National - International
ಮುತ್ತಯ್ಯ ಮುರಳೀಧರನ್ ದಾಖಲೆ ಸರಿಗಟ್ಟಿದ ಆರ್.ಅಶ್ವಿನ್

ಚೆನ್ನೈ: ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮುತ್ತಯ್ಯ ಮುರಳೀಧರನ್ ಅವರ ಟೆಸ್ಟ್ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಕಾನ್ಪುರದಲ್ಲಿ ನಡೆದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದ ನಂತರ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಚೆನ್ನೈನಲ್ಲಿ ತಮ್ಮ ತವರು ಮೈದಾನದಲ್ಲಿ ಪಂದ್ಯ ಗೆಲ್ಲುವ ಶತಕ ಸೇರಿದಂತೆ 114 ರನ್ ಗಳಿಸಿದರು ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಳ್ಳಲು 11 ವಿಕೆಟ್‌ಗಳನ್ನು ಪಡೆದರು. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳಿಧರನ್ ಅವರೊಂದಿಗೆ ಸಮಬಲ ಸಾಧಿಸಲು ವೃತ್ತಿಜೀವನದಲ್ಲಿ 11 ನೇ ಬಾರಿಗೆ ಪಿಒಎಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಟೆಸ್ಟ್‌ನಲ್ಲಿ ಗೆದ್ದ ಪ್ರಶಸ್ತಿ ಸೇರಿದಂತೆ 10 ಪಂದ್ಯದ ಆಟಗಾರ ಪ್ರಶಸ್ತಿಗಳನ್ನು ಹೊಂದಿದ್ದಾರೆ. ಮುರಳೀಧರನ್ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಶ್ರೀಲಂಕಾ ಪರ 61 ಟೆಸ್ಟ್ ಸರಣಿಗಳಲ್ಲಿ ಕಾಣಿಸಿಕೊಂಡರು, 2011 ರಲ್ಲಿ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನು ಮಾಡಿದ ಅಶ್ವಿನ್, ಬಾಂಗ್ಲಾದೇಶದ ವಿರುದ್ಧ ತಮ್ಮ 42 ನೇ ಪಂದ್ಯವನ್ನು ಆಡಿದ್ದಾರೆ
National - International
ಆಕ್ಸಿಯಮ್-4 ಯಶಸ್ವಿ ಲ್ಯಾಂಡ್: ಬ್ಯಾಹಾಕಾಶದಿಂದ ಭೂಮಿಗೆ ಬಂದಿಳಿದ ಶುಭಾಂಶು ಶುಕ್ಲಾ ಟೀಂ

ಕ್ಯಾಲಿಫೋರ್ನಿಯಾ: ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಇನ್ನಿತರ ನಾಲ್ವರು ಗಗನಯಾತ್ರಿಗಳು ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಯಶಸ್ವಿಯಾಗಿ ಬಂದಿಳಿದ್ದಾರೆ.
ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ 18 ದಿನಗಳನ್ನುಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ. 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ಬಳಿಕ ತಂಡವೂ ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.
ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯಾದ ಗಗನಯಾನಿ ಟಿಬೋರ್ ಕಾಪು ಅವರು ಭೂಮಿ ಮೇಲೆ ಲ್ಯಾಂಡ್ ಆಗಿದ್ದಾರೆ. ಆಕ್ಸಿಯಮ್ ಯೋಜನೆ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಗಗನಯಾನಿಗಳು ಭೂಮಿಗೆ ತಲುಪಿದ್ದಾರೆ.
ಇನ್ನು ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶಕ್ಕೆ ನೌಕೆ ಬಂದಿಳಿದಿದೆ. ಈ ಖುಷಿ ಕ್ಷಣವನ್ನು ಶುಭಾಂಶು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದು ಭಾವುಕರಾಗಿದ್ದಾರೆ.
National - International
ಸಾಂಸ್ಕೃತಿಕ ಸಂಪರ್ಕದ ವಿಷಯಕ್ಕೆ ಬಂದಾಗ ದೂರವು ಅಡ್ಡಿಯಲ್ಲ: ಪ್ರಧಾನಿ ಮೋದಿ

ಬ್ಯೂನಸ್ ಐರಿಸ್/ನವದೆಹಲಿ: ಅರ್ಜೆಂಟಿನಾಗೆ ಬಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಭಾರತೀಯ ವಲಸಿಗರು ಸಾಂಪ್ರದಾಯಿಕ ನೃತ್ಯದ ಮೂಲಕ ವಿಶೇಷ ಸ್ವಾಗತ ಕೋರಿದ್ದಾರೆ. ಹೀಗಾಗಿ ಅವರ ಸ್ವಾಗತಕ್ಕೆ ಮೋದಿ ಅವರು ಸಂತಸಗೊಂಡು ಸಾಂಸ್ಕೃತಿಕ ಸಂಪರ್ಕದ ವಿಷಯಕ್ಕೆ ಬಂದಾಗ ದೂರವು ಅಡ್ಡಿಯಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ಬ್ಯೂನಸ್ ಐರಿಸ್‌ನಲ್ಲಿರುವ ಭಾರತೀಯ ಸಮುದಾಯದಿಂದ ದೊರೆತ ಆತ್ಮೀಯ ಸ್ವಾಗತದಿಂದ ಗೌರವಿಸಲ್ಪಟ್ಟಿದೆ. ಮನೆಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ನಮ್ಮ ಭಾರತೀಯ ಸಮುದಾಯದ ಮೂಲಕ ಭಾರತದ ಚೈತನ್ಯವು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ ಎಂದು ಹೇಳಿದ್ದಾರೆ.
National - International
ಟಾಪ್ 100 ಬ್ರ್ಯಾಂಡ್‌ಗಳಲ್ಲಿ ಕನ್ನಡಿಗರ ನಂದಿನಿಗೆ 4ನೇ ಅಗ್ರ ಶ್ರೇಯಾಂಕ

ಬೆಂಗಳೂರು: ರಾಜ್ಯದ ಸಹಕಾರಿ ಹಾಲು ಮಾರಾಟ ಮಹಾಮಂಡಳದ ಬ್ರ್ಯಾಂಡ್ ಆಗಿರುವ ನಂದಿನಿಯೂ ಇದೀಗ ದೇಶದ ಆಹಾರ ಮತ್ತು ಪಾನೀಯ ಉತ್ಪನ್ನಗಳ ಮಾರಾಟ ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 4ನೇ ಅಗ್ರ ಶ್ರೇಯಾಂಕವನ್ನು ಪಡೆದು ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ.
ವಿಶ್ವದ ಮುಖ್ಯ ಬ್ರ್ಯಾಂಡ್ ಮೌಲ್ಯಮಾಪನ ಸಂಸ್ಥೆಯಾದ ಬ್ರ್ಯಾಂಡ್ ಫೈನಾನ್ಸ್ ತನ್ನ 2025ರ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ನಂದಿನಿ ಬ್ರ್ಯಾಂಡ್ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶದ ಮುಖ್ಯ ಬ್ರ್ಯಾಂಡ್‌ಗಳೊಂದಿಗೆ ತೀವ್ರ ಪೈಪೋಟಿ ಮಧ್ಯೆಯೂ ಆಹಾರ ಹಾಗೂ ಪಾನೀಯಗಳ ವಿಭಾಗದಲ್ಲಿ ಭಾರತದಲ್ಲಿಯೇ ನಾಲ್ಕನೇಯ ಸ್ಥಾನವನ್ನು ಕಾಯ್ದುಕೊಂಡಿದೆ.
ದಕ್ಷಿಣ ಭಾರತದಲ್ಲಿ ನಂದಿನಿ ವಿಸ್ತಾರಗೊಂಡಿದೆ. ಉತ್ತರ ಪ್ರದೇಶದಲ್ಲಿ ಹಂತ ಹಂತವಾಗಿ ವಹಿವಾಟವನ್ನು ವಿಸ್ತರಿಸುತ್ತಿದ್ದು, ಇದೀಗ ಸಿಂಗಾಪುರ ಮತ್ತು ದುಬೈ ರಾಷ್ಟ್ರಗಳಿಗೂ ನಂದಿನಿ ವ್ಯಾಪಾರ ವಹಿವಾಟು ಪ್ರಾರಂಭಿಸಿದೆ. ಅಲ್ಲದೇ ಈಗ ನಂದಿನಿ ತುಪ್ಪಕ್ಕೆ ಗಣನೀಯ ಬೇಡಿಕೆ ಇದ್ದು, ಆಂಧ್ರದ ತಿರುಪತಿ ದೇವಾಲಯಕ್ಕೆ ಪ್ರತಿ ತಿಂಗಳು 300 ಮೆಟ್ರಿಕ್ ಟನ್ ತುಪ್ಪವನ್ನು ಕೆಎಂಎಫ್ ಪೂರೈಕೆ ಮಾಡುತ್ತಿದೆ.
ಇನ್ನೂ ಬ್ರ್ಯಾಂಡ್ ಫೈನಾನ್ಸ್ ಮೌಲ್ಯಮಾಪನ ಸಂಸ್ಥೆ ಬ್ರ್ಯಾಂಡ್‌ಗಳ ಆರ್ಥಿಕ ಸದೃಢತೆ, ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ಗಳ ಮೌಲ್ಯಮಾಪನವನ್ನು ಅಳೆಯುವ ಸಂಸ್ಥೆಯಾಗಿದೆ. ಲಂಡನ್‌ನಲ್ಲಿ ಇದರ ಕೇಂದ್ರ ಕಚೇರಿಯನ್ನು ಒಳಗೊಂಡಿದ್ದು, ಸುಮಾರು 25 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ವಾರ್ಷಿಕವಾಗಿ 6,000ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತದೆ. ಬ್ರ್ಯಾಂಡ್ ಫೈನಾನ್ಸ್ ವಿವಿಧ ಬ್ರ್ಯಾಂಡ್‌ಗಳ ಆರ್ಥಿಕ ಮೌಲ್ಯವನ್ನು ಅಳೆಯುವುದರಿಂದ ಕಂಪನಿಗಳು ಕಾರ್ಯತಂತ್ರದ ತೀರ್ಮಾನಗಳನ್ನು ತೆಗೆದುಕೊಳ್ಳಲು ಈ ಸಂಸ್ಥೆಯ ವರದಿಯೂ ಸಹಾಯಕಾರಿಯಾಗಿದೆ.
-
State14 hours ago
GST ನೋಟಿಸ್: ನಗದು ವ್ಯವಹಾರದತ್ತ ಮುಖ ಮಾಡಿದ ವರ್ತಕರು; ಗೊಂದಲಗಳಿಗೆ ತೆರಿಗೆ ಇಲಾಖೆ ಕೊಟ್ಟ ಸ್ಪಷ್ಟನೆ, ಸೂಚನೆಗಳೇನು..?
-
Mandya9 hours ago
ಡಿಸಿಎಂ ಡಿ.ಕೆ.ಶಿವಕುಮಾರ್ ಎಸ್ಕಾರ್ಟ್ ವಾಹನ ಪಲ್ಟಿ : ಇಬ್ಬರಿಗೆ ಗಾಯ
-
Chamarajanagar15 hours ago
ಅಪಘಾತದಲ್ಲಿ ಯುವಕ ಸ್ಥಳದಲ್ಲೇ ಸಾವು
-
Chamarajanagar9 hours ago
ಸುರೇಶ್ ಎನ್. ಋಗ್ವೇದಿ ಅವರಿಗೆ ವಿಪ್ರ ವಿಕಾಸ ಪ್ರಶಸ್ತಿ
-
Special14 hours ago
ನಿಸ್ವಾರ್ಥ ಸೇವೆಯ ಆಯುರ್ವೇದ ತಜ್ಞ ವೈದ್ಯ ಡಾ.ಗುರುಬಸವರಾಜ
-
Mysore11 hours ago
ನಾವು ನಿಮ್ಮ ಬಳಿ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ ನಿಮ್ಮ ಋಣ ತೀರಿಸಲು ಬಂದಿದ್ದೇವೆ – ಡಿ.ಕೆ.ಶಿವಕುಮಾರ್
-
Kodagu10 hours ago
ಕೊಡಗು ಸೇರಿ ರಾಜ್ಯದ ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ
-
Chamarajanagar9 hours ago
ಹಸುಗೂಸನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ಪೋಷಕರು