Connect with us

Mysore

ಲೋಕಸಭಾ ಚುನಾವಣೆ ಅಂಗವಾಗಿ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಪಟ್ಟಣದಲ್ಲಿ ರೋಡ್ ಷೋ

Published

on

ಪಿರಿಯಾಪಟ್ಟಣ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಲೋಕಸಭಾ ಚುನಾವಣೆ ಅಂಗವಾಗಿ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಪರ ಪಟ್ಟಣದಲ್ಲಿ ನಡೆದ ರೋಡ್ ಷೋ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲೆಲ್ಲ ಬರಗಾಲ ಬರುತ್ತಿದ್ದು ಕಳೆದ ಏಳು ತಿಂಗಳಿಂದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಹಣ ಹಾಕದೆ ಇರುವ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ ಎಂದು ಟೀಕಿಸಿದರು, ಮಹಿಳೆಯರಿಗೆ 2 ಸಾವಿರ ಹಣ ನೀಡುವ ನೆಪದಲ್ಲಿ ಮದ್ಯದ ಬೆಲೆ ಏರಿಕೆ ಮಾಡುವ ಮೂಲಕ ಪಿಕ್ ಪಾಕೆಟ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ, ಜನವಿರೋಧಿ ನೀತಿ ಅನುಸರಿಸುತ್ತಿರುವ ಈ ಸರ್ಕಾರಕ್ಕೆ ಪಾಠ ಕಲಿಸುವ ಸಲುವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ ಎಂದು ಕರೆ ನೀಡಿ ಯದುವೀರ್ ಅತ್ಯಂತ ಸಂಭಾವಿತ ವ್ಯಕ್ತಿಯಾಗಿದ್ದು ಮಾದರಿ ಸಂಸದರಾಗಿ ಕೆಲಸ ಮಾಡುವ ಎಲ್ಲಾ ಅರ್ಹತೆ ಹೊಂದಿದ್ದಾರೆ, ಮತಗಟ್ಟೆಯಲ್ಲಿ ನಮ್ಮ ಪಕ್ಷದ ಚಿಹ್ನೆ ಕಾಣುತ್ತಿಲ್ಲವೆಂದು ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೀಡಾಗುವುದು ಬೇಡ ಕಮಲದ ಗುರುತಿಗೆ ಮತ ನೀಡಿ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾತನಾಡಿ ದೇಶದ ರಕ್ಷಣೆ ಹಾಗೂ ಭದ್ರತೆಗಾಗಿ ಮತ್ತೊಮ್ಮೆ ಮೋದಿ ಪ್ರಧಾನ ಮಂತ್ರಿಯಾಗಬೇಕು ಅವರ ಕೈ ಬಲಪಡಿಸಲು ಯದುವೀರ್ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಶಾಸಕ ಜಿ.ಡಿ ಹರೀಶ್, ಮಾಜಿ ಶಾಸಕ ಕೆ.ಮಹದೇವ್, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ, ಅಭ್ಯರ್ಥಿ ಯದುವೀರ್ ಒಡೆಯರ್ ಮಾತನಾಡಿದರು.

ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: ಮೈಸೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧಗಂಟೆಗೆ ಹೆಚ್ಚು ಕಾಲ ಮುಖಂಡರು ಭಾಷಣ ಮಾಡುತ್ತಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ನೂರಾರು ವಾಹನಗಳು ಕಾದು ನಿಲ್ಲುವಂತಾಗಿತ್ತು, ರೋಡ್ ಷೋ ಮುಗಿದ ನಂತರ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಈ ಸಂದರ್ಭ ಮಾಜಿ ಸಚಿವ ರಾಮದಾಸ್, ಮಾಜಿ ಶಾಸಕ ಎಚ್.ಸಿ ಬಸವರಾಜು, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ವಿ.ರಾಜೇಂದ್ರ, ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ಕೆ.ಎನ್ ಸೋಮಶೇಖರ್, ಆರ್.ಟಿ ಸತೀಶ್, ದೇವರಾಜ್ ಒಡೆಯರ್, ವಸಂತ್ ಕುಮಾರ್, ವಿಕ್ರಮ್ ರಾಜ್, ಅರುಣ್, ರವಿ, ನಳಿನಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಖ್ಯಾತ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ವಿಧಿವಶ

Published

on

ಮೈಸೂರು: ಹೆಸರಾಂತ ಜಾನಪದ ಶಾಸ್ತ್ರಜ್ಞೆ ಡಾ.ಜಯಲಕ್ಷ್ಮೀ ಸೀತಾಪುರ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ವಾರ ಅವರು ಬೆಂಗಳೂರಿಗೆ‌ ಕಾರಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿದ್ದ ಅವರು ನಗರದ ಖಾಸಗಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ನಿವೃತ್ತರಾಗಿದ್ದರು. ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ‘ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು’ ಕುರಿತು ಪಿಎಚ್.ಡಿ ಪದವಿ ಪಡೆದರು. ಅಮೆರಿಕದ ಫೋರ್ಡ್ ಫೌಂಡೇಷನ್ ಫೆಲೋಶಿಪ್ ಗೆ ಆಯ್ಕೆಯಾಗಿದ್ದರು.

ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಅವರು ಮಾರ್ಗದರ್ಶಕರಾಗಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಿಶಂಪ ಪ್ರಶಸ್ತಿ, ಮುದ್ದು ಮಾದಪ್ಪ ಪುರಸ್ಕಾರ, ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರಾಗಿದ್ದರು.

Continue Reading

Mysore

ವಿಜೃಂಭಣೆಯಿಂದ ಜರುಗಿದ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ

Published

on

ಸಾಲಿಗ್ರಾಮ  : ತಾಲೂಕಿನ‌ ಚಿಕ್ಕಕೊಪ್ಪಲು ‌ಗ್ರಾಮದಲ್ಲಿ‌ ಬಂಡಿಹಬ್ಬದ ಪ್ರಯುಕ್ತ ಶ್ರೀ ಆದಿಶಕ್ತಿ ಮುತ್ತುತಾಳಮ್ಮ‌ ದೇವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ನಡೆಯಿತು.
11 ವರ್ಷದ ನಂತರ ನಡೆದ ಈ ಹಬ್ಬದ ಹಿನ್ನಲೆಯಲ್ಲಿ ಚಿಕ್ಕಕೊಪ್ಪಲು ಗ್ರಾಮದ ದೇವರಹಟ್ಟಿ ಬಳಿ ಹೂವಿನ ಅಲಂಕಾರ ದಿಂದ ಶೃಂಗಾರಗೊಂಡಿದ್ದ ರಥದಲ್ಲಿ ಆದಿಶಕ್ತಿ ಮುತ್ತುತಾಳಮ್ಮ‌ ದೇವರನ್ನ ಪ್ರತಿಷ್ಠಾಪಿಸಿದ ಬಳಿದ ಅರ್ಚಕ ಮಂಜುನಾಯಕ್ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ನಂತರ ಹಾಜರಿದ್ದ ಭಕ್ತರು ದೇವರಿಗೆ ಚಪ್ಪಾಳೆ- ಜಯಕಾರ ದೊಂದಿಗೆ ರಥವನ್ನು ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಎಳೆದು ತಂದು ದೂಳ್ ಮರಿ ಬಲಿ ಕೊಟ್ಟ ನಂತರ ಮತ್ತೆ ಚಿಕ್ಕಕೊಪ್ಪಲು ಗ್ರಾಮದ ಹೊರವಲಯದ ಬಳಿ ಇರುವ ಶ್ರೀ ಆದಿಶಕ್ತಿ ಮುತ್ತುತಾಳಮ್ಮ ದೇವರ ದೇವಸ್ಥಾನಕ್ಕೆ ತಂದು ಸಂಭ್ರಮಿಸಿದರು.

21 ಕ್ಕೆ ಮಡೆ ಹಬ್ಬ
14 ಶುಕ್ರವಾರ ದಿಂದ ಗ್ರಾಮದಲ್ಲಿ ಆಂಭಗೊಂಡ ಬಂಡಿ ಹಬ್ಬವು 21 ರ ಶುಕ್ರವಾರ ಸಂಜೆ 7 ಗಂಟೆಗೆ ಗ್ರಾಮದ‌ ಮಲ್ಲಮ್ಮನ ಕೊಳದ ಬಳಿಯಿಂದ ತಂ ಬ್ಬಿಟ್ಟಿನ ಆರತಿಯನ್ನು ಗ್ರಾಮದ ಹೆಬ್ಬಾಗಿಲಿನ ವರಿಗೆ ಮೆರವಣಿಗೆ ಮಾಡುವ ಮೂಲಕ ಮಡೆ ಹಬ್ಬ ನಡೆದು, 8 ದಿನಗಳ ಕಾಲ ನಡೆದ ಮುತ್ತುತಾಳಮ್ನ‌ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಮುಕ್ತಾಯವಾಗಲಿದೆ.

ಆನಂತರ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಆದಿ ಶಕ್ತಿ ಮುತ್ತುತಾಳಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಹಬ್ಬದ ಹಿನ್ನಲೆಯಲ್ಲಿ ದೇವಾಲಯದ ಬಳಿ ಹಾಕಲಾಗಿದ್ದ ಕೊಂಡ ಹಾದು ತಮ್ಮ‌ಇಷ್ಟಾರ್ಥಗಳು  ನೇರವೇರಿಸುವಂತೆ ಮತ್ತು ಗ್ರಾಮಕ್ಕೆ ಒಳಿತಾಗುವಂತೆ ಪ್ರಾರ್ಥಿಸಿಕೊಂಡರು.
ಬಂಡಿ ಹಬ್ಬ ಮತ್ತು ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ವಿದ್ಯುತ್ ಆಲಂಕಾರ ಮತ್ತು ವಿವಿಧ ಬಗೆಯ ಪಟಾಕಿಗಳ ಆರ್ಭಟ ವೀರಗಾಸೆಯ ನೃತ್ಯಗಳು ಜೊತೆಗೆ ನಗಾರಿ ಶಬ್ದ ಅಲ್ಲದೇ ಯುವಕರ ಭರ್ಜರಿ ನೃತ್ಯ ಮನಸೂರೆಗೊಂಡಿತು. ಬೆಳಿಗ್ಗೆ 6 ಗಂಟೆಯಿಂದಲೇ ಮುತ್ತುತಾಳಮ್ಮ ದೇವಾಲಯದಲ್ಲಿ ಹೋಮ ಮತ್ತು ವಿಶೇಷ ಪೂಜಾಕಾರ್ಯ ನಡೆದವು.
ರಥೋತ್ಸವದಲ್ಲಿ ಯಜಮಾನರಾದ ಟಿ.ಪುರುಷೋತ್ತಮ್, ಸತ್ಯಪ್ಪ,ಸಿ.ಬಿ.ಸಂತೋಷ್, .ಸ್ವಾಮಿಗೌಡ,ಸಿ.ಎಲ್.ಬಸವರಾಜು,ಡಿ.ಕುಮಾರಸ್ವಾಮಿ, ಸಿ.ಆರ್.ಉಮೇಶ್, ಪ.ಸ್ವಾಮಿಗೌಡ, ಸಿ.ಕೆ.ರಾಮಸ್ವಾಮಿ,ರವೀಶ,ಅಪ್ಪಾಜಿಗೌಡ,ಬಡ್ಡಪ್ಪ ಜವರನಾಯಕ, ಸೇರಿದಂತೆ ಸಾವಿರಾರು ಮಂದಿ  ಭಕ್ತರು ಭಾಗವಹಿಸಿದ್ದರು.

ವರದಿ : ವರದಿ : ಎಸ್ ಬಿ ಹರೀಶ್ ಸಾಲಿಗ್ರಾಮ

Continue Reading

Mysore

ಮೈಸೂರು ಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ಮಾಡಲಾಗುವುದು ಈಶ್ವರ್ ಬಿ ಖಂಡ್ರೆ

Published

on

ಮೈಸೂರು: ಜೂನ್.15 ಮೈಸೂರುಮೃಗಾಲಯವನ್ನು ಅಭಿವೃದ್ಧಿಪಡಿಸಿ ವಿಶ್ವ ಮಟ್ಟದ ಪ್ರವಾಸಿ ತಾಣ ವನ್ನಾಗಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಜೀವ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದರು.

ಮೈಸೂರು ಮೃಗಾಲಯದಲ್ಲಿ ವಾಟ್ಸ್ ಅಪ್ ಟಿಕೆಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಮೃಗಾಲಯದ ವೀಕ್ಷಣೆಗೆ ಸಾಲಿನಲ್ಲಿ ಕಾಯುವುದೇ ಏಕೆ, ಈಗ ವಾಟ್ಸಪ್ ನಲ್ಲಿ ಮೃಗಾಲಯದ ವೀಕ್ಷಣೆ ಟಿಕೆಟ್ ಪಡೆಯಬಹುದಾಗಿದ್ದು ಈ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ನಂತರ ಮೃಗಾಲಯದ ಸಾವಯವ ತ್ಯಾಜ್ಯವನ್ನು ಎರೆಹುಳು ಗೊಬ್ಬರ ವನ್ನಾಗಿ ಪರಿವರ್ತಿಸುವ ಯೋಜನೆಗೆ ಚಾಲನೆ ನೀಡಿ, ಮೃಗಾಲಯದಲ್ಲಿ ಜನಿಸಿದ ಜಿರಾಫೆ ಮರಿಗೆ ದಕ್ಷ ಎಂದು ನಾಮಕರಣ ಮಾಡಿದರು

Continue Reading

Trending

error: Content is protected !!