Connect with us

Hassan

ರೇವಣ್ಣ ಬಂಧನದಿಂದ ಬಿಡುಗಡೆವರೆಗೆ…

Published

on

 

ಏ.೨೨: ಹಾಸನ ಸಂಸದ ಪ್ರಜ್ವಲ್ ರೇವಣ್ಣ
ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್

ಏ.೨೫: ರಾಜ್ಯ ಮಹಿಳಾ ಆಯೋಗದಿಂದ ತನಿಖೆ ನಡೆಸುವಂತೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ

ಏ.೨೬-೨೭: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮತದಾನ ಮುಕ್ತಾಯದ ದಿನವೇ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪರಾರಿ

ಏ.೨೮: ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್

ಏ.೨೮: ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಸರಕಾರದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ

ಏ.೨೯: ರೇವಣ್ಣ, ಪ್ರಜ್ವಲ್‌ಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿಯಿಂದ ನೋಟಿಸ್

ಏ.೨೯: ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆ ಎನ್ನಲಾದ ಮಹಿಳೆಯೊಬ್ಬರ ಅಪಹರಣ
ಮೇ ೧: ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಮೇ ೨: ರೇವಣ್ಣ ವಿರುದ್ಧ ಸಂತ್ರಸ್ತ ಮಹಿಳೆ ಅಪಹರಣದ ಕೇಸ್ ದಾಖಲು

ಮೇ ೩: ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋದ ರೇವಣ್ಣ

ಮೇ ೪: ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿರಾಕರಣೆ

ಮೇ ೪: ಶನಿವಾರ ಸಂಜೆ ೬.೪೫ಕ್ಕೆ ರೇವಣ್ಣ ಅವರನ್ನು ವಶಕ್ಕೆ ಪಡೆದ ಎಸ್‌ಐಟಿ ಪೊಲೀಸರು

ಮೇ ೫: ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ೪ ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ಮೇ ೭: ಎಸ್‌ಐಟಿ ವಶದಲ್ಲಿದ್ದ ರೇವಣ್ಣ ಆರೋಗ್ಯದಲ್ಲಿ ಏರುಪೇರು, ನಗರದ ಬೌರಿಂಗ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆ

ಮೇ ೮: ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅಂತ್ಯ, ೭ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಗರದ ೧೭ನೇ ಎಸಿಎಂಎಂ ನ್ಯಾಯಾಲಯ, ಪರಪ್ಪನ ಅಗ್ರಹಾರ ಜೈಲು ಸೇರಿದ ರೇವಣ್ಣ

 

ಮೇ ೯: ನಿಯಮಿತ (ರೆಗ್ಯುಲರ್) ಜಾಮೀನು ಕೋರಿ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ (ಸಿಸಿಎಚ್-೮೨) ಅರ್ಜಿ ಸಲ್ಲಿಸಿದ್ದ ರೇವಣ್ಣ, ಎರಡು ತಾಸಿಗೂ ಹೆಚ್ಚು ಕಾಲ ವಾದ-ಪ್ರತಿವಾದದ ಬಳಿಕ ಮೇ ೧೩ರಂದು ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದ ನ್ಯಾಯಾಲಯ

ಮೇ ೧೧: ಪೆನ್ ಡ್ರೈವ್ ಹಂಚಿದ ಆರೋಪ ಎದುರಿಸುತ್ತಿರುವ ವಕೀಲ ದೇವರಾಜೇಗೌಡ ಅವರನ್ನು ಮೇ ೧೦ ರಂದು ಶುಕ್ರವಾರ ತಡರಾತ್ರಿ ವಶಕ್ಕೆ ಪಡೆದ ಹಿರಿಯೂರು ಗ್ರಾಮಾಂತರ ಪೊಲೀಸರು. ಶನಿವಾರ ಹೊಳೆನರಸೀಪುರ ಪೊಲೀಸರಿಗೆ ಹಸ್ತಾಂತರ

ಮೇ ೧೨: ಸಂಸದ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ವಿಡಿಯೋಗಳ ಬಹಿರಂಗ ಮತ್ತು ಪೆನ್‌ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಜೆ.ಗೌಡ ಆಪ್ತ ಸೇರಿ ಇಬ್ಬರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು


ಮೇ ೧೨: ಕಿಡ್ನಾಪ್ ಆಗಿದ್ದರು ಎನ್ನಲಾದ ಸಂತ್ರಸ್ತೆ ವಿಡಿಯೋ ಜಾಲತಾಣದಲ್ಲಿ ವೈರಲ್, ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಎಲ್ಲಿಯೂ ಹೋಗಿಲ್ಲ, ಸಂಬಂಧಿಕರ ಮನೆಯಲ್ಲಿದ್ದೇನೆ ಎಂದು ಹೇಳಿದ ಮಹಿಳೆ, ಪ್ರಕರಣಕ್ಕೆ ನಾಟಕೀಯ ತಿರುವು

ಮೇ ೧೩: ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು, ಮಂಗಳವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆ ಸಾಧ್ಯತೆ

Continue Reading
Click to comment

Leave a Reply

Your email address will not be published. Required fields are marked *

Hassan

ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣ ಖಾಸಗಿ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಭೇಟಿ

Published

on

ಹಾಸನ : ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ಸಂಬಂಧ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ರಾದ, ಶಶಿಧರ್ ಕೋಸಂಬೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದ ಖಾಸಗಿ ಶಾಲೆಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವು ಮಾಹಿತಿ ಪಡೆದರು.

ಖಾಸಗಿ ಶಾಲೆಗೆ ಭೇಟಿ ನೀಡಿದ ಆಯೋಗದ ಅಧ್ಯಕ್ಷರು ಶಾಲೆಯಲ್ಲಿ ಕೆಲವು ದಾಖಲಾತಿಗಳ ಕೊರತೆ ಎದ್ದು ಕಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ , ಶಾಲೆಗೆ ನೋಟಿಸ್ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದರು.

ಕನಿಷ್ಠ ಪಕ್ಷ ಅಪ್ರಾಪ್ತ ಬಾಲಕಿಯ ದೇಹದ ಮೇಲೆ ಆಗಿರುವ ಆರೋಗ್ಯದ ಮೇಲಾದ ಬದಲಾವಣೆಗಳನ್ನ ತಿಳಿದುಕೊಳ್ಳುವಷ್ಟು ಶಾಲಾ ಮುಖ್ಯಸ್ಥರು ವಿಫಲಗೊಂಡಿದ್ದಾರೆ. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು, ಶಾಲೆಯ ಮುಖ್ಯಸ್ಥರು, ದೈಹಿಕ ಶಿಕ್ಷಕರು, ಹಾಗೂ ಶಾಲಾ ಶಿಕ್ಷಕಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಷ್ಟ ಇಲ್ಲದೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವ ಶಾಲಾ ವಾಹನದ ಚಾಲಕ ರಂಜಿತ್ ಎಂಬುವನನ್ನ ಕೂಡಲೇ ಬಂಧಿಸುವಂತೆ ಸೂಚಿಸಿ, ಆತನ ಹಿನ್ನೆಲೆಯನ್ನ, ಮತ್ತು ಆತ ಇದಲ್ಲದೆ ಮತ್ತೆ ಇನ್ ಯಾವುದಾದರೂ ಪ್ರಕರಣದಲ್ಲಿ ಆರೋಪಿಯಾಗಿದ್ದಾನ ಎಂಬುದನ್ನ ತನಿಖೆ ಮಾಡಿ ಶೀಘ್ರ ವರದಿ ನೀಡುವಂತೆ ಡಿವೈಎಸ್ಪಿ ಎನ್ ಕುಮಾರ್ ಅವರಿಗೆ ಸೂಚನೆ ನೀಡಿದರು.

ಇನ್ನು ಶಾಲಾ ವಾಹನಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ವಾಹನದಲ್ಲಿ ಮಕ್ಕಳನ್ನ ನಿಗಾ ವಹಿಸುವುದಕ್ಕೆ ಮಹಿಳೆಯೊಬ್ಬರನ್ನು ನೇಮಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಆಯೋಗದ ಅಧ್ಯಕ್ಷ ಕೂಡಲೇ ಶಾಲೆಗೆ ನೋಟಿಸ್ ನೀಡಿ ವಿವರಣೆ ನೀಡುವಂತೆ ಆರ್‌ಟಿಓ ಅಧಿಕಾರಿಗಳಿಗೆ ಸೂಚನೆ ನೀಡಿದರು.

Continue Reading

Hassan

ಬಾಳೇನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ಅಪಘಾತ: ಓರ್ವ ಮಹಿಳೆ ಸಾ*ವು

Published

on

ಅರಸೀಕೆರೆ:  ತಾಲೂಕಿನ ಬಾಳೇನಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಮೈಸೂರಿನಿಂದ ವೇಗವಾಗಿ ಬರುತ್ತಿದ್ದ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದಿದ್ದು ಮಹಿಳೆಯು ಸ್ಥಳದಲ್ಲಿ ಸಾವನಪ್ಪಿದ್ದಾಳೆ.

ಮಹಿಳೆಯು ಯಾರು ಎಂಬುದು ಪತ್ತೆಯಾಗಿರುವುದಿಲ್ಲ. ಮಹಿಳೆಯ ಸಂಬಂಧಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇನ್ನೂ ಸ್ವಯಂ ಪ್ರೇರಿತವಾಗಿ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Hassan

ಅಪ್ರಾಪ್ತ ಬಾಲಕಿ‌ ಮೇಲೆ ಅ*ತ್ಯಾಚಾರ ಪ್ರಕರಣ: ಆಘಾತಕಾರಿ ಅಂಶ ಬಯಲು ಮಾಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

Published

on

ಹಾಸನ : ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಅಪ್ರಾಪ್ತ ಶಾಲಾ ಬಾಲಕಿ‌ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಗ್ಗೆ ಆಘಾತಕಾರಿ ಅಂಶಗಳನ್ನು  ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬಯಲು ಮಾಡಿದೆ.

ಹಾಸನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಈ ಕುರಿತು  ಹೇಳಿಕೆ ನೀಡಿದ್ದು, ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಆ ಶಾಲೆಯಿಂದ‌ ಹಲವು ನಿಯಮಗಳು ಉಲ್ಲಂಘನೆ ಆಗಿದೆ. ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಆಗಿಲ್ಲ. ಶಾಲಾ ಬಸ್ ಚಾಲನೆಗೆ ‌ಚಾಲಕನ ನೇಮಕದ ಬಗ್ಗೆ ಮಾರ್ಗಸೂಚಿ ಪಾಲಿಸಿಲ್ಲ ಎಂದು ತಿಳಿಸಿದ್ದಾರೆ.

ಶಾಲಾ ವಾಹನದಲ್ಲಿ ಸಿಸಿ ಕ್ಯಾಮೆರಾ ಇಲ್ಲ, ಜಿಪಿಎಸ್ ಇಲ್ಲ. ಚಾಲಕನ‌ ನೇಮಕ ವೇಳೆ ಭಾರೀ ವಾಹನ ಚಾಲನೆ ಲೈಸೆನ್ಸ್ ಹೊಂದಿರುವ ಅಭ್ಯರ್ಥಿ ನೇಮಕ ಆಗಬೇಕು. ಆದರೆ ಇಲ್ಲಿ ಶಾಲಾ‌ ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಲ್ಲದೇ  ಚನ್ನರಾಯಪಟ್ಟಣ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳ ವೈಫಲ್ಯ ಕೂಡ ಇದೆ. ಹಾಗಾಗಿ ಅವರಿಗೆ ಕಾರಣ ಕೇಳಿ‌ ನೋಟೀಸ್ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಾಲ ಗರ್ಭಿಣಿಯರು, ಫೋಕ್ಸೋ ಕಾಯಿದೆ ಬಗ್ಗೆ ಸ್ವತಃ ಸಿಎಂ ಅವರೇ ಗಮನ ಹರಿಸಿದ್ದಾರೆ. ರಾಜ್ಯದ ಹಲವು ಕಡೆ ಇಂತಹ ಘಟನೆಗಳು ಆಗುತ್ತಿದೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ. ಮಗು ಗರ್ಭಿಣಿಯಾಗಿ ಹೆರಿಗೆ ಆಗುತ್ತೆ ಎಂದರೆ ಇದರಲ್ಲಿ ವ್ಯವಸ್ಥೆಯ ನಿರ್ಲಕ್ಷ್ಯ ಇದೆ. ಈ ಪ್ರಕರಣದಲ್ಲಿ ನಾವು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಕುಟುಂಬ ಹಾಗೂ ಶಾಲಾ ಆಡಳಿತ ಮಂಡಳಿ ಎರಡೂ ಕಡೆಯು ಜವಾಬ್ದಾರಿ ಇದೆ. ಆರೋಪಿ ಬಂಧನಕ್ಕೂ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಹಾಸನದ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ಥ ಬಾಲಕಿ ಹಾಗೂ ಪೋಷಕರನ್ನು ಭೇಟಿಯಾಗಿ ಹೇಳಿಕೆ ಪಡೆದಿದ್ದು,  ಹೆರಿಗೆ ಆದ ಬಳಿಕ  ಮಗುವನ್ನು ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ. ಅವರು ಹೆರಿಗೆ ಆದಾಗ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕಿತ್ತು. ಆದರೆ ನೀಡಿಲ್ಲ. ಹೀಗಾಗಿ ಅವರ ಮೇಲೆ ಕ್ರಮ‌ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Continue Reading

Trending

error: Content is protected !!