Connect with us

Chikmagalur

ಮೂರು ದಿನ ಕಾಫಿನಾಡಿನ ರೆಸಾರ್ಟ್ ನಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಹೆಚ್.ಡಿ.ಕೆ ವಾಸ್ತವ್ಯ

Published

on

ಚಿಕ್ಕಮಗಳೂರು : ರಾಜ್ಯ ರಾಜಕಾರಣದಲ್ಲಿ ಹೊಸ ಹೊಸ ವಿದ್ಯಮಾನಗಳು ಹುಟ್ಟಿಕೊಳ್ಳುತ್ತಿರುವ ಬೆನ್ನಲ್ಲೇ
ಕಾಫಿನಾಡು ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ಮತ್ತು ಹೆಚ್.ಡಿ ಕುಮಾರಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾಹಿತಿ ಜೆಡಿಎಸ್ ಪಕ್ಷದ್ಱ್ ಮೂಲಗಳಿಂದ ಲಭ್ಯವಾಗಿದೆ.

ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನವೆಂಬರ್ 19 ರಂದು ನಿಗದಿಯಾಗಿದೆ. ಇದರಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ತಮ್ಮ ಪಕ್ಷದ ಶಾಸಕರನ್ನು ಕುಮಾರಸ್ವಾಮಿ ಚಿಕ್ಕಮಗಳೂರಿಗೆ ಕರೆದೊಯ್ಯುತ್ತಿದ್ದಾರೆ ಎನ್ನಲಾಗುತ್ತಿದೆ‌.

ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಮೂರು ದಿನಗಳ ಕಾಲ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 17 ರ ಮಧ್ಯಾಹ್ನ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ ಗೆ ಶಾಸಕರು ಆಗಮಿಸಲಿದ್ದಾರೆ. ನವೆಂಬರ್ 18 ರಂದು ಶಾಸಕ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ನ.19 ರಂದು ಸಿಲ್ವರ್ ಗೇಟ್ ರೆಸಾರ್ಟ್ ನಲ್ಲಿ ನಡೆಯುವ ಶಾಸಕ ಭೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ‌ ಲಭ್ಯವಾಗಿದೆ.

Chikmagalur

ಮಠದ ಆಡಳಿತಾಧಿಕಾರಿ ಮುರುಳಿ ಅವರಿಗೆ ಅಭಿನಂದನೆ ಸಲ್ಲಿಸಿದ ಪುರೋಹಿತ ವರ್ಗ

Published

on

ಚಿಕ್ಕಮಗಳೂರು :

ಶೃಂಗೇರಿಯಲ್ಲಿ ಶಾರದಾಂಭೆ ಹಾಗೂ ಗುರುಗಳ ದರ್ಶನಕ್ಕೆ ಡ್ರೆಸ್ ಕೋಡ್ ವಿಚಾರ

ಮಠದ ಆಡಳಿತಾಧಿಕಾರಿ ಮುರುಳಿ ಅವರಿಗೆ ಅಭಿನಂದನೆ ಸಲ್ಲಿಸಿದ ಪುರೋಹಿತ ವರ್ಗ

ಆಡಳಿತಾಧಿಕಾರಿಗೆ ಅಭಿನಂದನಾ ಪತ್ರ ನೀಡಿದ ಪುರೋಹಿತ ವರ್ಗ

ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ಪುರೋಹಿತರಿಂದ ಅಭಿನಂದನೆ

ಶೃಂಗೇರಿ ಹಿಂದೂಗಳ ಪಾಲಿನ ಪರಮ-ಪವಿತ್ರ ಭೂಮಿ

ಗುರು ಪರಂಪರೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿರೋ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರ

ದೇವಾಲಯದಲ್ಲಿ ಧಾರ್ಮಿಕ ವಾತಾವರಣ ಕಾಯುವ ನಿಮ್ಮ ನಿರ್ಧಾರಕ್ಕೆ ಅಭಿನಂದನೆ, ಸ್ವಾಗತ

ಶೃಂಗೇರಿಯಲ್ಲಿ ಗುರುಗಳ ದರ್ಶನಕ್ಕೆ ಡ್ರೆಸ್ ಕೋಡ್ ಜಾರಿ ಮಾಡಿದ್ದ ಆಡಳಿತ ಮಂಡಳಿ

ಪುರುಷರು ಪಂಚೆ-ಶರ್ಟ್-ಶಲ್ಯ, ಮಹಿಳೆಯರು ಚೂಡಿದಾರ, ಸೀರೆ ಧರಿಸಿ ಬರುವಂತೆ ಆಡಳಿತ ಮಂಡಳಿ ತೀರ್ಮಾನ

ಆಡಳಿತ ಮಂಡಳಿ ತೀರ್ಮಾನಕ್ಕೆ ಪುರೋಹಿತ ವರ್ಗ ಸ್ವಾಗತ, ಅಭಿನಂದನೆ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾ ಮಠ

Continue Reading

Chikmagalur

ರೀಲ್ಸ್, ಪೋಟೋ, ಸೆಲ್ಫಿ ಕ್ರೇಜಿಗೆ ಪ್ರವಾಸಿಗರ ಹುಚ್ಚಾಟಕ್ಕೆ ಕೊನೆ ಇಲ್ಲ

Published

on

ಚಿಕ್ಕಮಗಳೂರು :

ಚಾರ್ಮಾಡಿ ಘಾಟಿಯಲ್ಲಿ ಬಂಡೆ ಅಲ್ಲ, ಗುಡ್ಡವನ್ನೇ ಹತ್ತುತ್ತಿದ್ದಾರೆ ಕಲಾವಿದರು

ಇಷ್ಟು ದಿನ ಬಂಡೆ-ಜಲಪಾತ ಆಯ್ತು… ಇದೀಗ ಬಂಡೆ ಮೇಲಿನ ಗುಡ್ಡ

ಪಿರಮಿಡ್ ಆಕಾರದ ಗುಡ್ಡ ಹತ್ತಿ ಮಳೆ-ಜಾರಿಕೆ-ಬಂಡೆ ಮೇಲಿಂದ ಕೆಳಗಿಳಿಯೋದು

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಘಟನೆ

ಇವ್ರಿಗೆ ಹುಚ್ಚು ಅಂತ ಹೇಳ್ದೆ ಇನ್ನೇನು ಅಂತ ಹೇಳಬೇಕು

ಸ್ವಲ್ಪ ಯಾಮಾರಿ ಜಾರಿದ್ರೆ 206 ಮೂಳೆ 412 ಆಗಿರುತ್ತೆ

ಆದ್ರೆ, ಈ ಗುಡ್ಡ ಕಲಾವಿದರಿಗೆ ಖಾಕಿ ಚೆನ್ನಾಗೇ ಉಗಿದು…ಉಪ್ಪಾಕಿದೆ…

ನಾಲ್ವರಿಗೂ ತಲಾ 500 ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ವಾಪಸ್ ಕಳಿಸಿದೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು

Continue Reading

Chikmagalur

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ

Published

on

ಚಿಕ್ಕಮಗಳೂರು :

ಕಾಫಿನಾಡಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರ

ಭಾರಿ ಗಾಳಿಗೆ ಮನೆಯ ಗೋಡೆ ಕುಸಿತ0

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಘಟನೆ

ಮನೆ ಗೋಡೆ ಮನೆಯ ಹೊರ ಭಾಗಕ್ಕೆ ಬಿದ್ದಿದೆ, ಒಳ ಭಾಗಕ್ಕೆ ಬಿದ್ದಿದ್ರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು

ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ನಾಗೇಶ್ ಶೆಟ್ಟಿ ಎಂಬುವರ ಮನೆಯ ಮುಂಭಾಗ ಸಂಪೂರ್ಣ ನಾಶ

ಮನೆ ಮುಂದೆ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದ ಮನೆ ಗೋಡೆ ಆಟೋ ಜಖಂ

ನಾಗೇಶ್ ಶೆಟ್ಟಿ ಎಂಬುವರ ಆಟೋ ಸಂಪೂರ್ಣ ಜಖಂ

ಜಗದೀಶ್ ಶೆಟ್ಟಿ ಮನೆ ಬಳಿ ಆಟೋ ನಿಲ್ಲಿಸಿ ಆಟೋ ಕಳೆದುಕೊಂಡ ಜಗದೀಶ್

ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಭೇಟಿ, ಪರಿಶೀಲನೆ

ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಗ್ರಾಮ

Continue Reading

Trending

error: Content is protected !!