Connect with us

Sports

ಮೆಗಾ ಹರಾಜಿಗೂ ಮುನ್ನ RCB ಉಳಿಸಿಕೊಂಡ ಆಟಗಾರರು ಇವರೇ ನೋಡಿ!

Published

on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿಗೂ ಮುನ್ನ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಆರು ಆಟಗಾರರನ್ನು ರಿಟೈನ್ ಮಾಡಲು ಬಯಸಿದರೆ ಹರಾಜು ಮೊತ್ತದಿಂದ 79 ಕೋಟಿ ರೂ. ನೀಡಬೇಕಾಗುತ್ತದೆ.

ಐಪಿಎಲ್​ ಇತಿಹಾಸದಲ್ಲಿ ಮೆಗಾ ಹರಾಜು ನಡೆದಿರುವುದು ಕೇವಲ ನಾಲ್ಕು ಬಾರಿ ಮಾತ್ರ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಉಳಿಸಿಕೊಂಡಿದ್ದು ಕೇವಲ ಆರು ಆಟಗಾರರನ್ನು ಮಾತ್ರ. ಇವರಲ್ಲಿ ಆರ್​ಸಿಬಿ ತಂಡದ ಮೊದಲ ರಿಟೈನ್ ಆಟಗಾರ ವಿರಾಟ್ ಕೊಹ್ಲಿ ಸೆಂಟರ್ ಅಟ್ರಾಕ್ಷನ್.

2011 ರಲ್ಲಿ ನಡೆದ ಮೊದಲ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿಯನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಅಂದು ಆರ್​ಸಿಬಿ 8.20 ಕೋಟಿ ರೂ. ನೀಡಿ ಕಿಂಗ್ ಕೊಹ್ಲಿಯನ್ನು ತಂಡದಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು.

ಇದಾದ ಬಳಿಕ ಮೆಗಾ ಹರಾಜು ನಡೆದಿದ್ದು 2014 ರಲ್ಲಿ. ಈ ಹರಾಜಿಗೂ ಮುನ್ನ ಆರ್​ಸಿಬಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗೆ ರಿಟೈನ್ ಆದ ಆಟಗಾರರೆಂದರೆ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್. ಅಂದು ಆರ್​ಸಿಬಿ ಕೊಹ್ಲಿಗೆ 12.50 ಕೋಟಿ ರೂ. ನೀಡಿದರೆ, ಕ್ರಿಸ್ ಗೇಲ್​ಗೆ 7.50 ಕೋಟಿ ರೂ. ಹಾಗೂ ಎಬಿಡಿಗೆ 9.50 ಕೋಟಿ ರೂ. ಪಾವತಿಸಿದ್ದರು.

ಇನ್ನು ಮೂರನೇ ಮೆಗಾ ಹರಾಜು ನಡೆದದ್ದು 2018 ರಲ್ಲಿ. ಈ ಮೆಗಾ ಆಕ್ಷನ್​ಗೂ ಮುನ್ನ ಆರ್​ಸಿಬಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಝ್ ಖಾನ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದರು. ಅಂದು ಕೊಹ್ಲಿ ಗಾಗಿ 17 ಕೋಟಿ ರೂ. ಡಿವಿಲಿಯರ್ಸ್​ಗೆ 11 ಕೋಟಿ ರೂ. ನೀಡಲಾಗಿತ್ತು. ಹಾಗೆಯೇ ಸರ್ಫರಾಝ್ ಖಾನ್​ಗೆ 3 ಕೋಟಿ ರೂ. ನೀಡಲಾಗಿತ್ತು.

2022 ರಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರನ್ನು ರಿಟೈನ್ ಮಾಡಿಕೊಂಡಿದ್ದರು. ಈ ವೇಳೆ ಕೊಹ್ಲಿಗೆ ನೀಡಲಾದ ಮೊತ್ತ 15 ಕೋಟಿ ರೂ. ಇನ್ನು ಗ್ಲೆನ್ ಮ್ಯಾಕ್ಸ್​ವೆಲ್ 11 ಕೋಟಿ ರೂ. ಪಡೆದಿದ್ದರು. ಹಾಗೆಯೇ ಮೊಹಮ್ಮದ್ ಸಿರಾಜ್​ಗೆ 7 ಕೋಟಿ ರೂ. ನೀಡಲಾಗಿತ್ತು.

ಇದೀಗ ಐಪಿಎಲ್ ಸೀಸನ್ 18ರ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕೆಲ ಸ್ಟಾರ್ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಮೊಹಮ್ಮದ್ ಸಿರಾಜ್ ಹೆಸರು ಪಟ್ಟಿಯಲ್ಲಿ ಮೊದಲಿದೆ.

Continue Reading

Sports

ICC ವರ್ಷದ ಪುರುಷರ ತಂಡ ಪ್ರಕಟ: ಸ್ಥಾನ ಪಡೆಯದ ಟೀಂ ಇಂಡಿಯಾ ಆಟಗಾರರು

Published

on

ಬೆಂಗಳೂರು: ಐಸಿಸಿ (ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌) ಅಂತಿಮವಾಗಿ ತನ್ನ ವರ್ಷದ ಪುರುಷರ ಏಕದಿನ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದೆ. ಅಚ್ಚರಿಯಂಬಂತೆ ಈ ತಂಡದಲ್ಲಿ ಭಾರತ ತಂಡದ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇತ್ತ ಮಹಿಳೆಯರ ವರ್ಷದ ಏಕದಿನ ತಂಡ ಪ್ರಕಟಿಸಿದ್ದು, ಇದರಲ್ಲಿ ಇಬ್ಬರು ಭಾರತೀಯ ಮಹಿಳಾ ಆಟಗಾರ್ತಿಯರು ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು ವರ್ಷದ ಪುರುಷರ ಏಕದಿನ ತಂಡದಲ್ಲಿ ನಾಲ್ವರು ಶ್ರೀಲಂಕಾ ಆಟಗಾರರು ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಈ ತಂಡದಲ್ಲಿ ಅಚ್ಚರಿಯಂಬಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಹಾಗೂ ದಕ್ಷಿಣಾ ಆಫ್ರಿಕಾದ ಯಾವೊಬ್ಬ ಆಟಗಾರನು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಇತ್ತ ಮಹಿಳೆಯರ ವರ್ಷದ ಏಕದಿನ ತಂಡದಲ್ಲಿ ಭಾರತ ತಂಡದ ಸ್ಮೃತಿ ಮಂದನಾ ಹಾಗೂ ದೀಪ್ತಿ ಶರ್ಮಾ ಸ್ಥಾನ ಪಡೆದಿದ್ದಾರೆ.

ಐಸಿಸಿ ವರ್ಷದ ಪುರುಷರ ಏಕದಿನ ತಂಡ ಇಂತಿದೆ:

ಚರಿತ ಹಸಲಂಕ (ನಾಯಕ, ಶ್ರೀಲಂಕಾ), ಸೈಮ್‌ ಆಯುಬ್‌ (ಪಾಕ್‌), ರೆಹಮತ್ತುಲ್ಲಾ ಗುರ್ಬಾಜ್‌ (ಅಫ್ಘಾನ್‌), ಪಾತುಮ್‌ ನಿಸ್ಸಾಂಕ (ಶ್ರೀಲಂಕಾ), ಶೆರ್ಫಾನೆ ರುಥರ್‌ಫರ್ಡ್‌ (ವೆಸ್ಟ್‌ ಇಂಡೀಸ್‌), ಕುಶಾಲ್‌ ಮೆಂಡೀಸ್‌ (ಶ್ರೀಲಂಕಾ), ಅಜ್ಮತುಲ್ಲಾ ಓಮರ್ಜಾಯ್‌ (ಅಫ್ಘಾನ್‌), ವನಿಂದು ಹಸರಂಗ (ಶ್ರೀಲಂಕಾ), ಶಾಹೀನ್‌ ಶಾ ಅಫ್ರಿದಿ (ಪಾಕ್‌), ಹ್ಯಾರೀಸ್‌ ರೌಫ್‌ (ಪಾಕ್‌), ಘಜನ್‌ಫರ್‌ (ಅಫ್ಘಾನ್‌)

Continue Reading

Sports

Ranji Trophy: ಕಳಪೆ ಫಾರ್ಮ್‌ ಮುಂದುವರಿಸಿದ ಹಿಟ್‌ಮ್ಯಾನ್‌

Published

on

ಮುಂಬೈ: ಇಲ್ಲಿನ ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಜಮ್ಮು ಕಾಶ್ಮೀರ ನಡುವಣ ರಣಜಿ ಪಂದ್ಯದಲ್ಲಿ ಮುಂಬೈ ಪರವಾಗಿ ಬ್ಯಾಟ್‌ ಬೀಸಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಇಲ್ಲಿಯೂ ತಮ್ಮ ಕಳಪೆ ಫಾರ್ಮ್‌ ಮುಂದುವರೆಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ತಂಡ ಬ್ಯಾಟಿಂಗ್‌ ಆಯ್ದುಕೊಂಡಿತು. ಅದರಂತೆ ಇನ್ನಿಂಗ್ಸ್‌ ಆರಂಭಿಸಿದ ಜೈಸ್ವಾಲ್‌ ಹಾಗೂ ಹಿಟ್‌ ಮ್ಯಾನ್‌ ಮುಂಬೈಗೆ ವರವಾಗಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲ ಕಳಪೆ ಫಾರ್ಮ್‌ನಿಂದಾಗಿ ರಣಜಿ ಆಡುವುದಾಗಿ ಹೇಳಿದ್ದರು.

ಇನ್ನು ಈ ಪಂದ್ಯದಲ್ಲಿಯೂ ಫ್ಲಾಪ್‌ ಆಗಿರುವ ರೋಹಿತ್‌ ಶರ್ಮಾ 19 ಎಸೆತ ಎದುರಿಸಿ ಕೇವಲ 3 ರನ್‌ ಬಾರಿಸಿ ಔಟಾಗಿದ್ದಾರೆ. ಜಮ್ಮು ಬೌಲರ್‌ ಉಮರ್‌ ನಝೀರ್‌ ಅವರ ಬೌಲಿಂಗ್‌ನಲ್ಲಿ ಮಿಡ್‌ ಆಫ್‌ ಫೀಲ್ಡರ್‌ ಪರಾಸ್‌ ದೋಗ್ರಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

2015ರಲ್ಲಿ ರೋಹಿತ್‌ ಶರ್ಮಾ ಉತ್ತರ ಪ್ರದೇಶ ವಿರುದ್ಧ ಕೊನೆಯ ಬಾರಿ ರಣಜಿ ಆಡಿದ್ದರು. ಈಗ ದಶಕಗಳ ಬಳಿಕ ಹಿಟ್‌ಮ್ಯಾನ್‌ ಜಮ್ಮು ಕಾಶ್ಮೀರ ವಿರುದ್ಧ ಪಂದ್ಯವಾಡಿದರು. ಈ ಪಂದ್ಯದಲ್ಲಿಯೂ ರೋಹಿತ್‌ ಫ್ಲಾಪ್‌ ಆಗಿದ್ದಾರೆ.

Continue Reading

Sports

ರಣಜಿಗೆ ದಶಕಗಳ ಬಳಿಕ ಎಂಟ್ರಿಕೊಟ್ಟ ರೋಹಿತ್‌: ಹಿಟ್‌ ಮ್ಯಾನ್‌ ಬೆಂಬಲಕ್ಕೆ ನಿಂತ ಕ್ಯಾಪ್ಟನ್‌ ರಹಾನೆ

Published

on

ಮುಂಬೈ: ತಮ್ಮ ಕಳಪೆ ಫಾರ್ಮ್‌ನಿಂದ ನಿರಂತರ ಟೀಕೆಗೆ ಒಳಗಾಗಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ರಣಜಿ ಆಡುವುದಾಗಿ ಘೋಷಿಸಿದ್ದರು. ಈ ನಡುವೆ ರೋಹಿತ್‌ ಅವರು ಫಾರ್ಮ್‌ ಬಾರದೇ ತಂಡದಿಂದ ಅವರನ್ನು ಕೈಬಿಡಲಾಗುವುದು ಎಂದು ಹೇಳಲಾಗುತ್ತಿತ್ತು. ಇವೆಲ್ಲಾ ಟೀಕೆಗಳಿಗೂ ಉತ್ತರ ಎಂಬಂತೆ ರಣಜಿಯ ಮುಂಬೈ ತಂಡದ ನಾಯಕ ಅಜಿಂಕೆ ರಹಾನೆ ಅವರು ರೋಹಿತ್‌ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ.

ಸುಮಾರು ಒಂದು ದಶಕದ ಬಳಿಕ ರಣಜಿ ಆಡಲು ಸಜ್ಜಾಗಿರುವ ರೋಹಿತ್‌ ಶರ್ಮಾ ಮೇಲೆ ಎಲ್ಲರ ದೃಷ್ಠಿ ನೆಟ್ಟಿದ್ದು, ರಣಜಿಯಲ್ಲಾದರೂ ರೋಹಿತ್‌ ಮಿಂಚಲಿದ್ದಾರೆಯೇ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಹಾನೆ, ರೋಹಿತ್‌ ಅವರಿಗೆ ಯಾವ ರೀತಿ ಆಡಬೇಕು ಎಂಬುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಸದ್ಯದಲ್ಲೇ ಅವರ ದೊಡ್ಡ ಮೊತ್ತ ಪೇರಿಸಲಿದ್ದಾರೆ. ಯಾವಾಗಲೂ ರಿಲ್ಯಾಕ್ಸ್‌ ಮೂಡ್‌ನಲ್ಲಿ ರೋಹಿತ್‌ ಇರುತ್ತಾರೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿಯೂ ರೋಹಿತ್‌ ಹೀಗೆ ಇರುತ್ತಾರೆ. ಅವರ ಆಟದ ಬಗ್ಗೆ ನಮಗೆಲ್ಲರಿಗೂ ನಂಬಿಕೆಯಿದ್ದು, ಅವರು ಶೀಘ್ರದಲ್ಲಿಯೇ ಫಾರ್ಮ್‌ಗೆ ಮರಳಿದ್ದಾರೆ ಎಂದರು.

ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಏರಿಳಿತವನ್ನು ಕಾಣುತ್ತಾರೆ. ಆದರೆ ವಿಫಲರಾಗುವುದಿಲ್ಲ. ನೆಟ್ಸ್‌ನಲ್ಲಿ ರೋಹಿತ್‌ ಉತ್ತಮವಾಗಿ ಕಾಣುತ್ತಿದ್ದು, ಬೃಹತ್‌ ಮೊತ್ತ ದಾಖಲಿಸುವ ಭರವಸೆ ನಮಗಿದೆ.

Continue Reading

Trending

error: Content is protected !!