Connect with us

Mysore

ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ

Published

on

ಸಾಲಿಗ್ರಾಮ  : ಮಾಂಗಲ್ಯ ಸರ ಅಪಹರಣ, ಪೊಲೀಸ್ ವತಿಯಿಂದ ತಪಾಸಣೆ. ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಇಂದು ಸಂಜೆ 5 :30 ರ ಸಮಯದಲ್ಲಿ ಸರ್ಕಾರಿ ಬಸ್ ಹತ್ತಲು ಹೋದ ಮಹಿಳೆಯ ಅಂದಾಜು 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಸಿನಿಮೀಯ ರೀತಿಯಲ್ಲಿ ಎಗರಿಸಿರುತ್ತಾರೆ. ಮಹಿಳೆಯು ಕೂಗಿಕೊಂಡಾಗ ತಕ್ಷಣವೇ ಬಸ್ ಚಾಲಕ ಪಟ್ಟಣದ ಪೊಲೀಸ್ ಠಾಣೆಗೆ ಬಸ್ ನಿಲ್ಲಿಸಿ. ಮಾಹಿತಿಯನ್ನು ನೀಡಿ ನಂತರ ವೃತ್ತ ನಿರೀಕ್ಷಕ ಕೃಷ್ಣರಾಜು ಹಾಗು ಸಿಬ್ಬಂದಿ ಅನುಮಾನ ಗೊಂಡವರನ್ನು, ವಿಚಾರಿಸಿ, ಅವರ ಬ್ಯಾಗ್ ಗಳನ್ನು ತಪಾಸಣೆ ಮಾಡಿದರು. ಮಹಿಳೆಯು ಗಂಡನ ಮನೆ ಕೇರಳಾಪುರ ಸಮೀಪ ಬಿ ದರಾಕ್ ಗ್ರಾಮಕ್ಕೆ ಹೋಗಲು ಬಸ್ ಹತ್ತುವ ಸಮಯದಲ್ಲಿ ಈ ಘಟನೆ ನಡೆಯಿತು. ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈ ಗೊಂಡಿರುತ್ತಾರೆ. ಈ ರೀತಿಯಾದರೆ ಶುಭಾ ಕಾರ್ಯಗಳಿಗೆ ಯಾವ ರೀತಿಯಲ್ಲಿ ಹೋಗುವುದು ಎಂದು ಮಹಿಳೆಯರು ಭಯ ಭೀತರಾಗಿ ಅಲ್ಲಲೇ ಪಿಸು ಮಾತನಾಡಿ ಕೊಳ್ಳುತ್ತಿದ್ದರು.

ವರದಿ : ಎಸ್ ಬಿ ಹರೀಶ್

Continue Reading
Click to comment

Leave a Reply

Your email address will not be published. Required fields are marked *

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ*

Published

on

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೊರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆ.ದೀಪಕ್ ಆಯ್ಕೆ

Published

on

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯ ಮತದಾನ ನಿನ್ನೆ ಮುಗಿದಿದ್ದು, ಇಂದು ಫಲಿತಾಂಶ ಹೋರ ಬಿದ್ದಿದೆ.

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ದೀಪಕ್ ಅವರು 138 ಮತಗಳನ್ನು ಪಡೆದು ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರ ಉಪಾಧ್ಯಕ್ಷರಾಗಿ ರವಿ ಪಾಂಡವಪುರ, ಗ್ರಾಮೀಣ ಉಪಾಧ್ಯಕ್ಷರಾಗಿ ಹೆಚ್ ಎಸ್ ವೆಂಕಟಪ್ಪ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ, ಗ್ರಾಮಾಂತರ ಕಾರ್ಯದರ್ಶಿ ದಾರಾ ಮಹೇಶ್, ನಗರ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ್ ಯಾದವ್, ಖಜಾಂಜಿಯಾಗಿ ಸುರೇಶ್ ಎಸ್ ಅವರುಗಳು ಆಯ್ಕೆಯಾಗಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಂತಿದೆ.

ಎಂ.ಟಿ ಯೋಗೇಶ್ ಕುಮಾರ್,
ಕವಿತಾ ಎಸ್, ಅನಗೋಡು ನಟರಾಜು, ಡಿ.ಜೆ ರೋಜಾ ಮಹೇಶ್, ನಾಣಿ ಹೆಬ್ಬಾಳ್, ಜೆ.ರವಿಚಂದ್ರ ಹಂಚ್ಯ, ಹಂಪಾ ನಾಗರಾಜು, ಸೋಮಶೇಖರ್ ಚಿಕ್ಕಮರಳ್ಳಿ, ಜೆ ಶಿವಣ್ಣ, ಸತೀಶ್ ಆರ್ ದೇಪುರ, ದೊಡ್ಡನ ಹುಂಡಿ ರಾಜಣ್ಣ, ಹುಲ್ಲಹಳ್ಳಿ ಮೋಹನ, ಪುನೀತ್ ಎಸ್, ರಾಜು ಕಾರ್ಯ, ಸಿಎನ್ ವಿಜಯ್ ಇವರುಗಳು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Continue Reading

Mysore

ಮುಡಾ ಅಕ್ರಮ ನಿವೇಶನ ಹಂಚಿಕೆ: ಏಕ ಸದಸ್ಯ ವಿಚಾರಣಾ ಆಯೋಗ ರಚನೆ

Published

on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಆರೋಪ ಕುರಿತು ವಿಚಾರಣೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್‌.ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

ಅಕ್ರಮಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ, ದಾಖಲೆಗಳನ್ನು ಒದಗಿಸಿ, ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು, ತಾಂತ್ರಿಕ, ಆರ್ಥಿಕ ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ನೀಡಲು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಕರಿಸಬೇಕು ಎಂದು ಸೂಚಿಸಲಾಗಿದೆ.

ಆಯೋಗವು ವಿಚಾರಣೆಗೆ ಬಯಸುವ ಎಲ್ಲ ಕಡತಗಳು ಮತ್ತು ದಾಖಲಾತಿಗಳನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒದಗಿಸಬೇಕು. ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣವಾಗಿ ಸಹಕರಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತನಿಖೆಗೆ ಆದೇಶಿಸಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮುಡಾ ನಿವೇಶನ ಹಂಚಿಕೆಯ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಶಯದೊಂದಿಗೆ ರಾಜ್ಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಪಿ. ಎನ್. ದೇಸಾಯಿ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ತನಿಖೆಗೆ ವಹಿಸಿದೆ. ಪ್ರಕರಣದ ಕೂಲಂಕಷವಾದ ವಿಚಾರಣೆ ನಡೆದು, ಸತ್ಯಾಸತ್ಯತೆ ಹೊರಬರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದ್ದಾರೆ.

Continue Reading

Trending

error: Content is protected !!