Connect with us

Chamarajanagar

ಕೊಳ್ಳೇಗಾಲ ತಾಲ್ಲೂಕು ಕ್ರೈಸ್ತ ಒಕ್ಕೂಟದಿಂದ ಭಾರತೀಯ ಕ್ರೈಸ್ತ ದಿನಾಚರಣೆ ಅಂಗವಾಗಿ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭ ಪುರಸ್ಕಾರ.

Published

on

ಕೊಳ್ಳೇಗಾಲ: ಕ್ರೈಸ್ತರು ಪರಸ್ಪರ ಪ್ರೀತಿ, ಅನ್ಯೋನ್ಯತೆ , ಬಡವರ ಮತ್ತು ಶೋಷಿತರ ಸೇವೆಯಲ್ಲಿ ಯೇಸು ಕ್ರಿಸ್ತನನ್ನು ಅನುಸರಿಸಿ ಜೀವಿಸಬೇಕು ಎಂದು ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್ ನ ಫಾದರ್ ಎಂ.ರಾಯಪ್ಪ ಹೇಳಿದರು.


ಕೊಳ್ಳೇಗಾಲ ನಗರದ ಬೇತೆಲ್ ಲೂಥರನ್ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಭಾರತೀಯ ಕ್ರೈಸ್ತ ದಿನಾಚರಣೆ, ಸರ್ವ ಸದಸ್ಯರ ದ್ವಿತೀಯ ವಾರ್ಷಿಕ ಮಹಾಸಭೆ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಉದ್ಘಾಟನೆ ಮಾಡಿ ನಂತರ ಮಾತನಾಡಿದರು.

ಯಾರಿಗೂ ಸಹ ಕೇಡು ಉಂಟಾಗದಂತೆ ಪ್ರತಿನಿತ್ಯ ಒಳ್ಳೆಯ ಕೆಲಸಗಳನ್ನು ಮಾಡಬೇಕು. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಆಸಕ್ತಿವಹಿಸಿ ಉತ್ತಮ ಅಂಕ ಗಳಿಸಬೇಕು. ಅಂಕ ಗಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ತಂದೆ ತಾಯಿಗೆ ಹಾಗೂ ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಆಗಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಮೋಜು ಮಸ್ತಿ ಸೇರಿದಂತೆ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಹಾಗಾಗಿ ಅಂತಹ ದುಶ್ಚಟಗಳಿಗೆ ಒಳಗಾಗದೆ ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ವಹಿಸಬೇಕು ಜೊತೆಗೆ ದೇವರಲ್ಲಿ ಹೆಚ್ಚಾಗಿ ಪ್ರಾರ್ಥನೆಯನ್ನು ಮಾಡಿ ಓದಿನ ಕಡೆ ಗಮನ ಹರಿಸಬೇಕು. ಕೊಳ್ಳೇಗಾಲ ತಾಲೂಕು ಕ್ರೈಸ್ತ ಒಕ್ಕೂಟ ಒಂದು ವರ್ಷದಲ್ಲಿ ಅನೇಕ ಸೇವೆಗಳನ್ನು ಮಾಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ವಿವಿಧ ಕ್ರೈಸ್ತ ಸಭೆಗಳ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಮತ್ತು ದಕ್ಷಿಣ ಕನ್ನಡದ ಹಿರಿಯ ಕ್ರೈಸ್ತ ಮುಖಂಡ ಗ್ರೇಶಿಯನ್ ರಾಡ್ರಿಗಸ್, ತಾಲ್ಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಅಂತೋಣಿ ದಿನೇಶ್, ಕಾರ್ಯದರ್ಶಿ ತೇಜ್ ಪಾಲ್, ಖಜಾಂಚಿ ವಿಜಯ್ ಕುಮಾರ್, ಉಪಾಧ್ಯಕ್ಷ ಕಿರಣ್ ಜೆ.ಮೋಸಸ್, ಅಂತೋಣಿ, ನಿರ್ದೇಶಕ ನರೇಂದ್ರನಾಥ, ಡೇವಿಡ್, ನಾಗರಾಜು, ಮಿಲ್ಟನ್ ಕ್ರಿಸ್ಟೋಫರ್, ಎಸ್.ಕಿರಣ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸರ್ವ ಸದಸ್ಯರು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು

Continue Reading

Chamarajanagar

ಚಾಮರಾಜನಗರ: ಫೆ.13ರಂದು ವಿವಿಧೆಡೆ ವಿದ್ಯುತ್‌ ವ್ಯತ್ಯಯ

Published

on

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಾಲೂಕಿನ ಕಾಗಲವಾಡಿ ಶಾಖಾ ವ್ಯಾಪ್ತಿಯ ಚಂದಕವಾಡಿ ಉಪಕೇಂದ್ರದ ನವೋದಯ ಎನ್.ಜೆ.ವೈ ಹಾಗೂ ಹಿರಿಕೆರೆ ಎನ್.ಜೆ.ವೈ ಫೀಡರ್ ಗಳ ತುರ್ತು ಕಾಮಗಾರಿಯನ್ನು ಫೆಬ್ರವರಿ 13 ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಹೆಬ್ಬಸೂರು, ಬಸಪ್ಪನಪಾಳ್ಯ, ಸರಗೂರು, ಹುರಳಿನಂಜನಪುರ, ಕಾಗಲವಾಡಿ, ಲಿಂಗರಾಜಪುರ, ಕರಿಯನಕಟ್ಟೆ, ಮಲ್ಲುಪುರ, ಹಂಚಿತಾಳಪುರ, ಕೊಕ್ಕನಹಳ್ಳಿ, ಅಯ್ಯನಪುರ, ಹಿತ್ತಲಗುಡ್ಡ, ಕೋಟಂಬಳ್ಳಿ, ಮಲ್ಲೇದೇವನಹಳ್ಳಿ ಹಾಗೂ ನಾಗವಳ್ಳಿ, ನಲ್ಲೂರು, ದೇವರಾಜಪುರ, ಕೋಟೆತಿಟ್ಟು, ಹೊಂಡರಬಾಳು, ಚಂದಕವಾಡಿ, ಅರಳೀಪುರ ಗ್ರಾಮಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸುವಂತೆ ನಿಗಮದ ಸಂತೇಮರಹಳ್ಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Chamarajanagar

ಚಿಣ್ಣರ ಕರ್ನಾಟಕ ದರ್ಶನ: ವಿದ್ಯಾರ್ಥಿಗಳಿಗೆ ವೈವಿಧ್ಯತೆ ತಿಳಿಯಲು ಸಹಕಾರಿ ಎಂದ ಮಾರಯ್ಯ

Published

on

ಯಳಂದೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಯೋಜನೆಯಡಿ ತಾಲ್ಲೂಕಿನ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 75 ಮಕ್ಕಳಿಗೆ ಐದು ದಿನಗಳ ಚಿಣ್ಣರ ಕರ್ನಾಟಕ ದರ್ಶನಕ್ಕೆ ಮಂಗಳವಾರ (ಫೆ.11) ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಚಾಲನೆ ನೀಡಿದರು.

ದೇಶ ಸುತ್ತು ಕೋಶ ಓದು ಎಂಬಂತೆ ಪ್ರವಾಸದ ಸದುಪಯೋಗ ಪಡೆದು ವಿವಿಧ ರೀತಿಯ ಪ್ರದೇಶಗಳ ವೈವಿಧ್ಯತೆ ತಿಳಿಯಲು ಮಾಹಿತಿ ನೀಡಿದರು.

ಈ ವೇಳೆ ನೌಕರರ ಸಂಘದ ನಿರ್ದೇಶಕ ಎಂ. ರಾಜು ಮಕ್ಕಳಿಗೆ ಸಿಹಿ ನೀಡಿ ಶುಭ ಹಾರೈಸಿದರು. ಶಿಕ್ಷಕರ ಸಂಘದ ಚಂದ್ರಮ್ಮ, ಸಲೀನಾ, ಶಿಕ್ಷಣ ಸಂಯೋಜಕರಾದ ಕುಮಾರ್, ಸಿ ಆರ್ ಪಿ ಎಸ್ ರೇಚಣ್ಣ, ತೇಜಸ್ವಿನಿ, ಶಿಕ್ಷಕರಾದ ಮಹದೇವ್, ಗಿರಿನಾಯಕ್ ಶಶಿಧರ್, ನಾಗರಾಜ್, ಸುನೀಲ್ ಇತರರು ಹಾಜರಿದ್ದರು.

Continue Reading

Chamarajanagar

ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

Published

on

ಚಾಮರಾಜನಗರ: ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ವಾಪಸ್ ನೀಡಿ ನಗರದ ಆಟೋ ಚಾಲಕ ಸಿದ್ದರಾಜು ಪ್ರಾಮಾಣಿಕತೆ ಮೆರೆದಿದ್ದಾರೆ.

ನಗರದ ಶ್ರೀ ಭುವನೇಶ್ವರಿ ವೃತ್ತದ ಬಳಿ ಹನುಮನಪುರ ನಿವಾಸಿಯಾದ ರಶ್ಮಿ ಅವರು ಬಸ್ ಹತ್ತುವ ಅವಸರದಲ್ಲಿ ಚಿನ್ನಾಭರಣವಿದ್ದ ಬ್ಯಾಗನ್ನು ಆಟೋದಲ್ಲೇ ಮರೆತು ಹೋಗಿದ್ದು, ಬಳಿಕ ಬ್ಯಾಗ್ ಅನ್ನು ಕಳೆದುಕೊಂಡ ವಿಷಯವನ್ನು ಪಟ್ಟಣ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.

ಅಷ್ಟರಲ್ಲೇ ನಗರದ ಆಟೋ ಚಾಲಕ ಸಿದ್ದರಾಜು ಎಂಬುವವರು ಆಟೋದಲ್ಲಿದ್ದ ಚಿನ್ನಾಭರಣದ ಬ್ಯಾಗ್ ಅನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ತದನಂತರ ಪೊಲೀಸರು ಬ್ಯಾಗ್ ಅನ್ನು ರಶ್ಮಿಗೆ ಒಪ್ಪಿಸಿದರು.

Continue Reading

Trending

error: Content is protected !!