Mysore
ಹಣ್ಣುಗಳ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಅರಿವು ಮೂಡಿಸಿದ ರವಿ ಮಹದೇವ್
ಮೈಸೂರು: ನಗರದ ಎಂ.ಜಿ. ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿ ಬಂಧುಗಳಿಗೆ ಎಸ್.ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಪೌಷ್ಟಿಕಾಂಶದ ಬಗ್ಗೆ ಅರಿವು, ಸೇವಾ ಕಾರ್ಯಕ್ರಮದಲ್ಲಿ ಎನ್.ಆರ್. ಐ. ರವಿ ಮಹದೇವ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಡ್ರೈ ಫ್ರೂಟ್ಸ್, ಹಣ್ಣು ಹಂಪಲು ವಿತರಿಸಿ ಹಣ್ಣಿನ ಮಹತ್ವ, ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿ ಮಹದೇವ್, ಹಣ್ಣುಗಳು ನಮ್ಮ ದೈನಂದಿನ ಆಹಾರದ ಅತ್ಯವಶ್ಯಕ ಭಾಗವಾಗಿರಬೇಕು. ಇವು ವಿಟಮಿನ್‌ಗಳು, ಖನಿಜಗಳು ಮತ್ತು ಫೈಬರ್‌ಗಳ ನೈಸರ್ಗಿಕ ಮೂಲಗಳಾಗಿವೆ. ಮಕ್ಕಳ ಆರೋಗ್ಯಕ್ಕೆ ಸಮತೋಲಿತ ಪೋಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು.
ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆಯ ಸಮಸ್ಯೆಗಳ ಹಲವು ಅಂಶಗಳನ್ನು ತಿಳಿಸಿದರು ಪ್ರಮುಖವಾಗಿ ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕಲಿಕೆಯ ಸಾಮರ್ಥ್ಯ ಮತ್ತು ಏಕಾಗ್ರತೆಯಲ್ಲಿ ಕುಸಿತ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ.

ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಅಪೌಷ್ಟಿಕತೆಯ ಸಮಸ್ಯೆ ತಡೆಗಟ್ಟಬಹುದು. ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಜಾಗೃತರಾಗಿ, ಮಕ್ಕಳಿಗೆ ಸರಿಯಾದ ಪೋಷಣೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗವು ನಿರಂತರವಾಗಿ ಹಣ್ಣುಗಳ ವಿತರಣೆ, ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಈ ನಿಸ್ವಾರ್ಥ ಸೇವೆ ಅಪೂರ್ವ ಮತ್ತು ಅನುಕರಣೀಯವಾಗಿದೆ. ಸಮಾಜದಲ್ಲಿ ಪೌಷ್ಟಿಕಾಂಶದ ಜಾಗೃತಿ ಮೂಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಬೆಳೆಸುವ ನಿಜವಾದ ಮಾರ್ಗವಾಗಿದೆ.
ಇನ್ನಷ್ಟು ಜನರು ಈ ರೀತಿಯ ಉಪಕ್ರಮಗಳಲ್ಲಿ ಮುಂದೆ ಬರಬೇಕು ಮತ್ತು ಸಮಾಜದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ಪಾಲುದಾರರಾಗಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ತಂದೆ ತಾಯಿಗೆ ಕೀರ್ತಿ ತರಬೇಕು. ಹಾಗೆಯೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವರಿಸಿ ನೈಸರ್ಗಿಕವಾಗಿ ಸಿಗುವ ಹಣ್ಣುಹಂಪಲನ್ನು ಶುದ್ಧ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹಾದೇವ್, ರಾಜೇಶ್ ಕುಮಾರ್, ಮಹೇಶ್, ನಿಲಯ ಪಾಲಕಿ ಗೀತಾ, ದತ್ತ ಇನ್ನಿತರರು ಹಾಜರಿದ್ದರು.
Mysore
ವಿಜಯನಗರದಲ್ಲಿ ನವನೀತ ನೇತ್ರಾಲಯ ಶುರು
ಮೈಸೂರು: ಡಾ.ಶಶಿಧರ್ ಮಾಲೀಕತ್ವದ ನವನೀತ ನೇತ್ರಾಲಯ ಕಾರ್ಯಾರಂಭ ಮಾಡಿದ್ದು, ಮೈಸೂರಿನ ವಿಜಯನಗರ ಎರಡನೇ ಹಂತದ ಮಹದೇಶ್ವರ ಬಡಾವಣೆಯ ಸೂರ್ಯಬೇಕರಿ ರಸ್ತೆಯಲ್ಲಿರುವ ನವನೀತ ನೇತ್ರಾಲಯಕ್ಕೆ ಹುಣಸೂರು ಶಾಸಕ ಹರೀಶ್ ಗೌಡ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿ.ಡಿ. ಹರೀಶ್ ಗೌಡ, ಶಶಿಧರ್ ಈ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಆಸ್ಪತ್ರೆ ತೆರೆದಿದ್ದಾರೆ.

ಅವರ ಆಸ್ಪತ್ರೆಯು ಅತ್ಯಾಕರ್ಷಕವಾಗಿದ್ದು ಅತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಿದ್ದಾರೆ. ಬಡವರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಸಹಾಯ ಮಾಡುವ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಕನಸು ಹೊಂದಿದ್ದು ಅವರಿಗೆ ಮತ್ತು ಆಸ್ಪತ್ರೆಗೆ ಶುಭವಾಗಲಿ ಎಂದು ಶುಭಕೋರಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಶಿಧರ್ ಎಚ್.ಎನ್., ಸಿಬ್ಬಂದಿ ಅರುಣ್ ಕುಮಾರ್ ಮುಂತಾದವರಿದ್ದರು.
Mysore
ಮಹಾರಾಜ ಕಾಲೇಜಿನಲ್ಲಿ ನೆಬೆ 40 ಸಮ್ಮಿಲನ
ಮೈಸೂರು: ನಗರದ ಮಹಾರಾಜ ಕಾಲೇಜಿನಲ್ಲಿ ೧೯೮೬ ರಲ್ಲಿ ಆಗ ಅಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ನೆಳಲು ಬೆಳಕು ತಂಡ ರಚಿಸಿಕೊಂಡಿದ್ದು, ಅವರು ಈಗ ರಾಜ್ಯ ಮಾತ್ರವಲ್ಲದೆ, ದೇಶ ವಿದೇಶಗಳಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಜೂನಿಯರ್ ಬಿಎ ಹಾಲ್‌ನಲ್ಲಿ ನೆಬೆ ೪೦ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಸುಮಾರು ೫೦ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಅಂದಿನ ದಿನಗಳಲ್ಲಿ ತಾವು ಕಂಡ ಮಹಾರಾಜ ಕಾಲೇಜು, ಸ್ವಪ್ರೇರಿತರಾಗಿ ನೇಬೆ ತಂಡ ರಚಿಸಿಕೊಂಡು ನಾಟಕ, ಸಾಹಿತ್ಯ, ಕಲೆ, ಜಾನಪದ ಮೊದಲಾದ ಕ್ಷೇತ್ರಗಳಲ್ಲಿ ವಿವಿಧ ಚಟುವಟಕೆಗಳಲ್ಲಿ ತೊಡಗಿಕೊಂಡಿದ್ದುದು, ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಈ ತಂಡ ಹೇಗೆ ನೆರವಾಯಿತು, ಶತಮಾನೋತ್ಸವ ಭವನದ ಎದುರಿನ ಪಾರ್ಕ್ನಲ್ಲಿ ಇದಕ್ಕಾಗಿಯೇ ಕುಳಿತು ಚರ್ಚಿಸುತ್ತಿದ್ದ ಸುಮಧುರ ನೆನಪುಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮವನ್ನು ಕೇವಲ ತಮ್ಮ ಸಡಗರ ಸಂಭ್ರಮಕ್ಕೆ ಮಾತ್ರ ಮೀಸಲಿಡದೇ ಮಹಾರಾಜ ಕಾಲೇಜಿನಲ್ಲಿ ಸಾಂಸ್ಕೃತಿಕ, ಸಾಹಿತ್ಯಕ, ರಂಗಭೂಮಿ ಮೊದಲಾದ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ, ತರಬೇತಿ ನೀಡುವ ಮೂಲಕ ಕಾಲೇಜು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಉತ್ತುಂಗಕ್ಕೆ ಏರುವಂತೆ ನೆರವಾಗುವ ಉದ್ದೇಶದಿಂದ ಕಾಲೇಜಿನ ಆಡಳಿತಾಧಿಕಾರಿ ಡಾ.ಎಚ್.ಟಿ. ರಾಮಚಂದ್ರು, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ. ವಿಜಯಲಕ್ಷ್ಮಿ ಹಾಗೂ ಈ ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಹಲವಾರು ವಿದ್ಯಾರ್ಥಿಗಳನ್ನೂ ಆಹ್ವಾನಿಸಿ, ಸಲಹೆ ಪಡೆಯಲಾಯಿತು.
ತಂಡದ ಹಿರಿಯ ಸದಸ್ಯ ಡಾ.ಎನ್.ವಿ. ವಾಸುದೇವ ಶರ್ಮ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಜತೆಗೂಡಿ ಸಾಂಸ್ಕೃತಿಕ ಕಲೆಗಳ ಕುರಿತು ವಿವಿಧ ಕಾರ್ಯಕ್ರಮ ಆಯೋಜನೆ, ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಿರ್ದಿಷ್ಟ ವಿಷಯ, ವಿಚಾರಗಳ ಕುರಿತು ಕಾರ್ಯಾಗಾರ, ಸ್ಪರ್ಧೆಗಳ ಆಯೋಜನೆಗೆ ವಿದ್ಯಾರ್ಥಿಗಳು ಆಸಕ್ತಿ ತೋರಿಸಿರುವುದು ಸಂತಸ ತಂದಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದೆಂದರು.
ಮತ್ತೋರ್ವ ಹಿರಿಯ ಸದಸ್ಯ, ಹಿರಿಯ ರಂಗಕರ್ಮಿ ಶಶಿಧರ ಭಾರೀಘಾಟ್ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹ ತೋರಿದರೆ ಮಾರ್ಗದರ್ಶನಕ್ಕೆ ನಾವು ಸಿದ್ಧ, ನೆಬೆ ತಂಡದ ಅನೇಕರು ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಹಲವರು ಮೈಸೂರಿನಲ್ಲಿ, ಇನ್ನಿತರೆಡೆ ಇದ್ದಾರೆ. ಇವರು ವಿದ್ಯಾರ್ಥಿಗಳಿಗೆ ಸೂಕ್ತವಾದ ದಿನ ಆಗಮಿಸಿ ತರಬೇತಿಯಂತಹ ನೆರವು ನೀಡಲಿದ್ದಾರೆಂದರು.
ಈ ವೇಳೆ ಹಿರಿಯ ರಂಗಕಮಿ ಎಚ್.ಎಸ್. ಉಮೇಶ್ ಮಾತನಾಡಿ, ನಮ್ಮನ್ನು ಹೊಸ ಹುರುಪಿಗೆ ಒಡ್ಡಿಕೊಳ್ಳಲು ರಂಗಭೂಮಿ ಚಟುವಟಿಕೆ ಅತ್ಯಗತ್ಯ, ಈ ರೀತಿಯ ಚಟುವಟಿಕೆಯಲ್ಲಿ ಒಂದೊಮ್ಮೆ ತೊಡಗಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಅಂದಿನ ತಲೆಮಾರಿನೊಡನೆ ಅನುಭವ ಹಂಚಿಕೊಂಡು ನೆರವಾಗಬಹುದಾಗಿದೆ. ನಂತರವೂ ಸಿಹಿ ಅನುಭವ ಮೆಲುಕು ಹಾಕುವುದು ಜೀವನೋತ್ಸಾಹ ಹೆಚ್ಚಿಸುತ್ತದೆ ಎಂದರು.
ವಿಶ್ರಾಂತ ಪ್ರೊ.ಎ.ಎಂ. ಶಿವಸ್ವಾಮಿ, ಎಂ.ಟಿ. ಮಹಾದೇವ್, ಆನಂದರಾಜೇ ಅರಸ್, ಡಿ.ಜಿ. ಸುಮತಿ, ಬಿಂದು ಪಟೇಲ್, ಅಶ್ವತ ನಾರಾಯಣ, ಡಾ. ಸುಜಾತಾ ಭಾಸ್ಕರ್, ಹನ್ಸಾ ಜೈನ್, ಬಿ. ಮಹೇಶ್ ಹರವೆ ಸೇರಿದಂತೆ ಅನೇಕರು ಹಾಜರಿದ್ದರು.
Mysore
ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ
ಮೈಸೂರು: ಮೈಸೂರಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಗೆ ಕೇಂದ್ರ ಬಜೆಟ್ ಬಗ್ಗೆ ಸಂಕುಚಿತ ಭಾವನೆ ತೋರಿದರು.
ಕೇಂದ್ರದ ದೂರದೃಷ್ಟಿಯ ಬಜೆಟ್ ಸಿಎಂ ಗೆ ಅರ್ಥ ಆಗಿಲ್ಲ, ಕೇಂದ್ರದ ಬಜೆಟ್ ಬಗ್ಗೆ ಸಿಎಂ ಬಹಳ ಲಘುವಾಗಿ ಮಾತಾಡಿದ್ದಾರೆ.
ಖಾಲಿ ಚೆಂಬಿನ ಕ್ರೇಡಿಟ್ ರಾಜ್ಯ ಸರ್ಕಾರಕ್ಕೆ ಹೋಗಬೇಕು. ರಾಜ್ಯ ಸರ್ಕಾರ ಖಾಲಿ ಚೆಂಬನ್ನು ಎರಡು ವರ್ಷದಿಂದ ಜನರಿಗೆ ಕೊಡುತ್ತಿದೆ.
ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡಿದರು.

ಕುಮಾರಸ್ವಾಮಿ ಮಂಡ್ಯಗೆ ಏನ್ ತಂದರು? ರಾಜ್ಯಕ್ಕೆ ಏನು ತಂದರು ? ಅಂತ ಪ್ರತಿ ನಿತ್ಯ ಮಂಡ್ಯ ಶಾಸಕರು ಸಣ್ಣತನದಲ್ಲಿ ಪ್ರಶ್ನೆ ಮಾಡ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕರ ಪ್ರಶ್ನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ಉತ್ತರವಿದೆ. ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆಯ ಘಟಕ ತೆರೆಯಲು 100 ಏಕರೆ ಜಾಗವನ್ನು ಮಂಡ್ಯದಲ್ಲೇ ಕೊಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
ಆಟೋಮೊಬೈಲ್ ಇಂಡಸ್ಟ್ರಿ ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಭೂಮಿ ಕೊಡಲು ಸಿಎಂ ಗೆ ನಾನೇ ಪತ್ರ ಬರೆದಿದ್ದೇನೆ.
ನಾನು ನಾಟಕವಾಡಲು ಪತ್ರ ಬರೆದಿಲ್ಲ, ನಾಟಕವಾಡಲು ಪ್ರಧಾನಿಗಳು ನಂಗೆ ಈ ಸ್ಥಾನ ಕೊಟ್ಟಿಲ್ಲ, ರಾಜ್ಯದ ಕೈಗಾರಿಕಾ ಅಭಿವೃದ್ಧಿ ಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ, ಖಾಲಿ ಚೆಂಬು ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಕೊಟ್ಟ ದುಡ್ಡನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿಲ್ಲ, 16 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು 50 ಸಾವಿರ ಕೋಟಿ ರೂ. ಈಗ ಅದನ್ನು 63 ಸಾವಿರ ಕೋಟಿ ರೂ ಗೆ ಏರಿಸಲಾಗಿದೆ.
ವಿಶ್ವೇಶ್ವರಯ್ಯ ಸ್ಟಿಲ್ ಫ್ಯಾಕ್ಟರಿ ಪುನಶ್ಚೇತನಕ್ಕೆ 4 ರಿಂದ 5 ಸಾವಿರ ಕೋಟಿ ರೂ. ಕೊಡುತ್ತಿದ್ದೇವೆ. ಎಚ್.ಎಂ.ಟಿ. ಕಂಪನಿ ಪುನರ್ ಆರಂಭಕ್ಕೆ ನಾನು ಬದ್ಧವಾಗಿದ್ದೇನೆ. ಅರಣ್ಯ ಇಲಾಖೆಯವರು ಎಚ್.ಎಂ.ಟಿ. ಕಂಪನಿ ಜಾಗ ನಮ್ಮದು ಎಂದು ತಕರಾರು ತೆಗೆದು ಕೊಂಡು ಕೂತಿದ್ದಾರೆ. ನಾನು ಏನೂ ಮಾಡಲಿ, ರಾಜ್ಯಕ್ಕೆ ಏನೂ ತರಬೇಕು ಎಂಬುದನ್ನು ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿ ಕೊಳ್ಳುವ ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿ ಕೊಡಿ ಎಂದು ಕೇಳಿದ್ದಿರಾ?
ಮೆಟ್ರೋ ಬೆಲೆ ಏರಿಕೆಗೆ ಕೇಂದ್ರ ಹೊಣೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ.

ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಒಳ್ಳೆ ಸಂಬಂಧ ಇಟ್ಟು ಕೊಳ್ಳಲಿ, ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಧಾನ ಮಂತ್ರಿಗಳನ್ನು ಬೀದಿಗೆ ಬಾಯಿಗೆ ಬಂದಂತೆ ಬೈಯ್ಯೋದು, ಅಮೇಲೆ ಪತ್ರ ಕಳಿಸೋದು. ಈ ವರ್ತನೆಯನ್ನು ರಾಜ್ಯ ಸರ್ಕಾರ ಬದಲಿಸಿ ಕೊಳ್ಳಬೇಕು. ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
-
Chamarajanagar2 hours agoಚಿರತೆ ದಾಳಿ: ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ
-
Hassan20 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Chamarajanagar22 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Mandya19 hours agoಕನ್ನಡ ಭವನ ನಿರ್ಮಾಣಕ್ಕೆ ನೀಲ ನಕಾಶೆ ತಯಾರಿ: ಜಿಲ್ಲಾಧಿಕಾರಿ ಡಾ.ಕುಮಾರ
-
Kodagu19 hours agoಫೆ.9ರಿಂದ 13ರವರೆಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಮಡಿಕೇರಿಯಲ್ಲಿ ‘ಬಳೆಗಳ ಉತ್ಸವ’
-
Mandya15 hours agoಫೆ.10 ರಂದು ಹಿಂದು ಸಮಾಜ ಜಾಗೃತಿಗಾಗಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ : ಚಂದನ್
-
Kodagu15 hours agoದೇಶೀಯ ಕ್ರೀಡೋತ್ಸವ ಮತ್ತು ಜಾನಪದ ನಮ್ಮೆಗೆ ಅನುದಾನ ಕೋರಿ ಮನವಿ
-
Mysore15 hours agoಮಹಾರಾಜ ಕಾಲೇಜಿನಲ್ಲಿ ನೆಬೆ 40 ಸಮ್ಮಿಲನ
