Hassan
ಹಾಸನ : ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿ :ಇಬ್ಬರು ಯುವಕರ ಧಾರುಣ ಸಾ*ವು
ಹಾಸನ : ರಸ್ತೆ ವಿಭಜಕಕ್ಕೆ ಸ್ವಿಫ್ಟ್ ಕಾರು ಡಿಕ್ಕಿ
ಸ್ಥಳದಲ್ಲೇ ಇಬ್ಬರು ಯುವಕರು ಧಾರುಣ ಸಾವು
ದರ್ಶನ್ (25), ರಂಗನಾಥ ಪ್ರಸಾದ್ (22) ಮೃತ ಯುವಕರು
ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಬಸವಾಪಟ್ಟಣ ಸಮೀಪ ಇಂದು ಮುಂಜಾನೆ ಘಟನೆ
KA-53-MA-1196 ನಂಬರ್‌ನ ಕಾರಿನಲ್ಲಿ ಕೊಣನೂರು ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಇಬ್ಬರು ಯುವಕರು
ಬಸವಾಪಟ್ಟಣ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
Hassan
ಕೊಟ್ಟಿಗೆ ಮೇಲೆ ಕಾಡಾನೆ ದಾಳಿ: ಕರು ಬ*ಲಿ
ಸಕಲೇಶಪುರ: ತಾಲೂಕಿನ ಕಿರವಾಲೆ ಗ್ರಾಮದಲ್ಲಿ ಶನಿವಾರ ರಾತ್ರಿ ಕೊಟ್ಟಿಗೆ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕರು ಮೃತಪಟ್ಟಿದ್ದು, ಹಸು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರಾಮದ ಯತೀಶ್ ಅವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದ ಕಾಡಾನೆ ಹಸು ಹಾಗೂ ಕರುವಿನ ಮೇಲೆ ಸೊಂಡಿಲಿನಿಂದ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಸು ಗಂಭೀರವಾಗಿ ಗಾಯಗೊಂಡಿದೆ.

ಘಟನೆ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಹೇಮಂತ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಡಾನೆಗಳ ಹಾವಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
Hassan
ಚೆನ್ನಮ್ಮ ಸಮಾಧಿಗೆ ಯದುವೀರ ಒಡೆಯರ್ ನಮನ: ದೇವೇಗೌಡರಿಗೆ ಸಾಂತ್ವನ, ಆರೋಗ್ಯ ವಿಚಾರಣೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಸಮಾಧಿ ಸ್ಥಳಕ್ಕೆ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಚೆನ್ನಮ್ಮ ಅವರ ಸಮಾಧಿಗೆ ಹೂವಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ಯದುವೀರ ಒಡೆಯರ್ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಮಾಧಿ ಸ್ಥಳದಲ್ಲೇ ಇದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಭೇಟಿ ಮಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಅವರಿಗೆ ಸಾಂತ್ವನ ತಿಳಿಸಿ ಆರೋಗ್ಯ ವಿಚಾರಿಸಿದರು. ಈ ಭೇಟಿ ವೇಳೆ ಗೌರವಪೂರ್ವಕವಾಗಿ ನಮನ ಸಲ್ಲಿಸಿ ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
Hassan
“ಪ್ರವಾಸಿಗರೇ ಎಚ್ಚರಿಕೆ..! ಶೌಚಾಲಯದಲ್ಲಿ ನೀರಿಲ್ಲ: ಇದು ವಿಶ್ವವಿಖ್ಯಾತ ಬೇಲೂರಿನ ಪರಿಸ್ಥಿತಿ…”
ಬೇಲೂರು : ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಮುಂಭಾಗದ ಶೌಚಾಲಯದಲ್ಲಿ ನೀರಿಲ್ಲ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರವಾಸಿಗರ ಆಕ್ರೋಶ
ಬೇಲೂರು ವಿಶ್ವವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ದೇಶ–ವಿದೇಶಗಳಿಂದ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ದೇವಾಲಯದ ಮುಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ಸೌಲಭ್ಯ ಇಲ್ಲದಿರುವುದು ಪ್ರವಾಸಿಗರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಶೌಚಾಲಯಕ್ಕೆ ತೆರಳುವ ಭಕ್ತರು ಮತ್ತು ಪ್ರವಾಸಿಗರು ನೀರಿನ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು, ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಆರೋಪಗಳು ಕೇಳಿಬರುತ್ತಿವೆ. ಈ ಸಂಬಂಧ ಮಾತನಾಡಿದ ಬೆಂಗಳೂರಿಂದ ಪ್ರವಾಸಕ್ಕೆ ಬಂದ ಪ್ರವಾಸಿಗರು ವಿಶ್ವವಿಕೇಯದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ವೀಕ್ಷಣೆಗೆ ಬಂದು ಶೌಚಾಲಯ ಕೇಂದ್ರ ತೆರಳಿದರೆ ಶೌಚಾಲಯದ ದ್ವಾರದಲ್ಲಿ ನೀರಿಲ್ಲ ನೀರಿಲ್ಲ ಎಂದು ಪ್ರವಾಸಿಗರನ್ನು ವಾಪಸ್ ಕಳಿಸುತ್ತಿದ್ದಾರೆ ಪ್ರವಾಸಕರು ದೇವಾಲಯಕ್ಕೆ ಸೇರಿದ ಶೌಚಾಲಯ ಉಪಯೋಗಿಸಬಹುದೇ ಹೊರತು ಇನ್ಯಾವ ಶೌಚಾಲಯ ಉಪಯೋಗಿಸಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ದೇವಾಲಯದ ಆಡಳಿತ ಮಂಡಳಿ ನಿರ್ಲಕ್ಷದಿಂದ ಮಹಿಳೆಯರು ಮತ್ತು ವೃದ್ಧರು ಬೇಲೂರಿಗೆ ಬಂದು ಶೌಚಾಲಯಕ್ಕಾಗಿ ನರಕ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು
ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಚನ್ನಕೇಶವ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಜನರು ಆಗಮಿಸುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರು, ಶೌಚಾಲಯದಂತಹ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯಗತ್ಯ.
ಆದರೆ ಶೌಚಾಲಯದಲ್ಲಿ ನೀರಿಲ್ಲದ ಕಾರಣ ಪ್ರವಾಸಿಗರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, “ವಿಶ್ವವಿಖ್ಯಾತ ದೇವಾಲಯಕ್ಕೆ ಬರುವವರಿಗೆ ಇದೇನಾ ಸೌಲಭ್ಯ?” ಎಂದು ಪ್ರಶ್ನಿಸುತ್ತಿದ್ದಾರೆ.ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಮಸ್ಯೆ ಪರಿಹರಿಸಿ, ಶೌಚಾಲಯದಲ್ಲಿ ನಿರಂತರ ನೀರಿನ ವ್ಯವಸ್ಥೆ ಕಲ್ಪಿಸಿ, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಬೇಲೂರಿನ ಪ್ರವಾಸೋದ್ಯಮದ ಘನತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
-
Hassan15 hours agoಚೆನ್ನಮ್ಮ ಸಮಾಧಿಗೆ ಯದುವೀರ ಒಡೆಯರ್ ನಮನ: ದೇವೇಗೌಡರಿಗೆ ಸಾಂತ್ವನ, ಆರೋಗ್ಯ ವಿಚಾರಣೆ
-
National20 hours agoಕೇಂದ್ರ ಶಿಕ್ಷಣ ಸಚಿವರಾಗಿ ಪ್ರಹ್ಲಾದ್ ಜೋಶಿ ಅಧಿಕಾರ ಸ್ವೀಕಾರ: ಪ್ರಧಾನಿ ಮೋದಿ ವಿಶ್ವಾಸಕ್ಕೆ ಧನ್ಯವಾದ ತಿಳಿಸಿದ ಸಚಿವರು
-
Kodagu18 hours agoಮಡಿಕೇರಿ ನಗರ ಮಾಜಿ ಸೈನಿಕರ ಸಂಘದಿಂದ ಕಾಗಿ೯ಲ್ ವಿಜಯ್ ದಿವಸ್
-
Mandya15 hours agoಐದು ದಿವಸಗಳ ಮಧ್ಯಸ್ಥಿಕ ವಕೀಲರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ
-
State32 minutes agoಮಾರ್ಫ್ ಫೋಟೋಗಳ ಬೆದರಿಕೆ: ₹48 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ, ಸೈಬರ್ ವಂಚಕರ ಹೊಸ ತಂತ್ರಕ್ಕೆ ಎಚ್ಚರ!!
-
Manglore16 hours ago10 ಲಕ್ಷ ನಗದು, ಡಾಲರ್ಗಳಿದ್ದ ಬ್ಯಾಗ್ ಮರೆತು ಹೋದ ಪ್ರಯಾಣಿಕನಿಗೆ ಮರಳಿಸಿದ ಸಿಐಎಸ್ಎಫ್ ಸಿಬ್ಬಂದಿ : ಪ್ರಾಮಾಣಿಕತೆಗೆ ಮೆಚ್ಚುಗೆ
-
Hassan24 hours agoಹಗಲಲ್ಲೇ ಭಾರಿ ಕಳ್ಳತನ: ₹69.56 ಲಕ್ಷ ಮೌಲ್ಯದ ಚಿನ್ನಾಭರಣ, ₹13.40 ಲಕ್ಷ ನಗದು ದೋಚಿದ ಖತರ್ನಾಕ್ ಕಳ್ಳರು
-
Chikmagalur18 hours agoನೈಟಿ ಧರಿಸಿ ಬಂದ ಕಿಲಾಡಿ ಕಳ್ಳ: ಚಿಕ್ಕಮಗಳೂರಿನ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖದೀಮ!

