Connect with us

Crime

ದರೋಡೆ ಪ್ರಕರಣ – ರಾಜಸ್ಥಾನ ಮೂಲದ ಆರೋಪಿ ಸೆರೆ

Published

on

ಮಡಿಕೇರಿ : ಮನೆಯಲ್ಲಿದ್ದ ವೃದ್ಧ ಮಹಿಳೆ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬAಧಪಟ್ಟAತೆ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ದರೋಡೆ ನಡೆದ 12 ಗಂಟೆಯಲ್ಲೆ ರಾಜಸ್ಥಾನ ಮೂಲದ ಆರೋಪಿ ವಿಕಾಸ್ ಚೋರ್ಡಿಯಾ (33) ಎಂಬಾತನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದು, 27 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಡಿಕೇರಿ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಆರೋಪಿ. ಸಿಸಿ ಕ್ಯಾಮರ ಹಾಗೂ ರೆಸಾರ್ಟ್ ಸಿಬ್ಬಂದಿಗಳ ಮಾಹಿತಿ ಆಧಾರಿಸಿ ಅರೋಪಿಯ ಬಂಧನವಾಗಿದೆ.
ಘಟನೆ ನಡೆದ ಬಳಿಕ ಎಸ್‌ಪಿ ಕೆ. ರಾಮರಾಜನ್, ಎಎಸ್ಪಿ ಸುಂದರ್ ರಾಜ್ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತಕ್ಷಣ ಭೇಟಿ ನೀಡಿ, ಸಾಕ್ಷಾಧಾರಗಳನ್ನು ಕಲೆಹಾಕಿದ್ದರಾದರೆ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಉಮೇಶ್, ಉಪ್ಪಳಿಕೆ ಅವರು ಎಲ್ಲಾ ಹೊಟೇಲ್, ಹೋಂ ಸ್ಟೇ ಮತ್ತು ರೆಸಾರ್ಟ್ ಮಾಹಿತಿ ನೀಡಿ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.
ಪ್ರಕರಣವನ್ನು ಭೇದಿಸುವ ಸಲುವಾಗಿ ಮಡಿಕೇರಿ ನಗರ ವೃತ್ತದ ಸಿಪಿಐ ಅನೂಪ್ ಮಾದಪ್ಪ ಅವರು ಉಪವಿಭಾಗ ಮಟ್ಟದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಮತ್ತು ಡಿಸಿಆರ್‌ಬಿ ಸಿಬ್ಬಂದಿಗಳನ್ನು ಒಳಗೊಂಡ0ತೆ ತಂಡವನ್ನು ರಚಿಸಿ ತನಿಖೆೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ : ಮಡಿಕೇರಿ ನಗರದ ಹೃದಯ ಭಾಗದಲ್ಲಿ ಭಾನುವಾರ ನಿವೃತ್ತ ಪೊಲೀಸ್ ಅಧಿಕಾರಿಯ ಮನೆಗೇ ನುಗ್ಗಿದ ಚೋರ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ ತಾಳಿ ಹಾಗೂ ಉಂಗುರು ಕದ್ದೊಯ್ಯಲು ಯತ್ನಿಸಿದ್ದ. ನಗರದ ಐಡಿಬಿಐ ವಾಸವಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ.ಪ್ರಭಾಕರ್ ಅವರ ಮನೆಗೆ ಭಾನಯವಾರ ಸಂಜೆ 6.40 ರ ವೇಳೆಗೆ ಲಗ್ಗೆ ಇಟ್ಟ ಕಳ್ಳ ಪತ್ನಿ ಸಾಕಮ್ಮ ಅವರ ತಲೆಯ ಭಾಗಕ್ಕೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಕುತ್ತಿಗೆಯಲ್ಲಿದ್ದ ತಾಳಿ ಸರವನ್ನು ಕಸಿಯಲು ಯತ್ನಿಸಿದ್ದಾನೆ. ಆದರೆ ಸಾಕಮ್ಮ ಜೋರಾಗಿ ಕಿರುಚಿಕೊಂಡ ಕಾರಣ ಆತ ಬಂದ ದಾರಿಗೆ ಸುಂಕವಿಲ್ಲವೆAದು ಸ್ಥಳದಿಂದ ಪರಾರಿಯಾಗಿದ್ದಾರೆ. ಸರ ಸಾಕಮ್ಮ ಅವರ ಕುತ್ತಿಗೆಯಲ್ಲೇ ಉಳಿದಿದೆ. ವಾಯು ವಿಹಾರಕ್ಕೆಂದು ಹೋಗಿದ್ದ ಪತಿ ಪ್ರಭಾಕರ್ ಅವರು ಮನೆಗೆ ಮರಳಿದಾಗ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ಸಹಕಾರದಿಂದ ಸಾಕಮ್ಮ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Crime

ಕಟ್ಟಡದ ಸಜ್ಜಾ ಕುಸಿತ ಪ್ರಕರಣ: ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ (45) ಚಿಕಿತ್ಸೆ ಫಲಕಾರಿಯಾಗದೆ ಸಾ*ವು

Published

on

ಬೇಲೂರು: ಹಳೇಯ ಕಟ್ಟಡದ ಸಜ್ಜಾ ಕುಸಿತ ಪ್ರಕರಣ

ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ (45) ಸಾವು

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ

ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ ಜ್ಯೋತಿ

ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಬೇಲೂರು ಪಟ್ಟಣದ ಹೊಸನಗರ ನಿವಾಸಿ ಜ್ಯೋತಿ

ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಜ್ಯೋತಿ

ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ ಜ್ಯೋತಿ ಪತಿ ಗೋಪಿ

ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಜ್ಯೋತಿ

ಅನಾಥವಾದ ಇಬ್ಬರು ಹೆಣ್ಣುಮಕ್ಕಳು

ಮಾ.9 ರಂದು ಬೇಲೂರು ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಎದುರು ನಡೆದಿದ್ದ ದುರಂತ

ಕಳೆದ ಭಾನುವಾರದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜ್ಯೋತಿ

 

Continue Reading

Crime

Hassan: ಕೈಗಾರಿಕಾ ಘಟಕದಲ್ಲಿ ಕಳ್ಳತನ

Published

on

HASSAN-BREAKING

ಹಾಸನ : ಕೈಗಾರಿಕಾ ಘಟಕದಲ್ಲಿ ಕಳ್ಳತನ

1.25 ಲಕ್ಷ ರೂ ಮೌಲ್ಯದ ಕಾಪರ್ ವೈರ್ ಮತ್ತು ಟೈರ್‌ಗಳನ್ನು ಕದ್ದು ಕಳ್ಳ ಎಸ್ಕೇಪ್

ಹಾಸನ ಜಿಲ್ಲೆ, ಹೋಳೆನರಸಿಪುರ ತಾಲ್ಲೂಕಿನ, ಮೈಸೂರು ರಸ್ತೆಯಲ್ಲಿ
ಘಟನೆ

ನಾಸಿರ್ ಅಹಮದ್ ಎಂಬುವವರಿಗೆ ಸೇರಿದ ಉಮರ್ ಅಗ್ರೋ ಇಂಡಸ್ಟ್ರೀಸ್‌

ಸಿಸಿಟಿವಿಯಲ್ಲಿ ಮುಖ ಕಾಣಬಾರದೆಂದು ಬಟ್ಟೆ ಮುಚ್ಚಲು ಯತ್ನಿಸಿರುವ ಕಳ್ಳ

ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Continue Reading

Crime

ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ: ಹಲ್ಲೆ ನಡೆಸಿದ ಮೂವರು ಯುವಕರ ಬಂಧನ

Published

on

HASSAN-BREAKING

ಹಾಸನ : ಹೋಳಿ ಆಚರಣೆ ವೇಳೆ ಯುವಕರ ನಡುವೆ ಮಾರಾಮಾರಿ ಪ್ರಕರಣ

ಹಲ್ಲೆ ನಡೆಸಿದ ಮೂವರು ಯುವಕರ ಬಂಧನ

ಲೋಹಿತ್, ಋತ್ವಿಕ್‌, ಆಕಾಶ್ ಬಂಧಿತ ಆರೋಪಿಗಳು

ಹಲ್ಲೆಗೊಳಗಾದ ಯುವಕನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಯುವಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಯುವಕರು

ಚಂದನ್ ಹಲ್ಲೆಗೊಳಗಾದ ಯುವಕ

ಹಾಸನ ನಗರದ ಜಿಲ್ಲಾಸ್ಪತ್ರೆ ಬಳಿ ಮಾರ್ಚ್ 8 ರಂದು ನಡೆದಿದ್ದ ಘಟನೆ

ಪೊಲೀಸ್ ಠಾಣೆಗೆ ದೂರು ನೀಡಿದ್ದ ಚಂದನ್

ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೂವರು ಹಾಸನ ಹೊರವಲಯದ ಚಿಕ್ಕಹೊನ್ನೇನಹಳ್ಳಿ ಗ್ರಾಮದವರು

ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ

Continue Reading

Trending

error: Content is protected !!