Connect with us

Hassan

ರಾಮಮಂದಿರ ಲೋಕಾರ್ಪಣೆ ಪ್ರಯುಕ್ತ ಆಲೂರು ತಾಲೂಕಿನ ಹರಿಹಳ್ಳಿ ಗ್ರಾಮದಲ್ಲಿ ಸಂಭ್ರಮ ಸಡಗರ

Published

on

ಆಲೂರು: ಭಾರತೀಯರಾದ ನಮಗೆ ರಾಮಾಯಣ, ಮಹಾಭಾರತ ಎರಡು ಕಣ್ಣುಗಳು. ಅವುಗಳಿಗೆ ಎಂದೂ ಸಾವಿಲ್ಲ ಎಂದು ಹರಿಹಳ್ಳಿ ಶ್ರೀ ಕೆಂಚಾಂಬ ದೇವಸ್ಥಾನ ಪುರೋಹಿತ ಸತ್ಯನಾರಾಯಣ್ ತಿಳಿಸಿದರು.

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಟಾಪನೆ ಮಾಡಿದ ಸಂದರ್ಭದಲ್ಲಿ ಶ್ರೀರಾಮರನ್ನ ಸ್ವಾಗತಿಸಲು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು ಮತ್ತು ಈ ದಿನವನ್ನು ತಮ್ಮ ಮನೆಯಲ್ಲಿ ಸಂಭ್ರಮದಿಂದ ಆಚರಿಸಬೇಕು ಎಂದು ದೇಶದ ಪ್ರದಾನಿ ನರೇಂದ್ರ ಮೋದಿಯವರು ಕೊಟ್ಟಿದ್ದ ಕರೆಗೆ ತಾಲೂಕಿನ ಹರಿಹಳ್ಳಿ ಗ್ರಾಮಸ್ಥರು ಸಂಜೆ 6:45ಕ್ಕೆ ಪೂಜೆ, ದೀಪಾರತಿ, ರಾಮಭಜನೆ ಮಾಡಿದ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು.
ಇತ್ತೀಚಿನ ದಿನಗಳಲ್ಲಿ ಈ ಗ್ರಂಥವನ್ನು ಕೆಲವರು ಮೂಲೆಗುಂಪು ಮಾಡುತ್ತಿರು ವುದು ಬೇಸರದ ಸಂಗತಿ. ರಾಮಾಯಣ, ಮಹಾಭಾರತ ಇತಿಹಾಸವೂ ಹೌದು, ಪುರಾಣವೂ ಹೌದು. ರಾಮಾಯಣ ಪಾರಾಯಣ, ವೇದ ಪಾರಾಯಣ ಭಿನ್ನವಲ್ಲ ಎಂದ ಅವರು. 14 ವರ್ಷಗಳ ವನವಾಸದ ನಂತರ ರಾಮ ಅಯೋಧ್ಯೆ ರಾಜ್ಯಕ್ಕೆ ಮರಳುತ್ತಾನೆ. ಹಿಂದೂ ಮಹಾಕಾವ್ಯ ರಾಮಾಯಣದ ಪ್ರಕಾರ, ರಾಮನು ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಂದಿಗೆ ದೇಶಭ್ರಷ್ಟನಾಗಿದ್ದ ವೇಳೆ ಹಲವಾರು ಕಷ್ಟಗಳನ್ನು ಅನುಭವಿಸಿದ್ದರು. ಅದರಲ್ಲಿ ಸೀತೆಯನ್ನು ಅಪಹರಿಸಿದ್ದ ರಾಕ್ಷಸ ರಾಜ ರಾವಣನ ವಿರುದ್ಧದ ಯುದ್ಧ ಪ್ರಮುಖವಾದದ್ದು. ಅಜ್ಞಾನದ ಮೇಲೆ ಸುಜ್ಞಾನದ ವಿಜಯವನ್ನು ರಾಮನು ಅಯೋಧ್ಯೆಗೆ ಮರಳಿದ ನಂತರ ಸ್ಮರಿಸಲಾಗುತ್ತದೆ. ಅದಕ್ಕಾಗಿ ದೀಪಗಳನ್ನು ಉರಿಸಲಾಗುತ್ತದೆ. ರಾಮ ಮರಳಿದಾಗ ಅಯೋಧ್ಯೆಯ ಜನರು ದೀಪಗಳನ್ನು ಬೆಳಗಿಸುವ ಮೂಲಕ ಮತ್ತು ತಮ್ಮ ಮನೆಗಳನ್ನು ಅಲಂಕರಿಸಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಜನವರಿ 22 ಭಾರತೀಯರ ಪಾಲಿಗೆ ಸಂತೋಷದ ದಿನ. ಹೀಗಾಗಿ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸುವ ಮೂಲಕ ಸಂಭ್ರಮಿಸಬೇಕು. ಏಕೆಂದರೆ ನಾವು 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಗವಾನ್ ರಾಮನನ್ನು ಮತ್ತೆ ಮನೆಗೆ ಸ್ವಾಗತಿಸುತ್ತಿರುವ ಕಾರಣ ದೀಪಗಳನ್ನು ಬೆಳಗಿಸಿ ಪುಣ್ಯ ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಯುವಕರು, ಹಿರಿಯರು, ಮಹಿಳೆಯರು, ಗ್ರಾಮ ಪಂಚಾಯಿತಿಯ ಹಾಲಿ, ಮಾಜಿ ಸದಸ್ಯರು, ಸುತ್ತಲಿನ ಗ್ರಾಮಸ್ಥರು ಹಾಜರಿದ್ದು ಹಾಜರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಹಾಸನ: ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್‌ ನಾಗೇಂದ್ರರನ್ನು ಸನ್ಮಾನಿಸಿದ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ

Published

on

ಹಾಸನ: ಈ ಜಿಲ್ಲೆಯಲ್ಲಿ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಹಾಗೂ ಸಮಾಜ ಸೇವಕ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಮಾಜಿ ಕಾರ್ಯ ನಿರ್ವಾಹಕ ಸದಸ್ಯರಾಗಿದ್ದ ಸಿದ್ದೇಶ್‌ ನಾಗೇಂದ್ರ ಅವರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಸನ್ಮಾಸಿದ್ದಾರೆ.

ಹಾಸನದ ಬಿಜೆಪಿ ಕಚೇರಿಯಲ್ಲಿ ಇಂದು ಸಿದ್ಧೇಶ್‌ ನಾಗೇಂದ್ರ ಅವರಿಗೆ ಸನ್ಮಾನಿಸಿ ಗೌರವ ಪುರಸ್ಕಾರ ನೀಡಿದ್ದಾರೆ.

ಈ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಪಾಟೀಲ್, ನಿರ್ದೇಶಕರಾದ ಮಯೂರಿ ಲೋಕೇಶ್, ಡಿ. ವಿ.ಮದನ್, ಹೆಚ್. ಕೆ.ಮಿಥುನ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಲೋಕೇಶ್, ಖಜಾಂಚಿ ಶೈಲಾ ಮದನ್‌, ನಿರ್ಧೇಶಕರಾದ ಭಾಮಿನಿಹೇಮಂತ್, ವೀಣಾ ದೇವರಾಜ್, ಡಿ. ಸಿ.ಅನೂಸೂಯ, ಸುಶೀಲ ಪಾಲನೇತ್ರ, ಸವಿತಾ ಭೂಷಣ್ ಮುಖಂಡರಾದ ನೇತ್ರವತಿ ಮಂಜುನಾಥ್‌ ಇತರರು ಉಪಸ್ಥಿತರಿದ್ದರು.

Continue Reading

Hassan

5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಅವಿರೋಧ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು

ಆಲೂರು : ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ.

ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸ್ಥಾನಗಳು 6, ಪ.ಜಾತಿ ಮೀಸಲು ಸ್ಥಾನ 01, ಹಿಂದುಳಿದ ವರ್ಗ-ಪ್ರವರ್ಗ(ಬಿ) ಸ್ಥಾನ 01, ಮಹಿಳಾ ಮೀಸಲು 2 ಸ್ಥಾನ, ಸೂಪರ್ವೈಸರ್ ಸೇರಿ ಒಟ್ಟು 11 ಸ್ಥಾನಗಳಿಗೆ ಜೂನ್. 21 ರಂದು ಚುನಾವಣೆ ನಡೆಯಬೇಕಿತ್ತು ಆದರೆ ನಾಮಪತ್ರ ಸಲ್ಲಿಸಿದ ಒಟ್ಟು 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಪರಿಶಿಷ್ಟ ಪಂಗಡ, ಹಿಂದುಳಿದ ಪ್ರವರ್ಗ(ಎ) ಸ್ಥಾನಗಳಿಗೆ ಅ ಸಮುದಾಯಗಳ ಜನರು ಇಲ್ಲದ ಕಾರಣ ಆ ಸ್ಥಾನಗಳು ಖಾಲಿ ಉಳಿದಿವೆ.

ಸಾಮಾನ್ಯ ಕ್ಷೇತ್ರದಿಂದ ಚಿಕ್ಕಕಣಗಾಲು ಗ್ರಾಮದ ಮಹೇಶ್ವರಯ್ಯ, ತೀರ್ಥ ಕುಮಾರ್ (ಕಟ್ಟೆಗಿಡ) ವೀರಭದ್ರ, ಬಸವಣ್ಣ, ಜೆ ತಿಮ್ಮನಹಳ್ಳಿ ಗ್ರಾಮದಿಂದ ಚಂದ್ರ, ಗುರು, ಮಹಿಳಾ ಮೀಸಲು ಸ್ಥಾನದಿಂದ ಜೆ.ತಿಮ್ಮನಹಳ್ಳಿಯ ಸುಶೀಲಮ್ಮ, ಸಿದ್ದಮ್ಮ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಮಾಳಿಗಯ್ಯ, ಹಿಂದುಳಿದ ವರ್ಗ-ಪ್ರವರ್ಗ(ಬಿ) ಸ್ಥಾನದಿಂದ ಜೆ. ತಿಮ್ಮನಹಳ್ಳಿಯ ರವಿಪ್ರಕಾಶ್ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳಾಗಿದ್ದಾರೆ‌.

ಚುನಾವಣಾ ಅಧಿಕಾರಿಯಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ರಿಟರ್ನಿಂಗ್ ಆಫೀಸರ್ ಶಕುಂತಲಾ ಕರ್ತವ್ಯ ನಿರ್ವಹಿಸಿದರು.

 

Continue Reading

Hassan

ಮಳೆ ಹಾನಿ ಪ್ರದೇಶಕ್ಕೆ ಶಾಸಕ ಹೆಚ್.ಪಿ. ಸ್ವರೂಪ್ ಭೇಟಿ  ನೀಡಿ ಪರಿಶೀಲನೆ

Published

on

ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ವ್ಯಾಪ್ತಿಯಲ್ಲಿ ಮುಸುಕಿನ ಜೋಳ ಹಾನಿಯಾಗಿರು ಬಗ್ಗೆ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ಅಂತಹ ಕೃಷಿ ಪ್ರದೇಶಗಳಿಗೆ ಸೋಮವಾರದಂದು ಕ್ಷೇತ್ರದ ಶಾಸಕರಾದ ಹೆಚ್.ಪಿ. ಸ್ವರೂಪ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸನ ತಾಲೂಕಿನಲ್ಲಿ ಒಟ್ಟು 12,200 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಸಾಲಾಗಾಮೆ – 425 ಹೆಕ್ಟೇರ್ ಹಾಗೂ ಕಸಬಾ – 1500 ಹೆಕ್ಟೇರ್ ಸೇರಿ ಒಟ್ಟು 1925 ಹೆಕ್ಟೇರ್ ಪ್ರದೇಶಕ್ಕೆ ರೋಗ ಹರಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಳೆ ಹಾನಿ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಅವರು, ಕ್ಷತ್ರದ ವ್ಯಾಪ್ತಿಯಲ್ಲಿನ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದರು. ಈ ವರೆಗೆ ಸುತ್ತಮುತ್ತಲ ಗ್ರಾಮದ ರೈತರು ಶಾಸಕರ ಬಳಿ ಜೋಳ ಕಳೆದುಕೊಂಡ ಬಗ್ಗೆ ತಮ್ಮ ಅಳಲು ತೋಡಿಕೊಂಡರು.

 

Continue Reading

Trending

error: Content is protected !!