Connect with us

State

ಮೆಟ್ರೋ ದರ ಏರಿಕೆ: ಕಾಂಗ್ರೆಸ್‌ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಆರ್‌.ಅಶೋಕ್‌

Published

on

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರವನ್ನು ದಿಢೀರ್‌ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಹಾಲು, ಪೆಟ್ರೋಲ್‌, ಡೀಸೆಲ್‌, ಬಸ್‌ ದರ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ದರ ಹೆಚ್ಚಿಸಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ನಮ್ಮ ಮೆಟ್ರೋ ದರವನ್ನ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ.

https://x.com/RAshokaBJP/status/1888476727959302319

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ.

ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ.

ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸುತ್ತೇನೆ.

Continue Reading

Special

ಮಹಿಳೆಯರಿಗೆ ದೊಡ್ಡ ಅವಕಾಶ! ಅಂಗನವಾಡಿಯ 571 ಹುದ್ದೆಗಳಿಗೆ ಅರ್ಜಿ ಅಹ್ವಾನ.

Published

on

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD Karnataka) ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಒಟ್ಟು 571 ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ಮಹಿಳೆಯರಿಗೆ ಸರ್ಕಾರದಡಿ ದೊರೆಯುವ ಸುರಕ್ಷಿತ ಮತ್ತು ಮಾನ್ಯ ಉದ್ಯೋಗಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳು ಪ್ರಮುಖವಾಗಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಲಭ್ಯವಾಗಿದೆ.

ಲಭ್ಯವಿರುವ ಹುದ್ದೆಗಳು:
•ಅಂಗನವಾಡಿ ಕಾರ್ಯಕರ್ತೆ
•ಅಂಗನವಾಡಿ ಸಹಾಯಕಿ

ಅರ್ಹತೆ :
1. ಅಂಗನವಾಡಿ ಕಾರ್ಯಕರ್ತೆ
•SSLC ಪಾಸಾಗಿರಬೇಕು
•ಸ್ಥಳೀಯ ಗ್ರಾಮ/ವಾರ್ಡ್ ನಿವಾಸಿಯಾಗಿರಬೇಕು
2. ಅಂಗನವಾಡಿ ಸಹಾಯಕಿ
•4ನೇ ತರಗತಿಯಿಂದ 9ನೇ ತರಗತಿ ವರೆಗೆ ವಿದ್ಯಾರ್ಹತೆ ಹೊಂದಿರಬಹುದು
•ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ

ವಯೋಮಿತಿ: 19-35 ವರ್ಷ

ಅರ್ಜಿ ಸಲ್ಲಿಸುವ ವಿಧಾನ :
•ನಿಮ್ಮ ತಾಲೂಕು/ಜಿಲ್ಲೆಯ ಅಧಿಕೃತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.
•ಆನ್‌ಲೈನ್ ಅರ್ಜಿಯನ್ನು ಸರಿಯಾದ ಮಾಹಿತಿ ಹಾಗೂ ಅಗತ್ಯ ದಾಖಲೆಗಳಿಂದ ಭರ್ತಿ ಮಾಡಿ.
•ಅರ್ಜಿ ಸಲ್ಲಿಸಿದ ನಂತರ ದೃಢೀಕರಣ ಪ್ರತಿಯನ್ನು ಸೇವ್ ಮಾಡಿ.

ಆಯ್ಕೆ ಪ್ರಕ್ರಿಯೆ ಹೇಗೆ?:
ಅಂಗನವಾಡಿ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇಲ್ಲ.ಆಯ್ಕೆ ಸಂಪೂರ್ಣವಾಗಿ ವಿದ್ಯಾರ್ಹತೆ, ದಾಖಲೆಗಳ ಪರಿಶೀಲನೆ, ಸ್ಥಳೀಯತೆ, ಮೀಸಲಾತಿ ನಿಯಮಗಳು ಇವುಗಳನ್ನು ಆಧರಿಸಿ ಮಾಡಲಾಗುತ್ತದೆ.

ಉದ್ದೇಶ:
•ಸ್ಥಳೀಯ ಮಹಿಳೆಯರಿಗೆ ಸುರಕ್ಷಿತ ಸರ್ಕಾರಿ ಉದ್ಯೋಗ
•ತಿಂಗಳ ವೇತನ, ಮಾನ್ಯತೆ, ಮತ್ತು ಭದ್ರ ಉದ್ಯೋಗ
•ಸಮಾಜ ಸೇವೆ ಜೊತೆಗೆ ಕುಟುಂಬಕ್ಕೆ ಆರ್ಥಿಕ ಸಹಾಯ

ಕರ್ನಾಟಕದಲ್ಲಿ ಪ್ರಕಟವಾದ 571 ಅಂಗನವಾಡಿ ಕಾರ್ಯಕರ್ತೆ / ಸಹಾಯಕಿ ಹುದ್ದೆಗಳು, ಸರ್ಕಾರಿ ಸೇವೆಗೆ ಬಯಸುವ ಮಹಿಳೆಯರಿಗೆ ದೊಡ್ಡ ಅವಕಾಶ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ ಅರ್ಹರು ಈಗಲೇ ಅರ್ಜಿ ಹಾಕಿ ಸದುಪಯೋಗ ಪಡಿಸಿಕೊಳ್ಳಿರಿ

Continue Reading

State

ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್

Published

on

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನಂತರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್  ಭೇಟಿ ನೀಡಿದ್ದು, ಕನಕನ ಕಿಂಡಿ ಮೂಲಕ ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ.

ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಲು ಉಡುಪಿಗೆ ಒಂದು ಗಂಟೆ ಮುಂಚೆಯೇ ಪವನ್ ಕಲ್ಯಾಣ್ ಆಗಮಿಸಿದರು. ಈ ವೇಳೆ ಉಡುಪಿಯ ಊಟ ಸವಿದು ಬಳಿಕ ಕೃಷ್ಣ ಮಠದಲ್ಲಿ ಭಾಗವಹಿಸಿದ್ದಾರೆ.

ಪರ್ಯಾಯ ಪುತ್ತಿಗೆ ಮಠದಿಂದ ಪವನ್ ಕಲ್ಯಾಣ್‌ಗೆ ಭವ್ಯ ಸ್ವಾಗತ ಕೋರಲಾಯಿತು. ಕನಕನ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಮಾಡಿದರು. ಅನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕೃಷ್ಣ ಮಠದ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಲಾಯಿತು. ಬಳಿಕ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ಭೇಟಿಯಾಗಿ ಸುವರ್ಣ ತೀರ್ಥಮಂಟಪದಲ್ಲಿ ಕೂತು ಪ್ರಸಾದ ಸ್ವೀಕರಿಸಿದ್ದಾರೆ.

ನಂತರ ಮಠದ ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಿದರು. ಪರ್ಯಾಯ ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀಗಳು, ಇಸ್ಕಾನ್ ಮಾಯಾಪುರಿ ಶ್ರೀ ಭಾಗವಹಿಸಿದರು.

Continue Reading

Mysore

ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ

Published

on

ಉಡುಪಿ: ಕಾರೊಂದು ಬಸ್ ನಿಲ್ದಾಣಕ್ಕೆ ಢಿಕ್ಕಿಯಾ್ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಕಾಪು ವಿದ್ಯಾನಿಕೇತನ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಗಾಯಗೊಂಡವರನ್ನು ಕಾರು ಚಲಾಯಿಸುತ್ತಿದ್ದ ಕೊಪ್ಪಲಂಗಡಿಯ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.

ಕಾಪುನಿಂದ ಉಚ್ಚಿಲ ಕಡೆ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಇಸ್ಮಾಯಿಲ್ ಅವರನ್ನು ಎಸ್‌ಡಿಪಿಐ ಅಂಬುಲೆನ್ಸ್‌ನಲ್ಲಿ ಜಲಾಲುದ್ದೀನ್ ಉಚ್ಚಿಲ ಹಾಗೂ ಹಮೀದ್ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

Trending

error: Content is protected !!