Uncategorized
SSLC Result: 8 ಕ್ಕೆ SSLC ರಿಸಲ್ಟ್?
Kodagu
ಸರ್ಫೇಸಿ ಕಾಯಿದೆಯಡಿ ಕಾಫಿ ತೋಟಗಳ ಆನ್ಲೈನ್ ಹರಾಜು ಸ್ಥಗಿತ
ಮಡಿಕೇರಿ : ಸರ್ಫೇಸಿ ಕಾಯಿದೆಯಡಿ ಕಾಫಿ ತೋಟಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬೆಳೆಗಾರರು ಇದೀಗ ಕೊಂಚ ನಿರಾಳರಾಗಿದ್ದಾರೆ.
ಆನ್‌ಲೈನ್ ಹರಾಜು ಸ್ಥಗಿತಗೊಳಿಸುವಂತೆ ಕ್ರಮವಹಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಆದರೆ, ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಅಧಿಕೃತ ಆದೇಶ ಹೊರಡಿಸುವುದು ಬಾಕಿ ಉಳಿದುಕೊಂಡಿದೆ.
ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು, ಅದನ್ನು ಸಕಾಲದಲ್ಲಿ ಹಿಂದಿರುಗಿಸಲಾಗದಿದ್ದ ಸಂದರ್ಭ ನ್ಯಾಯಾಲಯದ ಮಧ್ಯಸ್ಥಿಕೆಯಿಲ್ಲದೆ ಸರ್ಫೇಸಿ ಕಾಯಿದೆ ಬಳಸಿಕೊಂಡು ಕೃಷಿ ಹೊರತುಪಡಿಸಿ ಇತರ ಆಸ್ತಿಯನ್ನು ಮಾರಾಟ ಮಾಡಲು ಅವಕಾಶವಿತ್ತು. ಇದಕ್ಕೆ ಸಂಬಂಧಿಸಿದಂತೆ ಕೊಡಗು ಸೇರಿದಂತೆ ಕಾಫಿ ಬೆಳೆಯುವ ರಾಜ್ಯದ ನೂರಾರು ರೈತರ ತೋಟಗಳು, ಕೃಷಿಕರ ಗಮನಕ್ಕೆ ಬಾರದೆ ಹರಾಜು ಪ್ರಕ್ರಿಯೆಗೆ ಒಳಗಾಗಿದ್ದ ಉದಾಹರಣೆಗಳು ಕಂಡುಬಂದಿದ್ದವು.

ಹಲವು ಪತ್ರಿಕೆ ಪ್ರಕಟಣೆಗಳ ಜಾಹೀರಾತುಗಳು ಕೂಡ ಪ್ರಕಟಗೊಂಡಿದ್ದವು. ವಿಶ್ವದ ಯಾವುದೇ ಅರ್ಹ ವ್ಯಕ್ತಿ ಹರಾಜು ಮೂಲಕ ಕಾಫಿ ತೋಟಗಳನ್ನು ಆನ್‌ಲೈನ್ ಮೂಲಕ ಖರೀದಿಸುವ ಅವಕಾಶವೂ ಇತ್ತು.ಇದಕ್ಕೆ ತೀವ್ರ ವಿರೋಧ ಬೆಳೆಗಾರರ ವಲಯದಿಂದ ವ್ಯಕ್ತವಾಗುತಿತ್ತು. ಅನ್ಯ ರಾಜ್ಯ, ರಾಷ್ಟ್ರದವರು ತೋಟ ಖರೀದಿಸುವುದರಿಂದ ಸ್ಥಳೀಯ ಜನಜೀವನದ ಜೊತೆಗೆ ಸಂಸ್ಕೃತಿಯ ಮೇಲೂ ಧಕ್ಕೆ ಬರುತ್ತದೆ. ಕೊಡಗಿನ ಅಸ್ತಿತ್ವ ಕಳೆದುಕೊಳ್ಳುವಂತಾಗುತ್ತದೆ ಎಂಬ ಭಯವೂ ಸೃಷ್ಟಿಯಾಗಿತ್ತು.
ಸಾಲ ಪಡೆದ ವ್ಯಕ್ತಿಗೆ ನೋಟಿಸ್ ಜಾರಿಯಾಗಿ 60 ದಿನದೊಳಗೆ ಸಾಲ ಮರುಪಾವತಿ ಮಾಡದಿದ್ದಲ್ಲಿ ಆಸ್ತಿಯನ್ನು ವಶಪಡಿಸಿಕೊಂಡು ಹರಾಜು ಮಾಡಬಹುದಿತ್ತು. ಇದರಿಂದ ಜಿಲ್ಲೆಯ ಸಣ್ಣ, ಅತೀ ಸಣ್ಣ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದರು. ಕರ್ನಾಟಕ ಒಂದೇ ರಾಜ್ಯದಲ್ಲಿ ಕಾಫಿ ಕೃಷಿ ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಸರ್ಫೇಸಿ ಕಾಯಿದೆಗೆ ತುತ್ತಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ನೇತೃತ್ವದ ನಿಯೋಗ ವಿತ್ತ ಸಚಿವರನ್ನು ಭೇಟಿಯಾಗಿ ಸರ್ಫೇಸಿ ಕಾಯಿದೆಯ ಕರಾಳತೆಯನ್ನು ವಿವರಿಸಿದರು. ಸಾಲ ಪಡೆದ ಶೇ ೯೫ಕ್ಕೂ ಹೆಚ್ಚು ಭಾಗ ಸಣ್ಣ, ಅತೀ ಸಣ್ಣ ಕಾಫಿ ಬೆಳೆಗಾರರಿಗೆ ಇದರಿಂದಾಗುವ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು. ಅಲ್ಲದೆ ಕೆಲವು ಬ್ಯಾಂಕರ್‌ಗಳು ಹಾಗೂ ಮಧ್ಯವರ್ತಿಗಳು ಈ ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಗಮನಕ್ಕೆ ತಂದಿದ್ದರು.
ಅಹವಾಲು ಆಲಿಸಿದ ನಿರ್ಮಲ ಸೀತಾರಾಮನ್ ಅವರು, ಕಾಫಿ ಕೃಷಿ ಸಾಲದ ವಸೂಲಾತಿಗೆ ಸರ್ಫೇಸಿ ಕಾಯಿದೆ ಬಗ್ಗೆ ಪರಿಶೀಲಿಸಿ ಇದೀಗ ಕೂಡಲೇ ಜಾರಿಗೆ ಬರುವಂತೆ ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಬ್ಯಾಂಕ್‌ಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ವಿಶ್ವೇಶ್ವರ ಹೆಗಡೆ ಕಾಗೇರಿ, ಮಲ್ಲೇಶ್ ಇದ್ದರು.

ಗಮನ ಸೆಳೆದಿದ್ದ ಕೆಜಿಎಫ್, ಆನ್‌ಲೈನ್ ಹರಾಜು ಸ್ಥಗಿತ ಆದೇಶವನ್ನು ಕರ್ನಾಟಕ ಗ್ರೋರ‍್ಸ್ ಫೆಡರೇಷನ್ (ಕೆಜಿಎಫ್) ಸ್ವಾಗತಿಸಿದೆ. ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ಅವರ ನೇತೃತ್ವದ ನಿಯೋಗ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಭೂಪೇಂದ್ರ ಯಾದವ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಡಾ. ಮಂಜುನಾಥ್ ಹಾಗೂ ಹಲವು ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಫೇಸಿ ಕಾಯಿದೆಯ ಅನಾನುಕೂಲತೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಒದಗಿಸಿತ್ತು.
ಬಳಿಕ ಜನಪ್ರತಿನಿಧಿಗಳ ನಿಯೋಗ ವಿತ್ತ ಸಚಿವರನ್ನು ಭೇಟಿಯಾದ ಪರಿಣಾಮ ಇದೀಗ ಸ್ಥಗಿತಕ್ಕೆ ಸರಕಾರ ಮನಸ್ಸು ಮಾಡಿದೆ. ಜನಪ್ರತಿನಿಧಿಗಳ ಭೇಟಿಯಾದ ನಿಯೋಗದಲ್ಲಿ ಕೆಜಿಎಫ್ ಉಪಾಧ್ಯಕ್ಷ ಕೆ.ಕೆ. ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕೆ.ಯು. ರತೀಶ್, ಹೆಚ್‌ಡಿಪಿಎ ಖಜಾಂಚಿ ಎಂ.ಜೆ. ಸಚಿನ್ ಹಾಗೂ ಮೂಡಿಗೆರೆ ತಾಲೂಕು ಕಾರ್ಯದರ್ಶಿ ಕೆ.ಡಿ. ಮೋಹನ್ ಹಾಜರಿದ್ದರು.
Uncategorized
ದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
ವರದಿ : ಮಹದೇವಸ್ವಾಮಿ ಪಟೇಲ್
ಆಬ್ಲೆಸ್ ಮೋಟರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿವಂಗ ರಾಕೇಶ್ ಸಿದ್ದರಾಮಯ್ಯನವರ ಸ್ಮರಣಾರ್ಥ ಡರ್ಟಿ ಪ್ರಿಕ್ಸ್ ರೇಸ್ 2026 ನೇ ಸಾಲಿನ ಉದ್ಘಾಟನಾ ಸಮಾರಂಭವನ್ನು ಭಾನುವಾರ ಆಯೋಜಿಸಲಾಗಿತ್ತು.
ನಂಜನಗೂಡು ತಾಲೂಕು ಚಿಕ್ಕಯನ ಚಿತ್ರ ಹೋಬಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಕಾರ್ ರೇಸ್ ಗೆ ಚಾಮರಾಜನಗರ ಸಂಸದ ಸುನಿಲ್ ಬೋಸ್ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ವೇಳೆ ರೇಸ್ಗೆ ಚಾಲನೆ ನೀಡಿ ಸಂಸದ ಸುನಿಲ್ ಬೋಸ್ ಮಾತನಾಡಿ, ದಿವಂಗತ ರಾಕೇಶ್ ಸಿದ್ಧರಾಮಯ್ಯನವರ ಸ್ಮರಣಾರ್ಥ ಡರ್ಟಿ ಟ್ರಿಕ್ಸ್ ರೇಸ್ ಅನ್ನು ಆಯೋಜನೆ ಮಾಡಲಾಗಿದೆ. ನಾನು ಮತ್ತು ರಾಕೇಶ್ ಸಿದ್ದರಾಮಯ್ಯನವರು ಸಹೋದರರಂತೆ ಇದ್ದವು. ಒಂದೇ ಕುಟುಂಬದ ಅಣ್ಣ ತಮ್ಮನಂತೆ ಜನರಿಗಾಗಿ ಕೆಲಸ ಮಾಡುತ್ತಿದ್ದೋ. ಅವರ ನೆನಪಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು, ಅವರಿಗೆ ಕಾರುಗಳ ಮೇಲೆ ಅಪಾರ ಆಸಕ್ತಿ ಇತ್ತು. ಒಬ್ಬ ಒಳ್ಳೆಯ ಸ್ನೇಹಿತನಾಗಿ, ಸಹೋದರನಾಗಿ ಅವರೊಂದಿಗೆ ಕಳೆದ ದಿನಗಳು ಈ ಕಾರ್ಯಕ್ರಮದ ಮೂಲಕ ನೆನಪಾಗುತ್ತಿದೆ. ದಿವಂಗತ ರಾಕೇಶ್ ಅವರ ಸ್ಮರಣಾರ್ಥ ಆಯೋಜಿಸಿರುವ ಕಾರ್ ರೇಸ್ ಮುಂದಿನ ದಿನಗಳಲ್ಲು ಮುಂದುವರೆಯಲಿ ಎಂದು ಕುಚುಕು ಗೆಳೆಯನೊಂದಿಗೆ ಕಳೆದ ಅಂದಿನ ದಿನಗಳನ್ನು ಮೆಲುಕು ಹಾಕುದರು.
ಕಾರು ಪ್ರಿಯರಿಗೆ ಈ ರೇಸ್ ಭರಪೂರ ಮನರಂಜನೆ ನೀಡಲಿದೆ. ಕಾರ್ ರೇಸ್ ಅಪಾಯಕಾರಿ ಕ್ರೀಡೆಯಾಗಿದ್ದು, ಎಚ್ಚರದಿಂದ ವಾಹನ ಚಲಾಯಿಸಿ, ಸ್ಪರ್ಧೆಯಲ್ಲಿ ಗೆಲ್ಲುವಂತೆ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ವಿವಿಧ ಜಿಲ್ಲೆಗಳಿಂದ ನಾನಾ ಬಗೆಯ ಕಾರುಗಳು ರೇಸ್ ನಲ್ಲಿ ಭಾಗವಹಿಸಿದ್ದವು. ಕಿವಿ ಗುಂಯ್ ಗುಟ್ಟುವ ಭಾರಿ ಶಬ್ದದೊಂದಿಗೆ ಗೆಲುವಿಗಾಗಿ ಶರವೇಗದಲ್ಲಿ ಸವಾರರು ತಮ್ಮ ಕಾರುಗಳನ್ನ ಚಲಾಯಿಸುತ್ತಿದ್ದ ದೃಶ್ಯ ನೋಡುಗರನ್ನು ಮೈ ಜುಮ್ ಅನ್ನುವಂತೆ ಮಾಡುತ್ತದೆ ಎಂದರು.
ಈ ಕಾರ್ಯಕ್ರಮವನ್ನು ಅರ್ಕೇಶ್ವರ ಮತ್ತು ಆ ಸ್ನೇಹಿತರ ತಂಡ ಆಯೋಜನೆ ಮಾಡಲಾಯಿತು.
ಸಮಾರಂಭದಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ಧರ್ಮದರ್ಶಿ ಮಾಜಿ ಅಧ್ಯಕ್ಷ ಇಂಧನ ಬಾಬು, ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ವಿದ್ಯಾಸಾಗರ್, ರಾಜು, ಅರ್ಕೇಶ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
Uncategorized
ಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು : ಫೆ.11ರಂದು ನಾಪೋಕ್ಲುವಿನ ಬೇತು ರಸ್ತೆಯಲ್ಲಿ ಅಲ್ ನೂರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನಾ ಸಮಾರಂಭ ಹಾಗೂ ದಅವಾ ಸಮ್ಮೇಳನ ನಡೆಯಲಿದೆ.
ಫೆ.11ರಂದು ಸಂಜೆ 4ಗಂಟೆಗೆ ನೂತನ ಮಸೀದಿಯ ಉದ್ಘಾಟನೆ ನಡೆಯಲಿದ್ದು ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷರಾದ ಪಿ.ಎನ್.ಅಬ್ದುಲ್ ಅತೀಫ್ ಮದನಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ, ಕರ್ನಾಟಕ ಸಲಫಿ

ಅಸೋಸಿಯೇಷನ್ ಅಧ್ಯಕ್ಷ ಹಫೀಸ್ ಸ್ವಲಾಹಿ,ಖಲೀಲ್ ತಲಪ್ಪಾಡಿ,ಶಿಹಾಬ್ ತಲಪ್ಪಾಡಿ,ಡಾ.ಸಣ್ಣುವಂಡ ಕಾವೇರಪ್ಪ ನಾಪೋಕ್ಲು, ನಾಪೋಕ್ಲು ಪೊಲೀಸ್ ಉಪನಿರೀಕ್ಷಕರಾದ ಪಿ.ಜಿ. ರಾಘವೇಂದ್ರ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಿ.ಎಂ. ಖಾಸಿಂ,ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯರಾದ ಕುಶು ಕುಶಾಲಪ್ಪ, ಮಹಮ್ಮದ್ ಖುರಶಿ, ಅರುಣ್ ಬೇಬ,ಇಸ್ಮಾಯಿಲ್ ಭಾಗವಹಿಸಲಿದ್ದಾರೆ.
ಮಸೀದಿ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸಂಜೆ 7 ಗಂಟೆಯಿಂದ ಮೌಲವಿ ಶಿಹಾಬ್ ಎಡಕ್ಕರ ಹಾಗೂ ಮುನೀರ್ ಶರಫಿ ಅವರ ನೇತೃತ್ವದಲ್ಲಿ ದಅವಾ ಸಮ್ಮೇಳನ ನಡೆಯಲಿದೆ ಎಂದು ಮಸ್ಜಿದು ತೌಹೀದ್ ನಾಪೋಕ್ಲು ಇದರ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Mysore13 hours agoಮಲೆ ಮಹದೇಶ್ವರ ಶತನಾಮಾವಳಿ ಲೋಕಾರ್ಪಣೆ: ಶ್ರೀಮಾಯಕಾರ ಗುರುಕುಲದಿಂದ ನಿರ್ಮಾಣ
-
National - International5 hours agoIND v/s PAK T-20 WC| 114ಕ್ಕೆ ಪಾಕ್ ಆಲೌಟ್: ಟೀಂ ಇಂಡಿಯಾಗೆ ಭರ್ಜರಿ ಜಯ
-
Hassan14 hours agoಸಂತ ಸೇವಾಲಾಲ್ ಜಯಂತಿ ಆಚರಣೆ : ಕೆ.ಎಂ.ಶಿವಲಿಂಗೇಗೌಡರವರಿಂದ ಪುಷ್ಪನಮನ
-
Hassan18 hours agoನಿಗೂಢ ನಾಪತ್ತೆಯ ಪ್ರಕರಣಕ್ಕೆ ಬಹುದೊಡ್ಡ ಮೇಜರ್ ಟ್ವಿಸ್ಟ್ : ಮಹಿಳೆ ಪೊಲೀಸರ ವಶಕ್ಕೆ,
-
Chikmagalur6 hours agoತಾಯಿ ಬುದ್ಧಿವಾದ ಹೇಳಿದ್ದಕ್ಕೆ ಬೇಸತ್ತು ಬಾಲಕಿ ಆತ್ಮಹ*ತ್ಯೆಗೆ ಶರಣು
-
Kodagu13 hours agoರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಟೂರ್ನಿಯಾ ಉದ್ಘಾಟನಾ ಕಾರ್ಯಕ್ರಮ
-
Hassan10 hours agoತಾಲೂಕಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ
-
Chikmagalur11 hours agoಭದ್ರಾ ನದಿಯಲ್ಲಿ ಸೆಳೆತ ಮತ್ತು ಅಪಾಯಕಾರಿ ಗುಂಡಿಗಳ ಬಗ್ಗೆ ಅರಿವು ಇಲ್ಲ : ಬಲಿಯಾಗುತ್ತಿರುವ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು
