Hassan
ಪಿಯು ಪರೀಕ್ಷೆಯಲ್ಲಿ ಮಾಸ್ಟರ್ ಕಾಲೇಜು ಜಿಲ್ಲೆಗೆ ಟಾಪರ್ ಸಾಧನೆ ಕಾಲೇಜು ಆಡಳಿತ ಮಂಡಳಿಯಿಂದ ಅಭಿನಂದನೆ
ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಐದನೇ ಸ್ಥಾನ ಪಡೆದು ಕಾಲೇಜಿಗೆ ಮತ್ತು ಜಿಲ್ಲೆಗೆ ಕೀತಿ ತಂದಿದ್ದಾರೆ.
ಮಂಗಳವಾರದಂದು ಬಿಡುಗಡೆಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಮಾಸ್ಟರ್ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಕಾಲೇಜಿನಲ್ಲಿ ಒಟ್ಟು ೪೮೮ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡು ಅವರಲ್ಲಿ ೩೯೬ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ. ಇದರಲ್ಲಿ ಎ.ವೈ. ಕುಸುಮತಿ, ಎಚ್.ಪಿ. ಕೆ.ಎನ್. ಸ್ನೇಹ ಹಾಗೂ ಸೂರ್ಯ ಸಂಕಲ್ಪ ಈ ಮೂವರು ವಿದ್ಯಾರ್ಥಿಗಳು ೫೯೨ ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿ ೫೯೧ ಅಂಕ ಪಡೆದಿರುವ ದಿವಾಂತ್ ಕಾರ್ಲೆ, ಶ್ರೇಯಸ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ೫೯೦ ಅಂಕ ಪಡೆದಿರುವ ಹರ್ಷಿತ ಎಚ್. ಸಿ, ನವ್ಯಶ್ರೀ, ನಿರೀಕ್ಷಾ ಎಸ್. ಗೌಡ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಸನ್ಮಾನಿಸಿ ಸಿಹಿ ತಿನಿಸಿ ಅಭಿನಂದಿಸಿದೆ.
ಮಾಸ್ಟರ್ ಪಿಯು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ.ಎಸ್. ಮಂಜುನಾಥ್, ಕಾರ್ಯದರ್ಶಿ ಟಿ.ಎ.ಹೆಚ್. ರಾಯುಡು ಹಾಗೂ ಉಪಾಧ್ಯಕ್ಷರಾದ ಗೌಡೇಗೌಡ ಅವರು ಮಾಧ್ಯಮದೊಂದಿಗೆ ಮಾತನಾಡಿ, ೨೦೨೪ರ ಪಿಯು ಪಲಿತಾಂಶ ಬಂದಿದ್ದು, ಮಾಸ್ಟರ್ ಪಿಯು ಕಾಲೇಜಿನ ಎಲ್ಲಾರು ಪಲಿತಾಂಶದ ಸಂತೋಷದಲ್ಲಿ ಕಾಲ ಕಳೆಯುತ್ತಿದ್ದೇವೆ. ನಮ್ಮ ಕಾಲೇಜಿನಲ್ಲಿ ೨೦೧೨ ರಿಂದ ಇಲ್ಲಿವರೆಗೂ, ಜಿಲ್ಲೆಗೆ ಪ್ರಥಮ ಸ್ಥಾನ ಉಳಿಸಿಕೊಂಡು ಬಂದಿದ್ದೇವೆ. ವಿಜ್ಞಾನ ವಿಭಾಗದಲ್ಲಿ ೫೯೨ ಅಂಕ ಪಡೆದು ಮೂವರು ಜಿಲ್ಲೆಗೆ ಮೊದಲ ಸ್ಥಾನಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿ ೫೯೧ ಅಂಕಗಳನ್ನು ಇಬ್ಬರೂ ಪಡೆದಿದ್ದು, ೫೯೦ ಅಂಕವನ್ನು ನಾಲ್ವರು ವಿದ್ಯಾರ್ಥಿಗಳು ಗಳಿಸಿದ್ದು, ಈ ಸ್ಥಾನ ಪಡೆದಿರುವುದಕ್ಕೆ ನಮಗೆ ಸಂತೋಷ ತಂದಿದೆ ಎಂದರು. ಪೋಷಕರು ಕೂಡ ಮಕ್ಕಳ ಈ ಸಾಧನೆಗೆ ಹರ್ಷವ್ಯಕ್ತಪಡಿಸಿದ್ದಾರೆ. ಜೆಇಇ ಯಲ್ಲಿ ಈಗಾಗಲೇ ಜಿಲ್ಲೆಗೆ ಪ್ರಥಮ ಬಂದಿದ್ದು, ಹತ್ತಾರು ವರ್ಷಗಳಿಂದಲೂ ಪಿಯು ಪರೀಕ್ಷೆ ಹಾಗೂ ಸಿಇಟಿ, ಜೆಇಇ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲೂ ನಮ್ಮ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಉಳಿಸಿಕೊಂಡು ಬಂದಿದ್ದು, ನಮ್ಮ ಸಂಸ್ಥೆವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಒಟ್ಟು ೪೮೮ ವಿದ್ಯಾರ್ಥಿಗಳು ಪರೀಕ್ಷೆ ಬರೆದು ೩೯೬ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ ಎಂದರು. ಮುಂದೆ ನಡೆಯುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಪಲಿತಾಂಶಗಳಿಸಲಿ ಎಂದು ಶುಭ ಹಾರೈಸಿದರು.
ಈ ವೇಳೆಮಾಸ್ಟರ್ ಪಿಯು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಬಿ.ಎಸ್. ಮಂಜುನಾಥ್, ಕಾರ್ಯದರ್ಶಿ ಟಿ.ಎ.ಹೆಚ್. ರಾಯುಡು, ಉಪಾಧ್ಯಕ್ಷರಾದ ಗೌಡೇಗೌಡ ಖಜಾಂಚಿ ಹೆಚ್.ಸಿ. ನಂದಿನಿ, ನಿರ್ದೇಶಕರಾದ ಜಿ. ಪ್ರಮೀಳಾ, ಎಂ.ಡಿ. ಲತಾ, ಬಿ.ಎಂ. ಪುಷ್ಪಲತಾ, ಎ.ವಿ. ಪ್ರಸನ್ನಕುಮಾರ್ ಇತರರು ಉಪಸ್ಥಿತರಿದ್ದರು.

Hassan
ಶಾಂತಿಗ್ರಾಮದಲ್ಲಿ ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನ ಯಶಸ್ವಿ
ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿಯಲ್ಲಿನ ದೇವಿಹಳ್ಳಿ ಹಾಸನ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ತನ್ನ ‘ಸ್ಟೇಕ್‌ಹೋಲ್ಡರ್ ಎಂಗೇಜ್‌ಮೆಂಟ್’ (ಭಾಗಿದಾರರ ಸಂವಹನ) ಉಪಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂತರ ಶಾಲಾ ವಿಜ್ಞಾನ ವಸ್ತುಪ್ರದರ್ಶನವು ಯಶಸ್ವಿಯಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಕೆ. ಎನ್. ಮುನಿಸ್ವಾಮಿ ಗೌಡ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಇದರಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನವೀನ ವಿಜ್ಞಾನ ಮಾದರಿಗಳು ಮತ್ತು ಸೃಜನಶೀಲ ವಿಚಾರಗಳನ್ನು ಪ್ರದರ್ಶಿಸಿದರು. ಗಣ್ಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಸಾಧನೆಯನ್ನು ಮೆಚ್ಚಿ ಅಮೂಲ್ಯವಾದ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ ಮತ್ತು ವಿಜ್ಞಾನ ಮಾದರಿಗಳು ಸಾರ್ವಜನಿಕರ ಹಾಗೂ ಭಾಗಿದಾರರ ಪ್ರಶಂಸೆಗೆ ಪಾತ್ರವಾದವು.

ಈ ಸಂದರ್ಭದಲ್ಲಿ ನಿವೃತ್ತ ಕರ್ನಲ್ ಹಾಗೂ ಸ್ವತಂತ್ರ ಇಂಜಿನಿಯರ್ ಕೆ. ಎಸ್.ನಟೇಶ್ ಅವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹಾಸನದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಭಾಸ್ಕರ್, ಶಾಂತಿಗ್ರಾಮದ ಸಬ್ ಇನ್ಸ್‌ಪೆಕ್ಟರ್ ಅರುಣ್, ಶಿಕ್ಷಣ ಸಂಯೋಜಕ ಹರೀಶ್ ಮತ್ತು ಕ್ಲಸ್ಟರ್ ಹೆಡ್ ಸತೀಶ್ ಕುಮಾರ್ ಕೆ. ವಿ. ಉಪಸ್ಥಿತರಿದ್ದರು.
Hassan
ಅಮಾನತು ಆದೇಶಕ್ಕೆ ಕೋರ್ಟ್ ತಡೆ: ಅಶೋಕ ಹಾರನಹಳ್ಳಿ ಬಣಕ್ಕೆ ಮೇಲುಗೈ
ಹಾಸನ: ನಗರದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದ್ದ ಕಾನೂನು ಸಮರಕ್ಕೆ ಈಗ ದೊಡ್ಡ ತಿರುವು ಸಿಕ್ಕಿದ್ದು, ಸಂಸ್ಥೆಯ 3 ಜನ ಕಾರ್ಯಕಾರಿ ಸಮಿತಿ ಸದಸ್ಯರ ವಿರುದ್ಧ ಹೊರಡಿಸಲಾಗಿದ್ದ ಅಮಾನತು ಆದೇಶಕ್ಕೆ ಹಾಸನದ ನೇ ಹೆಚ್ಚುವರಿ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಆಡಳಿತ ಮಂಡಳಿಯ ಬಲಾಬಲದ ಲೆಕ್ಕಾಚಾರವು ಸಂಪೂರ್ಣವಾಗಿ ಅದಲು ಬದಲಾದಂತಾಗಿದೆ.
ವಿವಾದದ ಹಿನ್ನೆಲೆ ಏನು?
ಈ ಹಿಂದೆ ಕೆಲವು ಸಣ್ಣಪುಟ್ಟ ನೆಪವೊಡ್ಡಿ ಕಾರ್ಯಕಾರಿ ಮಂಡಳಿಯ ಸದಸ್ಯರುಗಳಾಗಿದ್ದ ಶ್ರೀಧರ್, ಡಾ. ಅರವಿಂದ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಲಾಗಿತ್ತು. ತನ್ಮೂಲಕ ಆರ್.ಟಿ. ದ್ಯಾವೇಗೌಡ ತಂಡದ ಸದಸ್ಯರು ತಮ್ಮಲ್ಲಿ ಬಹುಮತ ಇದೆ ಎಂದು ತೋರಿಸುತ್ತಾ ಆಡಳಿತದಲ್ಲಿ ಮುಂದುವರಿದಿದ್ದರು. ಆದರೆ, ಶುಕ್ರವಾರದಂದು ಹೊರಬಿದ್ದ ನ್ಯಾಯಾಲಯದ ಈ ಆದೇಶವು ಈ ಹಿಂದಿನ ಅಮಾನತು ಪ್ರಕ್ರಿಯೆಗೆ ಬ್ರೇಕ್ ಹಾಕಿದೆ.

ನ್ಯಾಯಾಲಯದ ಆದೇಶ: ಪ್ರತಿವಾದಿಗಳು 2025 ಜೂ.9 ರಂದು ಅರ್ಜಿದಾರರ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶವನ್ನು ನ್ಯಾಯಾಲಯವು ಈಗ ಅಮಾನತ್ತಿನಲ್ಲಿಟ್ಟಿದೆ. ಅರ್ಜಿದಾರರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತಮ್ಮ ಹಕ್ಕುಗಳನ್ನು ಚಲಾಯಿಸಲು, ಸಭೆಗಳಲ್ಲಿ ಭಾಗವಹಿಸಲು ಮತ್ತು ಪ್ರತಿನಿಧಿಸಲು ಯಾವುದೇ ಅಡ್ಡಿಪಡಿಸದಂತೆ ಪ್ರತಿವಾದಿಗಳು ಮತ್ತು ಅವರ ಪರವಾಗಿರುವವರಿಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಲಾಗಿದೆ.
ಸಂಸ್ಥೆಯ ಹಿತದೃಷ್ಟಿಯಿಂದ ಸಭೆಗಳನ್ನು ನಡೆಸಲು ಅವಕಾಶವಿದ್ದರೂ, ಅಮಾನತಿನ ನೆಪವೊಡ್ಡಿ ಸದಸ್ಯರನ್ನು ಸಭೆಯಿಂದ ಹೊರಗಿಡುವಂತಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಬದಲಾದ ಬಲಾಬಲ: ನ್ಯಾಯಾಲಯದ ಈ ಮಧ್ಯಂತರ ತೀರ್ಪಿನಿಂದಾಗಿ ಅಮಾನತುಗೊಂಡಿದ್ದ ಸದಸ್ಯರು ಮತ್ತೆ ಸಕ್ರಿಯರಾಗಲು ದಾರಿ ಸುಗಮವಾಗಿದೆ.
ಸದ್ಯ 24 ಜನ ಸದಸ್ಯರಿರುವ ಕಾರ್ಯಕಾರಿ ಮಂಡಳಿಯಲ್ಲಿ ಅಶೋಕ ಹಾರನಹಳ್ಳಿ ಹಾಗೂ ಗುರುದೇವ್ ಬಣದ ಕಡೆಗೆ 14 ಸದಸ್ಯರ ಬಲವಿದ್ದರೆ, ಚೌಡಳ್ಳಿ ಜಗದೀಶ್ ಮತ್ತು ಆರ್.ಟಿ. ದ್ಯಾವೇಗೌಡ ಬಣದ ಕಡೆಗೆ 10 ಜನ ಸದಸ್ಯರು ಇರುವಂತಾಗಿದೆ. ಈ ಬೆಳವಣಿಗೆಯಿಂದಾಗಿ ಆಡಳಿತ ಮಂಡಳಿಯಲ್ಲಿ ಈಗ ಅಶೋಕ ಹಾರನಹಳ್ಳಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದಂತಾಗಿದೆ.
Hassan
3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026: ಬಿ.ಎಂ.ರವಿಕೀರ್ತಿಗೆ ಚಿನ್ನದ ಪದಕ
ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಿ.ಎಂ.ರವಿಕೀರ್ತಿ S / O ಮಲ್ಲೇಶ್ ಅವರು, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ 3ನೇ ನಾಗರಾಜ ರಾವ್ ಜಗದಾಲೆ ಶೂಟಿಂಗ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ -2026ನಲ್ಲಿ 10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.


ಬಿ.ಎಂ.ರವಿಕೀರ್ತಿ ಅವರು 10 ಮೀ. ಓಪನ್ ಸೈಟ್ ಏರ್ ರೈಫಲ್ ನಲ್ಲಿ ಕಂಚಿನ ಪದಕ, 50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ನಲ್ಲಿ ಕಂಚಿನ ಪದಕ, 50 ಮೀಟರ್ ಸ್ಮಾಲ್ ಬೋರ್ ರೈಫಲ್ ಓಪನ್ ಸೈಟ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಇನ್ನೂ ಬೇಲೂರು ತಾಲೂಕಿನ ಮಡೇನಹಳ್ಳಿ ಎಸ್ಟೇಟ್ನ ಎಂ.ಯುಗೇಂದ್ರ S / O ಸುಧೀರ್ ಕುಮಾರ್ ಅವರು,10 ಮೀಟರ್ ಓಪನ್ ಸೈಟ್ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಬೆಳ್ಳಿ ಪದಕ ಪಡೆದು ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
-
Chamarajanagar16 hours agoಬಿಳಿಗಿರಿ ರಂಗನಬೆಟ್ಟದ ದೇವಾಲಯ ಸುತ್ತಮುತ್ತ ಸ್ಕೌಟ್ಸ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ
-
National9 hours agoU-19 World Cup| ವೈಭವ್ನ ಶತಕ: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ
-
National - International9 hours agoನಾಳೆಯಿಂದ T-20 World Cup| 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ: ವೇಳಾಪಟ್ಟಿ ಏನು?
-
State11 hours agoಬಿಗ್ ಬಾಸ್-12 ವಿನ್ನರ್ ಗಿಲ್ಲಿನಟ ವಿರುದ್ದ ಫಿಲ್ಮ್ ಚೇಂಬರ್ಗೆ ದೂರು
-
Mysore11 hours agoವಿಶ್ವಕರ್ಮ ಯೋಜನೆಯಡಿ ವಸ್ತು ಪ್ರದರ್ಶನ
-
State13 hours agoನಮ್ಮ ಪಕ್ಷದ ಹೈಕಮಾಂಡ್ ಡಾ.ಯತೀಂದ್ರ ಅವರೇ: ಡಿಸಿಎಂ ಡಿಕೆಶಿ ಟಾಂಗ್
-
National13 hours agoಮಹಿಳೆಯ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ನ್ಯಾಯಾಂಗ ಆಗ್ರಹಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್
-
Mysore13 hours agoವಕೀಲರ ಸಂಘದ ಅಧ್ಯಕ್ಷರ ಮೇಲೆ ಪ್ರಕರಣ: ವಕೀಲ ಸಂಘದಿಂದ ಪ್ರತಿಭಟನೆ
