Mandya
ಫೈನಾನ್ಸ್ ಕಿರುಕುಳದಿಂದ ಮೃತರಾದ ತಾಯಿ-ಮಗನ ಕುಟುಂಬ ಭೇಟಿಯಾದ ಆರ್.ಅಶೋಕ್
ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕಳಕ್ಕೆ ಬೇಸತ್ತು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡದ್ದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮ ಎಂಬವವರು ಉಜ್ಜೀವನ್ ಬ್ಯಾಂಕ್‌ನಲ್ಲಿ 6 ಲಕ್ಷ ಸಾಲ ಪಡೆದು, ಸಾಲ ತೀರಿಸಲಾಗದೆ ಬ್ಯಾಂಕ್ ಸಿಬ್ಬಂದಿಗಳ ಕಾಟದಿಂದ ಮನನೊಂದು ಜ.28 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬಳಿಕ ತಾಯಿ ಸಾವಿನಿಂದ ಮನನೊಂದ ಮಗ ರಂಜಿತ್ ಕೂಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇಂದು (ಫೆ.6) ಗ್ರಾಮಕ್ಕೆ ಭೇಟಿ ನೀಡಿದ ವಿಪಕ್ಷ ನಾಯಕ ಆರ್.ಅಶೋಕ್ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡವಾಳು ಸಚ್ಚಿದಾನಂದ ಮತ್ತಿತರರು ಸಾಥ್ ನೀಡಿದರು.
Mandya
ವಿವಿಧ ಗಣ್ಯರ ಪುತ್ಥಳಿ, ಸರ್ಕಲ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಶಾಸಕ ಕೆ.ಎಂ.ಉದಯ್
ಮದ್ದೂರು: ತಾಲೂಕಿನ ನಗರ ವ್ಯಾಪ್ತಿಯ ವಿವಿಧ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಶಾಸಕ ಕೆ. ಎಂ .ಉದಯ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮದ್ದೂರು ನಗರದ ಟಿ.ಬಿ. ಸರ್ಕಲ್‌ನಿಂದ ಪೇಟೆಬೀದಿ, ಕೊಲ್ಲಿ ಸರ್ಕಲ್‌ವರೆಗೆ 80 ಅಡಿ ರಸ್ತೆ ಮತ್ತು ಶಿವಪುರದ ಕೊಪ್ಪ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರಮುಖ ಸರ್ಕಲ್‌ಗಳಲ್ಲಿ ಗಣ್ಯರ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಶಿವಪುರದ ಕೊಪ್ಪ ಸರ್ಕಲ್ – ಭಕ್ತ ಕನಕದಾಸರು, ಕೊಲ್ಲಿ ಸರ್ಕಲ್ – ವಿಶ್ವಗುರು ಜಗಜ್ಯೋತಿ ಶ್ರೀ ಬಸವಣ್ಣ, ಹೂವಿನ ಸರ್ಕಲ್ – ಅಮರ ಶಿಲ್ಪಿ ಶ್ರೀ ಜಕಣಚಾರಿ, ಕೆಮ್ಮಣ್ಣು ನಾಲೆ ಸರ್ಕಲ್ – ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಸ್ಟೇಡಿಯಂ ಸರ್ಕಲ್ – ಶ್ರೀ ಶ್ರೀ ಶ್ರೀ ಬಾಲ ಗಂಗಾಧರನಾಥ ಸ್ವಾಮಿಜೀ ಹಾಗೂ ಟಿ.ಬಿ. ಸರ್ಕಲ್ – ನಾಡಪ್ರಭು ಶ್ರೀ ಕೆಂಪೇಗೌಡರು ರವರುಗಳ ಪುತ್ಥಳಿ ಹಾಗೂ ಸರ್ಕಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆಯ ಬಾಲರಾಮನ ಕೆತ್ತನೆಯ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ರವರ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ಮೂಲಕ ಯೋಜನೆಯ ವಿನ್ಯಾಸ, ಸ್ಥಳದ ಸೂಕ್ತತೆ, ಸಂಚಾರ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿ, ಮುಂದಿನ ಕ್ರಮಗಳಿಗೆ ಅಗತ್ಯ ಮಾರ್ಗದರ್ಶನ ಪಡೆದಿದ್ದಾರೆ.
Mandya
ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
ವರದಿ : ಅಲ್ಲಾಪಟ್ಟಣ ಸತೀಶ್
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ವಿಕಲಚೇತನ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಗೊಂಡಿದೆ.
ಕೆ.ಆರ್.ಪೇಟೆ ತಾಲೂಕಿನ ಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದ ರಮ್ಯಾ(26) ದೂರು ನೀಡಿರುವ ಯುವತಿಯಾಗಿದ್ದಾಳೆ. ಅದೇ ಗ್ರಾಮದ ಪಕ್ಕದ ಮನೆಯ ಪೃಥ್ವಿ(27) ಎಂಬಾತ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದ್ದು,ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಮನೆಯಲ್ಲಿ ರಮ್ಯಾ ಒಬ್ಬಳೇ ಇರುವಾಗ ಅತ್ಯಾಚಾರವೆಸಗಿರುವುದಾಗಿ ಹೇಳಲಾಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.
ಯಾರಿಗಾದರೂ ಹೇಳಿದರೆ ನಿಮ್ಮ ಅಪ್ಪ, ಅಮ್ಮನನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಗಿ ಯುವತಿ ತಿಳಿಸಿದ್ದಾಳೆ.
ಅಕ್ಟೋಬರ್ ತಿಂಗಳಲ್ಲಿ ರಮ್ಯಾಗೆ ವಾಂತಿ ಶುರುವಾಗಿದ್ದ ಹಿನ್ನೆಲೆಯಲ್ಲಿ ವೈದ್ಯರ ಬಳಿ ತಪಾಸಣೆ ಮಾಡಲಾಗಿ ವೈದ್ಯರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭಿಣಿಯಾಗಿರುವುದು ದೃಢ ಪಟ್ಡಿದೆ ಎನ್ನಲಾಗಿದೆ.

ಬಳಿಕ ಮದುವೆ ಮಾಡುವಂತೆ ಪೃಥ್ವಿ ಮನೆಯವರೊಂದಿಗೆ ಮಾತುಕತೆ ನಡೆದಿದ್ದು, ಮದುವೆಗೆ ಒಪ್ಪಿ ಇದೀಗ ಮದುವೆಯಾಗದೆ ಮೋಸ ಮಾಡಿರುವುದಾಗಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Mandya
ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಭವಿಷ್ಯದ ರೂವಾರಿಗಬೇಕು : ರಮೇಶ ರಾಜು
ಮಂಡ್ಯ : ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಭವಿಷ್ಯದ ರೂವಾರಿಗಳಾದ ಮಕ್ಕಳಿಗೆ ಜ್ಞಾನದ ಜೊತೆಗೆ ಮೌಲ್ಯಗಳು, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಕಲಿಸಿಕೊಡಬೇಕೆಂದು ಎಇಟಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಶಾರದ ರಮೇಶ ರಾಜು ಹೇಳಿದರು.
ನಗರದ ಎಇಟಿ ಮಹಾಶಿಕ್ಷಣ ವಿದ್ಯಾಲಯದ ಕೆಂಪಮ್ಮ ಜೆ.ದೇವಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬಿಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೋಷಕರು ಮಕ್ಕಳಿಗೆ ಜೀವನ ನೀಡಿದರೆ, ಶಿಕ್ಷಕರು ಆ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಅವರ ಜೀವನವನ್ನು ರೂಪಿಸಿ ಸಮಾಜದಲ್ಲಿ ಗೌರವಯುತ ಮೌಲ್ಯಯುತವಾದ ಜೀವನ ನಡೆಸುವಂತೆ ದಾರಿ ತೋರುವ ರೂವಾರಿಗಳು ಎಂದು ಅಭಿಪ್ರಾಯಪಟ್ಟರು.
ಶಿಕ್ಷಕ ವೃತ್ತಿ ತರಬೇತಿ ಪಡೆದು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿರುವ ಭವಿಷ್ಯದ ಶಿಕ್ಷಕರುಗಳಿಗೆ ಶುಭ ಕೋರಿದ ಅವರು, ತಾವು ಎಂದಿಗೂ ತಮಗೆ ಜೀವ ನೀಡಿದ ತಂದೆ ತಾಯಿಗಳಿಗೆ ಕೃತಜ್ಞತೆಯಿಂದ ಇರುವ ಮೂಲಕ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆಯನ್ನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಮಾಜಿ ರಾಷ್ಟ್ರಪತಿಗಳು ಹೇಳಿರುವ ಹಾಗೆ ಜೀವನ ಮತ್ತು ಸಮಯ ವಿಶ್ವದ ಬಹುದೊಡ್ಡ ಶಿಕ್ಷಕರಾಗಿದ್ದು, ನೂತನ ಶಿಕ್ಷಕ ಮಿತ್ರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ತಮ್ಮ ಜೀವನದಲ್ಲಿ ಎಂದೂ ದಾರಿ ತಪ್ಪದೆ ಸಮಯವನ್ನು ಸದುಪಯೋಗಪಡಿಸಿಕೊಂಡು ತಾವು ಅಭಿವೃದ್ಧಿ ಹೊಂದುವ ಜೊತೆಗೆ ಮುಂದಿನ ತಲೆಮಾರಿನ ಮಕ್ಕಳನ್ನು ಸರಿದಾರಿ ತೋರುವ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲ ಡಾ. ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ವೇಳೆ ಸಹಾಯಕ ಪ್ರಾಧ್ಯಾಪಕರುಗಳಾದ ಎಚ್. ಪಿ.ಧರ್ಮೇಶ್, ಮೋಹನ್ ದಾಸ್, ಸುಕೇಶ್ ದಯಾನಂದ್, ರಕ್ಷಿತಾ, ಶ್ರೀದೇವಿ, ಶಿವ ನಾಗೇಂದ್ರ ಪ್ರಸಾದ್, ವಾಣಿ ಸೇರಿದಂತೆ ಇತರರು ಹಾಜರಿದ್ದರು.
-
Hassan28 minutes agoಬೈರಾಪುರ-ಚನ್ನಪುರ- ಮಗ್ಗೆ ರಸ್ತೆ ತಾತ್ಕಾಲಿಕ ಬಂದ್: ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೂಚನೆ
-
Special2 hours agoಕರ್ನಾಟಕ ಕುಕ್ಕುಟ ಸಂಜೀವಿನಿ ಯೋಜನೆ: ಮಹಿಳೆಯರಿಗೆ ಉಚಿತ ಕೋಳಿ ಮರಿ, ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ
-
Hassan20 hours agoಒಳ್ಳೆಯ ಕೆಲಸ ಬ್ಯಾಂಕ್ ಠೇವಣಿಯಂತೆ; ಸಮಯ ಬಂದಾಗ ಫಲ ನೀಡುತ್ತದೆ: ರವಿಕುಮಾರ್ ಬಲ್ಲೇನಹಳ್ಳಿ
-
Hassan18 hours agoರೋಟರಿ ಬೆಂಗಳೂರು ದಕ್ಷಿಣದಿಂದ MCE ಕಾಲೇಜಿನ 51 ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ
-
Mandya19 hours agoವಿಕಲಚೇತನ ಯುವತಿ ಮೇಲೆ ಅತ್ಯಾಚಾರ ಆರೋಪ : ದೂರು ದಾಖಲು
-
Kodagu19 hours agoಅನಧಿಕೃತ ಹೋಸ್ಟೇಗಳಿಗೆ ಕಡಿವಾಣ ನಿಟ್ಟಿನಲ್ಲಿ ವಾರ್ಡ್ವಾರ್ ಸಮಿತಿ ರಚನೆ: 15 ದಿನಗಳೊಳಗೆ ಪೊಲೀಸರಿಂದ ದಲ್ಲಾಳಿಗಳ ವಿರುದ್ದ ಕ್ರಮ
-
State20 hours agoಡಾ.ಜಿ.ಪರಮೇಶ್ವರ್ ಈ ರಾಜ್ಯದ ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ: ವಿ.ಸೋಮಣ್ಣ
-
State16 hours agoರಾಹುಲ್, ಖರ್ಗೆ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಹೈಕಮಾಂಡೇ: ಬಿ.ವೈ.ವಿಜಯೇಂದ್ರ
