Mysore
ಫೆ.7ಕ್ಕೆ ಎಂ.ಕೆ.ಸೋಮಶೇಖರ್ ಜನ್ಮದಿನ ಪ್ರಯುಕ್ತ ಸಾಮಾಜಿಕ ಕಾರ್ಯ: ರವಿಶಂಕರ್
ಮೈಸೂರು: ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹುಟ್ಟುಹಬ್ಬದ ಅಂಗವಾಗಿ ಫೆ.೭ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಎಂ.ಕೆ. ಸೋಮಶೇಖರ್ ಅಭಿಮಾನಿ ಬಳಗದ ರವಿಶಂಕರ್ ತಿಳಿಸಿದರು.
ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸಂಜೆ 6.30ಕ್ಕೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಕೆ.ಆರ್. ಕ್ಷೇತ್ರದ ಹಲವೆಡೆ ಅಭಿಮಾನಿಗಳಿಂದ ಬಡಮಕ್ಕಳಿಗೆ ಪುಸ್ತಕ, ಬಡರೋಗಿಗಳಿಗೆ ಹಣಕಾಸು ನೆರವು ನೀಡಲಿದ್ದಾರೆ. ಜತೆಗೆ ಕೆಲವು ಅನಾಥಾಶ್ರಮಗಳಿಗೆ ಊಟ, ಉಪಹಾರ ವ್ಯವಸ್ಥೆ ಇರಲಿದೆ. ಸಂಜೆ ಶತಮಾನೋತ್ಸವ ಭವನದಲ್ಲಿನ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮತದಾನ ಪ್ರಜಾಪ್ರಭುತ್ವಕ್ಕೆ ಎಷ್ಟು ಪೂರಕ ಎಂಬ ವಿಷಯ ಕುರಿತು ಮಾತನಾಡುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ, ಸುನೀಲ್, ಮುಖಂಡರಾದ ಜಿ.ಸೋಮಶೇಖರ್, ವಿನಯ್ ಕುಮಾರ್, ವಿಜಯಕುಮಾರ್ ಹಾಜರಿದ್ದರು.
Mysore
ಮೈಸೂರಲ್ಲಿ ಮರಗಳ ಗಣತಿ: ತ್ರಿಷಿಕಾ ಒಡೆಯರ್ ನೇತೃತ್ವ
ಮೈಸೂರು: ರಾಜವಂಶಸ್ಥೆ ತ್ರಿಷಿಕಾ ಕುಮಾರ್ ಒಡೆಯರ್ ಅವರ ನೇತೃತ್ವದಲ್ಲಿ ಮೈಸೂರು ನಗರದಲ್ಲಿ ಮರಗಳ ಗಣತಿಗೆ ಗುರುವಾರ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ನಗರಿಯ ಹಸಿರು ವಲಯ ಮತ್ತು ಮರಗಳ ಸಂರಕ್ಷಣೆಗಾಗಿ ತ್ರಿಷಿಕಾ ಕುಮಾರ್ ಒಡೆಯರ್ ಅವರ ನೇತೃತ್ವದ ಭೇರುಂಡ ಫೌಂಡೇಷನ್ ಹಾಗೂ ಮಂಗಳೂರಿನ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ನೇತೃತ್ವದಲ್ಲಿ ಮರಗಳ ಗಣತಿ(ಟ್ರೀ ಆಡಿಟ್) ಕೈಗೊಳ್ಳಲಾಗಿದೆ.

ಈಗಾಗಲೇ ಮಂಗಳೂರು ನಗರದಲ್ಲಿ ಮರಗಳ ಗಣತಿಯನ್ನು ಯಶಸ್ವಿಯಾಗಿ ಪೂರೈಸಿರುವ ಸಂಘಟನೆ, ಅದೇ ಮಾದರಿಯಲ್ಲಿ ಮೈಸೂರಿನಲ್ಲೂ ಗಣತಿ ಕೈಗೊಂಡಿದೆ.
ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ವಾರ್ಡ್ಗಳಲ್ಲಿ ಮರಗಳ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಈ ಗಣತಿ ಕಾರ್ಯವನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಈ ಯೋಜನೆಯ ಮೂಲಕ ನಗರದ ಪ್ರತಿಯೊಂದು ಮರದ ಮಾಹಿತಿ ಸಂಗ್ರಹಿಸಿ, ವೈಜ್ಞಾನಿಕವಾಗಿ ಹಸಿರು ವಲಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತ್ರಿಷಿಕಾ ಕುಮಾರಿ ಒಡೆಯರ್ ತಿಳಿಸಿದ್ದಾರೆ.
Mysore
500 ಮಕ್ಕಳಿಗೆ ನೋಟ್ ಬುಕ್ ವಿತರಣೆ
ಮೈಸೂರು: ಶ್ರೀ ಶೃಂಗೇರಿ ಶಾರದಾ ಪೀಠ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರಿಂದ ಶ್ರೀ ಬಾಲ ಮಂಜುನಾಥಸ್ವಾಮಿ ಅವರಿಗೆ ಶ್ರೀ ವಿದ್ಯಾನಂದ ಸ್ವಾಮೀಜಿ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ನಡೆಸಿತು.

ಹೂಟಗಳ್ಳಿಯಲ್ಲಿರುವ ಕನ್ನಡಾಂಬೆ ರಕ್ಷಣಾ ವೇದಿಕೆ ಕಚೇರಿ ಎದುರು ಅಧ್ಯಕ್ಷ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ವಿವಿಧ ಸರ್ಕಾರಿ ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡಲಾಯಿತು. ಎರಡು ವೃದ್ಧಾಶ್ರಮಗಳಿಗೆ ಆಹಾರ, ದಿನಸಿ ಕಿಟ್‌ಗಳ ವಿತರಣೆ, ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರಗಳು ಮತ್ತು ಅನ್ನಸಂತರ್ಪಣೆ ನಡೆಯಿತು.
ಸಾಹಿತಿ ಜಯಪ್ಪ ಹೊನ್ನಾಳಿ, ಸಮಾಜ ಸೇವಕ ರಘುರಾಮ್ ವಾಜಿಪೇಯಿ, ಪೊಲೀಸ್ ಸೊಸೈಟಿ ಅಧ್ಯಕ್ಷ ಎಸ್.ರವಿ, ಹೂಟಗಳ್ಳಿ ಚಿಕ್ಕಣ್ಣ, ಲಲಿತಾ ನಾಗೇಶ್, ರವಿಗೌಡ, ಹರೀಶ್ ಯಾದವ್, ಕರೀಗೌಡ, ಮಹಿಳಾ ಘಟಕದ ಅಧ್ಯಕ್ಷೆ ತಾರಾ, ಸಿಂಧುವಳ್ಳಿ ಶಿವಕುಮಾರ್, ಕಿಕ್ಕೇರಿ ಕಿರಣ, ಮಂಜು ತೇಜೂರ್, ಹುಣಸೂರು ಪರಮೇಶ್, ಲೂಯೀಸ್, ಹೊನ್ನೇಗೌಡ, ರಶ್ಮಿ ಸಿಂಗ್, ಸೌಭಾಗ್ಯ, ವಿಷ್ಣು, ಶಿವಲಿಂಗಯ್ಯ, ಪುಟ್ಟಸ್ವಾಮಿ, ಜಯಲಕ್ಷ್ಮೀ, ಹರೀಶ್, ವತ್ಸಲ, ಮುಖ್ಯ ಶಿಕ್ಷಕರಾದ ಶಿವಪ್ಪ, ಸತೀಶ್, ಮಧು ಮುಂತಾದವರು ಇದ್ದರು.
Mysore
ಶಿಕ್ಷಕನಿಗೆ ಸಾಟಿಯಲ್ಲ ಎಐ: ಮೈಸೂರು ವಿವಿ ಕುಲಪತಿ ಪ್ರೊ.ಲೋಕನಾಥ್
ಮೈಸೂರು: ಕೃತಕ ಬುದ್ದಿಮತ್ತೆ ಶಿಕ್ಷಣ ಕ್ಷೇತ್ರದ ಭೋದನಾ ಶೈಲಿಯನ್ನೇ ಬದಲಿಸುತ್ತಿದೆ. ಎಐ ಮಾಹಿತಿ ಕೊಡಬಹುದು, ಆದರೆ ಸಂವೇದನಾಶೀಲ ಶಿಕ್ಷಕನ ಸ್ಥಾನ ತುಂಬಲಾರದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.
ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕಾರಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದ 2023-25ನೇ ಸಾಲಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಇಂದಿನ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಡಿಜಿಟಲ್ ಶಿಕ್ಷಣ ಆನ್‌ಲೈನ್ ತರಗತಿಗಳು ಕೃತಕ ಬುದ್ಧಿಮತ್ತೆ ಶಿಕ್ಷಣ ಕ್ಷೇತವನ್ನು ಬದಲಾಯಿಸುತ್ತಿವೆ. ಯಂತ್ರಗಳು ಮಾಹಿತಿ ನೀಡಬಹುದು. ಆದರೆ ಮೌಲ್ಯಗಳನ್ನು ಕಲಿಸುವ ಶಕ್ತಿ ಶಿಕ್ಷಕರಿಗಷ್ಟೇ ಇದೆ ಎಂದು ಅಭಿಪ್ರಾಯಪಟ್ಟರು.
ಬಿ.ಇಡಿ. ಕೇವಲ ಪದವಿ ಅಲ್ಲ. ಪರಿವರ್ತನೆಯ ಪ್ರಕ್ರಿಯೆ. ಒಬ್ಬ ಶಿಕ್ಷಕನು ಸಮಾಜದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತಾನೆ. ಶಿಕ್ಷಕ ಒಂದು ಜೀವಂತ ಮಾದರಿ. ವಿದ್ಯಾರ್ಥಿಗಳು ಪುಸ್ತಕಕ್ಕಿಂತ ಹೆಚ್ಚು ಶಿಕ್ಷಕರ ಜೀವನದಿಂದ ಕಲಿಯುತ್ತಾರೆ. ನಿಮ್ಮ ಮಾತು, ನಡವಳಿಕೆ, ನಿಮ್ಮ ಮೌಲ್ಯಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಬಿಡುತ್ತವೆ ಎಂದು ಹೇಳಿದರು.

ಪದವಿ ಪಡೆದ ವಿದ್ಯಾರ್ಥಿಗಳ ಜವಾಬ್ದಾರಿ ಇಲ್ಲಿಂದ ಆರಂಭವಾಗುತ್ತದೆ. ಸಮಾಜಕ್ಕೆ ಶಿಕ್ಷಕರಾಗಿ ಅನೇಕ ಸವಾಲುಗಳಿರುತ್ತವೆ. ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳು, ವಿಭಿನ್ನ ಕಲಿಕಾ ಸಾಮರ್ಥ್ಯಗಳು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಇವೆಲ್ಲದರ ಮಧ್ಯೆ ನೀವು ಬೆಳಕಿನ ದೀಪವಾಗಬೇಕು ಹಾರೈಸಿದರು.
ಇತಿಹಾಸವನ್ನು ನೋಡಿದರೆ ಎಲ್ಲಾ ಮಹಾನ್ ವ್ಯಕ್ತಿಗಳ ಹಿಂದೆ ಒಬ್ಬ ಉತ್ತಮ ಶಿಕ್ಷಕ ಇದ್ದಾನೆ. ಶಿಕ್ಷಕರು ತಮ್ಮ ಉದ್ಯೋಗವಾಗಿ ನೋಡದೇ ಸೇವೆ ಮತ್ತು ಧ್ಯೇಯವಾಗಿ ಸ್ವೀಕರಿಸಬೇಕು. ನೀವು ಒಬ್ಬ ವಿದ್ಯಾರ್ಥಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ, ಅದು ಒಂದು ಕುಟುಂಬದ ಭವಿಷ್ಯವನ್ನು ಬದಲಾಯಿಸಬಹುದು. ಒಂದು ತರಗತಿಯನ್ನು ಪ್ರೇರೇಪಿಸದರೆ ಅದು ಒಂದು ಸಮಾಜವನ್ನು ರೂಪಿಸಬಹುದು. ಆ ಶಕ್ತಿ ಶಿಕ್ಷಕರಿಗಿದೆ. ಶಿಕ್ಷಕರ ಗುರಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಬಿ.ಇಡಿ. ಪದವಿ ಪಡೆದ ಎಲ್ಲರಿಗೂ ಶಿಕ್ಷಕ ವೃತ್ತಿ ದೊರೆತರೆ ಸಂತೋಷ. ಉದ್ಯೋಗ ಸಿಗದಿದ್ದರೆ ನನ್ನಂತೆ ಶಿಕ್ಷಕರಿಗೆ ಉದ್ಯೋಗ ಕೊಡುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಎಂದು ಶುಭ ಕೋರಿದರು.
ಮುಖ್ಯ ಆಡಳಿತಾಧಿಕಾರಿ ಗೀತಾಂಜಲಿ ಪಿ. ಮಾತನಾಡಿ, ಅನೇಕ ಸವಾಲುಗಳ ನಡುವೆ ಬಿ.ಇಡಿ. ಪದವಿ ಪಡೆದುಕೊಂಡಿದ್ದು, ಈಗ ಎದುರಾಗುವ ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ನಮ್ಮ ಸಂಸ್ಥೆಯ ಪ್ರತಿ ವರ್ಷ ಉತ್ತಮ ಫಲಿತಾಂಶ ಪಡೆಯುತ್ತಿರುವುದು ಹೆಮ್ಮೆ ಸಂಗತಿ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ಉಷಾ ಆರ್.ಜಿ. ಮಾತನಾಡಿ, ಶಿಕ್ಷಕ ಸಮಾಜದ ಜೀವನ ಜ್ಯೋತಿ. ವಿಜ್ಞಾನಿ, ವೈದ್ಯ, ಪೊಲೀಸರು, ವಕೀಲರನ್ನು ರೂಪಿಸುವ ಏಕೈಕ ವೃತ್ತಿಯಾಗಿದೆ. ಸಮಾಜ ತಿದ್ದುವ ಶ್ರೇಷ್ಠ ವೃತ್ತಿ ಶಿಕ್ಷಕರದು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ರಾಜೀವ್ ಶರ್ಮ, ಸಹ ಪ್ರಾಧ್ಯಾಪಕ ಸಂಜಯ್ ಬಗಡೇಕರ್, ಕೆ.ಆರ್.ಪವಿತ್ರಾ ಹಾಜರಿದ್ದರು. ಸಹ ಪ್ರಧ್ಯಾಪಕಿ ಡಾ.ವಿನುತಾ ಎಂ. ಸ್ವಾಗತಿಸಿದು. ರಾಘವಿ ಎಚ್.ವಿ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸಂಗೀತ ಪಿ. ನಿರೂಪಿಸಿದರು. ಧನಲಕ್ಷ್ಮೀ ಎಂ.ಕೆ. ವಂದಿಸಿದರು.
-
Special9 hours agoBSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ;ತಿಂಗಳಿಗೆ ₹90,000 ವರೆಗೆ ವೇತನ
-
Hassan23 hours agoಪ್ರತ್ಯೇಕ ಪ್ರಕರಣ: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
-
Kodagu4 hours agoಫೆ. 7ಕ್ಕೆ ಕೆಎಸ್ಆರ್ಟಿಸಿ ನೂತನ ಬಸ್ಸು ನಿಲ್ದಾಣ ಉದ್ಘಾಟನೆ
-
National7 hours agoಕೆ.ಆರ್. ನಗರ ಮಹಿಳೆಯ ಅಪಹರಣ ಕೇಸ್ – ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್
-
National3 hours agoಮಂಡ್ಯ, ಮದ್ದೂರಿನಲ್ಲಿ ಮುರುಡೇಶ್ವರ ರೈಲು ನಿಲುಗಡೆಗೆ ಎಚ್ಡಿಕೆ ಮನವಿ: ಅಶ್ವಿನಿ ವೈಷ್ಣವ್ರಿಂದ ಸಕರಾತ್ಮಕ ಪ್ರತಿಕ್ರಿಯೆ
-
Mysore5 hours agoಪಾರಂಪರಿಕ ತಾಣದಲ್ಲಿ ಧೂಮಪಾನ: ಬಿಗ್ಬಾಸ್ ಸ್ಪರ್ಧಿ ರಜತ್ ವಿರುದ್ಧ ದೂರು
-
Chikmagalur9 hours agoವಿವಾಹಿತ ಹಿಂದೂ ಮಹಿಳೆಯ ಜೊತೆ : ಸಿಕ್ಕಿ ಬಿದ್ದ ಕಾಂಗ್ರೆಸ್ ಮುಖಂಡ
-
Mysore9 hours agoಫುಟ್ಪಾತ್ ವ್ಯಾಪಾರಿಗಳಿಗೆ ನಂಜನಗೂಡು ನಗರಸಭೆ ಆಯುಕ್ತ ಎಂ. ಬಸವರಾಜು ಎಚ್ಚರಿಕೆ
