Connect with us

Mysore

ನವರಾತ್ರಿ ಸಂಭ್ರಮದ ಮತ್ತೊಂದು ಭಾಗವಾದ ಚಾಮುಂಡಿ ತಾಯಿಯ ರಥೋತ್ಸವ ವೈಭವ ಪೂರಿತವಾಗಿ ಜರುಗಿತು

Published

on

ಮೈಸೂರು: ನವರಾತ್ರಿ ಸಂಭ್ರಮದ ಮತ್ತೊಂದು ಭಾಗವಾದ ಚಾಮುಂಡಿ ತಾಯಿಯ ರಥೋತ್ಸವ ವೈಭವ ಪೂರಿತವಾಗಿ ಜರುಗಿತು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ನಾಡಹಬ್ಬ ದಸರಾ ಮಹೋತ್ಸವ ಮುಗಿದ ಎರಡು ದಿನದ ಬಳಿಕ ನಡೆದ ರಥೋತ್ಸವ ಮಹೋತ್ಸವಕ್ಕೆ ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಬೆಳಗ್ಗೆ 7.55 ರಿಂದ 8. 20 ರ ವೃಶ್ಚಿಕ ಶುಭಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೂಡ ರಥೋತ್ಸವದಲ್ಲಿ ಭಾಗಿಯಾಗಿದ್ದರು. ಬಳಿಕ ರಥದ ಬೀದಿಯಲ್ಲಿ ನಿಂತು ರಥೋತ್ಸವ ವೀಕ್ಷಣೆ ಮಾಡಿದರು. ರಥಕ್ಕೆ
ಹಣ್ಣು ಧವನ ಎಸೆದು ಜೈ ಚಾಮುಂಡೇಶ್ವರಿ ಎಂಬ ಜೈಕಾರದೊಂದಿಗೆ ರಥೋತ್ಸವದಲ್ಲಿ ಯಶಸ್ವಿಯಾಗಿ ಸಂಚರಿಸಿತು.
ಇದೇ ವೇಳೆ ರಥೋತ್ಸವದ ಬೀದಿಯಲ್ಲಿ 21 ಕುಶಾಲತೋಪು ಸಿಡಿಸಿ ಪೊಲೀಸ್ ಇಲಾಖೆ ಗೌರವ ಸಲ್ಲಿಸಿತು. ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಸೇರಿ ಅನೇಕರು ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Mysore

ಗೌರವ ಡಾಕ್ಟರೇಟ್ ಪಡೆದ ಭಾಷ್ಯ ಸ್ವಾಮೀಜಿ, ಕೆ.ಬಿ.ಲಿಂಗರಾಜುಗೆ ಅಭಿನಂದನೆ

Published

on

ಮೈಸೂರು ಪತ್ರಿಕಾ ಛಾಯಾಗ್ರಹಕರ ಸಂಘದಿಂದ ಅಭಿನಂದನೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಹಾಗೂ ಮೈಸೂರು ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೆ ಬಿ. ಲಿಂಗರಾಜು ಅವರನ್ನು ಮೈಸೂರು ಪತ್ರಿಕಾ ಛಾಯಾಗ್ರಹಕ ಸಂಘದಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ, ಉಪಾಧ್ಯಕ್ಷ ಕೆ. ಎಚ್. ಚಂದ್ರು, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಯಾದವ್, ಖಜಾಂಚಿ ಉದಯ್ ಶಂಕರ್, ಛಾಯಾಗ್ರಹಕರಾದ ಅನುರಾಗ ಬಸವರಾಜ್, ಮಧುಸೂದನ್, ಹಂಪಾ ನಾಗರಾಜ್, ನಂದನ್, ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು.

Continue Reading

Crime

ಬೋಟಿಕ್ ತರಬೇತಿ ನೆಪದಲ್ಲಿ 12 ಲಕ್ಷ ರೂ. ವಂಚನೆ

Published

on

ಮೈಸೂರು: ಡಿಸೈನಿಂಗ್ ಬೋಟಿಕ್ ತರಬೇತಿ ನೀಡಿ ವಿದೇಶಗಳ ಸರ್ಟಿಫಿಕೇಟ್ ನೀಡುವುದಾಗಿ ನಂಬಿಸಿ 12 ಲಕ್ಷ ರೂ. ವಂಚನೆ ಮಾಡಲಾಗಿದೆ.

ದೇವಾಂಶ್ ಬೋಟಿಕ್ ಮತ್ತು ರೆಂಟಲ್ ಸಂಸ್ಥೆಯ ಮಾಲೀಕರಾದ ಸುನಂದ ಮಾಲಾ ಹಾಗೂ ಬಾಲಬೊಮ್ಮ ಆರೋಪಿಗಳು‌.

ನವ್ಯ, ಜ್ಯೋತಿ, ರಕ್ಷಿತಾ, ಶ್ಯಾಮಲಾ, ಶೃತಿ, ಮಲ್ಲೇಶ್ವರಿ, ಉಷಾ ಸೇರಿದಂತೆ 8 ಮಂದಿ ವಂಚನೆಗೆ ಒಳಗಾಗಿದ್ದಾರೆ.

ಇವರಿಂದ ಆರೋಪಿಗಳು ಡಿಸೈನಿಂಗ್ ಬೋಟಿಕ್ ತರಬೇತಿ ನೀಡುವುದಾಗಿ ನಂಬಿಸಿ ತಲಾ 1 ಲಕ್ಷ ರೂ. ಹಣ ಪಡೆದು ಬಿಲ್ ನೀಡಿಲ್ಲ. ನಂತರ ಬಟ್ಟೆಗಳಿಗೆ ಎಂದು 60 ಸಾವಿರ ಪಡೆದು ತಾವುದೇ ತರಬೇತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ 180 ದೇಶದ ಸರ್ಟಿಫಿಕೇಟ್ ಕೊಡುವುದಾಗಿ ಸಹ ನಂಬಿಸಿ ಮೋಸ ಮಾಡಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Mysore

ರಾಜಕೀಯ ಪ್ರೇರಿತದಿಂದ ನೂತನ ಸಹಕಾರ ಸಂಘ ಸ್ಥಾಪನೆ: ಸತೀಶ್ ಆರೋಪ

Published

on

ಪಿರಿಯಾಪಟ್ಟಣ: ರಾಜಕೀಯ ಪ್ರೇರಿತದಿಂದ ಮತ್ತೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ ಹೊರತು ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲ್ಲ ಎಂದು ಕಸಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಆರೋಪಿಸಿದರು.

ಹಬಟೂರು ಗ್ರಾಮದ ಸಮುದಾಯ ಭವನದಲ್ಲಿ ಕರೆದಿದ್ದ ರೈತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಂಘದಿಂದ ರೈತರಿಗೆ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಂಘವು ಉತ್ತಮವಾಗಿ ಲಾಭದತ್ತ ಸಾಗುತ್ತಿದೆ. ಆದರೆ ನಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಬಟ್ಟೂರು ಗ್ರಾಮದಲ್ಲಿ ನೂತನ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಈ ನೂತನ ಸಂಘದ ವ್ಯಾಪ್ತಿಗೆ ಒಳಪಡುವ ರೈತರು ಇನ್ನುಮುಂದೆ ಅದೇ ಸಂಘದಲ್ಲಿ ಸಾಲ ಪಡೆಯಬೇಕು ಹಾಗೂ ನಮ್ಮ ಸಂಘದಿಂದ ಅವರನ್ನು ಬಿಡುಗಡೆಗೊಳಿಸಬೇಕು ಎಂಬಂತೆ ಸಹಾಯಕ ನಿಬಂಧಕರು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ನಮ್ಮ ಸಂಘವು ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯವು ಆದೇಶಕ್ಕೆ ತಡೆ ನೀಡಿದೆ ಎಂದು ತಿಳಿಸಿದರು.


ಆದ್ದರಿಂದ ನಮ್ಮ ಸಂಘದ ವ್ಯಾಪ್ತಿಗೆ ಒಳಪಡುವ ಬೂದಿತಿಟ್ಟು, ಹಬಟ್ಟೂರು, ಲಕ್ಷ್ಮೀಪುರ, ಹಬಟ್ಟೂರು ಕೊಪ್ಪಲು, ಅಂಕನಹಳ್ಳಿ ಕೊಪ್ಪಲು, ಜವರಿ ಕೊಪ್ಪಲು ಹಾಗೂ ಮಲ್ಲಯ್ಯನ ಕೊಪ್ಪಲು ಗ್ರಾಮಗಳ ರೈತರು ಯಾವುದೇ ಗೊಂದಲಕ್ಕೆ ಒಳಗಾಗದೆ, ಇದುವರೆಗೆ ವ್ಯವಹರಿಸುತ್ತಿದ್ದ ಸಂಘದಲ್ಲಿಯೇ ಸಾಲ ಪಡೆಯಬಹುದು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮೇಗೌಡ, ಸದಸ್ಯರಾದ ಪಿ.ಕೆ. ಕುಮಾರ್, ಎಚ್‌.ಪಿ. ಸುರೇಶ್, ರಮೇಶ್, ರಾಮಕೃಷ್ಣ, ಜಮೀನ್, ಶೋಭಾ, ಗೀತಾ, ನಳಿನಿ,ವಿ. ಆರ್ ವೆಂಕಟೇಶ್, ಕರಿ ನಾಯ್ಕ, ಸೇರಿದಂತೆ ರೈತರು ಉಪಸ್ಥಿತರಿದ್ದರು.

Continue Reading

Trending

error: Content is protected !!