Manglore
ಬೆಳ್ತಂಗಡಿ ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ
ಉಜಿರೆ: ಅಮೆರಿಕದಲ್ಲಿ ಖ್ಯಾತ ಹೃದಯ ಹಾಗೂ ಥೊರಾಸಿಕ್ (Thorasic) ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಯು. ರಾಮಯ್ಯ ಗೌಡ ಹಾಗೂ ಅವರ ಪತ್ನಿ, ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಕೊನ್ನಿ ಗೌಡ ಅವರು ಇತ್ತೀಚೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ಭೇಟಿ ನೀಡಿದರು.
1939ರಲ್ಲಿ ಜನಿಸಿದ ಡಾ. ರಾಮಯ್ಯ ಗೌಡ ಅವರು ಬೆಳ್ತಂಗಡಿಯ ವಳಂಬ್ರ ಕುಟುಂಬಕ್ಕೆ ಸೇರಿದವರು. ಕಡಿರುದ್ಯಾವರ ಸರ್ಕಾರಿ ಶಾಲೆ ಹಾಗೂ ಉಜಿರೆಯ ಎಸ್‌ಡಿಎಂ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ, ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದಿದ್ದಾರೆ. 1965ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ಹೃದಯ ಮತ್ತು ಥೊರಾಸಿಕ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದು ನ್ಯೂಯಾರ್ಕ್ ಹಾಗೂ ಗ್ರಾಹಂ ಮೆಡಿಕಲ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ನಿವೃತ್ತಿಯ ನಂತರವೂ ಯಾವುದೇ ಸಂಬಳವಿಲ್ಲದೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ವದೇಶಕ್ಕೆ ಆಗಮಿಸದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ವಿಶೇಷವಾಗಿದೆ.
ಈ ಸಂದರ್ಭ ಎಸ್‌ಡಿಎಂ ಆಸ್ಪತ್ರೆ ಆಡಳಿತ ಮಂಡಳಿ ಮುಖ್ಯಸ್ಥರಾದ ಎಂ ಜನಾರ್ದನ್, ವೈದ್ಯರು ಹಾಗೂ ಸಿಬ್ಬಂದಿ ಡಾ. ರಾಮಯ್ಯ ಗೌಡ ಕುಟುಂಬವನ್ನ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.
Manglore
ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರಬೇಕು ಎಂಬುದು ಹೆಚ್ಚಾಗಿದೆ – ಮೋಟಮ್ಮ
ಮಂಗಳೂರು: ಇತ್ತೀಚೆಗೆ ರಾಜಕೀಯದಲ್ಲಿ ಹೆಣ್ಣುಮಕ್ಕಳು ಗ್ಲಾಮರಸ್ ಆಗಿರಬೇಕು ಎಂಬುದು ಹೆಚ್ಚಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವೆ, ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿದರು.
ನಗರದ ಪುರಭವನದಲ್ಲಿ ನಡೆದ ಮಹಿಳಾ ವೈಭವ 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಮಹಿಳೆಯರು ಚುರುಕಾಗಿರಬೇಕು. ಅದನ್ನು ಬಿಟ್ಟು, ಹೆಣ್ಣುಮಕ್ಕಳು ನಾವು, ಗ್ಲಾಮರಸ್ ಆಗಿ ಇರಬೇಕು. ರಾಜಕೀಯ ಮುಖಂಡರ ನಮ್ಮನ್ನು ಗುರುತಿಸಬೇಕು. ಅವರಿಗೆ ನಾವು ಬಹಳ ಒಬಿಡಿಯಂಟ್ ಆಗಿ ಇರಬೇಕು ಎಂದವರು.

ಎಲ್ಲಿಯವರೆಗೂ ನಾವು ಹಲ್ಲುಕಿರಿಯೋದನ್ನು ಬಿಡುವುದಿಲ್ಲ. ಅಲ್ಲಿಯವರೆಗೂ ನಾವು ರಾಜಕೀಯದಲ್ಲಿ ಊಟಕ್ಕೆ ಉಪ್ಪಿನಕಾಯಿ ಅಷ್ಟೆ ಎಂದು ಮೋಟಮ್ಮ ವ್ಯಂಗ್ಯವಾಡಿದರು.
Manglore
ಕುಟುಂಬ ಕಲಹಕ್ಕೆ ತಂದೆಯ ಕತ್ತಿಯೇಟಿಗೆ ಪುತ್ರಿ ಬಲಿಯ ಬೆನ್ನಲ್ಲೇ ಚಿಕ್ಕಪ್ಪನೂ ಸಾವು
ಮಂಗಳೂರು: ಗಡಿಭಾಗ ಕೇರಳದ ಮಂಜೇಶ್ವರದ ತೂಮಿನಾಡಿನಲ್ಲಿ ತಂದೆ ಹಾಗೂ ಚಿಕ್ಕಪ್ಪನೊಂದಿಗಿನ ಬಿಡಿಸಲು ಹೋದ ಪುತ್ರಿ ಕತ್ತಿಯೇಟಿಗೆ ಬಲಿಯಾದ ಬೆನ್ನಲ್ಲೇ ಮಾರಣಾಂತಿಕವಾಗಿ ಗಾಯಗೊಂಡಿದ್ದ ಚಿಕ್ಕಪ್ಪನೂ ಮೃತಪಟ್ಟಿದ್ದಾರೆ.
ಮಾರಣಾಂತಿಕವಾಗಿ ಇರಿತಕ್ಕೆ ಒಳಗಾಗಿದ್ದ ಶೇಕುಂಞಿ ಎಂಬವರು ಫೆ.3 ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ಪತ್ನಿಯ ಸಹೋದರಿಯ ಪುತ್ರಿ ಜುಮೈಲಾ(17) ಸೋಮವಾರ ಸಂಜೆ ಕೊಲೆಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಇಂದು ಕೊನೆಯುಸಿರೆಳೆದಿದ್ದಾರೆ. ಜುಲೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ.
ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಪತ್ನಿಯ ತಂಗಿ(ನಾದಿನಿ)ಯ ಪತಿ ಶೇಕುಂಞಿ ನಡುವೆ ವೈಮನಸ್ಸು ಇತ್ತೆನ್ನಲಾಗಿದೆ.

ಇದೇ ವಿಚಾರವಾಗಿ ಸೋಮವಾರ ಸಂಜೆ ಉಮರ್ ಫಾರೂಕ್ ಮತ್ತು ಶೇಕುಂಞಿ ಮಧ್ಯೆ ನಡೆದ ವಾಗ್ವಾದ ತಾರಕ್ಕೇರಿದೆ. ಈ ವೇಳೆ ಶೇಕುಂಞಿಯವರ ಮೇಲೆ ಆರೋಪಿ ಉಮರ್ ಫಾರೂಕ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ.
ದಾಳಿಯನ್ನು ತಡೆಯಲೆತ್ನಿಸಿದ ಪುತ್ರಿ ಜುಮೈಲಾರಿಗೂ ಉಮರ್ ಫಾರೂಕ್ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜುಮೈಲಾ ಸ್ಥಳದಲ್ಲೇ ಮೃತಪಟ್ಟಿದ್ದರು. ದಾಳಿಗೊಳಗಾಗಿ ಗಂಭೀರಾವಸ್ಥೆಯಲ್ಲಿದ್ದ ಶೇಕುಂಞಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣದ ಆರೋಪಿ ಉಮರ್ ಫಾರೂಕ್ ನನ್ನು ಪೊಲೀಸರು ಸೋಮವಾರ ಸಂಜೆಯೇ ಬಂಧಿಸಿದ್ದಾರೆ.
Manglore
ಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
ಪುತ್ತೂರು: ಜಿ.ಎಲ್. ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾದ 5ನೇ ವರ್ಷದ ಜಿ.ಎಲ್ .ಟ್ರೋಫಿ -2026 ಸೀಝನ್ – 5 ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ಹಾಗೂ ಸನ್ಮಾನ ಕಾರ್ಯಕ್ರಮವು ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಭವ್ಯವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಲರಾಮ್ ಆಚಾರ್ಯ ಅವರು ಮಾತನಾಡಿ, ಕ್ರೀಡಾಪಟುಗಳು ಕ್ರೀಡಾ ಸೌಹಾರ್ದತೆಯನ್ನು ಕಾಪಾಡಿಕೊಂಡು ಸ್ನೇಹಪೂರ್ಣವಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಯ ಹಿರಿಯ ಸಿಬ್ಬಂದಿಯಾದ ಶಂಕರ್ ಮೋಹನ್ ಸಾಲೆ ಅವರು 1967ರಲ್ಲಿ ಜಿ.ಎಲ್. ಆಚಾರ್ಯ ಜುವೆಲರ್ಸ್ ಸಂಸ್ಥೆಗೆ ಸೇರ್ಪಡೆಗೊಂಡು, ಸಂಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ಅವರು ಸಲ್ಲಿಸಿದ ಅಪಾರ ಸೇವೆ, ಸತ್ಯನಿಷ್ಠ ವ್ಯಾಪಾರ, ಸಮಾಜಮುಖಿ ಚಿಂತನೆ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಜನಮಾನಸದಲ್ಲಿ ವಿಶಿಷ್ಟ ಗೌರವ ಪಡೆದಿದ್ದಾರೆ ಎಂದು ನಿರಂತ್ ದೇವಸ್ಯ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ್ ಮೋಹನ್ ಸಾಲೆ ಅವರನ್ನು ಬಲರಾಮ್ ಆಚಾರ್ಯ, ಸುದನ್ವ ಬಿ ಆಚಾರ್ಯ ಅವರು ಸನ್ಮಾನಿಸಿ ಗೌರವಿಸಿದರು.
ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಹಾಗೂ ಕ್ರೀಡಾ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್. ಹಾಸನ, ದ್ವೀತಿಯ ಸ್ಥಾನವನ್ನು ಜಿ.ಎಲ್. ಕುಶಾಲನಗರ, ತೃತೀಯ ಸ್ಥಾನವನ್ನು ಜಿ.ಎಲ್. ಪುತ್ತೂರು (ಪ್ರಾಚೀ)ಅವರು ಪಡೆದುಕೊಂಡರು. ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯ ಶ್ರೇಷ್ಠ ಆಟಗಾರನಾಗಿ ಜೇಮ್ಸ್ (ಹಾಸನ), ಉತ್ತಮ ದಾಂಡಿಗನಾಗಿ ವಿನಯ್ ಕೆ.ಪಿ. (ಸುಳ್ಯ), ಉತ್ತಮ ಎಸೆತಗಾರನಾಗಿ ಹರೀಶ್ (ಹಾಸನ), ಉತ್ತಮ ಕ್ಷೇತ್ರರಕ್ಷಕರಾಗಿ ವಿಜಿತ್ ಕೃಷ್ಣ, ಗೇಮ್ ಚೆಂಜರಾಗಿ ಚೇತನ್ (ಕುಶಾಲನಗರ) ಇವರು ಪ್ರಶಸ್ತಿಯನ್ನು ಪಡೆದುಕೊಂಡರು.

ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನವನ್ನು ಜಿ.ಎಲ್ .ಪುತ್ತೂರು (ಪ್ರಾಚೀ), ದ್ವಿತೀಯ ಸ್ಥಾನವನ್ನು ಜಿ.ಎಲ್ ಪುತ್ತೂರು (ಗ್ಲೋ) ಅವರು ಪಡೆದುಕೊಂಡರು.
ಜಿ.ಎಲ್. ಆಚಾರ್ಯ ಜುವೆಲರ್ಸ್ ವತಿಯಿಂದ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಲಕ್ಷ್ಮೀಕಾಂತ್ ಬಿ. ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಹಾಗೂ ವೇದ ಲಕ್ಷ್ಮೀಕಾಂತ್ ಬಿ. ಆಚಾರ್ಯ, ಶ್ರೀರಾಮ್ ಆಚಾರ್ಯ ಮತ್ತು ಇತರರು ಉಪಸ್ಥಿತರಿದ್ದರು.
-
Manglore20 hours agoಜಿ.ಎಲ್. ಟ್ರೋಫಿ-2026: ಜಿ.ಎಲ್. ಹಾಸನ ತಂಡ ಚಾಂಪಿಯನ್
-
Hassan20 hours agoಅರಸೀಹಳ್ಳಿ ಹರೀಶ್ಗೆ ಪಿಹೆಚ್ಡಿ ಪದವಿ
-
Hassan21 hours agoಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ : ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್
-
Hassan21 hours agoಮಾಧ್ಯಮ ಸ್ವಾತಂತ್ರ್ಯ ಸದ್ಬಳಕೆಯಾಗಲಿ: ಎಎಸ್ಪಿ ತಮ್ಮಯ್ಯ
-
State24 hours agoಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
-
National23 hours ago17ನೇ ಬೆಂಗಳೂರು ಚಿತ್ರೋತ್ಸವದಲ್ಲಿ ತಾಯಿ-ಮಗನ ಸಂಬಂಧದ ʼಅಮ್ಮಂಗೆ ಹೇಳ್ಬೇಡʼ ಚಿತ್ರ ಪ್ರದರ್ಶನ
-
Hassan23 hours agoಬಾರ್ನಲ್ಲಿ ಕುಡಿಯುವಾಗ ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಗಲಾಟೆ
-
Mysore21 hours agoಡ್ರಗ್ಸ್ ಲ್ಯಾಬ್ ಪತ್ತೆ: ಕೈಗಾರಿಕೆಗಳ ತಪಾಸಣೆಗೆ 14 ತಂಡ ರಚನೆ
