Connect with us

Chamarajanagar

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ: 32 ಕ್ವಿಂಟಾಲ್ ಅಕ್ಕಿ ವಶ

Published

on

ಗುಂಡ್ಲುಪೇಟೆ : ಜೂ.27: ಪಟ್ಟಣದ ಮಹದೇವಪ್ರಸಾದ್ ನಗರದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 32 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಮಹದೇವಪ್ರಸಾದ್ ನಗರದ ನಿವೇಶನವೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿಟ್ಟಿದ್ದಾರೆ.

ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್ ಪೆಕ್ಟರ್ ಎನ್.ಜಯಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಸುಮಾರು 32 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ನಿವೇಶನ ಸಂಖ್ಯೆ: 425 ರ ಮಾಲೀಕನ ಮೇಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Chamarajanagar

ಸಂತ ಪೌಲರ ಚರ್ಚ್‌ನಲ್ಲಿ ಸಡಗರದಿಂದ ಜರುಗಿದ ವಾರ್ಷಿಕ ಹಬ್ಬ

Published

on

ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಸಂತ ಪೌಲರ ಚರ್ಚ್‌ನಲ್ಲಿ ಸಡಗರ ಸಂಭ್ರಮದಿಂದ ವಾರ್ಷಿಕ ಹಬ್ಬ ನಡೆಯಿತು.
ಚಾಮರಾಜನಗರ, ನಾಗವಳ್ಳಿ, ದೊಡ್ಡರಾಯಪೇಟೆ, ಕೋಡಿಉಗನೆ ಹಾಗೂ ತಾಳವಾಡಿ ವ್ಯಾಪ್ತಿಯ ನೂರಾರು ಮಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಆಡಂಬರ ಗಾಯನ ದಿವ್ಯ ಬಲಿಪೂಜೆ: ಮೈಸೂರು ಕೃಪಾಲಯದ ಗುರು ಅಲೆಕ್ಸ್ ಆಡಂಬರ ಗಾಯನ ದಿವ್ಯ ಬಲಿಪೂಜೆ ಸಮರ್ಪಿಸಿದರು. ಬೈಬಲ್ ವಾಚನ, ಸಂದೇಶ ಪಠನ ನಡೆಯಿತು. ಪ್ರಬೋಧನೆ ನೀಡಿದ ಗುರು ಅಲೆಕ್ಸ್, ಸೌಲನಾಗಿದ್ದ ಪೌಲನು ಯೇಸುವಿನ ಅಶರೀರವಾಣಿ ಕೇಳಿ ಜ್ಞಾನೋದಯವಾಗಿ ಕ್ರಿಸ್ತನ ಸಂದೇಶ ಸಾರಿದರು. “ಈಸಬೇಕು ಭಕ್ತರೇ, ಜೈಸಬೇಕು ಮಿತ್ರರೇ” ಎಂಬುದು ಆತನ ಧ್ಯೇಯವಾಕ್ಯ. ಆತ ಪ್ರೀತಿ, ಸಹನೆ, ಸೈರಣೆಯನ್ನು ಅಳವಡಿಸಿಕೊಳ್ಳುವಂತೆ ಪತ್ರಗಳ ಮೂಲಕ ಕರೆ ನೀಡಿದರು ಎಂದು ಹೇಳಿದರು. ಬಲಿಪೂಜೆ ಬಳಿಕ ಗುರುವರ್ಯರು ಮತ್ತು ಹಬ್ಬದ ದಾನಿಗಳನ್ನು ಗೌರವಿಸಲಾಯಿತು.

ಪೂರ್ವ ಸಿದ್ಧತೆ: ಹಬ್ಬದ ಮೂರು ದಿನಗಳ ಮೊದಲು ಧ್ವಜಾರೋಹಣ ಮತ್ತು ವಿವಿಧ ಧರ್ಮಕೇಂದ್ರಗಳ ಗುರುಗಳಿಂದ ದಿವ್ಯ ಬಲಿಪೂಜೆ, ಪ್ರಬೋಧನೆಯೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಚರ್ಚ್ ಅನ್ನು ವಿದ್ಯುತ್ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು.

ತೇರಿನ ಮೆರವಣಿಗೆ: ಪೂಜಾ ವಿಧಿಗಳ ಬಳಿಕ ಸರ್ವಾಲಂಕೃತ ಸಂತ ಪೌಲರ ಪುತ್ಥಳಿಯ ತೇರು ಚರ್ಚ್‌ನಿಂದ ಹೊರಟು ರಾಮಸಮುದ್ರ, ಬಾಗೇಮರದ ಮೂಲಕ ಡಿವೈಎಸ್ಪಿ ಕಛೇರಿ ವರೆಗೆ ಸಾಗಿ ಮತ್ತೆ ಚರ್ಚ್‌ಗೆ ಮರಳಿತು. ಮೆರವಣಿಗೆಯಲ್ಲಿ ಹೂ ಕುಂಡಗಳು, ಪಟಾಕಿ ಸಿಡಿಸಲಾಯಿತು. ಕೇರಳದ ಚಂಡೆ ಮದ್ದಳೆ ತಂಡ ವಿಶೇಷ ಆಕರ್ಷಣೆಯಾಗಿತ್ತು. ಗುರುವರ್ಯರು, ಬ್ರದರ್ಸ್, ಸಿಸ್ಟರ್ಸ್, ಮಕ್ಕಳು ಹಾಗೂ ಭಕ್ತರು ಭಕ್ತಿಗೀತೆ ಹಾಡುತ್ತಾ, ಜಪಸರ ಹೇಳುತ್ತಾ ಪಾಲ್ಗೊಂಡರು. ಕೊನೆಯಲ್ಲಿ ಪರಮಪ್ರಸಾದದ ಆಶೀರ್ವಾದ ಮತ್ತು ಪ್ರಸಾದ ವಿತರಣೆ ನಡೆಯಿತು.


ಹಬ್ಬದ ನೇತೃತ್ವವನ್ನು ಧರ್ಮಕೇಂದ್ರದ ಗುರು ಇಜ್ಞಾಸಿ ಮುತ್ತು ವಹಿಸಿದ್ದರು. ಮೈಕೆಲ್ ಅಗುಷ್ಟಿನ್, ಕ್ರಿಸ್ಟೋಫರ್ ಸಹಾಯರಾಜ್, ಪ್ರಶಾಂತ್, ದೊರೈಸ್ವಾಮಿ ಸೇರಿದಂತೆ ವಿವಿಧ ಧರ್ಮಕೇಂದ್ರಗಳ ಗುರುಗಳು ಪೂಜಾ ವಿಧಿಗಳಲ್ಲಿ ಭಾಗವಹಿಸಿದ್ದರು.

Continue Reading

Chamarajanagar

ರೈತ ಸಂಘದ ತಾಲೂಕು ಘಟಕಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

Published

on

ಗುಂಡ್ಲುಪೇಟೆ: ಜು.20- ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು, ಮಹಿಳಾ ಹಾಗೂ ಯುವ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಪಟ್ಟಣದ ಜ್ಞಾನ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗೀಯ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜ್ ವಹಿಸಿದ್ದರು. ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಸಭೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ನಾಗರಾಜಪ್ಪ, ಕಾರ್ಯಾಧ್ಯಕ್ಷರಾಗಿ ಸಿದ್ದಶೆಟ್ಟಿ, ಅಧ್ಯಕ್ಷರಾಗಿ ಮಲ್ಲಯ್ಯನಪುರ ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್, ಉಪಾಧ್ಯಕ್ಷರಾಗಿ ಶಿವಕುಮಾರ್, ಸುಭಾಷ್, ಪ್ರಕಾಶ್ ಹಾಗೂ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ರವಿಚಂದ್ರ ಮತ್ತು ಸಿದ್ದರಾಜು, ಕೋಶಾಧ್ಯಕ್ಷರಾಗಿ ನಾಗಶೆಟ್ಟಿ ಹಾಗೂ ಖಜಾಂಜಿಯಾಗಿ ಮೂರ್ತಿ ಸರ್ವಾನುಮತದಿಂದ ಆಯ್ಕೆಯಾದರು.


ಯುವ ಘಟಕದ ತಾಲೂಕು ಅಧ್ಯಕ್ಷರಾಗಿ ಪ್ರವೀಣ್, ಪ್ರಧಾನ ಕಾರ್ಯದರ್ಶಿಯಾಗಿ ರಘು, ಉಪಾಧ್ಯಕ್ಷರಾಗಿ ಪ್ರಜ್ವಲ್, ಸಾಗರ್, ಮಂಜು ಹಾಗೂ ಗುರುಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್, ಮಹದೇವಸ್ವಾಮಿ ಮತ್ತು ರೋಹಿತ್ ಗೌಡ ಆಯ್ಕೆಯಾದರು.ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ಬಸಮ್ಮ, ಗೌರವಾಧ್ಯಕ್ಷರಾಗಿ ನಾಗಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಚಿಕ್ಕಸಿದ್ದಮ್ಮ ಹಾಗೂ ಉಪಾಧ್ಯಕ್ಷರಾಗಿ ಬೆಳ್ಳಮ್ಮ ಮತ್ತು ರಶ್ಮಿ ಆಯ್ಕೆಯಾದರು. ಈ ವೇಳೆ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯೂ ಸಹ ನಡೆಯಿತು.

ಜಿಲ್ಲಾ ಅಧ್ಯಕ್ಷ ಶಿವಪುರ ಮಹಾದೇವಪ್ಪ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರ, ಸಂಘಟನೆ ಬಲವರ್ಧನೆ ಹಾಗೂ ಗ್ರಾಮ ಮಟ್ಟದಲ್ಲಿ ರೈತ ಸಂಘವನ್ನು ಮತ್ತಷ್ಟು ಸಶಕ್ತಗೊಳಿಸುವ ಅಗತ್ಯವನ್ನು ಒತ್ತಿಹೇಳಿದರು.

ನೂತನ ಪದಾಧಿಕಾರಿಗಳು ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದರ ಜೊತೆಗೆ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಹಾಗೂ ಸಂಘಟನೆಯನ್ನು ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಯುವ ಘಟಕದ ಸಂಚಾಲಕ ಯಶ್ವಂತ್, ಮಲ್ಲಣ್ಣ, ಸಿದ್ದರಾಜು ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Continue Reading

Chamarajanagar

ದೇವಾಂಗ ಬೀದಿಯಲ್ಲಿ ಏರ್ ಟೆಲ್ ಕಂಪನಿಯಿಂದ ಅಕ್ರಮವಾಗಿ ರಸ್ತೆ ಅಗೆದು ಗುಂಡಿ: ನಿವಾಸಿಗಳ ಆರೋಪ

Published

on

ಚಾಮರಾಜನಗರ: ನಗರದ 11ನೇ ವಾರ್ಡಿಗೆ ಸೇರಿದ ದೇವಾಂಗ ಬೀದಿ ಎರಡನೇ ರಸ್ತೆಯಲ್ಲಿ ಏರ್ಟೆಲ್ ಕಂಪನಿಯವರು ಅಕ್ರಮವಾಗಿ ರಸ್ತೆಯನ್ನು ಅಗೆದು ಟವರ್ ಗೆ ಪೈಪ್ ಲೈನ್ ಕನೆಕ್ಷನ್ ಕೊಡಲು ಮುಂದಾಗಿದ್ದಾರೆ ಎಂದು ನಿವಾಸಿಗಳು ಆರೋಪ ಮಾಡಿದ್ದಾರೆ.

ಈಗಾಗಲೇ ದೇವಾಂಗ ಎರಡನೇ ರಸ್ತೆ ತುಂಬಾ ಕಿರಿದಾಗಿದ್ದು, ಒಂದು ಆಟೋ ಸಹ ಸಂಚರಿಸಲು ಆಗುತ್ತಿಲ್ಲ. ಅಲ್ಲದೇ ಕುಡಿಯುವ ನೀರಿನ ಪೈಪ್ ಲೈನ್ ಗೆ ರಸ್ತೆ ಅಗೆದು ಪೈಪ್ ಹಾಕಿ ಮುಚ್ಚಲಾಗಿದೆ. ಈಗ ಅದೇ ಸ್ಥಳದಲ್ಲಿ ಮತ್ತೆ ರಸ್ತೆಯನ್ನು ಅಗೆದು ಜನರು ಹಾಗೂ ವಾಹನಗಳು ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ.


ಈ ಸಂಬಂಧ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಸಂಬಂಧ ಪಟ್ಟ ಕಾಮಗಾರಿ ನಿರ್ವಹಿಸುತ್ತಿರುವವರಿಗೆ ತಕ್ಷಣ ಕಾಮಗಾರಿ ನಿಲ್ಲಿಸಿ ಕಚೇರಿಗೆ ಬಂದು ಸೂಕ್ತ ಮಾಹಿತಿ ಒದಗಿಸಬೇಕೆಂದು ಪೌರಾಯುಕ್ತರು ಸೂಚಿಸಿದ್ದಾರೆ.

ದೇವಾoಗ ಬೀದಿ ಎರಡನೇ ರಸ್ತೆ ತುಂಬಾ ಕಿರಿದಾಗಿದ್ದು, ಆಟೋ ಓಡಾಡಲು ಸಹ ಸಾಧ್ಯವಾಗುತ್ತಿಲ್ಲ, ಈಗಾಗಲೇ ಬೇರೆ ಬೇರೆ ಕಂಪನಿಗಳು ಸಹ ರಸ್ತೆಯನ್ನು ಗುಂಡಿ ಮಾಡಿ ಹಾಲುಗೆಡವಿದ್ದಾರೆ, ಇಲ್ಲಿ ವಾಸದ ಮನೆಗಳಿದ್ದು ಹಿರಿಯರು ಮಕ್ಕಳು ಸಾರ್ವಜನಿಕರು ವಾಸಿಸುತ್ತಿದ್ದು ಟವರ್ ಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಟವರ್ ಗಳನ್ನು ಊರಿನಿಂದ ಆಚೆ ನಿರ್ಮಾಣ ಮಾಡಬೇಕು. ಯಾವುದೇ ನಿಯಮಗಳನ್ನು ಪಾಲಿಸದೆ ಸಾರ್ವಜನಿಕರ ವಾಸಿಸುವ ಬೀದಿಗಳಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ಬರುವ ಕಟ್ಟಡಗಳನ್ನು ಆಯ್ದುಕೊಂಡು ಟವರ್ ನಿರ್ಮಾಣ ಮಾಡುತ್ತಿರುವುದು, ಸೂಕ್ತವಲ್ಲ, ಒಂದು ವೇಳೆ ಕಾಮಗಾರಿ ಮುಂದುವರಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾಗರಿಕರು ಎಚ್ಚರಿಸಿದ್ದಾರೆ.

Continue Reading

Trending

error: Content is protected !!