Mandya
ರೈತರಿಗೆ ಬೆಳೆ ಪರಿಹಾರದ ಖಾತ್ರಿ ಇಲ್ಲ
ಮಂಡ್ಯ : ಮಳೆ ಅಭಾವದಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಬೆಳೆ ಪರಿಹಾರ ಪಾವತಿ ಮಾಡಿದೆ ಎಂದು ಹೇಳುತ್ತಿದ್ದರೂ ರೈತರಿಗೆ ತಲುಪಿರುವ ಬಗ್ಗೆ ಖಾತ್ರಿ ಇಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಮ್ ತಿಳಿಸಿದರು.
ನಗರದಲ್ಲಿ ಜಿಲ್ಲಾಧಿಕಾರಿ ಡಾಕುಮಾರ ರನ್ನು ಭೇಟಿಯಾದ ನಂತರ ಮಾತನಾಡಿದ ಅವರು ಜಿಲ್ಲೆಯ 71,000 ರೈತರಿಗೆ 14 ಕೋಟಿ ಬೆಳೆ ನಷ್ಟ ಪರಿಹಾರವನ್ನು ಪಾವತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ ಆದರೆ ಯಾವೊಬ್ಬ ರೈತರು ಪರಿಹಾರ ದೊರಕಿರುವ ಬಗ್ಗೆ ಖಾತ್ರಿ ಮಾಡಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ನೀರಿನ ಅಭಾವದಿಂದ 3 600 ಕೋಟಿ ಬೆಳೆ ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿತ್ತು, ಇದೀಗ ಅದರ ಮೊತ್ತ 5000 ಕೋಟಿಗೆ ಹೆಚ್ಚಳವಾಗಿದೆ, ಸರ್ಕಾರ ನೀಡಲಾಗಿದೆ ಎಂದು ಹೇಳುತ್ತಿರುವ ಪರಿಹಾರ ಏತಕ್ಕೆ ಸಾಕಾಗಲಿದೆ ಎಂದು ಪ್ರಶ್ನಿಸಿದರು.

ಬರ ಪರಿಸ್ಥಿತಿಯಿಂದ ಭೂಮಿ ಬಾಯಿಬಿಟ್ಟಿದೆ, ಜನ -ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ, ನಾಲೆ ಗಳಿಗೆ ನೀರು ಹರಿಸಿ ಎಂದು ಒತ್ತಡ ಮಾಡುತ್ತಿದ್ದರೂ ಸರ್ಕಾರ ಮೌನ ವಹಿಸಿದೆ, ಚಿಕ್ಕದೇವರಾಯ ನಾಲೆ, ರಾಮಸ್ವಾಮಿ ನಾಲೆ ಗೆ ನೀರು ನೀರು ಹರಿಸಿದ್ದರು ಯಾವುದೇ ಮಾಹಿತಿ ಇಲ್ಲ.ವಿಶ್ವೇಶ್ವರಯ್ಯ ನಾಲೆಗೆ ಈ ತಕ್ಷಣ ನೀರು ಹರಿಸಿ ಕೆರೆಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
ಜೂನ್ ನಲ್ಲಿ ಮೈಸೂರು ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭಿಸಬೇಕು, ಆದರೆ ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಂಡಿಲ್ಲ, ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರು ನಿರ್ಲಕ್ಷ್ಯ ತೋರಿದ್ದಾರೆ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು, ಆದಷ್ಟು ಶೀಘ್ರವಾಗಿ ಸಭೆ ಕರೆದು ಚರ್ಚೆಗೆ ಕಾರ್ಖಾನೆ ಆರಂಭಕ್ಕೆ ತುರ್ತು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡು ವಾಳು ಚಂದ್ರಶೇಖರ್, ಮುದ್ದೆ ಗೌಡ, ಕನ್ನಡ ಸೇನೆ ಮಂಜುನಾಥ್, ಕೃಷ್ಣಪ್ರಕಾಶ್, ಕರವೇ ಶಂಕರೇಗೌಡ, ತಾಯಮ್ಮ, ಮೊತ್ತಹಳ್ಳಿ ಕೆಂಪೇಗೌಡ. ಫಯಾಜ್ ಇತರರಿದ್ದರು

Mandya
ಶ್ರೀ ವೈದ್ಯನಾಥೇಶ್ವರಸ್ವಾಮಿ ಶ್ರೀ ಮದ್ವಿವ್ಯ ಮಹಾ ರಥೋತ್ಸವ
ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರಸ್ವಾಮಿ ಶ್ರೀ ಮದ್ವಿವ್ಯ ಮಹಾ ರಥೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ 10 ರಿಂದ 11 ಗಂಟೆಯೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಡೆದ ಶ್ರೀ ವೈದ್ಯನಾಥೇಶ್ವರಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತಾಧಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಎಳೆಯುವ ಮೂಲಕ ದೇವರ ಕೃಪೆಗೆ ಒಳಗಾದರು. ರಥೋತ್ಸವದ ಅಂಗವಾಗಿ ರಾಮನಗರ ಜಿಲ್ಲೆ, ಚನ್ನಪಟ್ಟಣದ ತಾಲೂಕು ವಿರೂಪಾಕ್ಷಿಪುರ ಹೋಬಳಿ ಜೆ.ಬ್ಯಾಡರಹಳ್ಳಿ ಶ್ರೀ ವೈದ್ಯನಾಥೇಶ್ವರ ಸಮಿತಿ ಮತ್ತು ಗ್ರಾಮಸ್ಥರಿಂದ ವಿಶೇಷ ಪೂಜೆಯೊಟ್ಟಿಗೆ ರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ರಥೋತ್ಸವದ ಅಂಗವಾಗಿ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಮದ್ದೂರಿನ ಬಸ್ ನಿಲ್ದಾಣದಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾತ್ರಿ 8 ಗಂಟೆಗೆ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಸ್ವಾಮಿಯವರ ಬಸವಪ್ಪ ಜತೆಗೆ ಮದ್ದೂರಿನ ಶಕ್ತಿ ದೇವತೆ ಮದ್ದೂರಮ್ಮ, ಆಲೂರಿನ ಶ್ರೀ ಆಲೂರಮ್ಮ, ನಗರಕೆರೆ ಪಟ್ಟಲದಮ್ಮ, ಅಂತರಹಳ್ಳಿ ಸಿದ್ದೇಶ್ವರ, ಹಳೇಬೂದನೂರಿನ ಶ್ರೀ ಅಂಕನಾಥೇಶ್ವರಸ್ವಾಮಿ ವೀರಗಾಸೆ ಕುಣಿತ ಪೂಜಾ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಶನಿವಾರ ಸಂಜೆ 6 ಗಂಟೆಗೆ ವೈದ್ಯನಾಥಪುರ ಗ್ರಾಮಸ್ಥರಿಂದ ಶ್ರೀಹೊಳೆ ಆಂಜನೇಯಸ್ವಾಮಿ ಸನ್ನಿಧಿಯಿಂದ ಮೀಸಲು ನೀರು ತರುವ ಜತೆಗೆ ಹಳೇಬೂದನೂರು ಶ್ರೀ ಅಂಕನಾಥೇಶ್ವರಸ್ವಾಮಿ ರವರ ವೀರಗಾಸೆ ಅದ್ದೂರಿಯಾಗಿ ಜರುಗಿತು.
ಮಜ್ಜಿಗೆ ಪಾನಕ ವಿತರಣೆ: ರಥೋತ್ಸವದ ಅಂಗವಾಗಿ ವಿನಾಯಕರ ಗೆಳೆಯರ ಬಳಗ ಹಾಗೂ ಗ್ರಾಮಸ್ಥರಿಂದ ಭಕ್ತಾಧಿಗಳಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರು ಬೇಳೆ ವಿತರಣೆ ಮಾಡಲಾಯಿತು. ಗೆಳೆಯರ ಬಳಗದ ವಿ.ಎಸ್.ಪ್ರಭು, ಸುನಿಲ್, ಲೋಕಿ, ಅನಿಲ್, ವಿ.ಎಸ್.ದಯಾನಂದ್, ಕೆಂಚ, ನಂದೀಶ್, ಶಿವು, ಪುರುಷೋತ್ತಮ್, ಭಾಸ್ಕರ್, ಸಿದ್ದಪ್ಪಾಜಿ, ದಿಲೀಪ್ ಸೇರಿದಂತೆ ಇತರರು ಇದ್ದರು.
ರಥೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದ್ದು ವಿಶೇಷವಾಗಿತ್ತು.
ರಥೋತ್ಸವದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವೈದ್ಯನಾಥೇಶ್ವರ ಶ್ರೀ ಪ್ರಸನ್ನ ಪಾರ್ವತಾಂಭ ವೈದ್ಯನಾಥೇಶ್ವರ ಟ್ರಸ್ಟ್ನ ಅಧ್ಯಕ್ಷ ವಿ.ಟಿ.ಶಿವರಾಜು, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಅಪ್ಪುಪಿ.ಗೌಡ, ವಿ.ಎಲ್.ರಾಜು, ವಿ.ಟಿ.ರಾಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
Mandya
ಪಕ್ಕದ ಮನೆಯವನ ಕಿರುಕುಳಕ್ಕೆ ಬೇಸತ್ತು ತಾಯಿ ಮಗಳು ನೇಣಿಗೆ ಶರಣು..?
ಮಂಡ್ಯ : ಪಕ್ಕದ ಮನೆಯವನ ಬೆದರಿಕೆ ಹಾಗೂ ಕಿರುಕುಳದಿಂದ ಬೇಸತ್ತು ತಾಯಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆಯೊಂದು ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿ ಹಳ್ಳಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಮಹೇಶ ಎಂಬುವರ ಪತ್ನಿಯಾದ 46 ವರ್ಷದ ಶಕುಂತಲಾದೇವಿ ಹಾಗೂ ಮಗಳು 19 ವರ್ಷದ ಪ್ರಿಯಾಂಕ ಎಂಬುವರೇ ಆತ್ಮಹತ್ಯೆ ಮಾಡಿ ಕೊಂಡ ದುರ್ದೈವಿಗಳಾಗಿದ್ದು, ಇಂದು

ಭಾನುವಾರ ಬೆಳಿಗ್ಗೆ 6.30 ರ ಸಮಯದಲ್ಲಿ ಮನೆಯಲ್ಲಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಮೃತ ಶಕುಂತಲಾದೇ ಪತಿ ಮಹೇಶ ಅವರು, ತನ್ನ ಮಗಳಾದ ಪ್ರಿಯಾಂಕಳಿಗೆ ಮದುವೆ ಮಾಡುವ ಸಿದ್ದತೆಯಲ್ಲಿ ನಮ್ಮ ಕುಟುಂಬ ತೊಡಗಿರುವಾಗ ಪಕ್ಕದ ಮನೆಯ ಮುತ್ತುರಾಜ್ ಎಂಬಾತ ಮದುವೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತ ಕಿರುಕಳ ನೀಡುತ್ತಿದ್ದ. ಇದರಿಂದ ಮನನೊಂದು ತಾಯಿ ಮಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಹಲಗೂರು ಠಾಣೆ ಪಿಎಸ್ ಐ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಬ್ಬರ ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಈ ಮದ್ಯೆ ಆರೋಪಿ ಮುತ್ತುರಾಜ್ ಮಾತ್ರೆಗಳನ್ನು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
Mandya
ಫೆ.10 ರಂದು ಹಿಂದು ಸಮಾಜ ಜಾಗೃತಿಗಾಗಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ : ಚಂದನ್
ಶ್ರೀರಂಗಪಟ್ಟಣ : ಆರ್‌ಎಸ್‌ಎಸ್‌ನ ೧೦೦ನೇ ವರ್ಷದ ಅಂಗವಾಗಿ ಹಾಗೂ ಹಿಂದು ಸಮಾಜ ಜಾಗೃತಿಗಾಗಿ ಫೆ. ೧೦ ರಂದು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ ಹಮ್ಮಿಕೊಂಡಿರುವುದಾಗಿ ಹಿಂದು ಜಾಗರಣೆ ವೇದಿಕೆ ಜಿಲ್ಲಾ ಸಂಚಾಲಕ ಚಂದನ್ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಚರು, ಅಂದು ಮಧ್ಯಾಹ್ನ ೪ ಗಂಟೆಗೆ ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯ ರಸ್ತೆ ಮೂಲಕ ಶ್ರೀ ರಂಗನಾಥ ಕಲ್ಯಾಣ ಮಂಟಪದ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಮಂಗಳ ವ್ಯಾದ್ಯದೊಂದಿಗೆ ಪೂರ್ಣ ಕುಂಬ ಹೊತ್ತ ಮಹಿಳೆಯರು ಹಾಗೂ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ನಡೆಸಲಾಗುವುದು. ಸಮಾಜದ ಮುಖಂಡರು ಸೇರಿದಂತೆ ಸುಮಾರು ೧ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.

ಶೋಭಾಯಾತ್ರೆ ಬಳಿಕ ಶ್ರೀ ರಂಗನಾಥ ಕಲ್ಯಾಣ ಮಂಟಪ ಮುಂಭಾಗ ಸಭಾ ಕಾರ್ಯಕ್ರಮ ನಡೆಯಲಿದೆ. ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ದೇವಸ್ಥಾನ ಸಂವರ್ಧನಾ ಸಮಿತಿ ಸಂಯೋಜಕ ಶ್ರೀ ಮನೋಹರ್ ಮಠದ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರಾದ ಲೋಕೇಶ್, ಹೇಮಂತ್‌ಕುಮಾರ್, ಶಂಕರ್, ಮಂಜುನಾಥ್, ಕಿರಣ್‌ಕುಮಾರ್ ಸಿಂಗ್ ಸೇರಿದಂತೆ ಇತರರು ಇದ್ದರು
-
Chamarajanagar17 hours agoನಾನಂಥವನಲ್ಲಾ ಎಂದ ನಂದಕುಮಮಾರ್: ಚಾಮರಾಜನಗರ ಹಿರಿಕಾಟಿ ಕ್ರಷರ್ ವಿವಾದಕ್ಕೆ ಸ್ಪಷ್ಟನೆ
-
Hassan15 hours agoಕೃಷಿ ಸಾಲವನ್ನು ತೀರಿಸಲಾಗದೆ ರೈತನೋರ್ವ ಆತ್ಮ*ತ್ಯೆ
-
Kodagu15 hours agoಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ಡಿವೈಎಸ್ಪಿ ಮಹೇಶ್ ಕುಮಾರ್
-
Uncategorized8 hours agoದಿ. ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಕಾರ್ ರೇಸ್ : ಕುಚುಕು ಗೆಳೆಯ ನನ್ನ ನೆನೆದ ಸಂಸದ ಸುನಿಲ್ ಬೋಸ್
-
Kodagu8 hours agoಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ
-
Kodagu8 hours agoಮಂಗಳವಾರ ಬ್ಯಾಡಗೊಟ್ಟ ಪಂಚಾಯತ್ ನ ನೂತನ ಕಟ್ಟಡ ಉದ್ಬಾಟನೆ
-
Uncategorized8 hours agoಫೆ.11ರಂದು ನಾಪೋಕ್ಲುವಿನಲ್ಲಿ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ
-
State9 hours agoಬೆಸ್ಕಾಂನಲ್ಲಿ 520 ಹುದ್ದೆಗಳಿಗೆ ನೇರ ನೇಮಕಾತಿ!
