Connect with us

Hassan

ರೇವಣ್ಣ ದರ್ಬಾರ್ ನಲ್ಲಿ ಅಕ್ರಮ ಗೊಬ್ಬರ ಮಾರಾಟ ಹೇಗೆ ಸಾಧ್ಯ?

Published

on

ಕೃಷಿ ಇಲಾಖೆ ಅಧಿಕಾರಿಗೆ ನಾಲಾಯಕ್ ಎಂದು ಕರೆದ ಜಿಲ್ಲಾ ಮಂತ್ರಿ ಕೆ.ಎನ್. ರಾಜಣ್ಣ

ಹಾಸನ: ಅರಕಲಗೂಡು ತಾಲೂಕಿನಲ್ಲಿ ಕಳಪೆ ಯೂರಿಯಾ ಗೊಬ್ಬರ ಸರಬರಾಜು ಯಾವ ರೀತಿ ಆಗಿದೆ. ಅದರಲ್ಲೂ ರೇವಣ್ಣ ಅವರ ದರ್ಬಾರ್ ನಲ್ಲಿ ಹೇಗೆ ಅಕ್ರಮ ಗೊಬ್ಬರ ಮಾರಾಟ ಸಾಧ್ಯ ಎಂದು ಹಾಸ್ಯದ ರೀತಿ ಕಾಲೇಳದ ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಅಧಿಕಾರಿಗಳು ಆ ಸ್ಥಾನದಲ್ಲಿ ಇರಲು ನಾಲಾಯಕ್ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೊದಲು ಹೊಸ ವರ್ಷದ ಶುಭಾಶಯಗಳನ್ನು ಎಲ್ಲಾರಿಗೂ ಜಿಲ್ಲಾಮಂತ್ರಿಗಳು ನೀಡಿದರು ನಂತರದಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದಾಗ ಕೃಷಿ ಇಲಾಖೆ ಅಧಿಕಾರಿ ಜೆಡಿಎ ರಾಜಸುಲೋಚನಾ ಅವರಿಂದ ಮಾಹಿತಿ ಕೇಳಿದರು. ಇದೆ ವೇಳೆ ಗೊಬ್ಬರ ಸರಬರಾಜು ಮಾಡುವ ಮುಖ್ಯ ಇಫ್ಕೋ ,ಕ್ರೆಬ್ಕೋ,

ಸಗಟು ಸರಬರಾಜು ಮಂಜುನಾಥ್ ಕೂಡ ಇದ್ದು, ಮಾರ್ಕೆಟಿಂಗ್ ಫೆಡರೇಶನ್, ರಾಜ್ಯ ಬೀಜ ನಿಗಮ, ಅರಕಲಗೂಡು ಯೂರಿಯವು ಕಳಪೆಯಿಂದ ಕುಡಿದ್ದು, ಸರಬರಾಜು ಯಾವ ಡೀಲರ್ ನಿಂದ ಸರಬರಾಜು ಆಗಿದೆ? ಯಾರು ಆ ಡೀಲರ್ ಎಲ್ಲಿಂದ ಬಂದಿದೆ ಎಂಬ ದಾಖಲೆ ಇಲ್ಲ. ಚೀಲದಲ್ಲಿ ಯಾವುದೇ ಮಾಹಿತಿ ಇಲ್ಲ. ಎಲ್ಲಿಂದ ಬಂದಿದೆ ಎಂಬ ಮಾಹಿತಿ ಎಲ್ಲಿ. ಬಗ್ಗೆ ಸರಿಯಾಘಿ ಹೇಳದ ಅಧಿಕಾರಿಗೆ ಆ ಸ್ಥಾನದಲ್ಲಿ ಮುಂದುವರೆಯಲು ನಾಲಾಯಕ್ ಎಂದು ತರಾಟೆ ತೆಗೆದುಕೊಂಡರು. ಮಾಧ್ಯಮದಲ್ಲಿ ಬಂದ ಮೇಲೆ ಎಚ್ಚೆತ್ತಿಕೊಳ್ಳಬೇಕಾ.. ಏನ್ ಮಾಡುತ್ತ ಇದ್ದೀರಾ.. ರೇವಣ್ಣ ದರ್ಬಾರ್ ನಲ್ಲಿ ಗೊಬ್ಬರ ಅಕ್ರಮ ಮಾರಾಟ ಆಗುತ್ತಿದೆ ಏಕೆ? ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸಭೆ ನಡೆಯುವ ಮಧ್ಯೆ ಬಂದಾಗ ಸಚಿವರು ಕಾಲೇಳೆದರು. ಡೀಲರ್ ನಿಂದ ಬಂದಿದೆ ಯಾವ ಕಂಪನಿಯಿಂದ ಬಂದಿದೆ ಎಂದು ತಿಳಿಯಲು ಆಗುತ್ತಿಲ್ಲ ಎಂದರೆ ಹೇಗೆ? ಗೊಬ್ಬರವು ಸಬ್ಸೀಡಿ ಮೂಲಕ ಬರೂದು ಹೇಗೆ ಅಕ್ರಮ ಮಾರಾಟವಾಗಿದೆ ಹೇಳಿ ಎಂದು ಪ್ರಶ್ನಿಸಿದರು. ಈಗಾಗಲೇ ಚೀಲ ವಶಕ್ಕೆ ಪಡೆಯಲಾಗಿದೆ. ೭೦೦ ಚೀಲ ಸಿಕ್ಕಿದೆ. ಪ್ಯಾಕ್ಟರಿ ಸೀಝ್ ಮಾಡಬೇಕು ಅಲ್ಲವೆ. ಲೈಸೆನ್ಸ್ ಕೊಟ್ಟಿದ್ದೀರಿ ಕೋ..ಅಪರೇಟಿವ್ ಜಾಸ್ತಿ ಗೊಬ್ಬರ ಸರಬರಾಜು ಮಾರಾಟ ಪರವಾನಗಿ ಕೊಡಿ ಖಾಸಗಿಯವರುಗೆ ಏಕೆ ಹೆಚ್ಚು ಪರವಾನಗಿ ಕೊಡುತ್ತಿರಿ ಎಂದು ಸಚಿವರ ತಾಕೀತು ಮಾಡಿದರು. ಅನೇಕ ಬಾರಿ ಖಾಸಗೀ ಹೆಸರನ್ನು ಅಧಿಕಾರಿಗಳು ಹೇಳಿದಾಗ ಗರಂ ಆದ್ರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಬಿಎಸ್ ಸಿ ಎಜಿ ಹೆಸರಿನಲ್ಲಿ ಪರ್ಮಿಟ್ ಪಡೆದು ಮಾರಾಟದ ದಂಧೆಯಾಗಿದೆ. ಸೂಕ್ತ. ಲೈಸೆನ್ಸ್ ಕೊಡುವಾಗ. ತರಭೇತಿ ಆದವರಿಗೆ ಮಾತ್ರ ಪರವಾಗಿ ಕೊಟ್ಟರೆ ಉತ್ತಮ. ೧೦೦% ತರಭೇತಿ ಅಗತ್ಯ. ೭೫% ಕೋಅಪರೇಟಿವ್ ಹಾಕಿ. ೨೫% ಖಾಸಗಿಗೆ ಸರಬರಾಜು ಮಾಡಿ ಎಂದರು.

ಗೋಡನ್ ನಲ್ಲಿರುವುದು ಕಾಳಸಂತೆಯಲ್ಲಿ ಈ ಗೊಬ್ಬರ ಮಾರಾಟವಾದರೆ ಅಧಕಾರಿಗಳೆ ನೇರ ಹೊಣೆ. ಕಟ್ಟುನಿಟ್ಟಿನ ನಿಯಮ ಜಾರಿಯಾಗಲಿದೆ. ಝೋಝ್ ಮಾಡಿರೊ ಗೊಬ್ಬರ ಡಪ್ ಐಅರ್ ಅಗಿದೆ. ಕೋರ್ಟ್ ತೀರ್ಪು ಬರೋವರೆಗೆ ಸ್ಯಾಂಪಲ್ ರಿಸಲ್ಟ್ ಬರದೆ ಮಾರಾಟ ಗೊಬ್ಬರ ಹಾಳಾಗಬಾರಸು. ಕಳ್ಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮ ಅಗತ್ಯ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ವಸತಿ ಶಾಲೆಗಳ ಸೀಟು ಹಂಚಿಕೆಯಲ್ಲಿ ವಾಮಮಾರ್ಗ ನಡೆ ಅನುಸರಿಸಲಾಗಿದೆ ಆರೋಪ, ಹೊಯ್ಸಳ ನಡೆದ ಸಾಲಿನ ಇಂದು ಎಂಬ ಜಿಪಂ ಸಭಾಂಗಣದಲ್ಲಿ ೨೦೨೩-೨೦೨೪ ನೇ ಮೂರನೇ ತ್ರೈಮಾ ಸಿಕ ಕೆಡಿಪಿ ಸಭೆಯಲ್ಲಿ ಶಾಸಕರ ನಡುವೆ ವಾಗ್ವಾದ, ಆರೋಪ- ಪ್ರತ್ಯಾರೋಪಕ್ಕೆ ಎಡೆ ಮಾಡಿ ಕೊಟ್ಟಿತು. ಸಭೆಯ ಆರಂಭದಲ್ಲಿ ಸೀಟು ಹಂಚುವಾಗ ಲಂಚ ಪಡೆಯುತ್ತಿ ದ್ದಾರೆ ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಗಂಭೀರ ಆರೋಪ ಮಾಡಿದರು. ಈ ಬಗ್ಗೆ ಸರಿಯಾದ ಮಾಹಿತಿ ಒದಗಿಸುವಂತೆ ಒತ್ತಾಯಿಸಿದರು. ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಶಾಸಕರ ಶಿಫಾರಸ್ಸು ಪತ್ರದ ಮೇಲೆಯೇ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು. ಇದಾದೆ ನಂತರ ಕ್ರಷರ್ ವಂತಿಕೆ ವಿಚಾರವಾಹೊ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ ಮತ್ತು ಶಾಸಕ ಎ. ಮಂಜು ನಡುವೆ ಕೆಲ ಸಮಯ ವಾಗ್ವಾದ ನಡೆಯಿತು.

 

ಇದಾದ ಬಳಿಕ ತೋಟಗಾರಿಕ ಇಲಾಖೆಯ ಗುರಿ ಬಗ್ಗೆ ಮಾಹಿತಿ ಕೇಳಿದರು. ಪೌತಿ ಖಾತೆ ಬಗ್ಗೆ ಇಲಾಖೆ ಅಧಿಕಾರಿಗಳ ಬಳಿ ಮಾಹಿ ಪಡೆದು ಸೂಚನೆ ನೀಡಿದರು. ರೈತರು ಬೆಳೆದ ಆಲೂಗಡ್ಡೆ ಹಾನಿಯ ಅಂಕಿ ಅಂಶ ಕೇಳಿದರು. ಪಶುಪಾಲನಾ ಇಲಾಖೆಯಲ್ಲಿ ವೈದ್ಯರ ಕೊರತೆ ಇದ್ದು, ಇದರಿಂದ ದನಕರುಗಳಿಗೆ ಸರಿಯಾಗಿ ಚಿಕಿತ್ಸೆ ಸಿಗತ್ತಿಲ್ಲ ಎಂದರು. ಕೆಲ ಕಡೆ ತುರ್ತು ವಾಹನ ಸಿಗುತ್ತಿಲ್ಲ. ಮೂರಾರ್ಜಿ ದೇಸಾಯಿವಸತಿ ಶಾಲೆ ಬಗ್ಗೆ ವಿಚಾರಿಸಿದರು. ಅಂಗವಿಕಲರ ಕಲ್ಯಾಣ ಇಲಾಖೆ.. ವಿದ್ಯಾರ್ಥಿಗಳ ವೇತನ ಸೇರಿದಂತೆ ಇತರೆ ಇಲಾಕೆ ಬಗ್ಗೆ ಆಯಾ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡಿದರು.

ಸಭೆಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಕೆ.ಎಮ್. ಶಿವಲಿಂಗೇಗೌಡ, ಹೆಚ್.ಡಿ. ರೇವಣ್ಣ, ಎಚ್.ಕೆ. ಸುರೇಸ್, ಎ. ಮಂಜು, ಸಿಮೆಂಟ್ ಮಂಜು

ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಸಿಇಒ ಬಿ.ಅರ್. ಪೂರ್ಣಿಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

MLA ಸಿಮೆಂಟ್ ಮಂಜು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌: ಕಾನೂನು ಕ್ರಮಕ್ಕೆ ಆಗ್ರಹ

Published

on

ಸಕಲೇಶಪುರ: ಆಲೂರು, ಕಟ್ಟಾಯ -ಸಕಲೇಶಪುರ,ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಾಮೆಂಟ್‌ ಮಾಡಿರುವ ವಿರುದ್ಧ ಕಾನೂನು ಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲಾಡಳಿತದ ವತಿಯಿಂದ ಶನಿವಾರದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಶಾಸಕರು ಅಧಿಕಾರಿಗಳು ಆಗಮಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ಸಿಮೆಂಟ್ ಮಂಜು ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಈ ಭಾಷಣದ ತುಣುಕನ್ನು Hassan News ಹಾಸನ್ ನ್ಯೂಸ್ ಫೇಸ್ಬುಕ್ ಪೇಜ್ ನಲ್ಲಿ ಬಿತ್ತರಿಸಲಾಗಿತ್ತು. ಸದರಿ ಪೇಜ್ ನಲ್ಲಿ vasanth kumar ಎಂಬ ಹೆಸರಿನ ಫೇಸ್ ಬುಕ್ ಖಾತೆಯುಳ್ಳ ವ್ಯಕ್ತಿಯು  ಶಾಸಕರ ವಿರುದ್ಧ “ಸಿಮೆಂಟ್ ಮಂಜಣ್ಣ ಹುಟ್ಟು ಕಳ್ಳನ್ ಮಗ” ಎಂದು ಕಾಮೆಂಟ್ ಮಾಡಿದ್ದು ಈ ರೀತಿಯ ಕಾಮೆಂಟ್ ನಿಂದ ಶಾಸಕರ ಘನತೆಗೆ ಧಕ್ಕೆ ಯಾವುದರ ಜೊತೆಗೆ ಕ್ಷೇತ್ರದ ಜನತೆಗೆ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದು ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಠಾಣೆಗೆ ಬಾಳ್ಳುಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎಂ. ಎಸ್. ಶಿವಕುಮಾರ್ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಳಗೋಡು ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಮುಖಂಡರಾದ ನವೀನ್ ಶೆಟ್ಟಿ. ಕಿಟ್ಟಿ ಪುಟ್ಟರಾಜು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Continue Reading

Hassan

ದೆಹಲಿ ನೋಟಿಸ್‌, ಕಾರ್ಟಿಯರ್ ವಾಚ್‌ ವಿವಾದದ ಬಗ್ಗೆ ಆತ್ಮವಿಶ್ವಾಸದ ನಿಲುವು ಘೋಷಿಸಿದ ಡಿಸಿಎಂ ಡಿಕೆಶಿ

Published

on

ಹಾಸನ: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ. ನಮಗೆ ಕಿರುಕುಳ ನೀಡಲು ಈ ಸಮನ್ಸ್ ನೀಡಲಾಗಿದೆ. ಇದು ಸರಿಯಲ್ಲ, ನಾನು ಖಂಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಹಾಸನದಲ್ಲಿ ಇಂದು ಈ ಕುರಿತು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ವಿಭಾಗದ ದೆಹಲಿ ಪೊಲೀಸರು ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ಇದು ನಮಗೆ ಆಘಾತ ತಂದಿದೆ. ನನಗೆ ಹಾಗೂ ಸಹೋದರ ಸುರೇಶ್ ಅವರಿಗೆ ನೋಟೀಸ್ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಹಿಂದೆ ಇಡಿ ನಮಗೆ ಸಮನ್ಸ್ ನೀಡಿತ್ತು ಎಂದರು.

ನಾವು ಮೊದಲಿನಿಂದಲೂ ಇಡಿ ತನಿಖೆಗೆ ಸಹಕಾರ ನೀಡಿ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇದು ನಮ್ಮ ಪಕ್ಷದ ಸಂಸ್ಥೆ, ಕಾಂಗ್ರೆಸಿಗರಾಗಿ ಆ ಸಂಸ್ಥೆಗೆ ಬೆಂಬಲ ನೀಡಲು ದೇಣಿಗೆ ನೀಡುವುದರಲ್ಲಿ ತಪ್ಪಿಲ್ಲ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಸಂಸ್ಥೆ ಕಷ್ಟಕಾಲದಲ್ಲಿದ್ದಾಗ ನಮ್ಮ ಟ್ರಸ್ಟ್ ಗಳಿಂದ ನೆರವು ನೀಡಿದ್ದು, ನನ್ನಂತೆ ಅನೇಕರು ದೇಣಿಗೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್ ಹಾಕಿದ್ದು, ಅದರಲ್ಲಿ ನಮ್ಮ ಹೆಸರನ್ನು ಸೇರಿಸಿರಲಿಲ್ಲ. ನಮ್ಮ ಬಳಿ ಹೇಳಿಕೆ ಪಡೆದು, ಬಿಟ್ಟಿದ್ದರು. ಹೀಗಿರುವಾಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ. ನಮ್ಮ ಎಲ್ಲಾ ವ್ಯವಹಾರ ಪಾರದರ್ಶಕವಾಗಿದೆ. ನಾವು ನ್ಯಾಯಲಯದಲ್ಲಿ ಹೋರಾಟ ಮುಂದುವರೆಸುತ್ತೇವೆ. ನಾವು ಸರಿಯಾಗಿ ತೆರಿಗೆ ಕಟ್ಟಿದ್ದು, ನಮ್ಮ ಹಣವನ್ನು ನಾವು ಇಷ್ಟಪಡುವ ಯಾರಿಗೆ ಬೇಕಾದರೂ ನೀಡಬಹುದು” ಎಂದು ಹೇಳಿದರು.

ನನ್ನ ವಿರುದ್ಧ ಪಿಎಎಲ್ಎ ಪ್ರಕರಣ ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಿದ್ದರು. ಇಷ್ಟಾದ ಮೇಲೂ ಯಾವ ಕಾರಣಕ್ಕೆ ಸಮನ್ಸ್ ನೀಡಿದ್ದಾರೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಿಗರಿಗೆ ಕಿರುಕುಳ ನೀಡುವುದು, ಗೊಂದಲ ಮೂಡಿಸುವುದು ಇದರ ಉದ್ದೇಶ ” ಎಂದು ತಿಳಿಸಿದರು.

ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ, ನಾನು ಬಗ್ಗುವುದಿಲ್ಲ

“ನನಗೆ ಶುಕ್ರವಾರ ನೋಟೀಸ್ ಸಿಕ್ಕಿದ್ದು, ಇದನ್ನು ವಕೀಲರ ಜತೆ ಚರ್ಚೆ ಮಾಡುತ್ತೇನೆ. ನನ್ನ ಸಹೋದರ ಕೂಡ ಸಂಸದನಾಗಿದ್ದಾಗ ಈ ಸಂಸ್ಥೆಗೆ ದೇಣಿಗೆ ನೀಡಿದ್ದ. ದೆಹಲಿ ಪೊಲೀಸರು ಡಿ.19 ರ ಒಳಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ನಾನು ಸಮಯ ನೋಡಿಕೊಂಡು ಒಂದು ದಿನ ಹೋಗಿ, ಅವರ ನೋಟೀಸ್ ಗೆ ಯಾವ ರೀತಿ ಉತ್ತರ ನೀಡಬೇಕೋ ನೀಡುತ್ತೇನೆ. ಅವರು ನನ್ನನ್ನು ಬೆದರಿಸುವ ಪ್ರಯತ್ನ ಮಾಡಿದರೆ ನಾನು ಬಗ್ಗುವುದಿಲ್ಲ” ಎಂದು ಹೇಳಿದರು

 

Continue Reading

Hassan

ಕ್ರೀಡೆಯು ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು : ಡಾ. ಅಕ್ಷಯ್ ಎಸ್. ಗೌಡ.

Published

on

ಹಾಸನ: ಕ್ರೀಡೆಯು ಕೇವಲ ಮನರಂಜನೆಗೋ ಅಥವಾ ಆರೋಗ್ಯ ವರ್ಧನೆಗೂ ಮಾತ್ರವಲ್ಲ. ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತಮ್ಮಿಷ್ಟದ ಹೊರಾಂಗಣದ ಆಟವೊಂದನ್ನು ಅಳವಡಿಸಿಕೊಂಡರೆ, ಅದು ಅವರ ಪರಿಪೂರ್ಣ ವ್ಯಕ್ತಿತ್ವಕ್ಕೆ ನಾಂದಿಯಾಗಬಲ್ಲದು ಎಂದು ಚನ್ನರಾಯಪಟ್ಟಣದ ಆಯುರ್ವೇದ ತಜ್ಞ ವೈದ್ಯ ಡಾ. ಅಕ್ಷಯ್ ಎಸ್. ಗೌಡ ತಿಳಿಸಿದರು.

ನಗರದ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್ ನಲ್ಲಿ ನಡೆದ ವಾರ್ಷಿಕ ಕ್ರೀಡಾ ಸ್ಪರ್ಧೆಗಳ “ ಕ್ರೀಡಾ ತರಂಗ-2025 ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಯುವಜನರು ಅನಾರೋಗ್ಯಕರ ಆಹಾರ, ದುಶ್ಚಟಗಳು, ಮೊಬೈಲ್ ದುರ್ಬಳಕೆಯಿಂದ ತಮ್ಮ ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ನಿತ್ಯವೂ ನಡಿಗೆ, ಲಘುವ್ಯಾಯಾಮ, ಆಟ, ಯೋಗದಂತಹ ಕ್ರಿಯೆಗಳು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಲೇಬೇಕಿದೆ. ಆಯುರ್ವೇದದ ಚಿಕಿತ್ಸೆಗಳು ಕ್ರೀಡಾಳುಗಳ ಆರೋಗ್ಯದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸಾ ವಿಧಾನಗಳನ್ನು ಒಳಗೊಂಡಿದ್ದು, ಈವರೆಗೂ 1000 ಕ್ಕೂ ಹೆಚ್ಚು ಕ್ರೀಡಾಪಟುಗಳ ವಿವಿಧ ನೋವಿನ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮಗಳ ಮೂಲಕವೇ ಚಿಕಿತ್ಸೆ ನೀಡಿರುವುದನ್ನು ನೆನೆಸಿಕೊಂಡರು. ತಾವು ವ್ಯಕ್ತಿಯಲ್ಲಿ ವೈದ್ಯರಾದರೂ ತಮ್ಮಲ್ಲಿ ಇಂದಿಗೂ ಕಡಾ ಆಸಕ್ತಿ ಇರಲು ಎಸ್.ಡಿ.ಎಂ.ಶಿಕ್ಷಣ ಸಂಸ್ಥೆ ಒಂದು ಬಲವಾದ ಕಾರಣ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಶೈಲಜಾ.ಉಪ್ಪಿನಕುದುರು ಅವರು ಮಾತನಾಡಿ, ಇತರ ವೃತ್ತಿಗಳಂತೆ ಆರೋಗ್ಯ ಕ್ಷೇತ್ರದ ವೃತ್ತಿಗಳಲ್ಲೂ ಒತ್ತಡ ಇರುತ್ತದೆ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲೇ ಕ್ರೀಡೆಯನ್ನು ನಮ್ಮ ದಿನಚರಿಯ ಭಾಗವಾಗಿಸಬೇಕು ಎಂದರು. ಎಸ್.ಡಿ.ಎಂ.ಅಯುರ್ವೇದ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಪ್ರಸನ್ನ ನರಸಿಂಹ ರಾವ್ ಅವರು ಮಾತನಾಡಿ ಎಲ್ಲ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಆ ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಮುರಲೀಧರ್.ಪಿ.ಪೂಜಾರ್, ಉಪಪ್ರಾಂಶುಪಾಲರಾದ ಡಾ.ಅಶ್ವಿನಿಕುಮಾ‌ರ್.ಎಂ ಮತ್ತು ಡಾ.ಪ್ರಕಾಶ್. ಎಲ್. ಹೆಗಡೆ ಹಾಗು ದೈಹಿಕ ನಿರ್ದೇಶಕ ಶ್ರೀ ಗಣೇಶ್ ಉಪಸ್ಥಿತರಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.

Continue Reading

Trending

error: Content is protected !!