Hassan
ಕಾಂಗ್ರೆಸ್ ಬಂದ ಮೇಲೆ ರಾಜ್ಯ ಸೂತಕದ ಮನೆಯಾಗಿದೆ: ಆರ್.ಅಶೋಕ್
ಹಾಸನ: ಕರ್ನಾಟಕದಲ್ಲಿ ಕಾಂಗ್ರೆಸ್ ಬಂದ ಮೇಲೆ ದಿನನಿತ್ಯ ಸೂತಕವೇ ಆವರಿಸಿದೆ. ಕರ್ನಾಟಕ ರಾಜ್ಯ ಸೂತನದ ಮನೆಯಾಗಿ ಹೋಗಿದೆ. ಮೈಕ್ರೋಫೈನಾನ್ಸ್ ಹಾವಳಿಯಿಂದ ಸಾವುಗಳಾಗುತ್ತಿವೆ, ಕೇಳುವವರೆ ಇಲ್ಲ ಬಾಣಂತಿಯರು ಸಾಯುತ್ತಿದ್ದಾರೆ ಸರ್ಕಾರ ಏನು ಕ್ರಮ ಕೈಗೊಂಡಿಲ್ಲ. ಸರ್ಕಾರದ ಬಳಿ ಹಣ ಇಲ್ಲ. ನಿಷ್ಠಾವಂತ ಅಧಿಕಾರಿಗಳು 60% ಲಂಚದ ಸುಳಿಯಲ್ಲಿ ಪ್ರಕ್ರಿಯೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಬಿಲ್ ನೀಡಿಲ್ಲ ಎಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಈ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಸ್ಥಿತಿ ರಾಜ್ಯದಲ್ಲಿದೆ ಎಂದು ಹಾಸನದಲ್ಲಿ ಮಂಗಳವಾರ (ಫೆ.4) ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಪ್ರತಿನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಡೆಯುತ್ತಲೇ ಇವೆ. ಹುಬ್ಬಳಿಯಿಂದ ಹಿಡಿದು ಮಂಡ್ಯದವರೆಗೂ, ನಿನ್ನೆ ಮಂಡ್ಯದಲ್ಲಿ ಅತ್ಯಾಚಾರ ಆಗಿದೆ. ಗೃಹಸಚಿವರು, ಮುಖ್ಯಮಂತ್ರಿ, ಸರ್ಕಾರ ಇದೆಯಾ?, ಹಾಡುಹಗಲೇ ಬ್ಯಾಂಕ್‌ಗಳಿಂದ ಹಣ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ. ಇದುವರೆಗೂ 24 ರಿಂದ 25 ಜನರು ಮೈಕ್ರೊಫೈನಾನ್ಸ್ ಹಾವಳಿಯಿಂದ ಸತ್ತಿದ್ದಾರೆ. ಅರಕಲಗೂಡಿನಲ್ಲು ನಿನ್ನೆ ಮೈಕ್ರೋಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರು ಕಣ್ಣೀರು ಹಾಕುವ ಸ್ಥಿತಿಗೆ ಈ ಸರ್ಕಾರ ತಂದಿದೆ.
ಆದರೆ ಇತ್ತ ಸಿಎಂ, ಮಂತ್ರಿಗಳಯ ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಕಠಿಣ ಕ್ರಮ ಎಂದು ಭಜನೆ ಮಾಡುತ್ತಿದ್ದಾರೆ. ಇನ್ನೂ ಮೈಕ್ರೋಫೈನಾನ್ಸ್ ಹಾವಲಿ ನಿಂತಿಲ್ಲ. ಒಂದು ತಿಂಗಳಿನಿಂದ ಘಟನೆಗಳು ನಡೆಯುತ್ತಿವೆ
ಯಾವ ಮೈಕ್ರೋಫೈನಾನ್ಸ್ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಯಾವ ಮೈಕ್ರೋಫೈನಾನ್ಸ್ ಮ್ಯಾನೆಜರ್ ಅರೆಸ್ಟ್ ಮಾಡಿದ್ದೀರಾ? ಕಾಟಾಚಾರಕ್ಕೆ ಸುಗ್ರೀವಾಜ್ಞೆ ಅಂತಿರಾ. ಮೈಕ್ರೋಫೈನಾನ್ಸ್‌ನವರು ಕೇರ್ ಮಾಡ್ತಿಲ್ಲ, ಸರ್ಕಾರದ ಮೇಲೆ ಭಯನೇ ಇಲ್ಲ. ಆದರೆ ಇವರು ದಿನನಿತ್ಯ ಭಜನೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುಡುಗಿದರೆ ಎಲ್ಲ ರೌಡಿಗಳುರೂ ಉತ್ತರಪ್ರದೇಶ ಇರಲಿ ದೇಶವನ್ನೇ ಬಿಟ್ಟು ಓಡಿ ಹೋಗುತ್ತಾರೆ. ಇಲ್ಲಿ ಸಿದ್ದರಾಮಯ್ಯ ಗುಡುಗಿದ್ದು ಆಯ್ತು, ಮಿಂಚು, ಮಳೆ ಬಂದಿದ್ದು ಆಯ್ತು ಮೂರು ಪೈಸದ್ದು ಉಪಯೋಗವಿಲ್ಲ, ಕ್ರಮವಿಲ್ಲ. ಕುಂಭಮೇಳದಲ್ಲಿ ಮೂವತ್ತು ಜನ ಸತ್ತಿದ್ದಕ್ಕೆ ಕಾಂಗ್ರೆಸ್‌ನವರು ಪಾರ್ಲಿಮೆಂಟ್‌ನಲ್ಲಿ ಬಾಯಿ ಬಡ್ಕೊತ್ತಿದ್ದಾರೆ. ಖರ್ಗೆಯವರಿಗೆ ಜ್ಞಾನ ಬೇಡವಾ, ಇಲ್ಲಿ ಮೈಕ್ರೋಫೈನಾನ್ಸ್‌ನಿಂದ ಸಾಯುತ್ತಿದ್ದಾರೆ ಆದರೆ ಅದರ ಬಗ್ಗೆ ಮಾತನಾಡಲ್ಲ ನೀವು ಮಾಡಿದ ಪಾಪದಿಂದ ಇಲ್ಲಿ ಜನ ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ ಆರೋಪಗಳ ಸುರಿಮಳೆಗೈದರು.
Hassan
2026ರ ಜು.18ಕ್ಕೆ ದಿ.ಹೆಚ್.ಸಿ.ಶ್ರೀಕಂಠಯ್ಯ ಜನ್ಮ ಶತಮಾನೋತ್ಸವ: ಉದಯಕುಮಾರ್
ವರದಿ: ದಯಾನಂದ ಶೆಟ್ಟಿಹಳ್ಳಿ
ಚನ್ನರಾಯಪಟ್ಟಣ: ತಾಲೂಕಿಗೆ ಹಲವಾರು ಕೊಡಿಗೆ ನೀಡಿರುವ ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಜನ್ಮ ಶತಮಾನೋತ್ಸವವನ್ನು 2026ರ ಜು.18 ರಂದು ಆಚರಿಸಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಉದಯಕುಮಾರ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಅವರ ಕೊಡುಗೆ ಅಪಾರ ಎಂದರು.

ಚನ್ನರಾಯಪಟ್ಟಣ ಹಾಗೂ ಹಿರೀಸಾವೆ ಗ್ರಾಮದ ಸೂಕ್ತ ಸ್ಥಳದಲ್ಲಿ ಶ್ರೀಕಂಠಯ್ಯ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದು. ರಾಜ್ಯ ಮಟ್ಟದ ಮಹಿಳಾ ಸಬಲೀಕರಣ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಮುಖಂಡರೆಲ್ಲಾ ಸೇರಿ ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಿದ್ದು ಹಂತ ಹಂತವಾಗಿ ಅವರ ಹೆಸರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕ್ರೀಡಾಕೂಟಗಳು ಹಾಗೂ ವಿವಿಧ ವಿಶೇಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಕಂದಾಯ ಸಚಿವ ದಿ.ಹೆಚ್.ಸಿ.ಶ್ರೀಕಂಠಯ್ಯ ಅವರ ಸಾಧನೆ ಕುರಿತ ವಿಚಾರಗಳನ್ನು ಒಳಗೊಂಡ 2026 ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಬು, ತಾಲ್ಲೂಕು ಯೂಥ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಆಕರ್ಷಗೌಡ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು, ವಾಸಣ್ಣ, ಪ್ರಮುಖರಾದ ಅಶೋಕ್ ಹಾಗೂ ಇತರರು ಇದ್ದರು.
Hassan
ಭಾರಿ ಹೊಂಡದಲ್ಲಿ ಸಿಲುಕಿದ ಲಾರಿ: ಒಂದು ಗಂಟೆ ಕಾಲ NH-75 ಬಂದ್
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಗ್ರಾಮ ಸಮೀಪ ಲಾರಿಯೊಂದು ಭಾರೀ ಹೊಂಡದಲ್ಲಿ ಸಿಲುಕಿದ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ಮಂಗಳೂರಿನಿಂದ ಗೂಡ್ಸ್ ತುಂಬಿಕೊಂಡು ಬೆಂಗಳೂರಿನತ್ತ ಸಾಗುತ್ತಿದ್ದ ಲಾರಿಯೂ, ದೋಣಿಗಾಲ್ ಸಮೀಪದ ಕಿರಿದಾದ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಭಾರೀ ಹೊಂಡದಲ್ಲಿ ಸಿಲುಕಿಕೊಂಡಿತ್ತು. ಮುಂದೆ ಚಲಿಸಲು ಆಗದೆ ನಿಂತ ಲಾರಿಯಿಂದ ಇತರೆ ವಾಹನಗಳು ಸಾಗಲಾರದೆ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮಂಗಳೂರು-ಬೆಂಗಳೂರು ಮಾರ್ಗದ ವಾಹನಗಳನ್ನು ಕಪ್ಪಳಿ ಗ್ರಾಮದ ಮೂಲಕ ಹಾಗೂ ಬೆಂಗಳೂರು-ಮಂಗಳೂರು ಮಾರ್ಗದ VoZಮಾನಗಳನ್ನು ಸುಬ್ರಮಣ್ಯ ರಸ್ತೆಯ ಮೂಲಕ ತಿರುಗಿಸಿ ಸಂಚಾರಕ್ಕೆ ಅವಕಾಶ ಮಾಡಿ, ವಾಹನ ದಟ್ಟಣೆಯನ್ನು ನಿಯಂತ್ರಿಸಿದರು. ನಂತರ ಕ್ರೇನ್ ಬಳಸಿ ಲಾರಿಯನ್ನು ಹೊಂಡದಿಂದ ಹೊರತೆಗೆದ ನಂತರ ಸಂಚಾರ ಸುಗಮಗೊಂಡಿತು.
Hassan
ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿ: ಸಕಲೇಶಪುರ ತಾಲೂಕಿನ 2 ಪಿಡಿಒಗಳು ಆಯ್ಕೆ
ಸಕಲೇಶಪುರ: ಅಖಿಲ ಭಾರತ ಸರ್ಕಾರಿ ನೌಕರರ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ತಾಲೂಕಿನ ಇಬ್ಬರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.

ಆನೆಮಹಲ್ ಗ್ರಾಪಂ ಪಿಡಿಒ ವೇಣುಗೋಪಾಲ್ ಹಾಗೂ ಹಾನುಬಾಳು ಗ್ರಾ.ಪಂ. ಪಿಡಿಒ ಕೆ. ಹರೀಶ್ ಕರ್ನಾಟಕ ಸರ್ಕಾರಿ ನೌಕರರ ಫುಟ್ಬಾಲ್ ತಂಡದಲ್ಲಿ ಸ್ಥಾನಗಿಟ್ಟಿಸಿದ್ದಾರೆ. ಈಗಾಗಲೇ ಹಲವಾರು ಟೂರ್ನಿಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಪ್ರಮುಖ ಫುಟ್ಬಾಲ್ ಆಟಗಾರರಾಗಿ ಗುರುತಿಸಿಕೊಂಡಿರುವ ಅವರನ್ನು ಸ್ನೇಹಿತರು, ಸಹೋದ್ಯೋಗಿಗಳು ಅಭಿನಂದಿಸಿದ್ದಾರೆ.
-
Mandya8 hours agoಡಿ 10 ಶ್ರೀರಂಗಪಟ್ಟಣ ಸೇರಿದಂತೆ ವಿವಿದೆಡೆ ವಿದ್ಯುತ್ ಕಡಿತ
-
Mandya1 hour agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Special23 hours agoಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.
-
Hassan4 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Hassan3 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Kodagu5 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Mysore10 hours agoಡಾ.ಬಿ.ಆರ್. ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ: ಸೇವಾ ಕಾರ್ಯದೊಂದಿಗೆ ಗೌರವ ನಮನ
-
Kodagu3 hours agoಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ
