Connect with us

State

ರೇಷನ್ ಕಾರ್ಡ್ ಹೊಂದಿರುವವರೇ ಎಚ್ಚರ!! ಈ ಕೆಲಸ ಮಾಡದಿದ್ದರೆ ನಿಮ್ಮ ಕಾರ್ಡ್ ಬಂದ್!!

Published

on

ಪಡಿತರ ಚೀಟಿಯಲ್ಲಿ ಪಾರದರ್ಶಕತೆಯನ್ನು ತರ ಉದ್ದೇಶದಿಂದ ಸರ್ಕಾರವು ಹೊಸ ಸೂಚನೆಯಿಂದ ಪಡಿತರರಿಗೆ ನೀಡಿದೆ. ಮುಂಬರುವ ಫೆಬ್ರವರಿ 29ರ ಒಳಗೆ ಎಲ್ಲಾ ಪಡಿತರ ಚೀಟಿಯನ್ನು ಹೊಂದಿರುವವರು ಈ ಕೆಲಸವನ್ನು ಮಾಡಲೇಬೇಕು. ಇಲ್ಲವಾದರೆ ನಿಮ್ಮ ಪಡಿತರ ಚೀಟಿಯು ಕೆಲ ದಿನಗಳವರೆಗೆ ರದ್ದಾಗುವ ಮೂಲಕ ಗೃಹಜೋತಿ ಗೃಹಲಕ್ಷ್ಮಿ ಗಳಿಗೆ ಕತ್ತರಿ ಬೀಳಲಿದೆ. ಈ ಕುರಿತಂತೆ ಮಾಹಿತಿಯನ್ನು ನೀಡುತ್ತ ಹೋಗೋಣ.

ರಾಜ್ಯದಾದ್ಯಂತ ಪಡಿತರ ಚೀಟಿಯನ್ನು ಹೊಂದಿರುವವರು ಎಲ್ಲರೂ ತಮ್ಮ ರೇಷನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಿಸಬೇಕು. ಇದನ್ನು ಮಾಡಲು ಫೆಬ್ರವರಿ 29 ರವರೆಗೆ ಗಡುವು ನೀಡಲಾಗಿದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕ ವಿವರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇ-ಕೆವೈಸಿ ಮಾಡದೇ ಇದ್ರೆ ಏನಾಗುತ್ತೆ

ಫೆಬ್ರವರಿ 29ರ ಒಳಗೆ ಆಧಾರ್ ಜೋಡಣೆ ಮಾಡದಿದ್ದಲ್ಲಿ ಅಂಥವರ ಪಡಿತರ ಚೀಟಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ. ಹಾಗೂ ಪಡಿತರ ಚೀಟಿಯಿಂದ ಬರುವ ಎಲ್ಲಾ ಯೋಜನೆಗಳಿಗೂ ಬ್ರೇಕ್ ಬೀಳಲಿದೆ. ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಆರು ತಿಂಗಳ ಯೋಜನೆಗಳು ಸಿಗದೇ ಇರುವ ಸಾಧ್ಯತೆ ಇರುತ್ತದೆ.

ಪಡಿತರ ಚೀಟಿಯ ರದ್ದು ಈಗಾಗಲೇ ಶುರುವಾಗಿದೆ.

ಈಗಾಗಲೇ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಂಡಿದ್ದ ಕೆಲವರ ಕಾಲನ್ನು ಬಂದ್ ಮಾಡಲಾಗಿದೆ. ವಾಹನಗಳು ಐಷಾರಾಮಿ ಮನೆ ಇವುಗಳಿದ್ದರೆ ಅಂತಹವರ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತಿದೆ. ನಕಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡವರಿಗೆ ದಂಡವನ್ನು ವಿಧಿಸಲಾಗುತ್ತಿದೆ

Continue Reading
Click to comment

Leave a Reply

Your email address will not be published. Required fields are marked *

State

ಎಚ್‌ಡಿ ಕುಮಾರಸ್ವಾಮಿ ಭೇಟಿ ಬಗ್ಗೆ ಸಚಿವ ಸತೀಶ್‌ ಜಾರಕಿಹೊಳಿ ಫಸ್ಟ್‌ ರಿಯಾಕ್ಷನ್‌

Published

on

ನವದೆಹಲಿ: ಸಚಿವ ಸತೀಶ್‌ ಜಾರಕಿಹೊಳಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ವಿಚಾರ ಇದೀಗ ರಾಜ್ಯದಲ್ಲಿ ಭಾರೀ ಕೋಲಾಹಲ ಎದ್ದಿದ್ದು, ಇದೀಗ ಸಚಿವ ಸತೀಶ್‌ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ನವದೆಹಲಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಯಾವ ಕಾರಣಕ್ಕೆ ಭೇಟಿ ಮಾಡಿದ್ದೆ ಎಂಬುದರ ಬಗ್ಗೆ ಹೈಕಮಾಂಡ್‌ ನಾಯಕರಿಗೆ ಹೇಳಿದ್ದೇನೆ. ಎಚ್‌ಡಿಕೆ ಭೇಟಿ ಕುರಿತು ಮಲ್ಲಿಕಾರ್ಜುನ ಖರ್ಗೆ ಹಾಗೂ ಸುರ್ಜೇವಾಲ ಅವರಿಗೂ ಮಾಹಿತಿ ನೀಡಿದ್ದೇನೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನಾನು ಎಚ್‌ಡಿಕೆ ಭೇಟಿ ಮಾಡಿದ್ದ ಬಗ್ಗೆ ನಾಳೆ ಎಲ್ಲವನ್ನೂ ಸಂಪೂರ್ಣವಾಗಿ ಹೇಳುತ್ತೇನೆ ಎಂದರು.

Continue Reading

State

ಹನಿಟ್ರ್ಯಾಪ್‌ಗೆ ಬಂದವರು ನನ್ನ ಹತ್ಯೆಗೆ ಯತ್ನಿಸಿದ್ದರು: ಎಂಎಲ್‌ಸಿ ರಾಜೇಂದ್ರ ಹೊಸ ಬಾಂಬ್‌

Published

on

ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಫೋಟಕ ಟ್ವಿಸ್ಟ್‌ ಸಿಕ್ಕಿದ್ದು, ಹನಿಟ್ರ್ಯಾಪ್‌ಗೆ ಬಂದವರು ನನ್ನ ಹತ್ಯೆಗೆ ಯತ್ನಿಸಿದ್ದರು ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ.

ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿಗೆ ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಡಿಜಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ. ಸಚಿವರು ಕೂಡ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನನ್ನ ಮೇಲೆ ಹನಿಟ್ರ್ಯಾಪ್‌ ಆಗಿಲ್ಲ. ದೂರವಾಣಿ ಕರೆ ಮೂಲಕ ಯತ್ನ ನಡೆಯುತ್ತಾ ಇತ್ತು ಎಂದರು.

ನವೆಂಬರ್.‌16ರಂದು ಮಗಳ ಹುಟ್ಟುಹಬ್ಬದ ದಿನ ಶಾಮಿಯಾನ ಹಾಕಲು ಸ್ವಲ್ಪ ಜನ ಬಂದಿದ್ದರು. ಆ ವೇಳೆ ನನ್ನನ್ನು ಹತ್ಯೆ ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು.

ಈ ಬಗ್ಗೆ ನನ್ನ ಆಪ್ತರ ಮೂಲಕ ಆಡಿಯೋ ಸಿಕ್ಕಿತು. ಆಡಿಯೋದಲ್ಲಿ 5 ಲಕ್ಷ ಸುಪಾರಿ ನೀಡಿದ್ರು. ಮೂರು ಜನ ಹತ್ಯೆ ಮಾಡಲು ಪ್ರಯತ್ನಿಸಿದ್ದರು ಎಂದು ಮಾಹಿತಿ ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ರಾಜಣ್ಣ ಹನಿಟ್ರ್ಯಾಪ್ ಪ್ರಕರಣ ಸಿಐಡಿಗೆ ಹೋಗಿದೆ. ಪೊಲೀಸರು ರಾಜಣ್ಣ ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಮನೆ ಕೆಲಸದವರ ಹೇಳಿಕೆಯನ್ನು ಸಹ ಪಡೆದಿದ್ದಾರೆ. ಈ ಪ್ರಕರಣದ ನಾಯಕ ಯಾರು ಎಂದು ಗೊತ್ತಾಗುತ್ತಿಲ್ಲ. ನಾನು ಯಾರ ಹೆಸರನ್ನು ಕೂಡ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

Continue Reading

State

ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಮತ್ತೊಂದು ಶಾಕ್‌: ಯೂನಿಟ್‌ಗೆ 36 ಪೈಸೆ ವಿದ್ಯುತ್‌ ದರ ಹೆಚ್ಚಿಸಿದ ಸರ್ಕಾರ

Published

on

ಬೆಂಗಳೂರು: ಗುರುವಾರ ಕರ್ನಾಟಕದ ಜನತೆಗೆ ಬಿಗ್‌ ಶಾಕ್‌. ರಾಜ್ಯ ಸರ್ಕಾರ ಜನರಿಗೆ ಎರಡೆರೆಡು ಬಿಗ್‌ ಶಾಕ್‌ ಒಂದೇ ದಿನ ನೀಡಿದ್ದು, ಜನರಿಗೆ ದಿಕ್ಕೇ ತೋಚದಂತಾಗಿದೆ.

ಹಾಲಿನ ದರ ಪರಿಷ್ಕರಣೆ ಮಾಡಿ ಬೆಳಿಗ್ಗೆ ಶಾಕ್‌ ನೀಡಿದ್ದ ಸರ್ಕಾರ, ಈಗ ವಿದ್ಯುತ್‌ ದರ ಹೆಚ್ಚಿಸಿ ಮತ್ತೊಂದು ಶಾಕ್‌ ನೀಡಿದೆ.

ಇದೇ ಏ.1 ರಿಂದ ಪ್ರತಿ ಯೂನಿಟ್‌ ವಿದ್ಯುತ್‌ ಮೇಲೆ 36 ಪೈಸೆ ಹೆಚ್ಚಿಸಲಾಗುವುದು ಎಂದು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಗುರುವಾರ ಆದೇಶ ಹೊರಡಿಸಿದೆ.

ವಿದ್ಯುತ್‌ ಪ್ರಸರಣ ಹಾಗೂ ಎಸ್ಕಾಂಗಳ ಸಿಬ್ಬಂದಿಗಳ ಪಿಂಚಣಿ ಹಾಗೂ ಗ್ರ್ಯಾಚುರಿ ಪಾವತಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಏಂದು ಕೆಇಆರ್‌ಸಿ ತಿಳಿಸಿದೆ.

 

 

 

Continue Reading

Trending

error: Content is protected !!