Connect with us

Hassan

ಎಚ್.ಡಿ.ರೇವಣ್ಣ ನಿವಾಸದಲ್ಲಿ ಎಫ್‌ಎಸ್‌ಎಲ್ ತಜ್ಞರ ಪರಿಶೀಲನೆ ಪೂರ್ಣ

Published

on

ಹಾಸನ : ಎಚ್.ಡಿ.ರೇವಣ್ಣ ನಿವಾಸದಲ್ಲಿ ಎಫ್‌ಎಸ್‌ಎಲ್ ತಜ್ಞರ ಪರಿಶೀಲನೆ ಪೂರ್ಣ

ಎರಡುವರೆ ಗಂಟೆಗೂ ಹೆಚ್ಚು ಕಾಲ ಎಚ್.ಡಿ.ರೇವಣ್ಣ ನಿವಾಸದಲ್ಲಿ ಪರಿಶೀಲಿಸಿದ ಎಫ್‌ಎಸ್‌ಎಲ್ ತಜ್ಞರ ತಂಡ

ಹೊಳೆನರಸೀಪುರದಲ್ಲಿರುವ ಎಚ್.ಡಿ.ರೇವಣ್ಣ ಅವರ ಚೆನ್ನಾಂಬಿಕಾ ನಿವಾಸ

ಹೊಳೆನರಸೀಪುರದ ನಿವಾಸದಲ್ಲೂ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದ್ದ ಸಂತ್ರಸ್ತ ಮಹಿಳೆ

ಮಹಿಳೆಯ ದೂರು ಸಂಬಂಧ ಹೊಳೆನರಸೀಪುರ ಎಚ್.ಡಿ.ರೇವಣ್ಣ ನಿವಾಸದಲ್ಲೂ ಸಾಕ್ಷ್ಯ ಸಂಗ್ರಹಿಸಿ ಹೊರಟ ಎಫ್‌ಎಸ್‌ಎಲ್ ಟೀಂ

ತನಿಖಾಧಿಕಾರಿ ಸ್ವರ್ಣ ನೇತೃತ್ವದಲ್ಲಿ ಸಾಕ್ಷ್ಯ ಕಲೆ ಹಾಕಿದ ಎಫ್‌ಎಸ್‌ಎಲ್ ಟೀಂ

ಬೆಂಗಳೂರಿನತ್ತ ಹೊರಟ ಎಫ್‌ಎಸ್‌ಎಲ್ ತಂಡ

ಇಂದು ಮೊದಲು ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಪರಿಶೀಲನೆ ನಡೆಸಿ ನಂತರ ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸದಲ್ಲೂ ಸಾಕ್ಷ್ಯ ಸಂಗ್ರಹಿಸಿ ಹೊರಟ ಎಫ್‌ಐಆರ್ ತಂಡ

Continue Reading
Click to comment

Leave a Reply

Your email address will not be published. Required fields are marked *

Hassan

ಮಾರ್ಚ್ ಅಂತ್ಯದವರೆಗೂ ರಾಗಿ ಖರೀದಿ| ಸಕಲೇಶಪುರ-ಆಲೂರು ಹೊರತು ಪಡಿಸಿ ಜಿಲ್ಲಾದ್ಯಂತ 26 ಕೇಂದ್ರ ಸ್ಥಾಪನೆ: ಡಿಸಿ ಲತಾ ಕುಮಾರಿ

Published

on

ಹಾಸನ: ಜಿಲ್ಲೆಯ ರೈತರ ಪ್ರಮುಖ ಬೆಳೆ ಆಗಿರುವ ರಾಗಿ ಖರೀದಿ ಪ್ರಕ್ರಿಯೆ ಇದೀಗ ವೇಗದ ಗತಿ ಪಡೆದಿದ್ದು, ಎಪಿಎಂಸಿಯಲ್ಲಿ ಆರಂಭಗೊಂಡಿರುವ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸೋಮವಾರ ಬೆಳಿಗ್ಗೆ ದಿಡೀರ್ ಭೇಟಿ ನೀಡಿ ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು. ರೈತರಿಂದ ನೇರವಾಗಿ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಒಟ್ಟು 26 ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 24 ಕೇಂದ್ರಗಳಲ್ಲಿ ಖರೀದಿ ಕಾರ್ಯ ನಡೆಯುತ್ತಿದ್ದು, ಸಕಲೇಶಪುರ ಹಾಗೂ ಆಲೂರು ಕೇಂದ್ರಗಳಲ್ಲಿ ಇನ್ನೂ ಖರೀದಿ ಆರಂಭವಾಗಿಲ್ಲ. ಅರಸೀಕೆರೆಯಲ್ಲಿ ಅತಿ ಹೆಚ್ಚು 10 ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ತಿಂಗಳ ಕೊನೆಯವರೆಗೂ ರಾಗಿ ಖರೀದಿ ನಡೆಯಲಿದ್ದು, ಅಗತ್ಯವಿದ್ದಲ್ಲಿ ದಿನಾಂಕ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.


ಪರಿಶೀಲನೆ ವೇಳೆ ರೈತರು ಹಲವು ಅಸಮಾಧಾನ ವ್ಯಕ್ತಪಡಿಸಿದರು. ರಾಗಿಯನ್ನು ಸ್ವಚ್ಛಗೊಳಿಸುವ ವೇಳೆ ಹೆಚ್ಚುವರಿ ವೇಸ್ಟೇಜ್ ಆಗುತ್ತಿದೆ, ಮೂಟೆಗಳನ್ನು ಹೊರುವ ಅಮಾಲಿಗಳು ಹೆಚ್ಚು ದರ ಕೇಳುತ್ತಿದ್ದಾರೆ, ರೈತರು ಗಂಟೆಗಟ್ಟಲೆ ಕಾಯಬೇಕಾಗಿದೆ ಎಂಬ ದೂರುಗಳು ಕೇಳಿಬಂದವು. ಅರಕಲಗೂಡಿನಲ್ಲಿ ಸ್ವಚ್ಛತೆ ಸಂದರ್ಭದಲ್ಲಿ ಕೆಳಗೆ ಬೀಳುವ ರಾಗಿಯಿಂದ ರೈತರಿಗೆ ನಷ್ಟವಾಗುತ್ತಿರುವುದನ್ನೂ ಗಮನಕ್ಕೆ ತರಲಾಯಿತು.

ಈ ಎಲ್ಲಾ ಗೊಂದಲಗಳಿಗೆ ಪರಿಹಾರವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಎಪಿಎಂಸಿ ಕಾರ್ಯದರ್ಶಿ, ಫುಡ್ ಶಿರಸ್ತೆದಾರರು, ಉಪ ತಹಸೀಲ್ದಾರ್ ಹಾಗೂ ಆಹಾರ ನಿಗಮದ ಸಿಬ್ಬಂದಿ ಒಳಗೊಂಡಿದ್ದು, ಪ್ರತಿ ಕೇಂದ್ರದಲ್ಲೂ ಪಾರದರ್ಶಕವಾಗಿ ಖರೀದಿ ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ. ಖರೀದಿಯಾದ ರಾಗಿಯನ್ನು ಗೋದಾಮುಗಳಿಗೆ ಸಾಗಿಸಲು ಟ್ರಕ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಯಾವುದೇ ಅಕ್ರಮ ನಡೆಯದಂತೆ ನಿಗಾ ವಹಿಸಲಾಗಿದೆ ಎಂದರು.


ಸರಕಾರದ ನಿಯಮಾನುಸಾರ ಪ್ರತಿ ಹೆಕ್ಟೇರಿಗೆ 10 ಕ್ವಿಂಟಲ್ ಹಾಗೂ ಗರಿಷ್ಠ 50 ಕ್ವಿಂಟಲ್ ವರೆಗೆ ರಾಗಿ ಖರೀದಿ ಮಾಡಲಾಗುತ್ತಿದೆ. ಏಜೆನ್ಸಿಯವರು ಮೂರು ವಾಹನಗಳನ್ನು ಒದಗಿಸಿದ್ದು, ಐದು ವಾಹನಗಳ ಅಗತ್ಯವಿದೆ. ವಾಹನಗಳ ಕೊರತೆಯಿಂದ ರೈತರು ಕಾಯುವ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಹಮಾಲಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮಾಧಾನಕರ ಪರಿಹಾರ ಕಂಡುಕೊಳ್ಳಲಾಗಿದೆ. ರೈತರು ಹಾಗೂ ಹಮಾಲಿಗಳ ಹಿತದೃಷ್ಟಿಯಿಂದ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಫುಡ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Hassan

ಹಾಸನ: ಆರ್.ಡಿ. ವೀರಪ್ಪ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Published

on

ಹಾಸನ: ಸಿಐಟಿಯು, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಹಕ್ಕುಗಳ ಸಮಿತಿ ಕರ್ನಾಟಕ (ಡಿಎಚ್‌ಎಸ್) ಹಾಸನ ಜಿಲ್ಲೆ ವತಿಯಿಂದ ಕೆ.ಎಸ್.ಆರ್.ಟಿ.ಸಿ ನೌಕರರಾದ ಆರ್.ಡಿ. ವೀರಪ್ಪರವರ ಬರ್ಬರ ಹತ್ಯೆಯನ್ನು ಖಂಡಿಸಿ ನಗರದ ಆರ್.ಸಿ. ರಸ್ತೆಯಲ್ಲಿರುವ ‘ಶ್ರಮ’ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯ ಆಲೂರು ತಾಲೂಕಿನ ರಾಜನಹಳ್ಳಿಯಲ್ಲಿ ಫೆ.17ರಂದು ನಡೆದಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ದಲಿತ ಸಮುದಾಯಕ್ಕೆ ಸೇರಿದ ವೀರಪ್ಪರವರನ್ನು ಜಮೀನಿನಲ್ಲೇ ಹತ್ಯೆಗೈದು ಪೆಟ್ರೋಲ್ ಹಾಕಿ ಸುಟ್ಟಿರುವುದು ಅಮಾನುಷ ಕೃತ್ಯ ಎಂದು ಖಂಡಿಸಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, “ಘಟನೆ ನಡೆದು 15 ದಿನಗಳು ಕಳೆದರೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದು ಪೊಲೀಸ್ ಇಲಾಖೆಯ ಕಾರ್ಯಪದ್ಧತಿಯ ಮೇಲೆಯೇ ಅನುಮಾನ ಮೂಡಿಸುತ್ತಿದೆ. ದಲಿತ ಸಮುದಾಯದ ವ್ಯಕ್ತಿಯೊಬ್ಬರನ್ನು ಇಂತಹ ಕ್ರೂರವಾಗಿ ಹತ್ಯೆಗೈದಿರುವುದು ಸಮಾಜವೇ ತಲೆತಗ್ಗಿಸುವ ಸಂಗತಿ. ಸರ್ಕಾರ ತಕ್ಷಣ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ, ಸಂಚು ರೂಪಿಸಿದವರನ್ನೂ ಸೇರಿಸಿ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ದಲಿತ ಮುಖಂಡ ಕೃಷ್ಣದಾಸ್ ಮಾತನಾಡಿ, “ಮೇಲ್ನೋಟಕ್ಕೆ ಆಸ್ತಿ ವಿವಾದದ ಪ್ರಕರಣವೆಂದು ತೋರಿಸಿಕೊಳ್ಳಲಾಗುತ್ತಿದೆಯಾದರೂ, ಈ ಹತ್ಯೆಯ ಹಿಂದೆ ಪ್ರಭಾವಶಾಲಿ ವ್ಯಕ್ತಿಗಳ ಕೈವಾಡ ಇರುವ ಶಂಕೆ ಇದೆ. ತನಿಖೆಯನ್ನು ಎಲ್ಲ ಆಯಾಮಗಳಲ್ಲಿ ನಡೆಸಿ ನಿಜಾಂಶವನ್ನು ಬಹಿರಂಗಪಡಿಸಬೇಕು. ವೀರಪ್ಪರವರ ಕುಟುಂಬಕ್ಕೆ ಸಮರ್ಪಕ ಪರಿಹಾರ ಹಾಗೂ ರಕ್ಷಣೆ ಒದಗಿಸಬೇಕು” ಎಂದು ಒತ್ತಾಯಿಸಿದರು.


ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿ, ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ವೀರಪ್ಪರ ಸಾವಿಗೆ ನ್ಯಾಯ ಸಿಗುವವರೆಗೆ ತೀವ್ರ ಹಾಗೂ ಬೃಹತ್ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಟಿ.ಆರ್. ವಿಜಯ್ ಕುಮಾರ್, ಪೃಥ್ವಿ ಎಂ.ಜಿ., ರಾಜಶೇಖರ್ ಹುಲಿಕಲ್, ನಾರಾಯಣದಾಸ್, ಎಚ್.ಆರ್. ನವೀನ್ ಕುಮಾರ್, ರಾಜು ಗೊರೂರು, ಅಂಬುಗ ಮಲ್ಲೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Continue Reading

Hassan

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ: ಡಿಸಿ, ಎಸಿ ವಿರುದ್ಧ ಎಚ್‌.ಡಿ.ರೇವಣ್ಣ ಸಿಡಿಮಿಡಿ

Published

on

ಹಾಸನ:  ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಾಳೆ ನಡೆಯಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ರಾಜಕೀಯ ಪೈಪೋಟಿ ತೀವ್ರಗೊಂಡಿದೆ.

ರಥಕ್ಕೆ ಬಟ್ಟೆ ಅಲಂಕಾರ ಮಾಡುವ ವಿಚಾರಕ್ಕೆ  ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ವಾಗ್ವಾದ ಉಂಟಾಗಿದೆ. ಇಂದು ಬೆಳಿಗ್ಗೆ ಕಾಂಗ್ರೆಸ್ ಮುಖಂಡರು ರಥಕ್ಕೆ ಬಟ್ಟೆ ಕಟ್ಟಿದ ಹಿನ್ನೆಲೆ, ಇದಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದರು.


ರಥಕ್ಕೆ ಕಟ್ಟಿದ್ದ ಬಟ್ಟೆ ತೆರವುಗೊಳಿಸಲು ಜೆಡಿಎಸ್ ಕಾರ್ಯಕರ್ತರು ಮುಂದಾದ ವೇಳೆ, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಉಪವಿಭಾಗಾಧಿಕಾರಿ (ಎಸಿ) ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ರೇಣುಕುಮಾರ್ ಹಾಗೂ ಡಿವೈಎಸ್‌ಪಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಈ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಎಸಿ ಜಗದೀಶ್ ಗಂಗಣ್ಣನವರ್ ಹಾಗೂ ತಹಶೀಲ್ದಾರ್ ರೇಣುಕುಮಾರ್ ವಿರುದ್ಧ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.


“ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಡಿಸಿ, ಎಸಿ, ತಹಶೀಲ್ದಾರ್ ಹೊಣೆ,” ಎಂದು ಎಚ್ಚರಿಕೆ ನೀಡಿದರು. “ಯಾರ್ರಿ ಅವಳು ಡಿಸಿ? ಒಬ್ಬ ಎಂಎಲ್‌ಎಗಿಂತ ದೊಡ್ಡವಳಾ? ಎಂಎಲ್‌ಎಗಳು ನಿಮ್ಮ ಗುಲಾಮರಾ?” ಎಂದು ಕಿಡಿಕಾರಿದರು.

ತಹಶೀಲ್ದಾರ್ ವಿರುದ್ಧವೂ ಹರಿಹಾಯ್ದ ಅವರು, “ರೌಡಿಸಂ ಇದ್ದರೆ ನಿಮ್ಮ ಮನೇಲಿ ಇಟ್ಟುಕೊಳ್ಳಿ, ನಮ್ಮ ಹತ್ತಿರ ಬೇಡ. ಏನಾದರೂ ಗಲಾಟೆ ಆದರೆ ಅಧಿಕಾರಿಗಳೇ ಹೊಣೆ,” ಎಂದು ಹೇಳಿದರು.

ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ, ಅಧಿಕಾರಿಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿದೆ. ನಾಳೆಯ ರಥೋತ್ಸವ ಶಾಂತಿಯುತವಾಗಿ ನಡೆಯುತ್ತದೆಯೇ ಎಂಬುದು ಕಾದು ನೋಡಬೇಕಿದೆ.

Continue Reading

Trending

error: Content is protected !!