Hassan
ನಂಗೆ ಜೀವ ಅಪಾಯವಾದ್ರೆ ಹೊಳೆನರಸೀಪುರ ಶಾಸಕರೇ ಕಾರಣ ಆರ್. ಮೋಹನ್ ಆರೋಪ

ಹಾಸನ : ಸುಳ್ಳು ವೈದ್ಯಕೀಯ ಪ್ರಮಾಣ ಪತ್ರ ಪಡೆದು ಸರಕಾರಕ್ಕೆ ವಂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕ ವೃತ್ತಿ ಪಡೆದಿರುವ ಹಾಗೂ ರಾಜಕೀಯ ಮುಖಂಡರ ಕುಮಕ್ಕಿನ ಮೂಲಕ ರೌಡಿಗಳಿಂದ ನನ್ನನ್ನು ಹತ್ತಿಕ್ಕಲು ಹುನ್ನಾರ ನಡೆಸಲಾಗುತ್ತಿದ್ದು, ಜೀವ ಬೆದರಿಕೆ ಇದ್ದು, ಅವರ ವಿರುದ್ಧ ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಆರ್. ಮೋಹನ್ ಗಂಬೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಅಂಗವಿಕಲರ ಕೋಟಾದಡಿ ನೇಮಕ ಗೊಂಡ ಹಲವಾರು ಶಿಕ್ಷಕರು ನಕಲಿ ಅಂಗವಿಕಲ ಪ್ರಮಾಣ ಪತ್ರ ಪಡೆದು ನೇಮಿ ಹೊಂದಿರುವ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣ ದಾಖಲಾತಿ ಪಡೆದು ದೂರಿನ ಬಗ್ಗೆ ತನಿಖೆ ನಡೆಸಿ ವಿವರ ನೀಡಲಿ. ಜಿಲ್ಲೆಯಲ್ಲಿ ೪೦೦ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ ಸಂಬಳ ಪಡೆಯುತ್ತಿದ್ದಾರೆ. ಇಲಾಖೆಗೆ ಸಲ್ಲಿಸಿರುವ ವೈದ್ಯಕೀಯ ಪ್ರಮಾಣ ಪತ್ರ ಸಂಪೂರ್ಣ ನಕಲಿಯಾಗಿದೆ. ಈ ಬಗ್ಗೆ ಸೂಕ್ತ ದಾಖಲಾತಿಗಳೊಂದಿಗೆ ೨೦೧೨ರಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೆ. ಹಾಸನ ಮಾತ್ರವಲ್ಲದೆ ರಾಮನಗರ, ಮೈಸೂರು ಜಿಲ್ಲೆಯಲ್ಲೂ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪರಿಶೀಲನೆ ನಡೆಸಿದ ಲೋಕಾಯುಕ್ತ ಜಿಲ್ಲೆಯ ೪೨ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿದೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದರು. ಮೈಸೂರು ಮತ್ತು ರಾಮನಗರದಲ್ಲಿ ತಪ್ಪಿತಸ್ಥ ಶಿಕ್ಷಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ, ಹಾಸನದಲ್ಲಿ ಮಾತ್ರ ಕಾನೂನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ. ೨೦೨೩ರ ನವೆಂಬರ್‌ನಲ್ಲಿ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯಕ್ಕೆ ನನ್ನ ಹೇಳಿಕೆ ಸಲ್ಲಿಸಿದ್ದೇನೆ. ಆ ಬಳಿಕ ನನ್ನ ಮೇಲೆ ದ್ವೇಷ ಸಾಧಿಸಲಾಗುತ್ತಿದೆ. ನೌಕರಿ ಕಳೆದುಕೊಳ್ಳುವ ಹಾಗು ಶಿಕ್ಷೆಗೆ ಗುರಿಯಾಗುವ ಭೀತಿಯಿಂದ ಶಿಕ್ಷಕರು ರಾಜಕೀಯ ನಾಯಕರ ದುಂಬಾಲು ಬಿದ್ದಿದ್ದಾರೆ. ಓಟಿನ ಆಸೆಗೆ ಮಾಜಿ ಸಚಿವ ರೇವಣ್ಣ ಅವರು ನನಗೆ ತೊಂದರೆ ನೀಡುತ್ತಿದ್ದಾರೆ. ನನಗೆ ಪ್ರಾಣ ಬೆದರಿಕೆ ಇರುವ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ಗೋವಿಂದಯ್ಯ, ಕಾಳೇಗೌಡ ಇತರರು ಉಪಸ್ಥಿತರಿದ್ದರು.
Hassan
ಆಟೋ ಹತ್ತಿಸುವ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿ

ಹಾಸನ: ಆಟೋ ಹತ್ತಿಸುವ ನೆಪದಲ್ಲಿ ವೃದ್ಧೆಯ ಗಮನ ಬೇರೆಡೆ ಸೆಳೆದು ಚಿನ್ನದ ಮಾಂಗಲ್ಯ ಸರ ಸುಲಿಗೆ ಮಾಡಿಕೊಂಡು ಅಪರಿಚಿತ ಪರಾರಿಯಾಗಿರುವ ಘಟನೆ
ಸಾಲಗಾಮೆ ಹೋಬಳಿ ಸುಂಕದಕೊಪ್ಪಲು ಗ್ರಾಮದ ಲಕ್ಷ್ಮಮ್ಮ ಎಂಬುವರು ಸಾಲಗಾಮೆ ಗೇಟ್‌ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಏ.೧೮ ರಂದು ಊರಿನಿಂದ ಬಸ್ಸಿನಲ್ಲಿ ಹಾಸನಕ್ಕೆ ಹೋಗಿದ್ದರು.
ಅಲ್ಲಿಂದ ಹೂವಿನಹಳ್ಳಿ ಕಾವಲು ಹೊಸೂರಿಗೆ ಬಸ್ಸಿನಲ್ಲಿ ಬಂದು ಇಳಿದು ಸರ್ಕಾರಿ ಆಸ್ಪತ್ರೆಗೆ ಹೋದರು. ಆದರೆ ಗುಡ್‌ಫ್ರೈಡೆ ನಿಮಿತ್ತ ರಜೆ ಇದ್ದುದರಿಂದ ವಾಪಸ್ ಊರಿಗೆ ಹೋಗಲೆಂದು ಮಧ್ಯಾಹ್ನ ೧ ಗಂಟೆ ಸಮಯದಲ್ಲಿ ಆಸ್ಪತ್ರೆ ಮುಂದೆ ರಸ್ತೆಯ ಬದಿಯಲ್ಲಿ ನಿಂತಿದ್ದರು.
ಅಲ್ಲಿಗೆ ಬಂದ ಸುಮಾರು ೩೦-೩೫ ವರ್ಷ ವಯಸ್ಸಿನ ವ್ಯಕ್ತಿ, ಅಜ್ಜಿ ನಿಂತಿದ್ದಲ್ಲಿಗೆ ಬಂದು ಯಾವೂರವ್ವ ಎಂದು ಕೇಳಿ, ನನ್ನ ಬೈಕಿಗೆ ಬನ್ನಿ ಕರೆದುಕೊಂಡು ಹೋಗುತ್ತೇನೆಂದು ಹೇಳಿದ್ದಾನೆ.
ಮಗಳ ಊರಾದ ಅರೇಕಲ್ ಹೊಸಳ್ಳಿ ಗ್ರಾಮದ ಮನೆಗೆ ಹೋಗುತ್ತೇನೆಂದು ಹೇಳಿದಾಗ ಆಟೋದಲ್ಲಿ ಹೋಗಿ ಎಂದು ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದ ಆಸಾಮಿ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋವನ್ನು ಅಡ್ಡಹಾಕಿ ನಿಲ್ಲಿಸಿ, ಅಜ್ಜಿ ಆಟೋದ ಒಳಕ್ಕೆ ಕಾಲಿಟ್ಟು ಹತ್ತುವಾಗ ಅವರ ಕೊರಳಿನಲ್ಲಿದ್ದ ಸುಮಾರು ೪೦ ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮಾಂಗಲ್ಯ ಸರದ ಅಂದಾಜು ಬೆಲೆ ೩ ಲಕ್ಷ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hassan
ಎಸ್‌ಡಿಎಂ ಜನಮಂಗಳ ಯೋಜನೆಯಡಿ ಉಚಿತ ಕಮೋಡಾ ವೀಲ್ ಚೇರ್ ವಿತರಣೆ

ವರದಿ: ಸತೀಶ್ ಚಿಕ್ಕಕಣಗಾಲು
ಆಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗೆ ಉಚಿತವಾಗಿ ಕಮೋಡಾ ವೀಲ್ ಚೇರ್ ವಿತರಣೆ ಮಾಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲೂರು ತಾಲೂಕಿನ ಯೋಜನಾಧಿಕಾರಿ ರತ್ನಾಕರ್ ಕೊಠಾರಿ ಮಾತನಾಡಿ, ತಾಲೂಕಿನಲ್ಲಿ ಇದುವರೆಗೂ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಅಂಗವಿಕಲರಿಗೆ ಅವಶ್ಯಕತೆ ಸಲಕರಣೆಗಳಾದ ವೀಲ್ ಚೇರ್, ಸೇಫ್ ವಾಕರ್, ವಾಟರ್ ಬೆಡ್, ವಾಕಿಂಗ್ ಸ್ಟಿಕ್ ಸೇರಿದಂತೆ ಒಟ್ಟು ಉಪಕರಣಗಳನ್ನು ನೀಡಲಾಗಿದೆ. ಅಲ್ಲದೆ 105 ಮಂದಿ ಸದಸ್ಯರಿಗೆ ಪ್ರತಿ ತಿಂಗಳು ತಲಾ ಒಂದೊಂದು ಸಾವಿರ ಮಾಸಾಸನವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾಳ್ಯ ಹೋಬಳಿಯ ಮೇಲ್ವಿಚಾರಕಿ ಯಶೋಧ ಮಾತನಾಡಿ, ತಾಲೂಕಿನ ಪಾಳ್ಯ ಹೋಬಳಿ ನಲ್ಲೂರು ಗ್ರಾಮದ ನಿವಾಸಿಯಾದ ಬೈರಯ್ಯರ ಎಂಬುವವರು ಅನಾರೋಗ್ಯಕ್ಕೆ ತುತ್ತಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೇರ್ ಉಚಿತವಾಗಿ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದ ಸದಸ್ಯ ಮಲ್ಲಿಕಾರ್ಜುನ್, ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿ ಗೀತಾ ಸೇರಿದಂತೆ ಫಲಾನುಭವಿಯ ಮನೆಯ ಸದಸ್ಯರು ಉಪಸ್ಥಿತರಿದ್ದರು.
Hassan
ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾ*ವು

ಹಾಸನ : ಕಾರಿನೊಳಗೆ ಅಸಿಸ್ಟೆಂಟ್ ಅಕೌಂಟೆಂಟ್ ಅನುಮಾನಾಸ್ಪದ ಸಾವು
ಶಿವಪ್ರಸಾದ್ (32) ಸಾವನ್ನಪ್ಪಿದ ವ್ಯಕ್ತಿ
ಹಾಸನ ಜಿಲ್ಲೆ, ಚನ್ನರಾಯಪಟ್ಟಣದ, ರಾಮೇಶ್ವರ ಬಡಾವಣೆ ಬಳಿ ಘಟನೆ
ದಿಡಗ ಗ್ರಾಮ ಪಂಚಾಯ್ತಿಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್
ಅತಿಯಾಗಿ ಮದ್ಯ ಸೇವಿಸುತ್ತಿದ್ದ ಶಿವಪ್ರಸಾದ್
ನಿನ್ನೆ ತಡರಾತ್ರಿ ಮದ್ಯಸೇವಿಸಿ ತಮ್ಮ KA-13-M-7321 ರೆನಾಲ್ಟೊ ಕಾರಿನೊಳಗೆ ಮಲಗಿದ್ದ ಶಿವಪ್ರಸಾದ್
ಕಾರಿನಲ್ಲೇ ಸಾವನ್ನಪ್ಪಿರುವ ಶಿವಪ್ರಸಾದ್
ಕಾರಿನೊಳಗೆ ಇದ್ದ ಕಾರಿನ ಕೀ
ಕಾರು ನಿಂತಿರುವುದನ್ನು ನಿಂತಲ್ಲೆ ನಿಂತಿರುವುದನ್ನು ನೋಡಿದ ಸ್ಥಳೀಯರು
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು
ಮ್ಯಾಕಾನಿಕ್ ಕರೆಸಿ ಕಾರಿನ ಡೋರ್‌ಲಾಕ್ ತೆಗೆದು ಪರಿಶೀಲಿಸಿದ ಪೊಲೀಸರು
ಕಾರಿನೊಳಗೆ ಸಾವನ್ನಪ್ಪಿದ್ದ ಶಿವಪ್ರಸಾದ್
ಶಿವಪ್ರಸಾದ್ ಆಲೂರು ತಾಲ್ಲೂಕಿನ, ಸಿದ್ದಾಪುರ ಗ್ರಾಮದವನು
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore19 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan23 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu24 hours ago
ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
-
Kodagu19 hours ago
ಹುಲಿ ದಾಳಿಗೆ ಕರು ಬಲಿ
-
Kodagu22 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Chikmagalur23 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.
-
Chikmagalur24 hours ago
ಜನಿವಾರ ತೆಗೆಸಿರುವುದು ಖಂಡನೀಯ