Connect with us

Kodagu

ರೈತರ ರಕ್ಷಣೆಗೆ ಸರಕಾರ ಬದ್ಧ – ಎ.ಎಸ್ ಪೊನ್ನಣ್ಣ

Published

on

ರೈತರ ರಕ್ಷಣೆಗೆ ಸರಕಾರ ಬದ್ಧ – ಎ.ಎಸ್ ಪೊನ್ನಣ್ಣ

——-

ಮಡಿಕೇರಿ : ಈಗಾಗಲೇ ನೀರಾವರಿ ಸಚಿವರು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದಿದ್ದಾರೆ. ಅದರಂತೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ. ರೈತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ, ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾಗಿದೆ. ತಮಿಳುನಾಡಿಗೆ 170 ಕ್ಯುಸೆಕ್ ನೀರನ್ನು ಬಿಡಬೇಕಾಗಿತ್ತು. ಆದರೆ ಇದುವರೆಗೆ 50 ಕ್ಯುಸೆಕ್ ನೀರನ್ನು ಮಾತ್ರವೇ ಬಿಟ್ಟಿದ್ದೇವೆ. ಹೀಗಾಗಿ ರೈತರ ಹಿತ ಕಾಯುತ್ತಿಲ್ಲ ಎಂದು ಹೋರಾಟ ಮಾಡುತ್ತಿದ್ದೇವೆ ಎನ್ನುವುದು ರಾಜಕೀಯ ಪ್ರೇರಿತ ಅಷ್ಟೆ ಎಂದರು.
ನಾವು ಕಾನೂನು ಹೋರಾಟವನ್ನು ಮಾಡಬೇಕಾಗಿದೆ. ಸುಪ್ರೀಂನಲ್ಲೂ ಅನ್ಯಾಯವಾಗಿದೆ ಎಂದಾಗ ಪ್ರಧಾನಿಯವರು ಮಧ್ಯಪ್ರವೇಶಿಸಬೇಕಾಗಿತ್ತು ಎಂದು ಪೊನ್ನಣ್ಣ ಹೇಳಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Kodagu

ನದಿ ನೀರಿನಲ್ಲಿ ಮುಳುಗಿ ವ್ಯಕ್ತಿ ದುರ್ಮರಣ

Published

on

ನಾಪೋಕ್ಲು : ಸ್ನಾನಕ್ಕೆಂದು ತೆರಳಿದ ವ್ಯಕ್ತಿಯೊಬ್ಬರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಕುವಲೆಕ್ಕಾಡು ಎಂಬಲ್ಲಿ ಗುರುವಾರ ನಡೆದಿದೆ.

ಕಕ್ಕಬ್ಬೆ ಕುಂಜಿಲ ವಾಟೆಕ್ಕಾಡು ಗ್ರಾಮದ ನಿವಾಸಿ ದಿವಂಗತ ರಾಜು ಎಂಬುವವರ ಪುತ್ರ ದೇವಯ್ಯ (38) ಮೃತ ದುರ್ದೈವಿ.

ಕೈಬುಲಿರ ಸಂತೋಷ್ ಎಂಬುವವರಿಗೆ ಸೇರಿದ ತೋಟದಲ್ಲಿ ಕಾಫಿ ಕಪಾತ್ ಕೆಲಸಕ್ಕೆ ಸಹೋದರ ಸುಬ್ರಮಣಿಯೊಂದಿಗೆ ತೆರಳಿದ್ದ ದೇವಯ್ಯ ಮದ್ಯಾಹ್ನ ಬಿಸಿಲಿನ ತಾಪ ಹೆಚ್ಚಾದ ಕಾರಣ ಸ್ನಾನಕ್ಕೆಂದು ತೋಟದಪಕ್ಕದಲ್ಲಿರುವ ಕುಪ್ಪೋಟು ಹೊಳೆಗೆ ಸ್ನಾನಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗಿದ್ದ ಮೃತ ದೇಹವನ್ನು ಕುಂಜಿಲ ಗ್ರಾಮದ ಅಶ್ರಫ್ ಪೊಯಕ್ಕರೆ,ಮಾಜಿ ಸೈನಿಕ ಮೊಯಿದೀನ್, ನಾಪೋಕ್ಲು ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್, ಕುಂಜಿಲ ಗ್ರಾಮದ ಅಸೀಬ್, ಆಸ್ಕರ್, ಶಫೀಕ್, ರಶೀದ್, ರವಿ ಮತ್ತಿತರರು ಸತತ ಮೂರು ಗಂಟೆಗಳ ಕಾಲ ನೀರಿನಲ್ಲಿ ಶೋಧ ಕಾರ್ಯನಡೆಸಿ ಮೃತ ದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.

ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡರು.

Continue Reading

Kodagu

ಅಳಿಯನಿಂದ ಮಾವನ ಹತ್ಯೆ

Published

on

ವಿರಾಜಪೇಟೆ:  ಹೊರವಲಯದ ಅಮ್ಮ್ತತ್ತಿ ಗ್ರಾಮದಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ನಡೆದ ಹೊಡೆದಾಟ,

ಘಟನೆ ಹಿನ್ನೆಲೆಯಲ್ಲಿ ತಲೆಯ ಭಾಗದಲ್ಲಿ ಗಂಭೀರ ಸ್ವರೂಪದ ಗಾಯವಾಗಿದ್ದ ರಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು .

ಚಿಕಿತ್ಸೆ ಫಲಕಾರಿಯಾಗದೆ ಮಾವ ಮಾದು ಮ್ರತ ಪಟ್ಟ ಘಟನೆ ವಿರಾಜಪೇಟೆ ಹೊರವಲಯದ ಅಮ್ಮತ್ತಿ ಬಳಿ ನಡೆದಿದೆ.

ಅಳಿಯ ಮಣಿ (ಅಣ್ಷಪ್ಪ)ಎಂಬವರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿತ್ತು ..

ಹಲ್ಲೆ ಗೊಳಗಾದ ವ್ಯಕ್ತಿ ಮ್ರತ ಪಟ್ಟ ಹಿನ್ನೆಲೆಯಲ್ಲಿ, ಕೊಲೆ ಆರೋಪದ ಹಿನ್ನೆಲೆಯಲ್ಲಿ ಇಂದು ಅ ವ್ಯಕ್ತಿ ಯನ್ನು ನ್ಯಾಯಾಂಗ ಬಂಧನ ಕ್ಕೆ ನೀಡಲಾಯಿತು .

,ವಿರಾಜಪೇಟೆ ಗ್ರಾಮಾಂತರ ಠಾಣೆ ಯಲ್ಲಿ ಮೊಕದ್ದಮೆ ದಾಖಲಾಗಿದೆ,

ಮಾದು ಶವವನ್ನು ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಶವ ಪರೀಕ್ಷೆಗೆ ತರಲಾಗಿದೆ..
ವಿರಾಜಪೇಟೆ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ .

Continue Reading

Kodagu

ಹುಲಿ ಸೆರೆ ಕಾರ್ಯಾಚರಣೆ ಸಂದರ್ಭ ಅರಣ್ಯ ಸಿಬ್ಬಂದಿಗಳ ಮೇಲೆ ಹೆಜ್ಜೆನು ದಾಳಿ

Published

on

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಹರಿಹರದಲ್ಲಿ ಹುಲಿ ಸೆರೆ ಕಾರ್ಯಾಚರಣೆ ಸಂದರ್ಭ ಅರಣ್ಯ ಸಿಬ್ಬಂದಿಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ.
ಹುಲಿ ಸೆರೆಯ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಆನೆಯ ಮೇಲಿದ್ದ ಶಾರ್ಪ್ ಶೂಟರ್ ರಂಜನ್ ತಂಡದ ಮೇಲೆ ಹೆಜ್ಜೆನು ದಾಳಿ ನಡೆಸಿದೆ. ರಂಜನ್ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಬುಧವಾರ ಹರಿಹರ ಗ್ರಾಮದ ಸುಬ್ರಹ್ಮಣ್ಯ ದೇವರ ಕೆರೆಯಲ್ಲಿ ಹುಲಿ ನೀರು ಕುಡಿದು ಕಾಡಿಗೆ ಹೋಗುವ ದೃಶ್ಯವನ್ನು ಸ್ಥಳೀಯರು ಒಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವರದಿ ಮಾಡಿದ ಬೆನ್ನಲ್ಲೇ ಅರಣ್ಯ ಇಲಾಖೆ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗಿತ್ತು.
ಗುರುವಾರ ಮತ್ತೆ ಪುನ ಬೆಳಿಗ್ಗೆ ಹುಲಿಯನ್ನು ಸೆರೆ ಹಿಡಿಯಲು ಭೀಮ ಹಾಗು ಮಹೇಂದ್ರ ಆನೆಗಳ ಸಹಾಯದಿಂದ ಒಟ್ಟು ೫೦ ಅರಣ್ಯ ಸಿಬಂದಿಗಳು ಕಾರ್ಯಾಚರಣೆ ನಡೆಸುವ ಸಂದರ್ಭ ದಿಡೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ. ಘಟನೆ ನಡೆದ ನಂತರ ಕಾರ್ಯಾಚರಣೆ ಇದೀಗ ನಿಲ್ಲಿಸಲಾಗಿದೆ. ಮಾವುತ ಕುಳ್ಳ ಹಾಗು ಆನೆ ಭೀಮನ ಮೇಲೆ ಕೂಡ ಹೆಜ್ಜೇನು ದಾಳಿ ಮಾಡಿದೆ.

Continue Reading

Trending

error: Content is protected !!