Mandya
ಮಂಡ್ಯದಲ್ಲಿ ಮತ್ತೊಮ್ಮೆ ತಂಪೆರದ ವರುಣ ದೇವ – ಸೋಮವಾರ ನಗರದಲ್ಲಿ ಸುರಿದ ಮಳೆ
ಮಂಡ್ಯ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಸೋಮವಾರ ವರುಣ ದೇವ ತಂಪೆರೆದಿದ್ದು, ಸುದೀರ್ಘವಾಗಿ ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಜನತೆಗೆ ಹರ್ಷವನ್ನುಂಟು ಮಾಡಿದೆ.

ಮಂಡ್ಯ ಸೇರಿದಂತೆ ವಿವಿದೆಡೆ ಮಳೆಯಾಗುತ್ತಿದ್ದು, ಅತೀ ಉಷ್ಣಾಂಶದಿಂ ತತ್ತರಿಸಿ ಹೋಗಿದ್ದ ಜನತೆಗೆ ಇಂದಿನ ಮಳೆಯು ಹರ್ಷವನ್ನುಂಟು ಮಾಡಿದೆ. ಇಂದೂ ಸಹ ಬಾರೀ ಬಿರುಗಾಳಿ ಬೀಸುತ್ತಿದ್ದು, ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ
ಮೊನ್ನೆಯಷ್ಟೇ ಬೀಸಿದ ಭಾರೀ ಬಿರುಗಾಳಿಗೆ ಬಾಳೆ, ಅಡಿಕೆ, ವೀಳ್ಯ ಎಲೆ ಸೇರಿದಂತೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಮನೆಯ ಮೇಲ್ಛಾವಣಿಗಳು ಹಾರಿಹೋಗಿ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು.
Mandya
ಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
ಮದ್ದೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವುದನ್ನು ಎಲ್ಲರು ನಿರೀಕ್ಷೆ ಮಾಡಿದ್ದರು. ಇದು ಶಾಕಿಂಗ್ ಸುದ್ದಿ ಏನಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಅಭಿಪ್ರಾಯಪಟ್ಟರು.
ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಬರೀಷ್ ಅವರ ಸ್ವ ಗ್ರಾಮ ಭಾರತೀ ನಗರದ ಬಳಿಯ ದೊಡ್ಡರಸಿನಕೆರೆ ಗ್ರಾಮಕ್ಕೆ ಶುಕ್ರವಾರ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಷಯವಾಗಿ ಎರಡು ವರ್ಷದಿಂದ ಚಚರ್ೆ ನಡೆಯುತ್ತಿದೆ. ಇದೇನು ಅನಿರೀಕ್ಷಿತ ಶಾಕಿಂಗ್ ಸುದ್ದಿ ಏನಲ್ಲ ಎಂದ ಅವರು ಯಾರೇ ಮುಂದಿನ ಮುಖ್ಯಮಂತ್ರಿಯಾದರು ಜನಪರ ಆಡಳಿತ ನೀಡಬೇಕು ಎಂಬುವುದನ್ನು ರಾಜ್ಯದ ಜನರು ನಿರೀಕ್ಷೆ ಮಾಡುತ್ತಾರೆ ಎಂದರು.
ದಲಿತ ಮುಖ್ಯಮಂತ್ರಿ ಬಗ್ಗೆಯೂ ವಿಚಾರಗಳು ಹರಿದಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಪಕ್ಷ ಅಂತ ಹೇಳಿಕೊಳ್ಳುತ್ತಾರೆ. ಹೀಗಾಗಿ ಅದನ್ನು ಉಳಿಸಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು ಎಂದರು.

ರಾಜ್ಯ ಸಕರ್ಾರ ಅವಧಿ ಪೂರ್ಣ ಆಗುತ್ತೋ ಏನೋ ಗೊತ್ತಿಲ್ಲ. ನಾಯಕತ್ವ ಬದಲಾವಣೆ ಹೊಸದಲ್ಲ, ಹಾಗೂ ತಪ್ಪಲ್ಲ. ಜನರು ಇದನ್ನ ಅಕ್ಸೆಪ್ಟ್ ಮಾಡ್ತಾರ ಕಾದು ನೋಡಬೇಕು ಎಂದರು.
ಅಂಬರೀಷ್ ಅವರ ಬಗ್ಗೆ ಈಗಲೂ ಜಿಲ್ಲೆಯ ಜನರಿಗೆ ಹಾಗೂ ಅಭಿಮಾನಿಗಳಿಗೆ ಪ್ರೀತಿ, ಗೌರವ ಹಾಗೂ ಅಭಿಮಾನ ಕಡಿಮೆಯಾಗಿಲ್ಲ. ಹಾಗಿಯೇ ಇದೆ ಎಂದ ಅವರು ಪುತ್ರ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನಾನು ನಿಧರ್ಾರ ಮಾಡಲ್ಲ. ರಾಜಕೀಯ ಅಥವಾ ಸಿನಿಮಾ ರಂಗ ಎರಡರಲ್ಲಿ ಯಾವುದಾನ್ನಾದರೂ ಆಯ್ಕೆ ಮಾಡಿಕೊಳ್ಳುವುದು ಅಭಿಷೇಕ್‌ಗೆ ಬಿಟ್ಟ ವಿಚಾರ ಎಂದರು.

ಈಗ ನಾನು ಬಿಜೆಪಿ ಪಕ್ಷದಲ್ಲಿ ಇದ್ದೇನೆ ಪಕ್ಷವು ಏನು ಸೂಚನೆ ನೀಡುತ್ತದೆ ಆ ಪ್ರಕಾರ ಪಕ್ಷದ ಸಂಘಟನೆ ವಿಷಯದಲ್ಲಿ ನಡೆದುಕೊಳ್ಳುತ್ತೇನೆ ಎಂದರು.
ಮುಖಂಡರಾದ ಹನಕೆರೆ ಶಶಿ, ಬೇಲೂರು ಸೋಮಶೇಖರ್, ಹೊಟ್ಟೆಗೌಡನದೊಡ್ಡಿ ಬಿ.ನಾಗೇಶ್, ಗುಂಡಣ್ಣ, ಲೋಕಿ, ಕೆ.ಎಂ.ದೊಡ್ಡಿ ಶಶಿ, ಮದ್ದೂರು ವಿನಯ್, ಸೇರಿದಂತೆ ಇನ್ನಿತರರು ಹಾಜರಿದ್ದರು.
Mandya
ದಲಿತ ಸಿಎಂ ಆಯ್ಕೆಗೆ ಒತ್ತಾಯ : ಜೆ.ಪ್ರಸನ್ನ
ಮಂಡ್ಯ: ರಾಜ್ಯಕ್ಕೆ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಂತೆ ಭೀಮ ಸೇನೆ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜೆ.ಪ್ರಸನ್ನ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಹಿಂದುಳಿದ ಸಮುದಾಯಗಳ ರಾಜಕೀಯ ಪ್ರತಿನಿಧಿತ್ವವನ್ನು ಬಲಪಡಿಸಲು ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದರು.

ಜಿ.ಪರಮೇಶ್ವರ್ ಅಥವಾ ಸತೀಶ್ ಜಾರಕಿಹೋಳಿ ಅವರು ಸಚಿವರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಇವರು ಸಮರ್ಥ ನಾಯಕರಾಗಿದ್ದು, ರಾಜ್ಯದ ಅಭಿವೃದ್ಧಿಯ ದೃಷ್ಠಿಕೋನ ಹೊಂದಿದವರಾಗಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಸಲಿತ ಸಮುದಾಯಕ್ಕೆ ರಾಜಕೀಯ ಹುದ್ದೆಯ ಅತ್ಯನ್ನತ ಸ್ಥಾನ ದೊರೆಯುವ ಅಗತ್ಯ ಈಗ ಹೆಚ್ಚಾಗಿದ್ದು, ಸತೀಶ್ ಜಾರಕಿಹೋಳಿ ಅಥವಾ ಜಿ.ಪರಮೇಶ್ವರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುವಂತೆ ಆಗ್ರಹಿಸಿದರು.
ಒಂದು ವೇಳೆ ಮಾಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುವುದು ಎಂದು ಎಚ್ಚರಿಸಿದರು.

ಗೋಷ್ಟಿಯಲ್ಲಿ ನೂರ್ ಅಹಮದ್, ಟಿ.ಉಮಾಪತಿ, ರವಿಕುಮಾರ್, ರಜಿನಿ, ಅಹಲಾಯಿ ಇದ್ದರು.
Mandya
ಜೂ.4 ರಂದು ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಆಚರಿಸಿ : ತಗ್ಗಹಳ್ಳಿ ವೆಂಕಟೇಶ್
ಮಂಡ್ಯ: ರಾಜ್ಯ ಹಾಗೂ ಜಿಲ್ಲೆಯ ಎಲ್ಲಾ ಜನತೆ ಜೂ.೪ರಂದು ಮೈಸೂರು ಭಾಗದ ಅಭಿವೃದ್ಧಿಯ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಆಚರಿಸಬೇಕು ಎಂದು ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಹಳ್ಳಿಗಳು, ಪಟ್ಟಣಗಳ ಜನರು ಸ್ವಯಂ ಪ್ರೇರಣೆಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಆಚರಣೆ ಮಾಡಬೇಕು ಎಂದರು.

ಜಿಲ್ಲಾಡಳಿತ, ಜಿ.ಪಂ ಸಿಇಓ ಅವರು ವಿಶೇಷ ಆದೇಶ ಹೊರಡಿಸಿ ಜಿಲ್ಲಾದ್ಯಂತ ಇರುವ ಶಾಲೆ-ಕಾಲೇಜುಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಗ್ರಾ.ಪಂ ಕಚೇರಿ, ನಾಡಾ ಕಚೇರಿ, ಹಾಗೂ ಎಲ್ಲ ಸರಕಾರಿ ಕಚೇರಿಗಳಲ್ಲಿ ಮಹಾರಾಜರ ಜಯಂತಿ ಆಚರಣೆ ಮಾಡಿ, ಉಪನ್ಯಾಸ ನೀಡುವ ಮೂಲಕ ಅವರನ್ನು ಸ್ಮರಿಸುವಂತೆ ಮಾಡಬೇಕೆಂದು ಕೋರಿದರು.
ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಹ ಸ್ವಯಂಪ್ರೇರಣೆಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ, ಅನ್ನದಾನ ಮಾಡುವ ಮೂಲಕ ಗೌರವ ಸಮರ್ಪಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಟಿ.ಜಗದೀಶ್, ಸಹಕಾರ್ಯದರ್ಶಿ ಬಿ.ಎಂ.ದೇವೇಗೌಡ, ಸಾಂಸ್ಕೃತಿ ಕಾರ್ಯದರ್ಶಿ ಟಿ.ಡಿ.ನಾಗರಾಜು, ಪ್ರಧಾನ ಸಂಚಾಲಕ ಚಂದ್ರಶೇಖರ ದ.ಕೋಹಳ್ಳಿ ಇದ್ದರು.
-
Mandya20 hours agoತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಮುಂದುವರೆಸಿ : ಎಸ್.ರಮೇಶ್
-
National16 hours agoಹೈಕೋರ್ಟ್ ತೀರ್ಪುಗಳಿಗೆ 3 ತಿಂಗಳ ಗಡುವು: ಸುಪ್ರೀಂನಿಂದ ಐತಿಹಾಸಿಕ ಆದೇಶ
-
Kodagu17 hours agoರಸ್ತೆ ದಾಟಿದ ಬೃಹತ್ ಗಾತ್ರದ ಹೆಬ್ಬಾವು
-
Mandya18 hours agoಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
-
Kodagu20 hours agoಆದಿವಾಸಿ ಸಮುದಾಯದ ವಿದ್ಯಾವಂತರಿಗೆ ನೇಮಕಾತಿ ಜಾರಿಗೆ ಆಗ್ರಹಿಸಿ ಮನವಿ
-
State19 hours agoಡಿ.ಕೆ. ಶಿವಕುಮಾರ್ ಪ್ರಮಾಣವಚನ ಸಿದ್ಧತೆ: ರಾಮನಗರದಿಂದ 40–50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ
-
Politics24 hours agoಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ: ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ, ಸಂಪುಟ ಸೇರಲಿದ್ದಾರೆ 12-13 ಹಿರಿಯ ನಾಯಕರು!
-
Chamarajanagar23 hours agoಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
