Connect with us

Location

ರೈತರ ಹಿತವೇ ನಮಗೆ ಮುಖ್ಯ; ಸಿಎಂ ಸಿದ್ದರಾಮಯ್ಯ

Published

on

 

ಮೈಸೂರು: ನಾವು ತಮಿಳು ನಾಡಿಗೆ ಖುಷಿಯಿಂದ ನೀರು ಬಿಡುತ್ತಿಲ್ಲ. ರೈತರ ಹಿತದೃಷ್ಟಿ ಕಾಪಾಡುವುದು ನಮಗೆ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವೇನು ಖುಷಿಯಿಂದ ನೀರು ಬಿಡುತ್ತಿಲ್ಲ. ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ನೀರು ಬಿಡುತ್ತಿದ್ದೇವೆ. ಸೆ.21ರಂದು ಸುಪ್ರೀಂಕೋರ್ಟ್​ ನಲ್ಲಿ ಕಾವೇರಿ ನದಿ ನೀರಿನ ವಿಚಾರಣೆ ಇದೆ. ನಮ್ಮ ವಕೀಲರು ರಾಜ್ಯದ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಾರೆ. ರಾಜ್ಯದ ರೈತರ ಹಿತದೃಷ್ಟಿ ಕಾಪಾಡುವುದು ನಮಗೆ ಮುಖ್ಯ ಎಂದು ಹೇಳಿದರು.

ಉಬರ್​​​ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ

ಖಾಸಗಿ ವಾಹನದವರು ಬಂದ್, ಹೋರಾಟ ಮಾಡುವ ಅಗತ್ಯವಿಲ್ಲ. ಖಾಸಗಿ ಬಸ್ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಆಟೋ, ಉಬರ್​​​ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ. ಪ್ರಯಾಣಿಕರಿಗೆ ತೊಂದರೆ ಕೊಡುವುದು ಒಳ್ಳೆಯದಲ್ಲ. ಖಾಸಗಿ ಸಾರಿಗೆ ಒಕ್ಕೂಟದ ಬಗ್ಗೆ ನನಗೆ ಸಿಂಪತಿ ಇದೆ. ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೇರೆ ಏನಾದರೂ ಸಮಸ್ಯೆ ಇದ್ದರೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಪ್ರಯಾಣಿಕರಿಗೆ ತೊಂದರೆ ಮಾಡೋದು ಸರಿಯಲ್ಲ ಅಂದುಕೊಂಡಿದ್ದೇನೆ. ನಾವು ಯಾವ ರೀತಿ ನಿರ್ಧಾರ ಕೈಗೊಳ್ಳಬಹುದು ಎಂಬ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ಶ್ರೀಮದ್ ರಂಭಾಪುರೀ ವೀರಾಸಿಂಹಾಸನ ಶಾಖಾ ಸಂಸ್ಥಾನ ಕಾರ್ಜುವಳ್ಳಿ ಹಿರೇಮಠದಲ್ಲಿ ಡಿ.17 ರಿಂದ 21ರ ವರೆಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ

Published

on

ಆಲೂರು: ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಡಿ. 17 ರಿಂದ ಡಿ. 21 ವರೆಗೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರುಗಳವರ ದಿವ್ಯ ಸಾನಿದ್ಯದಲ್ಲಿ ಶ್ರೀ ಷ.ಬ್ರ.ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳವರ ಪಟ್ಟಾಧಿಕಾರದ ತೃತೀಯ ವರ್ಷದ ವಾರ್ಷಿಕೋತ್ಸವ, ಲಿಂ. ಶ್ರೀ ಷ.ಬ್ರ. ರುದ್ರಮುನಿಶಿವಾಚಾರ್ಯಸ್ವಾಮಿಗಳವರ 45ನೇ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ.ಷ.ಬ್ರ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು. ಡಿ. 17 ರ ರವಿವಾರ
ಶ್ರೀ. ಷ.ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಭಿಷೇಕದ ತೃತೀಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ 7ಗಂಟೆಗೆ ಶ್ರೀ. ಷ.ಬ್ರ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತಪೋಕ್ಷೇತ್ರ ಕಡೇನಂದಿಹಳ್ಳಿ ಇವರ ನೇತೃತ್ವದಲ್ಲಿ ಮಹಾರುದ್ರಾಭಿಷೇಕ, ದುರ್ಗಾಸೂಕ್ತ ಪಾರಾಯಣ, ಪೂರ್ವಕ ಕ್ಷೀರಾಭಿಷೇಕ. 8.30 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ವಿವಿಧ ತರಕಾರಿ ಅಲಂಕಾರ ಸಹಸ್ರ ಪುಷ್ಪಾರ್ಚನೆ, ರಾಜೋಪಚಾರ ಪೂಜೆ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪಂಚಸಹಸ್ರ ದೂರ್ವಾರ್ಚನೆ ಶ್ರೀ ಇಷ್ಟನಾಗ ಸಿದ್ದಿನಾಗ ಮುಕ್ತಿನಾಗ, ದೇವರ ಸನ್ನಿದಾನದಲ್ಲಿ ಸಹಸ್ರ ಅಡಿಕೆ ಹೊಂಬಾಳೆ ಪುಷ್ಪಾರ್ಚನೆ ಶ್ರೀ ಮಠದ ಮುಂಭಾಗದಲ್ಲಿ ರುದ್ರಹೋಮ ಪ್ರಾರಂಭ ಶ್ರೀ. ಷ.ಬ್ರ ಸದಾಶಿವಚಾರ್ಯ ಸ್ವಾಮಿಗಳವರಿಗೆ ಮಹಾಭಿಷೇಕ. ಡಿ. 18ನೇ ಸೋಮವಾರ ಚಂಪಾ/ಸುಬ್ರಮಣ್ಯ ಷಷ್ಠಿ ಹಾಗೂ ಲಿಂ. ಶ್ರೀ, ಷ. ಬ್ರ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳರವರ 45ನೇ ವರ್ಷದ ಪುಣ್ಯರಾಧನೆ ಮತ್ತು ಶ್ರೀ ಮಠದಲ್ಲಿ ವಿಶೇಷ ಪುರಸ್ಕಾರಗಳು ನೇರವೇರಲಿದೆ. ಡಿ.19ನೇ ಮಂಗಳವಾರ ಶ್ರೀ. ಷ.ಬ್ರ ಸದಾಶಿವ ಶಿವಾಚಾರ್ಯ ಸ್ವಾಮಿಗಳವರ ಜನ್ಮ ವರ್ಧಂತಿಯ ಅಂಗವಾಗಿ ಶ್ರೀ. ಷ.ಬ್ರ. ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಶ್ರೀ ರಾಮಲಿಂಗೇಶ್ವರ ಮಠ ಹಾರನಹಳ್ಳಿ ಇವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಡಿ. 20 ನೇ ಬುಧವಾರ ಪ್ರದೇಶಾಭಿವೃದ್ಧಿಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರಿ.ಷ.ಬ್ರ. ಪಟ್ಟದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ ನಾಗಲಾಪುರಮಠ ಕೋಲಾರ ಇವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿದೆ. ಡಿ.21ನೇ ಗುರುವಾರ ಶ್ರೀ ಕ್ಷೇತ್ರಕ್ಕೆ ಗುರುಬಲ ಪ್ರಾಪ್ತಿಗಾಗಿ ಧರ್ಮ ಸಂವರ್ಧನಾ ಸಭೆ ದಿವ್ಯ ಸಾನಿಧ್ಯ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧಿಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಾಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರ ದಿವ್ಯ ಸಾನಿಧ್ಯದಲ್ಲಿ 2024ನೇ ವರ್ಷದ ಶ್ರೀ ಮಠದ ಕ್ಯಾಲೆಂಡರ್ ಬಿಡುಗಡೆ, ಶ್ರೀ ಮಠದ ನೂತನ ಮಾಸ ಪತ್ರಿಕೆಯ ಪ್ರಾಯೋಗಿಕ ಪ್ರತಿ ಬಿಡುಗಡೆ, ಧರ್ಮ ಸಂವರ್ಧಕ ಪ್ರಶಸ್ತಿ ಪ್ರಧಾನ, ಧರ್ಮ ಹಿತಚಿಂತಕ ಪ್ರಶಸ್ತಿ ಪ್ರಧಾನ, ದಾಸೋಹ ಸೇವಾ ಭೂಷಣಾ ಪ್ರಶಸ್ತಿ ಪ್ರದಾನ ನೆರವೇರಲಿದೆ.

ಧರ್ಮ ಸಂವರ್ಧಕ, ಧರ್ಮ ಹಿತಚಿಂತಕ, ದಾಸೋಹ ಸೇವಾ ಭೂಷಣಾ ಪ್ರಶಸ್ತಿಗಳ ಪ್ರದಾನ ಸಮಾರಂಭ : ಈ ಭಾರಿಯ ಧರ್ಮ ಸಂವರ್ಧಕ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಸಮಾಜ ಸೇವಕ ಹಾಗು ಸ್ಟೋನ್ ಕ್ರಷರ್ ಮಾಲೀಕರಾಗಿರುವ ಶ್ರೀ ಸುರೇಶ್ ರವರಿಗೆ ಮತ್ತು ಧರ್ಮ ಹಿತಚಿಂತಕ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ಸಭಾ ಹಾಗೂ ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ತಾಲ್ಲೂಕು ಅಧ್ಯಕ್ಷರಾದ
ಶಿವಮೂರ್ತಿ ಎಸ್.ಎಸ್ ರವರಿಗೆ ಹಾಗು ದಾಸೋಹ ಸೇವಾ ಪೋಷಣಾ ಪ್ರಶಸ್ತಿಯನ್ನು ಜಿಲ್ಲಾ ಹೆಚ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಜಗದೀಶ್ ಕಬ್ಬಿನಹಳ್ಳಿ ರವರಿಗೆ ಗೌರವಿ ಸನ್ಮಾನಿಸಲಾಗುವುದು
ಎಂದು ತಿಳಿಸಿದರು.

ವರದಿ ಸತೀಶ್ ಚಿಕ್ಕಕಣಗಾಲು

Continue Reading

Hassan

ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪ

Published

on

ಆಲೂರು: ಸತತ ಎಂಟು ಬಾರಿ ತಾಯಿ ಚಾಮುಂಡೇಶ್ವರಿ ದೇವಿಯ ಸೇವೆಯನ್ನ ಮಾಡಿದ ಕ್ಯಾಪ್ಟನ್ ಅರ್ಜುನನ ಸಾವಿಗೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಸಂತಾಪವನ್ನು ವ್ಯಕ್ತಪಡಿಸಿದರು.
ಇಡೀ ಕರ್ನಾಟಕದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಎನ್ನುವ ಮಾತನ್ನು ಕೇಳಿದಾಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು.


ಇಂತಹ ಒಂದು ದೊಡ್ಡ ಸಮಸ್ಯೆಯನ್ನು ಈ ಭಾಗದ ಜನರು ಹಲವಾರು ವರ್ಷಗಳಿಂದ ಎದುರಿಸಿಕೊಂಡು ಬರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಕಾಡಾನೆ ಮಾನವ ಸಂಘರ್ಷದಿಂದ ಈ ಭಾಗದಲ್ಲಿ ಸಾವು ನೋವುಗಳ ಸುದ್ದಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಎಂದು ಹೇಳಲು ಅತ್ಯಂತ ದುಃಖವೆನಿಸುತ್ತದೆ.
ಈ ಒಂದು ಸಮಸ್ಯೆಯ ಭಾಗವಾಗಿ ನೆನ್ನೆ ಕಾಡಾನೆ ಕಾರ್ಯಾಚರಣೆಗೆ ಇಳಿದಂತಹ ಕ್ಯಾಪ್ಟನ್ ಅರ್ಜುನ ಆನೆ ಮೃತಪಟ್ಟಿರುವುದು. ಇತ್ತೀಚಿಗಷ್ಟೇ ಅರವಳಿಕೆ ತಜ್ಞರಾದ ವೆಂಕಟೇಶ್ ರವರನ್ನ ಕಳೆದುಕೊಂಡೆವು ಇಂದು ಆನೆಗಳನ್ನ ಹಿಡಿಯುವ ಬಲಿಷ್ಠವಾದ ಹಾಗೂ ಕಾಡಾನೆ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿದ್ದ ಅದೆಷ್ಟೋ ಊರುಗಳಿಗೆ ಕಾಡು ಪ್ರಾಣಿಗಳಿಂದ ಮುಕ್ತಿಯನ್ನು ನೀಡಿದ ಅರ್ಜುನನನ್ನು ಕಳೆದುಕೊಂಡಿದ್ದೇವೆ. ಕಾಡಾನೆ ಮತ್ತು ಮಾನವ ಸಂಘರ್ಷ ನಿಲ್ಲಲು ಇನ್ನೂ ಅದೆಷ್ಟು ಸಾವು ನೋವುಗಳು ಆಗಬೇಕೋ ಎನ್ನುವುದು ಖಂಡಿತವಾಗಿಯೂ ತಿಳಿಯುತ್ತಿಲ್ಲ ಈ ಮಲೆನಾಡಿನ ಜನರು ಬೆಳಗ್ಗೆ ಎದ್ದಾಕ್ಷಣ ಭಯದ ನೆರಳಿನಲ್ಲಿ ಜೀವನವನ್ನು ನಡೆಸುವಂತೆ ಆಗಿದೆ ಸರ್ಕಾರಗಳು ಬದಲಾಗುತ್ತಿವೆ ಅಧಿಕಾರಿಗಳು ಬದಲಾಗುತ್ತಿದ್ದಾರೆ ಎಲ್ಲವೂ ಬದಲಾಗುತ್ತಿದೆ ಆದರೆ ಮಲೆನಾಡಿನ ಭಾಗಕ್ಕೆ ಕಾಡಾನೆ ಮತ್ತು ಮಾನವರ ಸಂಘರ್ಷ ಬದಲಾಗುತ್ತಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಇಲ್ಲಿ ಸರ್ಕಾರ ವಿಫಲವಾಗಿದೆಯೋ ಅಧಿಕಾರಿಗಳು ವಿಫಲರಾಗಿದ್ದಾರೋ ಅಥವಾ ಮಲೆನಾಡಿನ ಭಾಗವೇ ಎಲ್ಲದರಿಂದ ವಂಚಿತವಾಗಿದೆಯೋ ಆದರೆ ಅದರ ಫಲಿತಾಂಶ ಮಾತ್ರ ಮಲೆನಾಡಿನ ಭಾಗ ಸದಾವಕಾಲ ಸಾವು ನೋವುಗಳನ್ನು ಎದುರಿಸುವಂಥಾಗಿದೆ.


ಸರ್ಕಾರಕ್ಕೆ ಮನವಿ ಮಾಡಿದರು ಅಧಿಕಾರಿಗಳಿಗೆ ಮನವಿ ಮಾಡಿದರು ಸ್ಪಂದನೆಯಿಲ್ಲ. ಕೊನೆಯದಾಗಿ ಪ್ರತಿಭಟನೆಗಳನ್ನ ಮಾಡಿದರು ಕೂಡ ಸಮಸ್ಯೆಯ ತೀವ್ರತೆಯನ್ನು ಅರಿತುಕೊಳ್ಳದ ಸರ್ಕಾರವಾಗಲಿ ಅಧಿಕಾರಿಗಳಾಗಲಿ ಈ ಭಾಗದ ಜನಕ್ಕೆ ಪ್ರಾಮುಖ್ಯತೆಯನ್ನು ನೀಡದಿರುವುದು ಅತ್ಯಂತ ದುರದೃಷ್ಟಕರ. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಹೋರಾಟಗಾರರನ್ನು ಜೈಲಿಗೆ ಕಳಿಸುವಲ್ಲಿ ತೆಗೆದುಕೊಂಡ ಮುತವರ್ಜಿಯನ್ನು ಈ ಕಾಡಾನೆ ಮಾನವ ಸಂಘರ್ಷದ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ತೆಗೆದುಕೊಂಡಿದ್ದರೆ ಬಹುಶಹ ಒಂದಷ್ಟು ಜೀವಗಳನ್ನ ಉಳಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಸಿಗುತ್ತಿತ್ತೇನೋ ಸಾಕು ಮಾಡಿ ಇನ್ನಾದರೂ ಮಲೆನಾಡಿನ ಭಾಗದ ಜನಕ್ಕೆ ನೆಮ್ಮದಿಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಅದೇ ರೀತಿ ಮಾತು ಬರದ ಪ್ರಾಣಿ ಆದರೂ ಕೂಡ ಮನುಷ್ಯನ ಜೊತೆ ಅನ್ಯೋನ್ಯವಾದ ಸಂಬಂಧವನ್ನು ಇಟ್ಟುಕೊಂಡು ತಾಯಿ ಚಾಮುಂಡೇಶ್ವರಿಯ ಸೇವೆಯನ್ನು ಮಾಡಿದ ಇಡೀ ಕರ್ನಾಟಕಕ್ಕೆ ಕೀರ್ತಿ ಕಲಶದಂತೆ ಇದ್ದ ಅರ್ಜುನನನ್ನು ಇಂದು ಕಳೆದುಕೊಂಡಿದ್ದೇವೆ. ಅರ್ಜುನನ ಪವಿತ್ರಾತ್ಮಕ್ಕೆ ತಾಯಿ ಚಾಮುಂಡೇಶ್ವರಿ ಚಿರಶಾಂತಿಯನ್ನು ಅನುಗ್ರಹಿಸಲಿ ಎಂದು ಈ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದರು

Continue Reading

Kodagu

ಮೂರ್ನಾಡು ಮಡಿಕೇರಿ ಮುಖ್ಯ ರಸ್ತೆಯಲ್ಲಿ ಕಾರು ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ-ಕಾರು ಚಾಲಕ ಗಂಭೀರ

Published

on

ನಾಪೋಕ್ಲು : ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ಮೂರ್ನಾಡು ಮಡಿಕೇರಿ ಮುಖ್ಯರಸ್ತೆಯ ಮುತ್ತಾರುಮುಡಿ ಎಂಬಲ್ಲಿ ನಡೆದಿದೆ.

ಮೂರ್ನಾಡು ಕಡೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾರು ಹಾಗೂ ಮಡಿಕೇರಿ ಕಡೆಯಿಂದ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದ್ದು ಕಾರು ಚಾಲಕ ಎಮ್ಮೆಮಾಡು ಗ್ರಾಮದ ನಿವಾಸಿ ಇಬ್ರಾಹಿಂ ಸಅದಿ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Trending