Connect with us

Mandya

ರಾಜ್ಯ ಮಟ್ಟಕ್ಕೆ ರಂಗಭೂಮಿ ಪರಿಚಯಿಸುವಲ್ಲಿ ಸರ್ಕಾರ ವಿಫಲ

Published

on

ರಾಜ್ಯ ಮಟ್ಟಕ್ಕೆ ರಂಗಭೂಮಿ ಪರಿಚಯಿಸುವಲ್ಲಿ ಸರ್ಕಾರ ವಿಫಲ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಕಚೇರಿಗಷ್ಟೇ ಸೀಮಿತ: ವಿಷಾದ

ಮಂಡ್ಯ: ರಂಗಭೂಮಿಯನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ, ಇನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ ಎಂದು ಹಿರಿಯ ರಂಗಕರ್ಮಿ ಪ್ರಕಾಶ್‌ ವಿಷಾದಿಸಿದರು.

ನಗರದ ಹೊಸಹಳ್ಳಿ ಬಸವೇಶ್ವರ ದೇವಾಸ್ಥಾನದ ಮಧುರ ಮಂಡ್ಯ ರಂಗಕಲಾ ಟ್ರಸ್ಟಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ರಂಗ ಭೂಮಿ ದಿನಾಚರಣೆ ಮತ್ತು ರಾಜ್ಯ ಮಟ್ಟದ ರಂಗ ಗೀತೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಂಗಭೂಮಿಯು 1962ರಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ, ಆದರೆ ಇದು ಇನ್ನೂ ಸಹ ಆರಂಭದ ಹಂತದಲ್ಲಿಯೇ ಇರುವುದು ವಿಪರ್ಯಾಸ? ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ರಂಗಭೂಮಿ ಮೂಲಕ ಆಲೂರು ವೆಂಕಟರಾಯರು, ಹುಯಿಲಗೊಳ ನಾರಾಯಣರಾಯರು ಬೀದಿ ನಾಟಕದ ಮೂಲಕ ಏಕೀಕರಣಕ್ಕೆ ಬೀದಿ ನಾಟಕದ ಮೂಲಕ ಏಕೀಕರಣದಲ್ಲಿ ಕರ್ನಾಟಕ ರಾಜ್ಯ ತರುವಲ್ಲಿಯೂ ಇವರ ಪಾತ್ರವಿದೆ, ಆಳುವ ಸರ್ಕಾರಗಳು ರಂಗಭೂಮಿಗೆ ಅವಕಾಶಗಳನ್ನು ಹೆಚ್ಚು ನೀಡಬೇಕು ಎಂದು ಆಗ್ರಹಿಸಿದರು.

ಕ್ರಿಕೆಟ್‌, ಹಾಕಿ, ಬಾಡ್ಮಿಂಟನ್‌, ಕಬಡ್ಡಿ, ಫುಟ್ಬಾಲ್‌ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡು ಹೋಗಿದೆ, ಆದರೆ ರಂಗಭೂಮಿಯನ್ನು ರಾಜ್ಯ ಮಟ್ಟಕ್ಕೆ ತೆಗೆದುಕೊಂಡು ಹೋಗಿಲ್ಲ, ರಾಜ್ಯ ಸರ್ಕಾರವು ತೆಗೆದುಕೊಂಡು ಹೋಗುವುದರಲ್ಲಿ ಹಿಂದೆ ಇದೆ, ಶಾಲಾ ಹಂತದಲ್ಲಿ ಮಹಾಭಾರತ, ರಾಮಯಾಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ತರುವ ಮೂಲಕ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರ ಬಿತ್ತುವ ಕೆಲಸ ಆಗಬೇಕುಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎನ್ನುವುದು ಕೇವಲ ಕಚೇರಿಗಷ್ಟೇ ಸೀಮಿತವಾಗಿದೆ. ಅದರಂತೆಯೇ ಅಲ್ಲಿನ ಅಧಿಕಾರಿಗಳು ನಡೆದುಕೊಂಡು ಹೋಗುತ್ತಿದ್ದಾರೆ. ರಾಮಾಯಣ, ಮಹಾಭಾರತ, ಜಾನಪದದ ಬಗ್ಗೆ ಕಾವ್ಯ ಮತ್ತು ಗದ್ಯದ ರೂಪದಲ್ಲಿ ಪಠ್ಯಪುಸ್ತಕಗಳಲ್ಲಿ ಕೊಡುತ್ತಿದ್ದರು, ಅದನ್ನು ಗುರುಗಳು ಹೇಳುತ್ತಿದ್ದರು ಇದನ್ನು ಆಲಿಸಿದ ಮಕ್ಕಳಿಗೆ ಸಮಾಜದ ಅರಿವು ಸಿಗುತ್ತಿತ್ತು, ಗುರು ಹಿರಿಯರಲ್ಲಿ ಭಯ ಭಕ್ತಿ ಎನ್ನುವುದು ಇತ್ತು, ಈ ಆಧುನಿಕ ಪ್ರಪಚಂದಲ್ಲಿ ಎಲ್ಲವೂ ಮರೆಯಾಗಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.

ಪಿಟೀಲು ಚೌಡಯ್ಯ ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಪಿಟೀಲು ನುಡಿಸುವ ಅಥವಾ ಅಭ್ಯಾಸ ಮಾಡುವ ಸಂರ್ಭದಲ್ಲಿ ಅಲ್ಲಿನ ಹೂವಿನ ಗಿಡಗಳು ಬಾಗಿ ಸಂಗೀತವನ್ನು ಆಲಿಸುತ್ತಿದ್ದವು. ಅಂದರೆ ಸಸ್ಯಗಳಿಗೂ ಕೂಡ ಸಂಗೀತ ಜ್ಞಾನವಿದೆ. ಸುಮಾರು 860 ವರ್ಷಗಳ ಹಿಂದೆಯೇ ಪ್ರಕೃತಿಗೂ ಸಂಗೀತ ಜ್ಞಾನವಿದೆ ಎಂಬುದನ್ನು ಸಹ ನಾವು ಕೇಳಿದ್ದೇವೆ. ಅಶ್ವಘೋಷ ಎಂಬ ಮಹಾಕವಿ ವೇಣಿ ಸಂಹಾರ ಎಂಬ ಅಸ್ಸಾಂ ನಾಟಕವನ್ನು ಪರಿಚಯಿಸಿದ್ದರು, ಭಾರತ ದೇಶದಲ್ಲಿ ಬಯಲಾಟ, ಜಾನಪದ ಕಲೆ, ರಂಗಭೂಮಿ ಶುರುವಾಯಿತು, ಇದರಲ್ಲಿ ದೃಶ್ಯ ಮಾಧ್ಯಮ, ಪದಪುಂಜಗಳು ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡಲಾಯತು ಎಂದು ವಿವರಿಸಿದರು.

ಪ್ರೌಢಶಾಲೆವರೆಗೆ ರಂಗಭೂಮಿ, ಮಹಾಭಾರತ, ರಾಮಯಾಣದ ಬಗ್ಗೆ ಗದ್ಯ ಮತ್ತು ಪದ್ಯದ ಭಾಗಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮತ್ತು ಸಂಸ್ಕಾರವನ್ನು ಬಿತ್ತುವ ಕೆಲಸ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ, ಪೌರಾಣಿಕ ನಾಟಕ ಪ್ರದರ್ಶನಕ್ಕೆ ₹1 ಲಕ್ಷದವರೆಗೂ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಪತ್ರಕರ್ತ ಮತ್ತಿಕೆರೆ ಜಯರಾಂ ಮಾತನಾಡಿ, ರಂಗಭೂಮಿ ಕ್ಷೇತ್ರವನ್ನು ಉಳಿಸಲು ಹಲವು ಹಿರಿಯ ಕಲಾವಿದರು ಮುಂದಿದ್ದಾರೆ, ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ಸಿಗಬೇಕು. ಕಲಾವಿದರು ಎರಡು ಮೂರು ತಿಂಗಳು ತಪಸ್ಸಿನಂತೆ ಕಲಿಯುವ ಮೂಲಕ ನಂತರ ಪ್ರದರ್ಶಿಸುವುದೇ ಒಂದು ರಚನಾತ್ಮಕತೆ ಇದೆ, ಅಂತಹ ಕಲೆಗಳು ಉಳಿದು ಬೆಳಗುವ ಕೆಲಸವು ಆಗಬೇಕು, ಅದೇರಿತಿ ಕಲಾವಿದರಿಗೂ ನೆರವು ಸಿಗುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಕಾವ್ಯಶ್ರೀ ರಮೇಶ್, ಮಕ್ಕಳ ತಜ್ಞ ಡಾ.ರಮೇಶ್‌, ಡಾ.ಎ.ವಿ.ಉಮೇಶ, ರಂಗ ನಿರ್ದೇಶಕರಾದ ಕೃಷ್ಣರಾಜು, ಗುರುಮೂರ್ತಾಚಾರ್, ಕಲ್ಕೆರೆ ನರಸಿಂಹಮೂರ್ತಿ, ಪುಟ್ಟಣ್ಣ, ಕಲಾವಿದರಾದ ಎಚ್‌.ಕೆ.ಶಂಕರೇಗೌಡ, ಡಿ.ನಾಗೇಶ್‌, ದೊಡ್ಡಯ್ಯ, ಬಸವಲಿಂಗಚಾರ್, ಕೆ.ರಾಮಲಿಂಗೇಗೌಡ, ಬಿ.ಚಿಕ್ಕಸಿದ್ದಯ್ಯ ಭಾಗವಹಿಸಿದ್ದರು

Continue Reading
Click to comment

Leave a Reply

Your email address will not be published. Required fields are marked *

Mandya

ವಿರೋಧ ಪಕ್ಷಗಳು ಸಾವಿನಲ್ಲಿ ರಾಜಕೀಯ ಮಾಡೋದನ್ನು ಬಿಡಬೇಕು: ಎನ್‌.ಚಲುವರಾಯಸ್ವಾಮಿ

Published

on

ಬೆಂಗಳೂರು: ವಿರೋಧ ಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡೋದನ್ನೂ ಬಿಡಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಚಿವ ಎನ್‌.ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಳೆ(ಜೂ.17) ಪ್ರತಿಭಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆದ ಘಟನೆಯ ಬಗ್ಗೆ ದುಃಖ ಇದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ನೋವು ತಂದಿದೆ. ಎಲ್ಲಿ ತಪ್ಪಾಗಿದೆ ಎಂದು ಕ್ರಮ ಆಗಿದೆ. ಅಲ್ಲದೇ ಮೃತರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಎಲ್ಲಿ ಏನೇ ತೊಂದರೆಯಾದರೂ ಅದು ಸರ್ಕಾರದ ಜವಾಬ್ದಾರಿ ಆಗಿರುತ್ತದೆ. ಅಹಮದಾಬಾದ್‌ ವಿಮಾನ ಅಪಘಾತದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ. ಉತ್ತರಪ್ರದೇಶದ ಕುಂಭಮೇಳದಲ್ಲಿ ಕಾಲ್ತುಳಿತವಾಗಿ ಸಾವಾಗಿರುವುದಕ್ಕೆ ಯಾರು ಜವಾಬ್ದಾರಿ ತೆಗೆದುಕೊಂಡಿದ್ದರು. ನಾವೂ ಈ ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇವೆ. ಅದನ್ನು ವಿರೋಧ ಪಕ್ಷಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಹೀಗೆಲ್ಲಾ ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಪಾಡಿಗೆ ಅವರು ಮಾಡಿಕೊಳ್ಳಲಿ ನಾವು ಅಡ್ಡಿಪಡಿಸುವುದಿಲ್ಲ ಎಂದಿದ್ದಾರೆ.

ನಾವೂ ಕಾಲ್ತುಳಿತ ಘಟನೆಯನ್ನು ಒಪ್ಪುವುದಿಲ್ಲ. ಮುಂದೆ ಹೀಗೆ ಆಗದಂತೆ ಏನು ಮಾಡಬೇಕೋ ಅದನ್ನು ಸರ್ಕಾರ ಮಾಡುತ್ತದೆ. ಹಲವು ಕಡೆ ಇಂತಹ ಘಟನೆ ನಡೆದಿದೆ. ನಟ ಡಾ.ರಾಜ್ ಕುಮಾರ್ ಸಾವಿನ ಸಮಯದಲ್ಲಿ ಕಾಲ್ತುಳಿತ ಆಗಿದ್ದಾಗ ಕುಮಾರಸ್ವಾಮಿ ಹೊಣೆ ಹೊತ್ತರಾ? ವಿಪಕ್ಷಗಳು ಸಾವಿನಲ್ಲೂ ರಾಜಕೀಯ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

Continue Reading

Mandya

ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ: ಡಾ.ಕುಮಾರ

Published

on

ಮಂಡ್ಯ : ರೋಗಿಗಳ ಆರೈಕೆಗಾಗಿ ಬರುವ ಆರೈಕೆದಾರರು ತಂಗಲು ಸಿ.ಎಸ್.ಆರ್ ಅನುದಾನ ಬಳಸಿ ಮಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.

ಇಂದು ಮಿಮ್ಸ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಧಾಮದ ಹೊಣೆಗಾರಿಕೆಯನ್ನು ನಿಭಾಯಿಸಲು ನೋಡೆಲ್ ಅಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಪಿ. ಕೃಷ್ಣಕುಮಾರ್, ಉಸ್ತುವಾರಿ ಹಾಗೂ ಮೇಲ್ವಿಚರಣೆಗೆ ಮಿಮ್ಸ್ ಆಸ್ಪತ್ರೆಯ ಸ್ಥಾನಿಯ ವೈದ್ಯಾಧಿಕಾರಿ ಡಾ.ದರ್ಶನ್ ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಧಾಮಕ್ಕೆ ರೂ 30 ಶುಲ್ಕ

ಆರೋಗ್ಯ ಧಾಮದ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ದಾಖಲಾತಿ ವಿಭಾಗಗಳಲ್ಲಿ ಫಲಕಗಳನ್ನು ಅಳವಡಿಸಿ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪರವಾಗಿ ಬರುವ ಆರೈಕೆದಾರರು “ಆರೋಗ್ಯ ಧಾಮದಲ್ಲಿ ತಂಗಲು ಇಚ್ಚೆಪಟ್ಟಲ್ಲಿ ದಿನಕ್ಕೆ (24 ಗಂಟೆಗಳು) ರೂ.30 ಶುಲ್ಕವನ್ನು ಪಾವತಿಸಿಕೊಂಡು ರಶೀದಿ ನೀಡಬೇಕು ಎಂದು ತಿಳಿಸಿದರು.

ವಿಧಿಸಲಾಗುವ ರೂ.30 ಶುಲ್ಕವನ್ನು ಬಳಕೆದಾರರ ನಿಧಿಗೆ ಜಮೆ ಮಾಡಬೇಕು ಮತ್ತು ಈ ಮೊತ್ತದಿಂದಲೇ ಆರೋಗ್ಯಧಾಮದ ನಿರ್ವಹಣೆ ಆರೋಗ್ಯಧಾಮಕ್ಕೆ ನೇಮಿಸಿಕೊಳ್ಳಲಾಗಿರುವ ಸಿಬ್ಬಂದಿಗಳು ವೇತನ ಪಾವತಿಗೆ ವೆಚ್ಚ ಮಾಡಬೇಕು. ರೋಗಿಯು ಆಸ್ಪತ್ರೆಯಲ್ಲಿ ದಾಖಲಾದ ನಂತರ ನೀಡಲಾಗುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಅವರ ಆರೈಕೆದಾರರಿಗೆ ಕಂಪ್ಯೂಟರ್ ಆಧಾರಿತ ಪಾವತಿ ಚೀಟಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.

ಆರೈಕೆದಾರರು ರೋಗಿಯ ದಾಖಲಾತಿ ವಿವರ, ಆರೋಗ್ಯಧಾಮಕ್ಕೆ ದಾಖಲಾದ ಆರೈಕೆದಾರರ ದಾಖಲಾತಿ ಚೀಟಿ, ಆರೈಕೆದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡಿ ಆರೋಗ್ಯಧಾಮದಲ್ಲಿ ದಾಖಲಾಗಬೇಕು. ಆರೋಗ್ಯಧಾಮದಲ್ಲಿ ಸ್ವಚ್ಛತೆ ಕಾಪಾಡಬೇಕು, ಅಧಿಕಾರಿಗಳು ಆರೈಕೆದಾರರು ಆರೋಗ್ಯಧಾಮದಲ್ಲಿ ಅನುಸರಿಸಬೇಕಾದ ನಿಯಮಗಳ ಫಲಕವನ್ನು ಅಳವಡಿಸಿ, ನಿಯಮ ಉಲ್ಲಂಘಿಸಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.

ಆರೋಗ್ಯಧಾಮದ ವಿವರಗಳು ಮತ್ತು ದಾಖಲಾದವರ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಆರೋಗ್ಯಧಾಮದಲ್ಲಿ ಸಿಸಿಟಿವಿ ಕಣ್ಗಾವಲನ್ನು ಏರ್ಪಡಿಸಲಾಗಿದೆ. ಪ್ರತಿನಿತ್ಯವೂ ಆರೋಗ್ಯ ಧಾಮವನ್ನು ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ, ಸಾಧ್ಯವಾದಷ್ಟು ಶೀಘ್ರವಾಗಿ ಆರೋಗ್ಯ ಧಾಮದ ದಾಖಲಾತಿ ಪ್ರಾರಂಭಿಸಿ ‌ಸಾರ್ವಜನಿಕರಿಗೆ ಅನುವು ಮಾಡಿ ಎಂದು ತಿಳಿಸಿದರು.

ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ನ್ಯೂನತೆಗಳನ್ನು ತಿಳಿಸಿದ್ದು, ಅವುಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಈಗಾಗಲೇ ತಿಳಿಸಲಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಪರಿಶೀಲಿಸಲು ಆಗಿಂದಾಗ ಭೇಟಿ ನೀಡಿ ಪರಿಶೀಲಿಸುವಂತೆ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರಿಗೆ ತಿಳಿಸಿದರು.

ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಹೊರ ರೋಗಿ ವಿಭಾಗದಲ್ಲಿ ವಿಕಲಚೇತನರಿಗೆ, ಪುರುಷರಿಗೆ, ಮಹಿಳೆಯರಿಗೆ, ಹಿರಿಯ ನಾಗರೀಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕೆಲಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಆರ್.ಓ ಅಳವಡಿಕೆಯ ಕೆಲಸ ಪ್ರಗತಿಯಲ್ಲಿದೆ ಎಂದರು.

ಸಭೆಯ ನಂತರ ಜಿಲ್ಲಾಧಿಕಾರಿಗಳು ಓ.ಪಿ.ಡಿ ಹಾಗೂ ಔಷಧಿ ವಿತರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ವಾಹನ ನಿಲುಗಡೆ ಸ್ಥಳಕ್ಕೆ ಭೇಟಿ ನೀಡಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು. ಎಂಟು ಗಂಟೆಯ ಅವಧಿಗೆ ರೂ 7/- ನಿಗದಿಯಾಗಿದ್ದು, ರೂ 10/- ಚೀಟಿಗಳು ಲಭ್ಯವಿದ್ದು, ಕಂಪ್ಯೂಟರ್ ಆಧಾರಿತ ಬಿಲ್ ನೀಡಿ ಸರಿಯಾಗಿ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಲೆಗೆ ಬಿದ್ದ ಬಂಗಾರ ಬಣ್ಣದ ಗೌರಿ ಮೀನು

Published

on

ವರದಿ : ಅಲ್ಲಾಪಟ್ಟಣ ಸತೀಶ್

ಮಂಡ್ಯ : ಕೆ.ಆರ್.ಪೇಟೆ ದೇವಿರಮ್ಮಣ್ಣಿ ಕೆರೆಯಲ್ಲಿ ಬಂಗಾರ ಬಣ್ಣದ ಗೌರಿ ಮೀನೊಂದು ಬಲೆಗೆ ಬಿದ್ದಿದ್ದು, ಬರೋಬ್ಬರಿ ಒಂದು ಸಾವಿರ ರೂಪಾಯಿಗೆ ಮಾರಾಟವಾಗಿದೆ.

ತೀರಾ ಅಪರೂಪವೆಂಬ 04 ಕೆಜಿ ತೂಕವುಳ್ಳ ಬಂಗಾರದ ಬಣ್ಣದ ಮೀನನ್ನು ನೋಡಲು ಜನತೆ ಮುಗಿ ಬೀಳುತ್ತಿದ್ದು, ವಳಗೆರೆ ಮೆಣಸದ ರಾಜು ಎಂಬುವವರು ಒಂದು ಸಾವಿರ ರೂಪಾಯಿಗೆ ಕೊಂಡುಕೊಂಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಮೀನು ಹಿಡಿಯಲು ಇಂದು ಮುಂಜಾನೆ ರಾಮಚಂದ್ರನಾಯಕ ಎಂಬುವವರು ಬಲೆ ಬೀಸಿದ್ದಾಗ ಬಲೆಗೆ ಬಂಗಾರ ಬಣ್ಣದ ಗೌರಿ ಮೀನು ಬಿದ್ದಿರುವುದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಂಗಾರ ಬಣ್ಣದ ಗೌರಿ ಮೀನು ಅಪರೂಪದ ತಳಿಯಾಗಿದ್ದು, ಮುಳ್ಳುಗಳಿಲ್ಲದ ತಿನ್ನಲು ರುಚಿಕರವಾದ ಈ ಮೀನಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ ಎಂದು ಮೀನು ಮಾರಾಟಗಾರ ಬಲೆರಾಮು ತಿಳಿಸಿದ್ದಾರೆ.

Continue Reading

Trending

error: Content is protected !!