Connect with us

National - International

ಭಾರತೀಯ ರೈಲ್ವೆ ಇಲಾಖೆಯಲ್ಲಿ ವಿವಿಧ 8 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Published

on

RRB NTPC Recruitment 2024 – ಭಾರತೀಯ ರೈಲ್ವೆ ಇಲಾಖೆಯು ನಿರುದ್ಯೋಗಿಗಳಿಗೆ ಹಲವು ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಸದ್ಯಕ್ಕೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಕ್ಲರ್ಕ್ ಸೇರಿದಂತೆ ಹಲವಾರು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.

ವಿವಿಧ ಎಂಟು ಸಾವಿರಕ್ಕೂ ಅಧಿಕ ಹುದ್ದೆಗಳ ವಿವರವು ಈ ಕೆಳಗಿನಂತಿದೆ :

* ಸ್ಟೇಷನ್ ಮಾಸ್ಟರ್ – 994
* ಗೂಡ್ಸ್ ಟ್ರೈನ್ ಮ್ಯಾನೇಜರ್ – 3,144
* ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ – 1,507
* ಟೈಪಿಸ್ಟ್ – 732
* ಟಿಕೆಟ್ ಸೂಪರ್ವೈಸರ್ – 1,736

ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿವಿಧ ಅರ್ಹತೆಗಳು :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹುದ್ದೆಗಳಿಗೆ ಅನುಗುಣವಾಗಿ ಅಧಿಕೃತ ಅಧಿಸೂಚನೆಯಲ್ಲಿ ನಿಗದಿಸಿರುವಂತೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಶಿಕ್ಷಣ ಮುಗಿಸಿರಬೇಕು. ಪ್ರಮುಖವಾಗಿ ನೀವು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 18ರಿಂದ ಗರಿಷ್ಠ 36 ವರ್ಷದ ಒಳಗಿರಬೇಕು. ಒಂದು ವೇಳೆ ನೀವು ಮೀಸಲಾತಿ ವರ್ಗಗಳಲ್ಲಿ ಬರುವುದಾದರೆ ನಿಮಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳ ಜೊತೆಗೆ ಮಾಸಿಕ 29,200ರೂ. ಯಿಂದ 35,400 ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ – ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವವರು ಅರ್ಜಿ ಶುಲ್ಕವಾಗಿ 250 ರೂ. ಪಾವತಿಸಬೇಕು.

ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2024 ಕೊನೆಯ ದಿನಾಂಕ ವಾಗಿರುತ್ತದೆ. ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿ.

ರೈಲ್ವೆ ಇಲಾಖೆಯ ಈ ನೇಮಕಾತಿಯ ಪ್ರಮುಖ ಲಿಂಕುಗಳು :
* ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ – www.rrbbnc.gov.in

Continue Reading

National - International

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ

Published

on

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಉಳಿದ ಏಳು ಜನರಿಗೆ ನೀಡಿದ್ದ ಜಾಮೀನು ಅರ್ಜಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರಕ್ಕೆ ಅಲ್ಪ ಹಿನ್ನಡೆಯಾಗಿದ್ದರೂ ಮತ್ತೊಂದೆಡೆ ಅಲ್ಪ ಮುನ್ನಡೆಯಾಗಿದೆ.

ದರ್ಶನ್‌ ಜಾಮೀನು ಅರ್ಜಿ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶುಕ್ರವಾರ (ಜ.24) ನಡೆಸಿದ ಕೋರ್ಟ್‌, ಜಾಮೀನು ರದ್ದುಗೊಳಿಸಲು ಸುಪ್ರೀಂ ನಿರಾಕರಿಸಿದೆ. ಅದ್ಯಾಗೋ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಪರಿಶೀಲಿಸಲು ಕೋರ್ಟ್‌ ಅನುಮತಿಸಿದೆ.

ಈ ಪ್ರಕರಣ ಸಂಬಂಧ ನ್ಯಾಯಾಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಹಾಗೂ ಆರ್‌. ಮಹದೇವನ್‌ ಇದ್ದ ಪೀಠವು ದರ್ಶನ್‌ ಹಾಗೂ ಉಳಿದ ಆರು ಮಂದಿಗೆ ನೋಟಿಸ್‌ ಹೊರಡಿಸಿದೆ.

Continue Reading

National - International

IAS, IPS ಸೇರಿದಂತೆ ವಿವಿಧ 979 ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ

Published

on

UPSC Recruitment 2025 – IAS Notification : ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದೇಶದ ಉನ್ನತ ಗ್ರೂಪ್ ಎ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಕೇಂದ್ರ ಲೋಕಸೇವಾ ಆಯೋಗವು (UPSC) ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.

ಎಷ್ಟು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಮತ್ತು ಯಾವ ಯಾವ ಹುದ್ದೆಗಳು?

ಕೇಂದ್ರ ಲೋಕಸೇವಾ ಆಯೋಗವು ಪ್ರತಿವರ್ಷ ಈ ನೇಮಕಾತಿಯನ್ನು ನಡೆಸುತ್ತದೆ. ಪ್ರಸ್ತುತ ಈ ವರ್ಷ ಒಟ್ಟು 979 ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಅವುಗಳಲ್ಲಿ IAS, IPS, IFS, IRS ಸೇರಿದಂತೆ ಹಲವು ಇಲಾಖೆಗಳ ಹುದ್ದೆಗಳು.

ಶೈಕ್ಷಣಿಕ ಅರ್ಹತೆ : ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಯಾವುದಾದರು ಪದವಿ ಮುಗಿಸಿದ್ದರೆ ಸಾಕು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಿರಿ.

Prelims Exam ನಡೆಯುವ ದಿನಾಂಕ – ಪೂರ್ವಭಾವಿ ಪರೀಕ್ಷೆಯು 25 ಮೇ 2025 ರಂದು ರಾಜ್ಯದ ಬೆಂಗಳೂರು, ಮೈಸೂರು ಮತ್ತು ಧಾರವಾಡ ಜಿಲ್ಲೆಯಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಸಲು ಪ್ರಮುಖ ಮಾಹಿತಿ :

ಅರ್ಹತೆ ಇರುವ ಅಭ್ಯರ್ಥಿಗಳು ಫೆಬ್ರವರಿ 11 ನೇ ತಾರೀಕಿನ ಒಳಗಾಗಿ ಆನ್ಲೈನ್ ಮೂಲಕ ಕೆಳಗಿನ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು UPSC ಅಧಿಕೃತ ಜಾಲತಾಣದ ಲಿಂಕ್ – https://upsconline.gov.in/upsc/OTRP/

Continue Reading

National - International

ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2025: ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಲಭಿಸುವ ವಿಶ್ವಾಸವಿದೆ ಎಂದ ಆಯುಕ್ತ ಹೇಮಂತ ನಿಂಬಾಳ್ಕರ್

Published

on

ನವದೆಹಲಿ: ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ಈ ಬಾರಿ “ಲಕ್ಕುಂಡಿಯ ಶಿಲ್ಪಕಲೆಯ ತೊಟ್ಟಿಲು”ವಿಷಯಾಧಾರಿತ ಸ್ತಬ್ಧಚಿತ್ರವು ಅತ್ಯಂತ ಅತ್ಯಾಕರ್ಷಣೀಯವಾಗಿದ್ದು, ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿರುವ ರಾಜ್ಯದ ಸ್ತಬ್ಧಚಿತ್ರವು ಪ್ರಶಸ್ತಿ ಪಡೆಯುವ ವಿಶ್ವಾಸವಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದಿಂದ ಭಾಗವಹಿಸಲಿರುವ ಸ್ತಬ್ಧಚಿತ್ರವು ಗದಗಿನ ಲಕ್ಕುಂಡಿಯಲ್ಲಿರುವ ಮಂದಿರಕ್ಕೆ ಹೋಲುವಂತಿರುವ ಸ್ತಬ್ಧಚಿತ್ರವನ್ನು ಅಂತರರಾಷ್ಟ್ರೀಯ ಕಲಾವಿದ ಶಶಿಧರ ಅಡಪ ವಿನ್ಯಾಸಗೊಳಿಸಿದ್ದು, ದೆಹಲಿಯ ರಾಷ್ಟ್ರೀಯ ರಂಗಶಾಲಾ ಕ್ಯಾಂಪಿನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯದ 50ಕ್ಕೂ ಹೆಚ್ಚು ಜನ‌ ಕಲಾವಿದರು,ಕುಶಲ ಕರ್ಮಿಗಳು ಮೈಕೊರೆಯುವ ಚಳಿಯಲ್ಲಿ ಸ್ತಬ್ಧಚಿತ್ರವನ್ನು ನಿರ್ಮಾಣಗೊಳಿಸಿದ್ದಾರೆ.
ಜ.23ರ ಗುರುವಾರ ನವದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ತಬ್ಧಚಿತ್ರದ ಪೂರ್ವಾಭ್ಯಾಸದಲ್ಲಿ ರಾಜ್ಯದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರಕ್ಕೆ ಎರಡೂ ಬದಿಯಲ್ಲಿ ನೆರೆದ ಜನಸ್ತೋಮವು ತಮ್ಮ ಹತ್ತಿರ ಸ್ತಬ್ಧಚಿತ್ರ ಬಂದಾಗ ಅದರ ವಿನ್ಯಾಸ, ಶಿಲ್ಪಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿದ ಕಲಾವಿದರ ದೃಶ್ಯವನ್ನು ಕಂಡ ಜನರು ಕರತಾಡನ ಮೂಲಕ ಅಭೂತಪೂರ್ವವಾಗಿ ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಕರ್ತವ್ಯಪಥದಲ್ಲಿ ಸೇರಿದ ಜನರಿಂದ ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ದೊರೆಯಲಿದೆ ಎಂಬ ವಿಶ್ವಾಸವನ್ನು ಆಯುಕ್ತರಾದ ಹೇಂಮಂತ್ ನಿಂಬಾಳ್ಕರ್ ಅವರು ವ್ಯಕ್ತಪಡಿಸಿದರು.

ಕರ್ತವ್ಯ ಪಥದಲ್ಲಿ ಸಾಗಿದ ಸ್ತಬ್ದಚಿತ್ರಕ್ಕೆ ಕನ್ನಡ ಸಾಹಿತ್ಯ ಇರುವ “ಶಿಲ್ಪಕಲೆಯ ತೊಟ್ಟಿಲು ನಮ್ಮ ಗದುಗಿನ ಲಕ್ಕುಂಡಿ” ಎಂಬ ಹಾಡಿಗೆ ಹೆಸರಾಂತ ಕಲಾವಿದ ಪ್ರವೀಣ ಡಿ.ರಾವ್ ಅವರ ಸಂಗೀತ ಸಂಯೋಜನೆಯ ನೀನಾದಕ್ಕೆ ಗದಗ, ಬೆಂಗಳೂರು, ಮೈಸೂರು ಹಾಗೂ ಧಾರವಾಡದಿಂದ ಆಗಮಿಸಿದ ಸ್ತಬ್ಧಚಿತ್ರದ ಕಲಾವಿದರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ಹೆಚ್ಚಿನ ಮೆರಗು ತಂದಿದ್ದಲ್ಲದಲೇ ಅಲ್ಲಿ ಸೇರಿದವರನ್ನು ರೋಮಾಂಚನಗೊಳಿಸಿತು.

ಸ್ತಬ್ದಚಿತ್ರದ ಮೇಲ್ಭಾಗದಲ್ಲಿ 10 ಜನ ಕಲಾವಿದರು ಸೇರಿದಂತೆ 18 ಜನ ಕಲಾವಿದರಿದ್ದು, ಸ್ತಬ್ಧಚಿತ್ರದ ಇಕ್ಕೆಲಗಳಲ್ಲಿ ನಾಲ್ಕು ಪುರುಷ-ಮಹಿಳೆಯರು ಸಾಂಪ್ರಾದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದು, ಸ್ತಬ್ಧಚಿತ್ರಕ್ಕೆ ಇನ್ನಷ್ಟು ಮೆರಗು ತಂದಿತು.

ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, ಕ್ರಿ. ಶ. 10 ರಿಂದ 12 ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.

ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.

ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.

Continue Reading

Trending

error: Content is protected !!