Mandya
ಮಾ.19(ನಾಳೆ) ರಂದು ನಾಗಮಂಗಲದಲ್ಲಿ ಪುಣ್ಯಕೋಟಿ ಸ್ಮರಣೆ

ಮಂಡ್ಯ: ನಾಗಂಮಗಲದ ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ ಅವರ 3ನೇ ವರ್ಷದ ನೆನಪಿನ ಕಾರ್ಯಕ್ರಮ ‘ಪುಣ್ಯಕೋಟಿ ಸ್ಮರಣೆ’ ಮಾ.19 ಬೆಳಿಗ್ಗೆ 11 ಗಂಟೆಗೆ ನಾಗಮಂಗಲ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಅಂಕಣಕಾರ ಬಿ.ಚಂದ್ರೇಗೌಡ ಹೇಳಿದರು.
ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯ ಕ್ಷೇತ್ರದ ಎಚ್.ಟಿ.ಕೃಷ್ಣಪ್ಪ ಅವರದು ಅಪರೂಪದ ಮೇರು ವ್ಯಕ್ತಿತ್ವವಾಗಿತ್ತು. ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ನಾಯಕರಾಗಿ ಬಿಂಬಿತವಾಗಿ ಬೆಳೆಯುತ್ತಿದ್ದರು. ವೈರಿಗಳು ಇಲ್ಲದಿದ್ದರೂ ರಾಜಕೀಯವಾಗಿ ಮುಂದುವರಿಯಲು ಬಿಡಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೃಷ್ಣಪ್ಪ ಅವರು 91ನೇ ವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಕಾರ್ಯ ಪ್ರವೃತ್ತರಾಗಿದ್ದರು. ಯುವ ರಾಜಕಾರಣಿಗಳು ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಳವಡಿಸಿಕೊಳ್ಳಬಹುದಾದ ಆದರ್ಶ ಅವರಲ್ಲಿ ಇತ್ತು, ರಂಗಭೂಮಿ ಕ್ಷೇತ್ರ ಅವರಿಗೆ ಅತ್ಯಂತ ಪ್ರಿಯವಾಗಿತ್ತು. ಹಿಂದೆ ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆಯುತ್ತಿದ್ದ ಶಾಸಕರ ದಿನಾಚರಣೆ ಸಮಾರಂಭದಲ್ಲಿ ಕೃಷ್ಣಪ್ಪನವರು ಪೌರಾಣಿಕ ನಾಟಕದ ಪಾತ್ರದ ತುಣುಕುಗಳನ್ನು ಪ್ರದರ್ಶಿಸುತ್ತಿದ್ದರು ಎಂದು ವಿವರಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಚ್.ಟಿ.ಕೃಷ್ಣಪ್ಪ ಸ್ಮರಣಾ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ರಂಗಗೀತೆ ಮತ್ತು ಪ್ರಶಸ್ತಿ ಪ್ರದಾನ ಮಾತ್ರ ಇರುತ್ತದೆ ಎಂದರು.
ಕಾರ್ಯಕ್ರಮದ ಆಯೋಜಕ ಭಗವಾನ್ ಚಕ್ರವರ್ತಿ ಮಾತನಾಡಿ, ಎಚ್.ಟಿ.ಕೃಷ್ಣಪ್ಪನವರಿಗೆ ಪ್ರಿಯವಾಗಿದ್ದ ರಂಗಗೀತೆಗಳ ಗಾಯನ ಏರ್ಪಡಿಸಲಾಗಿದೆ. ಖ್ಯಾತ ಹರಿಕಥಾ ವಿದ್ವಾನ್ ಗುರುರಾಜನಾಯ್ಡು ಅವರ ಪುತ್ರಿ ಶೀಲಾ ನಾಯ್ಡು ಅವರು ರಂಗಗೀತೆಗಳನ್ನು ಪ್ರಸ್ತುತಪಡಿಸುವರು, ಇದೇ ಸಂದರ್ಭದಲ್ಲಿ ಎಚ್.ಡಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ಶೀಲಾ ನಾಯ್ಡು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಎಚ್.ಟಿ.ಕೃಷ್ಣಪ್ಪನವರ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
Mandya
ಮುಂಡುಗದೊರೆ ಪಂಚಾಯ್ತಿಗೆ ಪದ್ಮ ಅಧ್ಯಕ್ಷೆ

ಶ್ರೀರಂಗಪಟ್ಟಣ : ತಾಲೂಕಿನ ಮುಂಡುಗದೊರೆ ಗ್ರಾ. ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಪದ್ಮ ಡಿ.ಎಸ್.ಕೋಂ ಸೋಮೇಶ ಹಾಗು ಉಪಾಧ್ಯಕ್ಷರಾಗಿ ಗಾಯಿತ್ರಿ ಕೋಂ ಶಿವರಾಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಸೋಮಣ್ಣ ಹಾಗು ಉಪಾಧ್ಯಕ್ಷೆ ಸುಗುಣ ರಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಈ ಇಬ್ಬರನ್ನು ಹೊರತು ಪಡಿಸಿ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಎಇಇ ಮಂಜುನಾಥ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮಸ್ಥರು ಹಾಗೂ ಮುಖಂಡರುಗಳು ಸನ್ಮಾನಿಸಿ ಅಭಿನಂಧಿಸಿದರು.
Mandya
ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬ

ಮಂಡ್ಯ: ಎಸ್.ಬಿ ಎಜುಕೇಶನ್ ಟ್ರಸ್ಟ್, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜು, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೆಹರು ನಗರ, ಮಂಡ್ಯ, ಈ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮ ಶಾಲೆಯ ಆವರಣದಲ್ಲಿ ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಬಿ ಶಿವಲಿಂಗಯ್ಯರವರ ಅಧ್ಯಕ್ಷತೆಯಲ್ಲಿ ಜರುಗಿತು.
ಎಸ್.ಬಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ಮೀರಾ ಶಿವಲಿಂಗಯ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತ್ಯುನ್ನತ ಶ್ರೇಣಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಹಾಗೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಬಹುಮಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಮಾಂಡವ್ಯ ಕಾಲೇಜಿನ ಪ್ರಾಂಶುಪಾಲರಾದ ಕೆ.ಕೆ. ಚಂದ್ರಶೇಖರ್ ರವರು ಬಹುಮಾನವನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಎಕ್ಸಲೆಂಟ್ ಸ್ಕೂಲ್ ನ ಕಾರ್ಯದರ್ಶಿ ಅಬ್ದುಲ್ ಮುನೀರ್, ಮಹದೇಶ್ವರ ಚಿಲ್ಡ್ರನ್ ಸ್ಕೂಲ್ ನ ಕಾರ್ಯದರ್ಶಿ ಎಂ. ರವಿ, ಶ್ರೀ ಗುರುವಿಜ್ಞಾನ ವಿದ್ಯಾಲಯದ ಅಧ್ಯಕ್ಷರಾದ ಎಮ್.ಸಿ. ಶಿವಕುಮಾರ್, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಮಹದೇವಯ್ಯ, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಪಾಲದಾರರಾದ ಎಂ. ಅವಿನಾಶ್ ಡಾ. ಎಂ. ಮೋಹನ್, ಡಿ.ಎಸ್. ರಾಘವೇಂದ್ರ (ವಿಜ್ಞಾನ ವಿಭಾಗ), ಶೈಕ್ಷಣಿಕ ಪಾಲುಗಾರರಾದ ವಾಣಿಜ್ಯ ವಿಭಾಗದ ಚನ್ನೇಶ್ ಹಾಗೂ ಅರ್ಚನಾರವರು ವೇದಿಕೆಯಲ್ಲಿ ಹಾಜರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Mandya
ಜೆ.ಡಿ.ಎಸ್ ತೆಕ್ಕೆಗೆ ಹುಲಿಕೆರೆ ಪಂಚಾಯಿತಿ

ನಾಗಮಂಗಲ : ಹುಲಿಕೆರೆ ಗ್ರಾಮ ಪಂಚಾಯಿತಿಯ ಈ ಹಿಂದೆ ಅಧ್ಯಕ್ಷರಾಗಿದ್ದ ಶಿವರಾಮು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ನೂತನ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಯಿತು. ಎರಡು ನಾಮಪತ್ರ ಸಲ್ಲಿಕೆಯಾಗಿದ್ದು ಕಾಂತರಾಜು ಗೆ ಮೂರು ಮತಗಳು ಹಾಗೂ ಸುಮಾ ಚೇತನ್ ಕುಮಾರ್ ರವರಿಗೆ 9 ಮತಗಳ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾದ ಸತೀಶ್ ರವರು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಸುಮ ಚೇತನಕುಮಾರ್ ರವರು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ ಹುಲಿಕೆರೆ ಗ್ರಾಮ ಪಂಚಾಯಿತಿಯು ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಹೆಸರು ಪಡೆದಿರುವಂತಹ ಪಂಚಾಯಿತಿ. ಇಲ್ಲಿ ನಾನು ಅಧ್ಯಕ್ಷರಾಗಿರುವುದಕ್ಕೆ ಸಂತಸದ ವಿಚಾರ ನನ್ನ ಆಯ್ಕೆ ಮಾಡಿದ ಪಂಚಾಯತಿ ಆತ್ಮೀಯ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಈ ಹುದ್ದೆಯನ್ನು ನೀಡಿರುವುದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಗ್ರಾಮೀಣ ಪ್ರದೇಶದ ಕುಡಿಯುವ ನೀರು ರಸ್ತೆ ಮತ್ತು ವಿದ್ಯುತ್ ದೀಪಕ್ಕೆ ಮೊದಲನೇ ಆದ್ಯತೆ ನೀಡಿ ಮಹಾತ್ಮ ಗಾಂಧಿಯ ನರೇಗಾ ಯೋಜನೆಗೆ ಉತ್ತಮ ರೀತಿ ನಿರ್ವಹಣೆ ಮಾಡಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು.
ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತೆ ಮುಖಂಡರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು
ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮೇಗೌಡ. ಲಕ್ಷ್ಮೀದೇವಮ್ಮ. ಶಿವಲಿಂಗಯ್ಯ. ಮಂಜುಳ. ತಿಮ್ಮೇಗೌಡ. ದಿನೇಶ್ ಕಲ್ಲೇನಹಳ್ಳಿ. ನರಗನಹಳ್ಳಿ ದೇವೇಗೌಡ.ಪುರಸಭೆ ಸದಸ್ಯ ಶಂಕರ್ಲಿಂಗೇಗೌಡ. ಪಡುವಲ ಪಟ್ಟಣ ಪುಟ್ಟರಾಜು.ಎಂ ಎನ್ ಸುರೇಶ್ ಜವರೇಗೌಡ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
-
Hassan20 hours ago
HASSAN: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ವಿಂಗರ್ ವಾಹನ ಪಲ್ಟಿ
-
Kodagu15 hours ago
ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಅಸಮಾಧಾನ: ಕಾರಣವೇನು?
-
Kodagu12 hours ago
ಮಡಿಕೇರಿಯಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
Kodagu12 hours ago
ಸ್ಪ್ರಿಂಕ್ಲರ್ ಪೈಪಿಗೆ ಕೃಷಿ ಇಲಾಖೆಯಿಂದ ಸಹಾಯಧನ
-
Mysore21 hours ago
ಅವಹೇಳನಕಾರಿ ಚಿತ್ರವುಳ್ಳ ಪೋಸ್ಟ್ : ಆರೋಪಿ ಬಂಧನಕ್ಕೆ ರಸ್ತೆ ತಡೆದು ಪ್ರತಿಭಟನೆ
-
Hassan16 hours ago
ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ: ಮರು ಚುನಾವಣೆಗೆ ಒತ್ತಾಯ
-
State13 hours ago
ನಮ್ಮ ಮೆಟ್ರೋ ದರ ಏರಿಕೆ: ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ
-
Hassan20 hours ago
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಜಾತ್ರಾ ಮಹೋತ್ಸವ: ಜೆಡಿಎಸ್ ಹಾಗೂ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಆರ್ಕೆಸ್ಟ್ರಾ ಆಯೋಜನೆ