Connect with us

Uncategorized

ರಾಧಮ್ಮ ಜನಸ್ಪಂದನ ಸಂಸ್ಥೆ ಹೋರಾಟಕ್ಕೆ ಆಲೂರು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶ

Published

on

ಬಿ.ಎನ್. ಹೇಮಂತ್ ಕುಮಾರ್ ಅಭಿನಂದನೆ

ಹಾಸನ: ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಆಲೂರು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶ ಬಂದಿದ್ದು, ಇದಕ್ಕೆ ಕಾರಣರಾದವರಿಗೆಲ್ಲಾ ಅಭಿನಂದನೆ ಸಲ್ಲಿಸುವುದಾಗಿ ರಾಧಮ್ಮ ಜನಸ್ಪಂದನ ಸಂಸ್ಥೆಯ ಸಂಸ್ಥಾಪಕ ಬಿ.ಎನ್. ಹೇಮಂತ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಕಳೆದ ೧೭ ತಿಂಗಳಿಂದ ನಿರಂತರವಾಗಿ ಹಂತ ಹಂತವಾಗಿ ಸಂಬಂಧಪಟ್ಟ ಎಲ್ಲಾ ರೈಲ್ವೆ ವಿಭಾಗಗಳನ್ನು ಸಂಪರ್ಕಿಸಿ ಮನವಿಯನ್ನು ಕೊಡುವುದರ ಮುಖಾಂತರ ಆಲೂರು ತಾಲೂಕು ರೈಲ್ವೆ ನಿಲ್ದಾಣಕ್ಕೆ ರೈಲು ನಿಲುಗಡೆ ಆದೇಶವನ್ನು ತರುವುದರಲ್ಲಿ ಯಶಸ್ವಿಯಾಗಿದ್ದೇವೆ. ಯಶಸ್ವಿಗೆ ಮತ್ತು ನಮ್ಮ ಹೋರಾಟಕ್ಕೆ ಸಹಕರಿಸಿದಂತವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಕೇಂದ್ರ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಹಿಂದೆ ಇದ್ದಂತಹ ಬಿಜೆಪಿ ಜಿಲ್ಲಾಧ್ಯಕ್ಷರಾದಂತಹ ಹಾಗೂ ಈಗಿನ ಶಾಸಕರು ಬೇಲೂರು ಕ್ಷೇತ್ರದ ಹೆಚ್.ಕೆ. ಸುರೇಶ್ ಮತ್ತು ಆಲೂರು ಸಕಲೇಶಪುರ ಕ್ಷೇತ್ರದ ಶಾಸಕಾಗಿರುವ ಸಿಮೆಂಟ್ ಮಂಜುನಾಥ್, ರೈಲ್ವೆ ಜಿಎಂ ಸೆಕ್ರೆಟರಿ ಆಗಿರುವ ಸುನಿಲ್, ಹುಬ್ಬಳ್ಳಿ ಮತ್ತು ಮೈಸೂರಿನ ಡಿ ಆರ್ ಎಂ ಶಿಲ್ಪಿ ಅಗರ್ವಾಲ್ ಎಲ್ಲಾ ರೈಲ್ವೆ ಅಧಿಕಾರಿಗಳು ಸಹ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ನಾನು ಮೊದಲನೇದಾಗಿ ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಹೋರಾಟ ಮಾಡಿದ ರೀತಿಯನ್ನ ಪತ್ರಕರ್ತರ ಮುಖಾಂತರ ನಮ್ಮ ಸಮಾಜಕ್ಕೆ ಬೆಳಕಿಗೆ ದಾಖಲಾತಿ ನೀಡುವುದರ ಮುಖಾಂತರ ನಮ್ಮದೇ ಕೊಡುಗೆ ಎಂದು ತಿಳಿಸುತ್ತಿದ್ದೇವೆ.

೨೦೨೨ ರಿಂದ ಹೋರಾಟಕ್ಕಿಳಿದು ಮನವಿ ಸಲ್ಲಿಸಿದ ತಕ್ಷಣ ಅಂಚೆ ಕಚೇರಿಯ ಮುಖಾಂತರ ಬಂದಿರುವ ಸ್ವೀಕೃತಿ ಪತ್ರವನ್ನು ನೈರುತ್ಯ ರೈಲ್ವೆ ಇವರಿಂದ ತದನಂತರ ೨೦೨೩ ಜುಲೈ ದೆಹಲಿಗೆ ಹೋಗಿ ೨೦ನೇ ತಾರೀಕು ಬೇಲೂರು ಶಾಸಕರಾದ ಎಚ್.ಕೆ. ಸುರೇಶ್ ಅವರೊಂದಿಗೆ ಕೇಂದ್ರದ ರೈಲ್ವೆ ಬೋರ್ಡ್‌ಗೆ ಮನವಿ ಸಲ್ಲಿಸಿ ರೈಲ್ವೆ ಮಂತ್ರಿಗೆ ಖುದ್ದಾಗಿ ಮನವಿ ಪತ್ರ ಕೊಡಲಾಗಿತ್ತು. ಸ್ಥಳೀಯ ಶಾಸಕರ ಸಿಮೆಂಟ್ ಮಂಜುನಾಥ್ ಕಾಗದಪತ್ರವನ್ನ ಸಂಬಂಧಪಟ್ಟಂತಹ ರೈಲ್ವೆ ವಲಯ ಅಧಿಕಾರಿಗಳಿಗೆ ತಲುಪಿಸಿದ್ದೇವೆ ಮೈಸೂರು ವಿಭಾಗದ ಡಿ.ಆರ್.ಎಂ. ಮತ್ತು ಹುಬ್ಬಳ್ಳಿಯ ಜಿಎಂ ಮತ್ತೊಮ್ಮೆ ನಾನು ದೆಹಲಿಯ ರೈಲ್ವೆ ಬೋರ್ಡ್ ಬಳಿ ಹೋಗಿ ವಿಶೇಷವಾಗಿ ನವೆಂಬರ್ ೧೭ ರಂದು ಮನವಿ ಸಲ್ಲಿಸಿ ರೈಲ್ವೆ ಮಂತ್ರಿಗಳ ಬಳಿ ಸ್ವೀಕೃತಿ ಪತ್ರ ವನ್ನು ಪಡೆದು ಆಲೂರ್ ಗೆ ತಕ್ಷಣ ರೈಲು ನಿಲುಗಡೆ ಆಗಬೇಕೆಂದು ದೆಹಲಿ ಅಧಿಕಾರಿಗಳು ದೂರವಾಣಿ ಮುಖಾಂತರ ಹುಬ್ಬಳ್ಳಿಯ ಜಿಎಂ ಕಚೇರಿಗೆ ಆದೇಶಿಸಿದರು. ನಂತರ ನಾನು ದೆಹಲಿಯಿಂದ ನೇರವಾಗಿ ಹುಬ್ಬಳಿಯ ಕಚೇರಿಗೆ ಹೋಗಿ ಡಿಜಿಎಂ ಆಗಿರುವ ಕುಲದೀಪ್ ಅವರಿಗೆ ಭೇಟಿ ಮಾಡಿ ದೆಹಲಿಯ ಮನವಿ ಪತ್ರವನ್ನು ಕೊಟ್ಟಾಗ ಸ್ವೀಕರಿಸಿ ಒಂದೇ ದಿನದಲ್ಲಿ ಆಲೂರಿಗೆ ರೈಲ್ವೆ ಅಧಿಕಾರಿಗಳನ್ನು ಕಳಿಸಿಕೊಟ್ಟು ನಿಲ್ದಾಣದ ಸ್ಥಳ ಪರಿಶೀಲನೆ ಮಾಡಿ ವರದಿಯನ್ನು ಸಲ್ಲಿಸುವಂತೆ ಮಾಡಿದರು. ಇದು ಕೂಡ ನನ್ನ ಹೋರಾಟದ ಪ್ರಥಮ ಗೆಲುವು ಎಂದು ಎಲ್ಲಾ ಮಾಧ್ಯಮಗಳು ಕಳೆದ ಎರಡು ತಿಂಗಳಿಂದ ಸುದ್ದಿಯನ್ನು ಮಾಡಲಾಗಿತ್ತು ಎಂದರು. ತದನಂತರ ವರದಿಯ ಪ್ರಕಾರ ಮತ್ತೊಮ್ಮೆ ರೈಲ್ವೆ ಇಲಾಖೆಯನ್ನು ಮೈಸೂರಿನಲ್ಲಿ ಸಂಪರ್ಕಿಸಿದಾಗ ಡಿ.ಆರ್.ಎಂ. ಶಿಲ್ಪಿ ಅಗರ್ವಾಲ್ ಅವರು ಪ್ರೋಸೆಸ್ ಮಾಡಿ ಆರು ತಿಂಗಳು ಪ್ರಾಯೋಗಿಕವಾಗಿ ರೈಲ್ ನಿಲುಗಡೆಗೆ ಹುಬ್ಬಳ್ಳಿಯಿಂದ ಆದೇಶ ಬರುತ್ತದೆ ಎಂದು ನಮ್ಮ ಕಚೇರಿಗೆ ನಮ್ಮ ಮನವಿ ಪತ್ರದ ಸಂಖ್ಯೆಯನ್ನು ನಮೂದಿಸಿ ಕಾಗದಪತ್ರವನ್ನು ಕಳಿಸಿಕೊಟ್ಟರು. ಎಲ್ಲಾ ದಾಖಲಾತಿಗಳನ್ನ ಮಾಧ್ಯಮದ ಸ್ನೇಹಿತರ ಮುಂದೆ ಕೊಡುತ್ತಿದ್ದು ಈ ಹೋರಾಟವನ್ನು ತಾವುಗಳು ಗಮನಿಸಿ ಮತ್ತೊಮ್ಮೆ ಸಹಕರಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಹೂವಯ್ಯ, ಸಂಸ್ಥೆ ನಿರ್ದೇಶಕ ಲೋಹಿತ್ ಹಾಗೂ ಬಿಜೆಪಿ ವಕ್ತರಾರರು ಐನೆಟ್ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಾಫಿ ಕಳ್ಳತನ

Published

on

50 ಕೆಜಿ ಕಾಫಿಗೆ ಬರೋಬ್ಬರಿ 30000 ದರ ಹೆಚ್ಚಳ ಹಿನ್ನೆಲೆ,

ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದಾರೆ ಕಾಫಿ ಕಳ್ಳರು,

*ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಗಿಡದಲ್ಲಿದ್ದ ಕಾಫಿಯನ್ನು ಕಳ್ಳತನ ಮಾಡುತ್ತಾರೆ ಖದೀಮರು*

ವಾಹನದಲ್ಲಿ ಬರ್ತಾರೆ ಸಿಕ್ಕಸಿಕ್ಕ ಕಡೆ ಕಾಫಿ ದೋಚಿ ಹೊರಡುವ ಕಳ್ಳರು,

ಸುದೀಪ್ ಹಾಗೂ ಮಧು ಎಂಬುವರ ಕಾಫಿ ತೋಟದಲ್ಲಿ ಗಿಡದಲ್ಲಿದ್ದ ಕಾಫಿಯನ್ನೇ ಕಳ್ಳತನ ಮಾಡಿದ ಚಾಲಾಕಿ ಕಳ್ಳರು,

ರಾತ್ರೋರಾತ್ರಿ ಮಿನಿ ಪಿಕಪ್ ವಾಹನದಲ್ಲಿ ಬಂದು ಕಳ್ಳತನ ಮಾಡಿರೋ ಕಾಫಿ ಕಳ್ಳರು,

ಬೇಲೂರು ತಾಲೂಕು, ಚಿನ್ನೇನಹಳ್ಳಿ ಗ್ರಾಮದಲ್ಲಿ ಘಟನೆ,

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿನ್ನೇನಹಳ್ಳಿ ಗ್ರಾಮ,

ಒಂದು ಎಕರೆ ಎರಡು ಎಕರೆ ಇರೋ ತೋಟವನ್ನೇ ಟಾರ್ಗೆಟ್ ಮಾಡಿರುವ ಕಾಫಿ ಕಳ್ಳರು,

ಗಿಡದಲ್ಲಿದ್ದ ಕಾಫಿಯನ್ನು ಬಿಡುತ್ತಿಲ್ಲ ಕದೀಮರು

Continue Reading

Kodagu

ಉಡೋತ್ ಮೊಟ್ಟೆ : ಡಿ.6 & 7  ರಂದು ಕೊರಗಜ್ಜ ದೈವದ ನೇಮೋತ್ಸವ

Published

on

ಮಡಿಕೇರಿ : ಉಡೋತ್‌ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ.

ಡಿ.6ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು. ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.

ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900931278 , 9591304757೯೫೯೧೩೦೪೭೫೭, ೯೪೮೩೩೯೯೦೭೭ ಸಂಪರ್ಕಿಸಬಹುದಾಗಿದೆ.

Continue Reading

Uncategorized

ತರಳಬಾಳು ಸಮಾಗಮ, ಶಿಕ್ಷಣ ಕೇಂದ್ರದಿಂದ ರಾಜ್ಯೋತ್ಸವ, ದತ್ತಿ ಉಪನ್ಯಾಸ

Published

on

ಮೈಸೂರು: ನಗರದ ಟಿ.ಕೆ. ಬಡಾವಣೆಯ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ತರಳಬಾಳು ಸಮಾಗಮ ವತಿಯಿಂದ ಭಾನುವಾರ ಕನ್ನಡ ರಾಜ್ಯೋತ್ಸವ ಹಾಗೂ ಎಚ್‌.ಎಸ್‌. ರುದ್ರಪ್ಪ, ರೇವಮ್ಮ ಹಾಗೂ ಆರ್‌.ಬಿ. ಚನ್ನಬಸಪ್ಪ, ಎನ್‌. ಸುವರ್ಣ ಮತ್ತು ಎಚ್‌. ಗುರುಸಿದ್ದಪ್ಪ, ಕಲ್ಲಮ್ಮ ಹಾಗೂ ಎಂ. ಸಿದ್ದಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು. ಜೆಎಸ್ಎಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಲ್‌. ತಿಪ್ಪೇಸ್ವಾಮಿ ಉಪನ್ಯಾಸ ನೀಡಿದರು.


ತರಳಬಾಳು ಸಮಾಗಮ ಅಧ್ಯಕ್ಷ ಡಿ.ಎನ್‌. ಲೋಕಪ್ಪ ಅಧ್ಯಕ್ಷತೆ ವಹಿಸಿದ್ದರು. ತರಳಬಾಳು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಮಹದೇವಸ್ವಾಮಿ, ಡಾ.ಎಚ್.ಎಸ್. ರುದ್ರೇಶ್‌ ಇದ್ದರು. ತರಳಬಾಳು ಸಮಾಗಮದ ಕಾರ್ಯದರ್ಶಿ ಶಿವಕುಮಾರ್‌ ಹಂಜಿ ಸ್ವಾಗತಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು.

ಕನ್ನಡದಲ್ಲಿ ಅಧಿಕ ಅಂಕಗಳನ್ನು ಪಡೆದ ಪಿಯುಸಿಯ ಮೌರ್ಯ ಲೋಕೇಶ್‌, ಸಿ.ಎಸ್‌. ನಿಶ್ಚಲ್‌, ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಂ. ಧನುಷ್‌ ಹಾಗೂ ಜಿ. ನಮಿತಾ ಅವರಿಗೆ ಪುರಸ್ಕಾರ ನೀಡಲಾಯಿತು. ಆರು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳು ನೃತ್ಯ, ಸಾನ್ವಿ ಹಾಗೂ ಕವನ ಅವರು ಕನ್ನಡ ಭಾವಗೀತೆ ಹಾಡಿದರು.

Continue Reading

Trending

error: Content is protected !!