Connect with us

State

ತನ್ನ ರಾಜಕೀಯ ತೆವಲಿಗೆ ಅನ್ನದಾತರ ಹಿತಾಸಕ್ತಿ ಬಲಿಕೊಟ್ಟ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್‌

Published

on

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದ್ದ ಎಂಎಸ್‌ಪಿ ಮೂರು ಕೃಷಿ ಕಾಯ್ದೆಗಳನ್ನು ತಮ್ಮ ರಾಜಕೀಯ ತೆವಲಿಗೆ ಬಳಸಿಕೊಂಡು ರೈತರ ಆದಾಯ ಹೆಚ್ಚಿಸಲು ಈ ಮೂರು ಕಾಯ್ದೆಗಳ ಅನ್ವಯವೇ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರ ಕರ್ನಾಟಕ ಕೃಷಿ ಬೆಲ ಆಯೋಗಕ್ಕೆ ಶಿಫಾರಸ್ಸು ನೀಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕಾಂಗ್ರೆಸ್‌ ಪಕ್ಷ ತನ್ನ ರಾಜಕೀಯ ಹಿತಾಸಕ್ತಿಗಾಗಿ, ರೈತರನ್ನು ಬಲಿಕೊಟ್ಟು ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದು, ಇವರ ಅಸಲಿ ಬಣ್ಣ ಈಗ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.

ಪೋಸ್ಟ್‌ನಲ್ಲೇನಿದೆ?: ಹಿಂದಿನ ಅವಧಿಯಲ್ಲಿ ಕೇಂದ್ರದ ಎನ್ ಡಿಎ ಸರ್ಕಾರ‌ ಕೃಷಿ ಕಾಯ್ದೆ‌ಗಳ ತಿದ್ದುಪಡಿಗೆ ಮುಂದಾದಾಗ ಅದನ್ನ ವಿರೋಧಿಸಿ, ಬೀದಿ ರಂಪಾಟ ಮಾಡಿ, ತನ್ನ ರಾಜಕೀಯ ತೆವಲಿಗೆ ಸ್ಥಾಪಿತವಾದ ಹಿತಾಸಕ್ತಿಗಳ ರಕ್ಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ, ಈಗ ಅದೇ ಮೂರು ಕೃಷಿ ಕಾಯ್ದೆಗಳ ಅನ್ವಯ ರೈತರ ಆದಾಯ ಹೆಚ್ಚಿಸಲು ಶಿಫಾರಸು ನೀಡಿ ಎಂದು ಕೃಷಿ ಬೆಲೆ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸೂಚನೆ ನೀಡಿದೆ.

ತನ್ನ ರಾಜಕೀಯ ಲಾಭಕ್ಕಾಗಿ ಅನ್ನದಾತರ ಹಿತಾಸಕ್ತಿಯನ್ನು ಬಲಿಕೊಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಪಕ್ಷದ ಅಸಲಿ ಬಣ್ಣ ಈಗ ಬಯಲಾಗಿದೆ.

Continue Reading

Special

Employees Provident Fund (PF): ನೌಕರರಿಗೆ ಭವಿಷ್ಯ ನಿಧಿ, ಸಂಪೂರ್ಣ ಮಾಹಿತಿ ಇಲ್ಲಿದೆ

Published

on

ಇಂದಿನ ವೇಗದ ಜೀವನದಲ್ಲಿ ಉದ್ಯೋಗದಲ್ಲಿರುವಾಗ ಗಳಿಸುವ ಸಂಬಳ ಮಾತ್ರವಲ್ಲ, ನಿವೃತ್ತಿಯ ನಂತರದ ಜೀವನವೂ ಆರ್ಥಿಕವಾಗಿ ಭದ್ರವಾಗಿರಬೇಕು. ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಸಾಮಾಜಿಕ ಭದ್ರತಾ ವ್ಯವಸ್ಥೆಯೇ Employees Provident Fund (EPF).

PF ಯೋಜನೆಯ ಪ್ರಮುಖ ಉದ್ದೇಶಗಳು:
* ನೌಕರರ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವುದು
* ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವು ನೀಡುವುದು
* ಉದ್ಯೋಗದಾತ ಮತ್ತು ನೌಕರರ ಸಂಯುಕ್ತ ಭದ್ರತಾ ವ್ಯವಸ್ಥೆ ರೂಪಿಸುವುದು

PF ಯಾರಿಗೆ ಲಭ್ಯ?
* 20 ಅಥವಾ ಅದಕ್ಕಿಂತ ಹೆಚ್ಚು ನೌಕರರು ಇರುವ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ
* ತಿಂಗಳ ವೇತನ ₹15,000 ಅಥವಾ ಅದಕ್ಕಿಂತ ಕಡಿಮೆ ಇರುವ ನೌಕರರಿಗೆ PF ಕಡ್ಡಾಯ
* ₹15,000 ಕ್ಕಿಂತ ಹೆಚ್ಚು ಸಂಬಳ ಹೊಂದಿರುವವರು ಇಚ್ಛೆಯಾದರೆ PF ಗೆ ಸೇರಬಹುದು

PF ಯೋಜನೆಯ ಪ್ರಮುಖ ಲಾಭಗಳು:
* ನಿವೃತ್ತಿಯ ನಂತರ ಒಟ್ಟು ಠೇವಣಿ ಮತ್ತು ಬಡ್ಡಿಯೊಂದಿಗೆ ಹಣ ಲಭ್ಯ
* ಸರ್ಕಾರ ನಿಗದಿಪಡಿಸುವ ಸುರಕ್ಷಿತ ಬಡ್ಡಿದರ
* ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿ
* ಉದ್ಯೋಗ ಬದಲಾದರೂ PF ಖಾತೆ ಮುಂದುವರಿಯುವ ವ್ಯವಸ್ಥೆ

ಭವಿಷ್ಯ ನಿಧಿ (PF) ಮತ್ತು ನಿವೃತ್ತಿ ವ್ಯತ್ಯಾಸ ಏನು?
PF ಎಂಬುದು ಉದ್ಯೋಗದಲ್ಲಿರುವಾಗ ಸಂಗ್ರಹವಾಗುವ ಉಳಿತಾಯ ನಿಧಿ. ನಿವೃತ್ತಿ ಎಂದರೆ ಉದ್ಯೋಗ ಜೀವನದ ಅಂತ್ಯದ ನಂತರದ ಹಂತ.

PF 2025: ಹೊಸ ಬೆಳವಣಿಗೆಗಳು
* ಸಂಪೂರ್ಣ ಡಿಜಿಟಲ್ ಕ್ಲೇಮ್ ಪ್ರಕ್ರಿಯೆ
* UAN ಆಧಾರಿತ ವೇಗವಾದ ಸೇವೆಗಳು
* PF ವರ್ಗಾವಣೆ ಇನ್ನಷ್ಟು ಸರಳ
* ಮೊಬೈಲ್ ಅಪ್ಲಿಕೇಶನ್ ಮೂಲಕ ಖಾತೆ ನಿರ್ವಹಣೆ
* ದೂರು ನಿವಾರಣೆಗೆ ಆನ್‌ಲೈನ್ ವ್ಯವಸ್ಥೆ

PF ಖಾತೆ ಹೊಂದಿರುವವರು ಗಮನಿಸಬೇಕಾದ ಅಂಶಗಳು:
* UAN ಸಕ್ರಿಯವಾಗಿರಬೇಕು
* ಆಧಾರ್, ಪ್ಯಾನ್, ಬ್ಯಾಂಕ್ ವಿವರ ಲಿಂಕ್ ಮಾಡಬೇಕು
* ಉದ್ಯೋಗ ಬದಲಾದಾಗ PF ವರ್ಗಾವಣೆ ಮಾಡಬೇಕು
* ನಾಮಿನಿ ವಿವರಗಳನ್ನು ಅಪ್‌ಡೇಟ್ ಮಾಡಬೇಕು
* ನಿಯಮಗಳನ್ನು ತಿಳಿದು ಹಣ ತೆಗೆಯಬೇಕು

ನೌಕರರ ಭವಿಷ್ಯಕ್ಕೆ ಭದ್ರವಾದ ಆರ್ಥಿಕ ಆಧಾರ. ಉಳಿತಾಯ, ಬಡ್ಡಿ, ತೆರಿಗೆ ವಿನಾಯಿತಿ ಮತ್ತು ಡಿಜಿಟಲ್ ಸೌಲಭ್ಯಗಳೊಂದಿಗೆ PF ವ್ಯವಸ್ಥೆ ಉದ್ಯೋಗಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

Continue Reading

State

ಸಿದ್ದರಾಮಯ್ಯ ಅಧಿಕಾರ ನೀಡಲ್ಲ, ಡಿಕೆಶಿ ದೇವಸ್ಥಾನ ಬಿಡಲ್ಲ: ಆರ್‌.ಅಶೋಕ್‌ ಟೀಕೆ

Published

on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅಧಿಕಾರ ನೀಡಲ್ಲ, ಡಿ.ಕೆ.ಶಿವಕುಮಾರ್  ದೇವಸ್ಥಾನ ಬಿಡಲ್ಲ.  ಇಷ್ಟೇ ನಮ್ಮ ರಾಜ್ಯದಲ್ಲಿ  ನಡೆಯುತ್ತಿರೋದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ  ಸಿದ್ದರಾಮಯ್ಯ ಗ್ಯಾಂಗ್ ಡಿನ್ನರ್ ಪಾಲಿಟಿಕ್ಸ್ ಮಾಡುತ್ತಿದೆ. ಅದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಧಿವೇಶನಕ್ಕೆ ಡಿಕೆಶಿ ಬರುತ್ತಿರಲಿಲ್ಲ, ಅಧಿವೇಶನ ನಡೆಯುತ್ತಿರುವಾಗ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತು. ಅದನ್ನು ಹೊರತು ಪಡಿಸಿ ಜನತೆಯ ತೆರಿಗೆ ಹಣದಲ್ಲಿ ದೇವಸ್ಥಾನ ರೌಂಡ್ ಹಾಕುತ್ತಿದ್ದರು ಎಂದು ಕಿಡಿಕಾರಿದ್ದಾರೆ.

ಈಗ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಅಂತಿದ್ದಾರೆ ಅದ್ಯಾಕೆ? ಹಾಗಾದರೆ ರಾಜೀನಾಮೆ ಕೊಟ್ಟು ಇರಲಿ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯದ ಕೆಲವು ಕಡೆಗಳಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆದಿದ್ದು, ಎಲ್ಲಾ ಕಡೆ ಬಿಜೆಪಿ ಅಧಿಕ ಸ್ಥಾನ ಗೆದ್ದಿದ್ದೆ. ಕಾಂಗ್ರೆಸ್ ಸರ್ಕಾರ ತೊಲಗುವ ಮುನ್ಸೂಚನೆ ಇದು. ಇವರು ಇದೇ ರೀತಿ ಕಾಂಗ್ರೆಸ್‌ನಲ್ಲಿ ಕಿತ್ತಾಡುತ್ತಿದ್ದರೆ ಮನೆಗೆ ಹೋಗೋದು ಗ್ಯಾರಂಟಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ಮಾಜಿ ಸಚಿವ ಕೆ.ಎನ್‌. ರಾಜಣ್ಣರೇ ಕಾಂಗ್ರೆಸ್‌ಗೆ ಕೊಳ್ಳಿ ಇಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಡಿಕೆಶಿ ಫೇಲ್ಯೂರ್ ಎಂದು ಪತ್ರ ಬರೆದಿದ್ದಾರೆ. ಕೇಂದ್ರದವರು ಸಹ ನಿಮ್ಮ ಸಹವಾಸ ಬೇಡ ಎಂದಿದ್ದಾರೆ. ನಿರ್ಧಾರ ತೆಗೆದುಕೊಳ್ಳದ ವೀಕ್ ನಾಯಕತ್ವ ಅಂದರೆ ಕಾಂಗ್ರೆಸ್ ನಾಯಕತ್ವ ಎಂದು ವ್ಯಂಗ್ಯ ಮಾಡಿದ್ದಾರೆ.

Continue Reading

State

ಎಂ.ಚಿನ್ನಸ್ವಾಮಿ ಸ್ಟೇಡಿಯಂ ಕ್ರಿಕೆಟ್‌ ನಿರಾಕರಣೆ: ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಜಿ.ಪರಮೇಶ್ವರ್‌

Published

on

ಬೆಂಗಳೂರು:  ಗೃಹ ಸಚಿವ ಪರಮೇಶ್ವರ್‌ ಅವರು, ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಡಿಸಲು ಅನುಮತಿ ನಿರಾಕರಿಸಿದ ಸರ್ಕಾರದ ಕ್ರಮವನ್ನು  ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾ.ಕುನ್ಹಾ ವರದಿಯ ಯಾವ ಶಿಫಾರಸ್ಸನ್ನೂ ಕೆಎಸ್‌ಸಿಎನವರು ಅಳವಡಿಕೆ ಮಾಡಿರಲಿಲ್ಲ. ಹೀಗಾಗಿ ಉನ್ನತ ಮಟ್ಟದ ಸಮಿತಿಯಿಂದ ಅನುಮತಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಲ್ತುಳಿತ ಘಟನೆ ಆದ ಮೇಲೆ ನ್ಯಾ.ಕುನ್ಹಾ ನೇತೃತ್ವದಲ್ಲಿ ಆಯೋಗ ರಚಿಸಿಲಾಗಿತ್ತು.‌ ಅವರು ನೀಡಿದ 17 ಶಿಫಾರಸ್ಸುಗಳನ್ನು ಕೆಎಸ್‌ಸಿಎ ಅವರಿಗೆ ನೀಡಿದ್ದೆವು, ಅದಕ್ಕೆ ಅವರು ಸ್ಪಂದಿಸಬೇಕಿತ್ತು. ಆದರೆ ಅವರು ಇದುವರೆಗೂ ಏನೂ ಮಾಡಿದಂತೆ ಕಂಡುಬಂದಿಲ್ಲ. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳಿರೋ ಸಮಿತಿಯವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಒಂದೂ ಶಿಫಾರಸ್ಸು ಕೂಡಾ ಅಲ್ಲಿ ಪೂರ್ತಿ ಮಾಡಿರಲಿಲ್ಲ. ಹಾಗಾಗಿ ಅನುಮತಿ ಕೊಡಲು ಸಾಧ್ಯವಾಗಿಲ್ಲ ಅಂತ ಸಮಿತಿ ನಿರ್ಧಾರ ಕೈಗೊಂಡಿದೆ. ನ್ಯಾ.ಕುನ್ಹಾ ಶಿಫಾರಸ್ಸುಗಳಂತೆ ಅವರು ಕ್ರಮ ಕೈಗೊಂಡರೆ ಅನುಮತಿ ಸಿಗಲಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಬೈರತಿ ಬಸವರಾಜು ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿರುವ ವಿಚಾರ‌ದ ಬಗ್ಗೆ ಮಾತಾಡಿದ ಅವರು, ಏನು ಕ್ರಮ ತಗೋಬೇಕೋ ಸಿಐಡಿ ಪೊಲೀಸರು ತಗೋತಾರೆ. ಸಿಐಡಿ ಅವರಿಗೆ ನಾವು ಹೀಗೇ ಮಾಡಿ ಅಂತ ಹೇಳಕ್ಕಾಗಲ್ಲ. ಕಾನೂನು ಪ್ರಕಾರ ಅವರು ಕ್ರಮ ವಹಿಸುತ್ತಿದ್ದಾರೆ ಎಂದಿದ್ದಾರೆ.

ಇನ್ನೂ ದಾವಣಗೆರೆ ಡ್ರಗ್ಸ್ ಕೇಸ್‌ನಲ್ಲಿ ಕಾಂಗ್ರೆಸ್ ಮುಖಂಡನ ಬಂಧನ ಕುರಿತು  ಪ್ರತಿಕ್ರಿಯೆ ನೀಡಿದ ಅವರು, ಯಾವ ಮುಖಂಡ ಆದರೂ ಕಾನೂನು ವಿರುದ್ಧ ನಡೆದುಕೊಂಡರೆ ಬಂಧನ ಆಗಲೇಬೇಕು. ಯಾರೇ ಆದರೂ ಕಾನೂನು ಪಾಲಿಸಬೇಕು, ಅದರಲ್ಲಿ ಯಾವುದೇ ಪಕ್ಷಪಾತ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Continue Reading

Trending

error: Content is protected !!