ್ಲವನ್ನು ಟೀಕಿಸುವುದಿಲ್ಲ, ಮುಂದಿನ ೩ ತಿಂಗಳಲ್ಲಿ ಮತ್ತೆ ಜನಸ್ಪಂದನಾ ಮಾಡುತ್ತೇನೆ ಎಂದಿದ್ದಾರೆ. ಅಧಿಕಾರಿಗಳಿಗೆ ೩ ತಿಂಗಳ ಗಡುವು ನೀಡಿದ್ದಾರೆ. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಈಗ ಅವರಿಗೆ ಅರ್ಥ ಆಗಿರಬಹುದು ಎಂದು ಹೇಳಿದ್ದಾರೆ.

ನಾನು ಜನತಾ ದರ್ಶನ ಮಾಡಿದಾಗ ಬೆಳಿಗ್ಗೆ ೯ ರಿಂದ ರಾತ್ರಿ ೧ ಗಂಟೆವರೆಗೆ ಮಾಡಿದ್ದೆ. ಅವತ್ತು ಇದ್ದ ಸಮಸ್ಯೆಗಳು ಈಗಲೂ ಮುಂದುವರಿದಿವೆ. ಬಿಜೆಪಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಆರ್ ಅಶೋಕ್ ಅವರು ಕೂಡ ಮಾಡಿದ್ದರು. ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿ ಕಡೆಗೆ ಅಂತ ಮಾಡಿದ್ರು. ತಿಂಗಳಿಗೆ ಒಂದು ಗ್ರಾಮಕ್ಕೆ ಅವರು ಭೇಟಿ ನೀಡಿದ್ದರು. ಈಗ ಸಿಎಂ ಅವರು ಜನಸ್ಪಂದನಾ ಮಾಡಿದ್ದಾರೆ. ಅವರಿಗೆ ಮನವರಿಕೆ ಆಗಿರುವ ಕಷ್ಟಗಳನ್ನು ಸಿಎಂ ಬಗೆಹರಿಸಲಿ. ಆಗ ಅವು ಅರ್ಥಪೂರ್ಣ ಆಗುತ್ತವೆ ಎಂದು ಹೇಳಿದ್ದಾರೆ.

ಮಾಜಿ ಸಚಿವ ಸಾ.ರಾ ಮಹೇಶ್, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ್, ಮನ್ಸೂರ್ ಆಲಿ ಪ್ರಮುಖರು ಇದ್ದರು.

Continue Reading

Kodagu

ಕೊಡಗಿನಾದ್ಯಂತ ಇಂದು ಪುತ್ತರಿ ಹಬ್ಬದ ಸಂಭ್ರಮ

Published

on

ನಾಪೋಕ್ಲುವಿನಲ್ಲಿ ಪುತ್ತರಿ ಸಂಭ್ರಮಿಸಲು ಪಟಾಕಿಗಾಗಿ ಮುಗಿಬಿದ್ದ ಜನ

ನಾಪೋಕ್ಲು : ಕೊಡಗು ಜಿಲ್ಲೆಯಲ್ಲಿ ಇಂದು ಪುತ್ತರಿ ಹಬ್ಬದ ಸಂಭ್ರಮದ ಸಡಗರ, ಇನ್ನೇನು ಕ್ಷಣಗಣನೆಯಲ್ಲಿ ಹಬ್ಬವನ್ನು ಆಚರಿಸಲಾಗುವುದು.

ಪುತ್ತರಿ ಎಂದರೆ ಕೊಡಗಿನ ಸುಗ್ಗಿಯ ಹಬ್ಬ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಹಬ್ಬಕ್ಕೆ ಮೊದಲು ಮನೆಗಳನ್ನು ಸುಣ್ಣ,ಬಣ್ಣ ಪೇಂಟಿಂಗ್ ಗಳಿಂದ ಸಿಂಗರಿಸಿ ಹಬ್ಬಕ್ಕೆ ಮೆರಗು ನೀಡುತ್ತಾರೆ.

ಅದರಂತೆ ಹಬ್ಬಕ್ಕೆ 5 ದಿನಗಳ ಮೊದಲು ಊರಿನ ಮಂದ್ ನಲ್ಲಿ ಈಡು ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದೆ. ನಂತರ 5ನೇ ದಿನ ಪುತ್ತರಿ ಹಬ್ಬವನ್ನು ಕೊಡಗಿನ ಜನರು ವಿಜೃಂಭಣೆಯಿಂದ ಆಚರಿಸುತ್ತಾರೆ.

ಕೊಡಗಿನ ಕುಲದೇವರಾದ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಇಂದು ರಾತ್ರಿ 7.20ಕ್ಕೆ ನೆರೆ ಕಟ್ಟುವುದು,8.20ಕ್ಕೆ ಕದಿರು ತೆಗೆಯುವುದು,9.20ಕ್ಕೆ ಪ್ರಸಾದ ವಿತರಣೆಯ ಮೂಲಕ ಪುತ್ತರಿ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಅದರಂತೆ ಜಿಲ್ಲಾದ್ಯಂತ 7.45ಕ್ಕೆ ನೆರೆ ಕಟ್ಟುವುದು 8.45ಕ್ಕೆ ಕದಿರುತೆಗೆಯುವುದು 9.45ಕ್ಕೆ ಭೋಜನ ಮಾಡಲಾಗುವುದೆಂದು ವರದಿಯಾಗಿದೆ.

: ಪುತ್ತರಿ ಸಂಭ್ರಮಿಸಲು ನಾಪೋಕ್ಲುವಿನಲ್ಲಿ ಪಟಾಕಿಗಾಗಿ ಮುಗಿಬಿದ್ದ ಜನ

ನಾಪೋಕ್ಲು ಪಟ್ಟಣದ ಮಾರುಕಟ್ಟೆಯ ಬಳಿ ಪಟಾಕಿ ಮಾರಾಟ ಬಿರುಸಿನಿಂದ ಸಾಗುತ್ತಿದೆ.ಪುತ್ತರಿಹಬ್ಬವು ಸಂಭ್ರಮವಾಗಬೇಕಾದರೆ ಪಟಾಕಿ ಮುಖ್ಯ, ಪಟಾಕಿಯ ಶಬ್ದಗಳು ಪ್ರತಿ ಮನೆಗಳಲ್ಲಿ ಸ್ಪರ್ಧೆಯಂತೆ ನಡೆಯುತ್ತವೆ.
ನೆಲದ ಮೇಲೆ ಪಟಾಕಿ ಶಬ್ದದ ಭರಟೆಯಾದರೆ, ಆಗಸದಲ್ಲಿ ನಕ್ಷತ್ರಗಳ ಚಿತ್ತಾರದ ಪಟಾಕಿಗಳು ನೋಡುಗರನ್ನು ಮೂಕ ಪ್ರೇಕ್ಷಕರನ್ನಾಗಿಸುತ್ತದೆ.

ಪ್ರತಿಯೊಬ್ಬರೂ ಈ ಹಬ್ಬಕ್ಕಾಗಿ 5ರಿಂದ 10 ಸಾವಿರಗಳಷ್ಟು ಹಣವನ್ನು ಬರೀ ಪಟಾಕಿಗಾಗಿ ವಹಿಸುತ್ತಾರೆ. ಅದರಂತೆ ನಾಪೋಕ್ಲು ನಗರದ ಮಾರುಕಟ್ಟೆಯ ಬಳಿಯಲ್ಲಿ ಪಟಾಕಿ ಮಾರಾಟದ 5 ಮಳಿಗೆಗಳಿದ್ದು ಪಟಾಕಿ ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಸರ್ಕಾರ ಈಗಾಗಲೇ ಪಟಾಕಿಯ ಮೇಲೆ ನಿರ್ಬಂಧ ಏರಿ ಬರೀ ಹಸಿರು ಪಟಾಕಿಯನ್ನು ಮಾರಾಟ ಮಾಡಬೇಕೆಂದು ವ್ಯಾಪಾರಿಗಳ ಮೇಲೆ ಕಡ್ಡಾಯದ ನಿರ್ಬಂಧ ಹೇರಿದ್ದರೂ ಕೂಡ ಪುತ್ತರಿ ಹಬ್ಬಕ್ಕೆ ಪಟಾಕಿ ವ್ಯಾಪಾರ ಮಾತ್ರ ಬರದಿಂದ ಸಾಗಿದೆ.

ವರದಿ :ಝಕರಿಯ ನಾಪೋಕ್ಲು

Continue Reading

Kodagu

ಕರ್ನಾಟಕದಲ್ಲಿ ಕಾಂತರಾಜ್ ವರದಿ ಜಾರಿಯಾಗೋದಿಲ್ಲ – ಮಾಜಿ ಸಚಿವ ರಾಮ್ ದಾಸ್

Published

on

ಮಡಿಕೇರಿ : ಕರ್ನಾಟಕದಲ್ಲಿ ಕಾಂತರಾಜ್ ವರದಿ ಜಾರಿಯಾಗೋದಿಲ್ಲ ಎಂದು ಮಾಜಿ ಸಚಿವ ರಾಮ್ ದಾಸ್ ಹೇಳಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿಯ ನಿರಾಸೆಯನ್ನ ಮುಚ್ಚಿಹಾಕಲು ಕಾಂತರಾಜು ವರದಿ ವಿಚಾರ ಎಳೆದು ತಂದಿದ್ದಾರೆ. ವಿಷಯವನ್ನ ವಿಷಯಾಂತರ ಮಾಡಲು ಈ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯ ಹಿಂದಿನ ಮುಖ್ಯಮಂತ್ರಿಗಳಾಗಿದ್ದಾಗಲೆ ವರದಿ ಕೊಡಬೇಕಿತ್ತು. ರಾಹುಲ್ ಗಾಂಧಿ ದೇಶದಲ್ಲಿ ಓಬಿಸಿ ಸರ್ವೆ ಆಗಬೇಕು ಅಂದಿದ್ದಾರೆ. ಬೇರೆ ರಾಜ್ಯದ ಚುನಾವಣೆ ಇಟ್ಟುಕೊಂಡು ಹೇಳಿದ್ರೊ, ಲೋಕ ಸಭಾ ಚುನಾವಣೆಯನ್ನ ಗುರಿಯಾಗಿಸಿ ಹೇಳಿದ್ರೋ ಗೊತ್ತಿಲ್ಲ. ಜಾತಿ ಆಧಾರದ ಗಣತಿಗೆ ಅವಕಾಶ ಇಲ್ಲ ಅಂತ ಸುಪ್ರಿಂ ಕೋರ್ಟ್ ನಿರ್ದೇಶನ ಇದೆ. ಕೋವಿಡ್‌ನಿಂದ ಗಣತಿ ಆಗಿಲ್ಲ, ಒಂದು ವರ್ಷದ ಬಳಿಕ ಜನಗಣತಿ ನಡೆಯುತ್ತೆ. ಆ ವರಿದ ಬಳಿಕ ಯಾವ ಸಮುದಾಯ ಎಷ್ಟಿದೆ ಎಂಬುದು ಸಹಜವಾಗೆ ಬಂದೆ ಬರುತ್ತೆ ಎಂದರು.

ಸೋಮಣ್ಣ ಹಾಗೂ ಅರವಿಂದ ಲಿಂಬಾವಳಿ ಜಿ ಪರಮೇಶ್ವರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯದಲ್ಲಿ ಯಾವುದೋ ಕಾರಣಕ್ಕೆ ಭೇಟಿಯಾಗುವ ಸಾಧ್ಯತೆ ಇರುತ್ತೆ, ಬೇಟಿಯಾದ್ರು ಅಂದ್ರೆ ಅವರು ಅವರ ಪಕ್ಷ ಸೇರುತ್ತಾರೆ ಅಂತ ಅಲ್ಲ. ಭಾವನೆಗಳಲ್ಲಿ ವ್ಯತ್ಯಾಸ ಇರಬಹುದು ಅಷ್ಟೇ. ನಮ್ಮೊಂದಿಗೆ ಸೋಮಣ್ಣ ಬಹಳ ವರ್ಷದಿಂದ ಇದ್ದೋರು. ರಾಜ್ಯಾಧ್ಯಕ್ಷರ ಆಯ್ಕೆಯಿಂದ ನಮ್ಮೆಲ್ಲರಲ್ಲಿ ಹುಮ್ಮಸು ಬಂದಿದೆ. ವಿಜಯೇಂದ್ರ ಎಲ್ಲರನ್ನ ಒಟ್ಟಾಗಿ ಕರೆದುಕೊಂಡು ಹೊಗುತ್ತಾರೆ ಎಂದರು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಕೂಡ ಎಲ್ಲರ ಜೊತೆಗಿರುತ್ತಾರೆ. ರಾಜಕೀಯದಲ್ಲಿ ಕೆಲವು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಈ ವಿಚಾರದಲ್ಲಿ ಕೆಲವು ತುಲನಾತ್ಮಕವಾಗಿ ಚಿಂತನೆ ಮಾಡುತ್ತಾರೆ. ರಾಜಕೀಯದಲ್ಲಿ ಎಲ್ಲ ನಿರ್ಧಾರಗಳು ಎಲ್ಲಾರಿಗೂ ಸಂತೋಷ ಕೊಡುತ್ತೆ ಅಂತ ಹೇಳಲು ಆಗಲ್ಲ. ತತ್ವ ಆದರ ಮೇಲೆ ಹೋಗ ಬೇಕೋ ಬೇಕಾ ಬೇಡ್ವ ಅನ್ನೋದ ಆಯಾಯ ರಾಜಕಾರಣಿಗಳಿಗೆ ಬಿಟ್ಟ ವಿಚಾರ ಎಂದರು.

ಸೋಮಣ್ಣ ಹಿರಿಯರಿದ್ದು ಯಾವುದೇ ಬೇರೆ ನಿರ್ಧಾರ ತೆಗೆದುಕೊಳ್ಳೊದಿಲ್ಲ ಅಂತ ನಂಬಿಕೆ ಇದೆ. ಅರವಿಂದ್ ಲಿಂಬಾವಳಿ ಕೂಡ ಪಕ್ಷದ ಜೊತೆಯಲ್ಲಿ ಬೆಳೆದು ಬಂದವರು. ಯಾವುದೇ ನೋವಿದ್ರು ಕೂಡ ಅವರ ನಮ್ಮಲೆ ಇತ್ತಾರೆ, ಯಾರನ್ನೋ ಭೇಟಿ ಆದ್ರು ಅಂದ್ರೆ ಬಿಜೆಪಿಗೆ ಏನೋ ಆಯ್ತು ಅಂತ ಇಲ್ಲ ಎಂದು ಹೇಳಿದರು.

Continue Reading

Trending