Mysore
ರೆನಾಲ್ಟ್ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಅರ್ಬನ್ ನೈಟ್ ಲಿಮಿಟೆಡ್ ಆವೃತ್ತಿಯ ಕಾರು ಅನಾವರಣ
ಮೈಸೂರು: ನಗರದ ಹುಣಸೂರು ರಸ್ತೆಯಲ್ಲಿರುವ ವಿಧಾತ್ರಿ ಮೋಟಾರ್ಸ್ ಷೋ ರೂಂನಲ್ಲಿ ರೆನಾಲ್ಟ್ ಕ್ವಿಡ್, ಟ್ರೈಬರ್ ಮತ್ತು ಕಿಗರ್ ಅರ್ಬನ್ ನೈಟ್ ಲಿಮಿಟೆಡ್ ಆವೃತ್ತಿಯ ಕಾರನ್ನು ಅನಾವರಣಗೊಳಿಸಲಾಯಿತು.
ಷೋ ರೂಂನ ಮಾರುಕಟ್ಟೆ ವ್ಯವಸ್ಥಾಪಕ ಬಿ.ಎಸ್.ಚೇತನ್, ಸೇಲ್ಸ್ ಮ್ಯಾನೇಜರ್ ರವಿ, ಆಕ್ಸಿಸ್ ಬ್ಯಾಂಕ್ ನ ಪ್ರಕಾಶ್ ಮತ್ತು ಬಿಓಬಿ ಬ್ಯಾಂಕ್ ನ ಬಿಸ್ವಾರಂಜನ್ ಕಾರನ್ನು ಅನಾವರಣಗೊಳಿಸಿದರು.
ಬಳಿಕ ಷೋ ರೂಂನ ವ್ಯವಸ್ಥಾಪಕರಾದ ಚೇತನ್ ಮಾತನಾಡಿ, ರೆನಾಲ್ಟ್ ಕ್ವಿಡ್, ಕಿಗರ್ ಮತ್ತು ಟ್ರೈಬರ್‌ನ ಕಪ್ಪು ಆವೃತ್ತಿಯನ್ನು ಪರಿಚಯಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳು ಅನುಸರಿಸುತ್ತಿರುವ ಪ್ರವೃತ್ತಿಯನ್ನು ಅನುಸರಿಸಿ ರೆನಾಲ್ಟ್ ಇಂದು ತನ್ನ ಕ್ವಿಡ್, ಟ್ರೈಬರ್ ಮತ್ತು ಕಿಗರ್‌ನ ಕಪ್ಪು ಆವೃತ್ತಿಯನ್ನು ಪರಿಚಯಿಸಿದೆ. ಕಂಪನಿಯು ತನ್ನ ಡಾರ್ಕ್ ಆವೃತ್ತಿಯ ಹೆಸರನ್ನು ‘ಅರ್ಬನ್ ನೈಟ್’ ಎಂದು ಸೃಷ್ಟಿಸಿದೆ ಎಂದು ಗ್ರಾಹಕರಿಗೆ ಮಾಹಿತಿ ನೀಡಿದರು.
ಕಾರಿನ ವಿಶೇಷತೆಗಳು
ಸ್ಟೆಲ್ತ್ ಬ್ಲ್ಯಾಕ್ ಬಾಡಿ ಕಲರ್
ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳಲ್ಲಿ ಸ್ಟಾರ್‌ಡಸ್ಟ್ ಸಿಲ್ವರ್ ಉಚ್ಚಾರಣೆಗಳು
ಹೆಡ್‌ಲ್ಯಾಂಪ್ ಬೆಜೆಲ್‌ನಲ್ಲಿ ಸ್ಟಾರ್‌ಡಸ್ಟ್ ಸಿಲ್ವರ್ ಆಕ್ಸೆಂಟ್‌ಗಳು
ಬಂಪರ್ ಅಲಂಕರಣದಲ್ಲಿ ಸ್ಟಾರ್ಡಸ್ಟ್ ಸಿಲ್ವರ್ ಉಚ್ಚಾರಣೆಗಳು
ಪಿಯಾನೋ ಕಪ್ಪು ORVM
ಸ್ಟಾರ್ಡಸ್ಟ್ ಸಿಲ್ವರ್ ರೂಫ್ ರೈಲ್ ಇನ್ಸರ್ಟ್‌ಗಳು
ಸ್ಟಾರ್‌ಡಸ್ಟ್ ಸಿಲ್ವರ್ ಫಿನಿಶ್‌ನೊಂದಿಗೆ ಹಿಂದಿನ ಟ್ರಂಕ್ ಕ್ರೋಮ್ ಲೈನರ್
ಸ್ಟಾರ್ಡಸ್ಟ್ ಸಿಲ್ವರ್ ಫ್ಲೆಕ್ಸ್ ವೀಲ್ಸ್
ಇಲ್ಯುಮಿನೇಟೆಡ್ ಸ್ಕಫ್ ಪ್ಲೇಟ್
ಕೊಚ್ಚೆಗುಂಡಿ ದೀಪ
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)
ಹಿಲ್ ಸ್ಟಾರ್ಟ್ ಅಸಿಸ್ಟ್ (HSA)
ಎಳೆತ ನಿಯಂತ್ರಣ ವ್ಯವಸ್ಥೆ (TCS)
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)
ರೆನಾಲ್ಟ್ ಕಿಗರ್ ಅರ್ಬನ್ ನೈಟ್ ಲಿಮಿಟೆಡ್ ಆವೃತ್ತಿಯ ವೈಶಿಷ್ಟ್ಯಗಳು:
ಸ್ಟೆಲ್ತ್ ಬ್ಲ್ಯಾಕ್ ಬಾಡಿ ಕಲರ್
ಸ್ಟಾರ್ಡಸ್ಟ್ ಸಿಲ್ವರ್ ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್‌ಗಳು
ಡೋರ್ ಸೈಡ್ ಕ್ಲಾಡಿಂಗ್‌ನಲ್ಲಿ ಸ್ಟಾರ್‌ಡಸ್ಟ್ ಸಿಲ್ವರ್ ಇನ್ಸರ್ಟ್‌ಗಳು
ಸ್ಮಾರ್ಟ್ ಮಿರರ್ ಮಾನಿಟರ್
ಆಂಬಿಯೆಂಟ್ ಲೈಟಿಂಗ್ ಸಿಸ್ಟಮ್
ಇಲ್ಯುಮಿನೇಟೆಡ್ ಸ್ಕಫ್ ಪ್ಲೇಟ್
ಕೊಚ್ಚೆಗುಂಡಿ ದೀಪ
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP)
ಹಿಲ್ ಸ್ಟಾರ್ಟ್ ಅಸಿಸ್ಟ್ (HSA)
ಎಳೆತ ನಿಯಂತ್ರಣ ವ್ಯವಸ್ಥೆ (TCS)
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)
Mysore
ಗುರುವಿನ ಕೃಪೆ ಇಲ್ಲದೆ ಗುರಿ ಮುಟ್ಟಲು ಸಾಧ್ಯವಿಲ್ಲ: ದತ್ತ ವಿಜಯಾನಂದ ತೀರ್ಥ ಶ್ರೀ
ಮೈಸೂರು, ಜು.21: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ, ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು.
ನಮ್ಮ ಗುರಿ ಮುಟ್ಟಲು ಭಕ್ತಿ,ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ ಎಂದು ತಿಳಿಸಿದರು.
ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನವನ್ನು ನೀಡಿದ್ದಾನೆ, ಇದು ನಿಜಕ್ಕೂ ಒಂದು ಚಮತ್ಕಾರ. ಎಲ್ಲವೂ ಇರುತ್ತದೆ ಆದರೆ ಜ್ಞಾನವೇ ಇಲ್ಲದಿದ್ದರೆ ಏನೂ ಪ್ರಯೋಜನ ಆಗಲಾರದು, ಒಂದು ವಜ್ರವನ್ನು ಮಗುವಿನ ಕೈಗೆ ಕೊಟ್ಟರೆ ಅದು ಚೆಂಡೆಂದು ಆಟವಾಡುತ್ತದೆ, ಅದೇ ವಜ್ರವನ್ನು ಬಲ್ಲವರಿಗೆ ಕೊಟ್ಟರೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂದು ತಿಳಿಸಿಕೊಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.
ಇಂದು ಚಿಕಾಗೋದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳವರು 8,000 ಮಂದಿಯಿಂದ ಗೀತ ಪಠನ ಮಾಡಿಸಿದ್ದಾರೆ, ಇದೊಂದು ಅದ್ಭುತ ಕ್ಷಣ ಈ ಈ ಕಲಿಯುಗದಲ್ಲೂ ಗುರುವಿನ ಕೃಪೆಯಿಂದ ಇಂತಹದ್ದನ್ನು ಮಾತ್ರ ಮಾಡಲು ಸಾಧ್ಯವಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ನಮ್ಮ ಸನಾತನ ಧರ್ಮ ಕಾಪಾಡಲು ಗುರು ಕೃಪೆ ಬೇಕೇ ಬೇಕು, ಭಗವಂತನಿಗೆ ದೊಡ್ಡವರು ಚಿಕ್ಕವರು ಎಂಬ ಬೇಧ ಇಲ್ಲ ಜ್ಞಾನವನ್ನು ಯಾವುದೇ ಕಾರಣಕ್ಕೂ ನಾವು ಮರೆಯಬಾರದು ಅದೇ ಗುರಿ ಆ ಗುರಿ ಮುಟ್ಟಲು ನಮಗೆಲ್ಲ ಜ್ಞಾನ ಮಾರ್ಗವೇ ಮುಖ್ಯ.
ವೇದಾಂತ, ವೈರಾಗ್ಯದಿಂದ ಮಾತ್ರ ಮಾನವನ ಉದ್ಧಾರ ಸಾಧ್ಯ ಹಾಗಾಗಿ ವೇದವ್ಯಾಸರನ್ನು ಮರೆಯಬಾರದು ಅದೇ ರೀತಿ ಶಂಕರಾಚಾರ್ಯರನ್ನು ನಾವು ಮರೆಯಬಾರದು ಅವರು ಇಲ್ಲದಿದ್ದರೆ ಭಗವದ್ಗೀತೆಯೇ ಇರುತ್ತಿರಲಿಲ್ಲ.
ಗುರುಕೃಪೆಯಿಂದ ಅನುಭವ ಬರುತ್ತದೆ ನಮಗೆ ಗುರು ಕೃಪೆ ಸಿಗುತ್ತದೆ ಸ್ಮರಣೆ ಇದ್ದಲ್ಲಿ ಮರಣದ ಭಯ ಇರುವುದಿಲ್ಲ ನಿರಂತರ ಭಗವಂತನ ಸ್ಮರಣೆ ಮಾಡಲು ಚಾತುರ್ಮಾಸ್ಯ ಅತ್ಯುತ್ತಮ.
ಯಾರು ಬೇಕಾದರೂ ಚಾತುರ್ಮಸ್ಯ ವ್ರತ ಮಾಡಬಹುದು ನೀವು ಮಾಡಿ ನಾವೀಗ ಮೈಸೂರಿನಲ್ಲಿ ಮೈಸೂರಿನಲ್ಲೇ ಇಂದಿನಿಂದ ಚಾತುರ್ಮಾಸ್ಯ ವ್ರತ ಕೊಂಡಿದ್ದೇವೆ ನೀವು ಒಂದಲ್ಲ ಒಂದು ಅಂದರೆ ಕ್ಷೀರ ವ್ರತ, ಕ್ಷಾರ ವ್ರತವನ್ನು ಈ ಮಾಸಗಳಲ್ಲಿ ಮಾಡಬಹುದು ಎಂದು ಶ್ರೀ ವಿಜಯಾನಂದ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಇದೇ ವೇಳೆ ಶತಶ್ಲೋಕಿ ರಾಮಾಯಣ ಬ್ರೈಲ್ ಲಿಪಿಯಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಪುಸ್ತಕಗಳನ್ನು ಶ್ರೀಗಳು ಮತ್ತು ಶಾಸಕ ಟಿ. ಎಸ್ ಶ್ರೀವತ್ಸ ಬಿಡುಗಡೆ ಮಾಡಿದರು.
ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಶ್ರೀ ವೆಂಕಟೇಶ್ವರ ಸನ್ನಿಧಿ ಮತ್ತು ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ತರಲಾಯಿತು.
ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.
ತದನಂತರ ಸಂಕಲ್ಪ ಮಾಡಿ ಭಕ್ತ ರಿಂದಲೂ ಸಂಕಲ್ಪ ಮಾಡಿಸಿದರು.ಗುರು ಬ್ರಹ್ಮ ಗುರುವಿಷ್ಣು ಗುರುದೇವೊ ಮಹೇಶ್ವರಃ ಮಂತ್ರವನ್ನು ಎಲ್ಲರೂ ಶ್ರದ್ಧೆ, ಭಕ್ತಿಯಿಂದ ಪಠಿಸಬೇಕೆಂದು ಶ್ರೀಗಳು ತಿಳಿಸಿದರು.
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ವ್ರತದೀಕ್ಷಾ ಮಹೋತ್ವವವೂ ಕೂಡಾ ನೆರವೇರಿತು.
ರಾಜ್ಯ,ಹೊರ ರಾಜ್ಯಗಳಿಂದಲೂ ನೂರಾರು ಭಕ್ತರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆಆಗಮಿಸಿ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
Mysore
ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ದಿನಾಂಕ 21-07-2024 ರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮದ ಅಂಗವಾಗಿ ಮಾನ್ಯ ವಿಧಾನ ಸಭಾ ಸದಸ್ಯರು
ಕೃಷ್ಣರಾಜ ಕ್ಷೇತ್ರ ಮೈಸೂರು ರವರು ಹಾಗೂ ವಸ್ತು ಪ್ರದರ್ಶನದ ಅಧ್ಯಕ್ಷರಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಲ್ಲಿ ಒಟ್ಟು 500 ಸಂಖ್ಯೆ ಗಿಡಗಳನ್ನು ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶ್ರೀ ಟಿ. ಶ್ರೀವಾತ್ಸವ ರವರು ವಿಧಾನಸಭಾ ಸದಸ್ಯರು, ಕೆ.ಆರ್ ಕ್ಷೇತ್ರ, ಮೈಸೂರು.
ಶ್ರೀ ಆಯುಬ್ ಖಾನ್ ರವರು ಅಧ್ಯಕ್ಷರು ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು.
ಶ್ರೀ ಕೆ.ಎನ್. ಬಸವರಾಜ, ಐ.ಎಫ್.ಎಸ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮೈಸೂರು ವಿಭಾಗ.
ಶ್ರೀ ಎನ್. ಲಕ್ಷ್ಮಿಕಾಂತ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮೈಸೂರು ಉಪ ವಿಭಾಗ.
ಶ್ರೀ ಕೆ. ಸುರೇಂದ್ರ, ಆರ್. ಎಫ್.ಓ, ಶ್ರೀಮತಿ ಧನ್ಯಶ್ರೀ ಆರ್.ಎಫ್.ಓ ಹಾಗೂ ಸಾರ್ವಜನಿಕರು ಮತ್ತು ಸಿಬ್ಬಂದಿಯವರು.
Mysore
ನಂಜನಗೂಡು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಸ್.ಮಹಾದೇವ ಅಧಿಕಾರ ಸ್ವೀಕಾರ
ಸಮಾಜ ಸೇವೆ ಮಾಡುವ ಮೂಲಕ ಸಮಾಜದ ಏಳಿಗೆಗೆ ಲಯನ್ ಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಿರುವುದಕ್ಕೆ ನನಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಎಸ್ .ಮಹಾದೇವ ತಿಳಿಸಿದರು.
ಇಂದು ನಂಜನಗೂಡು ನಗರದ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಹತ್ತಿರ ಮಹದೇಶ್ವರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಲಯನ್ ಜಿಲ್ಲಾ ರಾಜ್ಯಪಾಲರು ಡಾ.ಪಿ.ಆರ್.ಎಸ್. ಚೇತನ್ ರವರು,ನೂತನ ಅಧ್ಯಕ್ಷರಿಗೆ ಕಾಲರ್ ಅರ್ಪಿಸುವ ಮೂಲಕ ಪದಗ್ರಹಣ ನೆರವೇರಿಸಿದರು.
ನಂಜನಗೂಡು ಲಯನ್ಸ್ 2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಮಹಾದೇವ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ ಅವರು, ಈ ಲಯನ್ ಅಧ್ಯಕ್ಷ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ ಎಲ್ಲಾ ಗೌರವ ಸದಸ್ಯರನ್ನು ವಿಶ್ವಾಸ ತೆಗೆದುಕೊಂಡು ಉತ್ತಮ ಕೆಲಸ ಮಾಡುತ್ತೇನೆ.ಸಂಧ್ಯಾ ಸುರಕ್ಷಾ ಹಿರಿಯ ನಾಗರೀಕರ ಶ್ರೇಯೋಭಿವೃದ್ಧಿಯ ನಿಟ್ಟಿನ ಹೆಜ್ಜೆ ಆಗಿರುತ್ತದೆ. ಸವ೯ರ ಆರೋಗ್ಯದ ಸುಧಾರಣೆಗೆ ಯೋಜನೆಗಳು ಲಯನ್ ಮೂಲಕ ಕೊಡುಗೆಗಳಾಗಿರುತ್ತವೆ ಎಂದು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಜಿಲ್ಲಾ ರಾಜ್ಯಪಾಲರಾದ ಡಾ.ಪಿ.ಆರ್.ಎಸ್. ಚೇತನ್ ಮಾತನಾಡಿ ಲಯನ್ ಸಂಸ್ಥೆಯ 53 ವರ್ಷದ ಇತಿಹಾಸ ಇದೆ. ಸರ್ಕಾರವು ಯೋಜನೆಗಳನ್ನು ಮಾಡಕ್ ಆಗದೆ ಇರೋದನ್ನು ಲಯನ್ ಸಂಸ್ಥೆ ಹಲವಾರು ಯೋಜನೆಗಳು ಸೇವೆ ಮಾಡಿರುವ ಇತಿಹಾಸ ಸೃಷ್ಟಿಸಿದೆ ಎಂದರು.
ನೂತನ ಲಯನ್ಸ್ ಸಂಸ್ಧೆ ಕಾಯ೯ದಶಿ೯ಗಳಾದ ಹೆಚ್.ಜೆ. ವರದನಾಯಕ ರವರು ಮಾತನಾಡಿದರು.
ಡಾಕ್ಟರ್ ಡೇ ಆಚರಣೆಯನ್ನು ಲಯನ್ ಸಂಸ್ಥೆಯಿಂದ
ವೈದ್ಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಮಾಂಡಿಂಗ್ ಆಫೀಸರ್, ಗ್ಯಾಲೆಂಟರಿ ಮೆಡಲ್ ಅವಾಡಿ೯,ಲಯನ್ ಜಿಲ್ಲಾ ರಾಜ್ಯಪಾಲರಾದ ಡಾ.ಪಿ.ಆರ್.ಎಸ್. ಚೇತನ್, ಲಯನ್ ಜಿಲ್ಲಾ ಸಂಪುಟ ಕಾಯ೯ದಶಿ೯ ಎನ್.ಜಯರಾಮು,
ಪ್ರಾಂತೀಯ ಅಧ್ಯಕ್ಷ ಎನ್.ಉಮೇಶ್, ವಲಯ ಅಧ್ಯಕ್ಷ ಎನ್.ಪಿ.ರಮೇಶ್, ನಿಕಟಪೂವ೯ ಅಧ್ಯಕ್ಷ ಕೆ.ಗೋಪಾಲಕೃಷ್ಣ, ವರದನಾಯಕ, ಜಿ.ಮಹೇಶ್, ಉಮೇಶ್, ಲಯನ್ ಪಬ್ಲಿಕ್ ಇಮೇಜ್ ಡೈರೆಕ್ಟರ್ ಗಳು ಮುಂತಾದವರು ಉಪಸ್ಥಿತರಿದ್ದರು.
ನಂಜನಗೂಡು ಮಹದೇವಸ್ವಾಮಿ ಪಟೇಲ್.
-
Mysore3 months ago
ಶ್ರೀಮತಿ ಭವಾನಿ ರೇವಣ್ಣ ಸಹೋದರ ಇಂದು ಅಂತ್ಯಕ್ರಿಯೆ
-
State6 months ago
Free sewing machine, ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ!
-
State6 months ago
ಶಾಲಾ ಮಕ್ಕಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಹಾಲಿಡೇ! ಇಲ್ಲಿದೆ ರಜಾ ಲಿಸ್ಟ್!!!
-
Health6 months ago
Sugar Control ಆಗಬೇಕು ಅಂದ್ರೆ ಈ ಹಿಟ್ಟನ್ನು ತಿನ್ನಬೇಕಂತೆ! ಕನ್ಫ್ಯೂಸ್ ಆಗ್ಬೇಡಿ ಸುದ್ದಿ ಓದಿ
-
Hassan3 months ago
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ
-
Uncategorized2 months ago
NEET 2024 ಮರು ಪರೀಕ್ಷೆಗೆ ಒತ್ತಾಯ: ಪೇಪರ್ ಲೀಕ್, ಮೋಸದ ಗ್ರೇಸ್ ಮಾರ್ಕ್, ಒಂದೇ ಕೇಂದ್ರದ ವಿದ್ಯಾರ್ಥಿಗಳು ಟಾಪರ್ಸ್ !!
-
Uncategorized8 months ago
ಅರ್ಜುನನ ಸಮಾದಿಗೆ ಪೂಜೆ ಸಲ್ಲಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
-
State6 months ago
ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!!. ‘ಹಳೆ ಪಿಂಚಣಿ’ ಜಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ರಾಜ್ಯ ಸರ್ಕಾರ.