State
ಸಿಎಂ ಹೌದು ಹುಲಿಯಾ ಆಗಿಲ್ಲ, ಹೌದು ಇಲಿಯಾ ಆಗಿದ್ದಾರೆ: ಆರ್.ಅಶೋಕ್
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹೌದು ಹುಲಿಯಾ ಆಗಿ ಉಳಿದಿಲ್ಲ. ಅವರೀಗ ಹೌದು ಇಲಿಯಾ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಿಎಂಗೆ ವಿಧಾನಸಭೆಯಲ್ಲಿ ಟೀಕಿಸಿದ್ದಾರೆ.
ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಸಿದ ಆರ್. ಅಶೋಕ್, ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ಹೌದು ಹುಲಿಯಾ ಆಗಿ ಅವರೂ ಉಳಿದಿಲ್ಲ, ಹೌದು ಇಲಿಯಾ ಆಗಿದ್ದಾರೆ. ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ. ಇಲಾಖೆಗಳಲ್ಲಿ ಲೂಟಿ ನಿಲುತ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡುತ್ತಿದ್ದು, ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ 17ನೇ ಬಜೆಟ್ ಮಂಡಿಸುತ್ತಿದ್ದಾರೆ. 18, 19ನೇ ಬಜೆಟ್ ಮಂಡಿಸೋದಾಗಿಯೂ ಹೇಳಿದ್ದಾರೆ. ಸಿಎಂಗೆ ಕಂಗ್ರಾಜುಲೇಷನ್ಸ್ ಎಂದು ತಿರುಗೇಟು ನೀಡಿದ್ದಾರೆ.
ಕೋಗಿಲು ಲೇಔಟ್‌ನಲ್ಲಿದ್ದ ನುಸುಳುಕೋರರ ಪರ ಅನುಕಂಪ. ಕನ್ನಡಿಗರತ್ತ ನಿರ್ಲಕ್ಷ್ಯ. ಅಧಿಕಾರಿಗಳಿಗೆ ಸರ್ಕಾರದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಆತ್ಮಹತ್ಯೆ ಭಾಗ್ಯ ಸಿಕ್ಕಿತ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ, ಒಂದು ತಿಂಗಳ ಅಕ್ಕಿ ಹಣ ನೀಡಿಲ್ಲ. ಇವೆರಡರ 5,675 ಕೋಟಿ ರೂ. ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಮನರೇಗಾ ಯೋಜನೆಗೆ ಗಾಂಧೀಜಿ ಹೆಸರು ತೆಗೆದ ಬಗ್ಗೆ ಆಕ್ಷೇಪಿಸಿದ ಕಾಂಗ್ರೆಸ್‌ಗೆ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನ ಅನೇಕ ಯೋಜನೆಗಳ ಹೆಸರುಗಳಿರುವ ಪಟ್ಟಿಯನ್ನು ಓದಿ ತಿರುಗೇಟು ನೀಡಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನೆಹರೂ, ಇಂದಿರಾ, ರಾಜೀವ್ ಗಾಂಧಿ ಹೆಸರಿನ ಯೋಜನೆಗಳ ಲಿಸ್ಟ್ ಇರುವ ಬಿಲ್ ಮಾದರಿಯಲ್ಲಿರುವ ಅಂದಾಜು ಎರಡು ಮೀಟರ್ ಉದ್ದದ ಪಟ್ಟಿ ಓದುವ ಮೂಲಕ ಗಮನ ಸೆಳೆದಿದ್ದಾರೆ.
ಈ ವೇಳೆ ಗಾಂಧಿ ಹೆಸರಿನಲ್ಲೂ ಯೋಜನೆಗಳಿವೆ, ಅದನ್ಯಾಕೆ ಬಿಟ್ಟರೆಂದು ಬೈರತಿ ಸುರೇಶ್ ಆಕ್ಷೇಪಿಸಿದ್ರು. ಮೊಬೈಲ್‌ನಲ್ಲಿ ಗಾಂಧಿ ಹೆಸರಿನ ಯೋಜನೆಗಳನ್ನ ಓದುವ ಮೂಲಕ ಬೈರತಿ ಸುರೇಶ್ ಅಶೋಕ್‌ಗೆ ಟಕ್ಕರ್ ಕೊಟ್ಟರೆ, ಇನ್ನುಶೇ. 80% ಕಮೀಷನ್ ಕುರಿತ ಗುತ್ತಿಗೆದಾರರ ಆರೋಪ ಪ್ರಸ್ತಾಪಿಸಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಮೇಲೆ ಶೇ.80% ಕಮೀಷನ್ ಆರೋಪ ಮಾಡಿರುವ ಗುತ್ತಿಗೆದಾರರ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ, ಸರ್ಕಾರ ಕಮೀಷನ್ ಆರೋಪ ನಿಜವೆಂದು ಸುಮ್ನಿದೆಯಾ ಎಂದು ಕಿಡಿಕಾರಿದ್ದಾರೆ.
ಕಲಾವಿದೆ ಬಿ. ಜಯಶ್ರೀ ಅವರಿಗೆ ಸರ್ವೆ ಅಧಿಕಾರಿಗಳು ಕಚೇರಿಗೆ ಅಲೆದಾಡಿಸುತ್ತಿರುವುದು. ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್ ಕೂಗಿಕೊಂಡ ಪ್ರಕರಣ, ಡಿಕೆಶಿಯಿಂದ ಬ್ರ‍್ಯಾಂಡ್ ಬೆಂಗಳೂರು ಜಪ ಮರೆಯಾಗಿರುವುದು. ಜಾರ್ಜ್ ರಾಜೀನಾಮೆ ವದಂತಿ, ಡ್ರಗ್ಸ್ ಫ್ಯಾಕ್ಟರಿ ಪತ್ತೆ, ರಾಜೀವ್ ಗೌಡ ಧಮ್ಕಿ ಪ್ರಕರಣ, ಕಾನೂನು ಸುವ್ಯವಸ್ಥೆ, ಕೇಂದ್ರ-ರಾಜ್ಯ ಸಂಘರ್ಷ ಇತ್ಯಾದಿ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
State
ಸಚಿವ ಸಂಪುಟ ಪುನಾರಚನೆ: ಹೆಚ್ಚುವರಿ ಜವಾಬ್ದಾರಿ ನೀಡುವಂತೆ ಈಶ್ವರ್ ಖಂಡ್ರೆ ಮನವಿ
State
ಸಿಎಂ ಬದಲಾವಣೆ ಚರ್ಚೆ ನಡುವೆ ಆರ್. ಅಶೋಕ್ ತೀವ್ರ ಟೀಕೆ
State
ಡಿ.ಕೆ. ಶಿವಕುಮಾರ್ ಸಿಎಂ ಚರ್ಚೆ: ದೇವೇಗೌಡರ ಮನೆಗೆ ಸೂತಕದ ಛಾಯೆ ಎಂದು ಚಲುವರಾಯಸ್ವಾಮಿ ವ್ಯಂಗ್ಯ
ಬೆಂಗಳೂರು: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಚರ್ಚೆ ಕೇಳಿಬಂದ ನಂತರ ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಎನ್.ಚಲುವರಾಯಸ್ವಾಮಿ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಒಕ್ಕಲಿಗ ಸಮುದಾಯದಲ್ಲಿನ ನಾಯಕತ್ವದ ವಿಚಾರವನ್ನು ಉಲ್ಲೇಖಿಸಿದ ಅವರು, ಡಿಕೆ ಶಿವಕುಮಾರ್ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದ್ದಾರೆ.

ಅವರು ಮತ್ತೊಂದು ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತಾರೆ, ರಾಜ್ಯಸಭೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.
-
Special21 hours agoಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ: ಅರ್ಜಿ ಆಹ್ವಾನ!
-
Hassan24 hours agoಹಾಸನ ಜಿಲ್ಲೆಯಲ್ಲಿ ಭಾರೀ ಮಳೆ: ಕೆರೆ–ಕಟ್ಟೆಗಳು ತುಂಬಿ ರೈತರಲ್ಲಿ ಸಂತಸ
-
Special10 hours agoLPG ಸಿಲಿಂಡರ್ ಹೊಸ ನಿಯಮಗಳು: ಈ ತಪ್ಪು ಮಾಡಿದ್ರೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಆಗಬಹುದು!
-
State23 hours agoಕರ್ನಾಟಕದಲ್ಲಿ ಗುಡುಗು–ಸಿಡಿಲು ಮಳೆ ಎಚ್ಚರಿಕೆ: ಆರೆಂಜ್, ಯೆಲ್ಲೋ ಅಲರ್ಟ್ IMDಯಿಂದ ಘೋಷಣೆ
-
Mandya54 minutes agoಸಿದ್ದರಾಮಯ್ಯನವರ ರಾಜೀನಾಮೆ ನಿರೀಕ್ಷಿತ: ಸುಮಲತಾ ಅಂಬರೀಷ್
-
National23 hours agoಈ ಬಾರಿ ಕೋಲ್ಕತ್ತಾದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
-
Politics22 hours agoಜೈಪುರದಲ್ಲಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
-
Hassan2 hours agoಕೆ.ಎಂ. ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ ಶ್ರೇಯಸ್ ಪಟೇಲ್
