Connect with us

Chamarajanagar

ಕಾಲಮಿತಿಯೊಳಗೆ ಜನರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

Published

on

ಕಾಲಮಿತಿಯೊಳಗೆ ಜನರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.ಚಾಮರಾಜನಗರಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಚಿವರು ಕಂದಾಯ ಇಲಾಖೆಗೆ ಸಂಬAಧಿಸಿದ ಕಚೇರಿಗಳಿಗೆ ತೆರಳಿ ಪರಿಶೀಲಿಸಿದರು.
ಆಧಾರ್ ನೋಂದಣಿ ಕೇಂದ್ರ, ಆರ್‌ಟಿಸಿ ವಿತರಣಾ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು. ಜನರಿಗೆ ಆಧಾರ್, ಆರ್‌ಟಿಸಿ ವಿತರಣೆಯಲ್ಲಿ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳುವಂತೆ ಸೂಚಿಸಿದರು. ಬಳಿಕ ಚುನಾವಣಾ ಕೇಂದ್ರಕ್ಕೆ ತೆರಳಿ ಮತದಾರರ ನೋಂದಣಿ ಸಂಬAಧ ಮಾಹಿತಿ ಪಡೆದುಕೊಂಡರು. ನಂತರ ಸಬ್ ರಿಜಿಸ್ಟಾçರ್ ಕಚೇರಿ, ರೆಕಾರ್ಡ್ ರೂಂ, ಕಂದಾಯ ಇಲಾಖೆಯ ಕಚೇರಿಗೆ ತೆರಳಿ ಇಲಾಖೆಗಳ ಪ್ರಗತಿ ಸಂಬAಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರೆಕಾರ್ಡ್ ರೂಂ ತೆರಳಿದ ಸಚಿವರು, ಅಲ್ಲಿ ಕೈಗೊಂಡಿರುವ ಭದ್ರತೆಯ ಬಗ್ಗೆ ಪರಿಶೀಲಿಸಿ ಮಾಹಿತಿ ಕಲೆ ಹಾಕಿದರು.
ಸರ್ವೇ ಇಲಾಖೆಗೆ ತೆರಳಿದ ಸಚಿವರು ಸರ್ಕಾರಿ ಜಾಗಗಳ ಮಾಹಿತಿ ಪಡೆದುಕೊಂಡರು. ಸರ್ಕಾರಿ ಜಾಗಗಳನ್ನು ಅತಿಕ್ರಮಣ ಮಾಡಿರುವ ಹಾಗೂ ಸರ್ಕಾರಿ ಜಾಗ ಅದಲು ಬದಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಈ ಸಂಬAಧ ಸೂಕ್ತವಾಗಿ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ ಕಂದಾಯ ಇಲಾಖೆಯಿಂದ ಸರ್ವೆ ಕೆಲಸಗಳು ನಡೆಯುತ್ತಿವೆಯ ಎಂದು ಪ್ರಶ್ನಿಸಿದ ಸಚಿವರು, ಇಲ್ಲಿಯ ತನಕ ಎಷ್ಟು ಕೆಲಸಗಳು ನಡೆದಿವೆ. ಎಷ್ಟು ಕೆಲಸಗಳು ಬಾಕಿಯಿವೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಶಿವರಾಜ್, ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಅರಣ್ಯಕ್ಕೆ ಹೊಂದಿಕೊAಡಿರುವAತೆ ಸರ್ವೆ ಕಾರ್ಯಗಳು ನಡೆದಿಲ್ಲ. ಹಾಗಾಗಿ ಸ್ವಲ್ಪ ತಡವಾಗಿದೆ. ಒಟ್ಟಾರೆ ತಾಲೂಕಿನಲ್ಲಿ ಶೇ.೬೦ ರಷ್ಟು ಕೆಲಸಗಳು ಆಗಿವೆ ಎಂದರು. ಇದಕ್ಕೆ ಕೋಪಗೊಂಡ ಸಚಿವರು ಉಳಿದ ಶೇ.೪೦ ರಷ್ಟು ಕೆಲಗಳು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿ ಸಂಬAಧಪಟ್ಟವರಿAದ ಮಾಹಿತಿ ಪಡೆದುಕೊಂಡರು.
ಕAದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು. ಜನರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ನೋಡಿಕೊಳ್ಳಬೇಕು. ಕೆಲಸ ಕಾರ್ಯಗಳನ್ನು ವಿಳಂಬ ಮಾಡಬಾರದು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ಮಹೇಶ್, ಚಾಮರಾಜನಗರ ತಹಸೀಲ್ದಾರ್ ಬಸವರಾಜು ಸೇರಿದಂತೆ ಇತರರಿದ್ದರು

 

Continue Reading
Click to comment

Leave a Reply

Your email address will not be published. Required fields are marked *

Chamarajanagar

ವೃದ್ದೆ ಕಾಣೆ : ಸುಳಿವಿಗೆ ಸಹಕರಿಸಲು ಮನವಿ

Published

on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹೊರೆಯಾಲ ಗ್ರಾಮದ ಮಾಲಮ್ಮ ಎಂಬ ವೃದ್ದೆ ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.

87 ವರ್ಷದ ಮಾಲಮ್ಮ 5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೇಸರಿ ಬಣ್ಣದ ಸೀರೆ, ಕಪ್ಪು ಬಣ್ಣದ ಸ್ಪೆಟರ್ ಧರಿಸಿದ್ದರು.

ಇವರ ಸುಳಿವು ದೊರೆತಲ್ಲಿ ಬೇಗೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Continue Reading

Chamarajanagar

ಬಂಡೀಪುರದಲ್ಲಿ ಆಹಾರ ಬಯಸಿ ರಸ್ತೆಗೆ ಬರುವ ಕಾಡಾನೆ

Published

on

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂ ಬೆಳಿಗ್ಗೆ ಕಾಡಾನೆಯೊಂದು ಅಹಾರ ಬಯಸಿ ರಸ್ತೆಗೆ ಬಂದು ತರಕಾರಿ ಅಹಾರ ಪದಾರ್ಥ ತುಂಬಿ ಸಾಗಿಸುವ ಲಾರಿ ಪಿಕಪ್ ಗಳನ್ನು ತಡೆದು ತರಕಾರ ಆಹಾರ ಪದಾರ್ಥಗಳ ಚೀಲಗಲನ್ನು ನೆಲಕ್ಕೆ ಕೆಡವಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದೆ.

ಈ ಒಂಟಿ ಆನೆ ಹಿಂದೆ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿತ್ತು. ಆದರೆ ಅನೆ ಬಳಿ ಪೋಟೋ ತೆಗೆಯಲು ಕುಚೇಷ್ಟ ಮಾಡಿದರಷ್ಟೆ ಆನೆ ದಾಳಿ ಮಾಡುತ್ತದೆ ಇಲ್ಲದಿದ್ದರೆ ಕಾರು ಮತ್ತಿತರ ವಾಹನಗಳ ಬಳಿ ಬಾರದೆ ಲಾರಿ ಪಿಕಪ್ ಲಾರಿಗಳನ್ನು ಮಾತ್ರ ತಡೆದು ತರಕಾರಿ ಮತ್ತಿತರ ಅಹಾರ ಪದಾರ್ಥಗಳನ್ನು ಹುಡುಕುತ್ತ ತಿನ್ನಲು ಯತ್ನಿಸುತ್ತದೆ.

ಬುಧವಾರ ಬೆಳಿಗ್ಗೆ ಅನೆ ರಸ್ತೆಗೆ ಬಂದು ವಾಹನಗಳನ್ನು ತಡೆಯಿತು ಅದರೆ ವಾಹನ ಸವಾರರು ಕಾಡಾನೆಗೆ ಎದರಿ ವಾಹನ ನಿಲ್ಲಿಸಿದರು ಅದರೆ ಕಾಡಾನೆ ಬೆರೆ ವಾಹನಗಳ ಮೇಲೆ ದಾಳಿ ಮಾಡದೆ ಇರುವುದನ್ನು ಗಮನಿಸಿ ನಂತರ ವಾಹನಗಳು ಚಲಿಸಿದವು.

Continue Reading

Chamarajanagar

ಗುಂಡ್ಲುಪೇಟೆ:  ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರನಿಗೆ ಗಾಯ

Published

on

ಗುಂಡ್ಲುಪೇಟೆ: ತಾಲೂಕಿನ ಗರಗನಹಳ್ಳಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ಡಿಕ್ಕಿಯಾಗಿದ್ದು, ಬೈಕ್ ಸವಾರನಿಗೆ ಗಂಬೀರ ಗಾಯವಾಗಿರುವ ಘಟನೆ ನಡೆದಿದೆ.

ಗರಗನಹಳ್ಳಿ ಗೆಟ್ ಬಳಿ ಟಿಪ್ಪರ್ ತಿರುಗಿಸಿದೆ ವೇಗವಾಗಿ ಬಂದ ಕೂತನೂರು ಗ್ರಾಮದ ಮಂಜು ಎಂಬುವವರ ಬೈಕ್ ಟಿಪ್ಪರ್ ಕೆಳಗೆ ಸಿಲುಕಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದೆ.

ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Continue Reading

Trending

error: Content is protected !!