Hassan
ಕುಟುಂಬಕ್ಕೆ ರಕ್ಷಣೆ ನೀಡಿ-ಮನೆ ನಿರ್ಮಿಸಲು ಅವಕಾಶ ಕೊಡಿ ಇಲ್ಲವಾದ್ರೆ ದಯಾಮರಣ ನೀಡುವಂತೆ ಧರಣಿ ಮನವಿ
ಹಾಸನ: ನನಗೆ ಮತ್ತು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ಮನೆ ನಿರ್ಮಾಣ ಮಾಡಲು ತಮ್ಮ ಸಹಕಾರ ನೀಡಬೇಕು. ಇಲ್ಲವಾದರೇ ನಾವು ಬದುಕುವುದೇ ಬೇಡ ಎಂದು ತೀರ್ಮಾನ ಮಾಡಲಾಗಿದ್ದು, ನಮ್ಮ ಕುಟುಂಬ ಸಮೇತ ನಮಗೆ ದಯಾಮರಣ ನೀಡಬೇಕಾಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಶಿವಯೋಗಿಪುರ ನಿವಾಸಿಗಳಾದ ಯಶೋಧ ಹಾಗೂ ಚಂದ್ರಯ್ಯ ಅವರು ಅವರಲ್ಲಿ ಮನವಿ ಮಾಡಿದ್ದಾರೆ.
ಇದೆ ವೇಳೆ ಶಿವಯೋಗಿಪುರದ ಚಂದ್ರಯ್ಯ ಅವರು ಮಾಧ್ಯಮದೊಂದಿಗೆ ಮಾತನಾಡಿ, ಶಿವಯೋಗಿಪುರ ಗ್ರಾಮದಲ್ಲಿ ನನ್ನಸ್ವಂತ ಮನೆಯಿದ್ದು, ಖಾತೆ ನಂಬರ ೧೨೦, ಪೂ-ಪ: ೩೫ ಉ-ದ: ೧೯ ಶೌಚಾಲಯ ೭ * ೫ ಇದು ನನ್ನ ಸ್ವಂತ ಮನೆಯಾಗಿದ್ದು, ನಾನು ಸುಮಾರು ೨೫ ವರ್ಷಗಳಿಂದ ವಾಸವಾಗಿರುತ್ತೇವೆ. ಮಳೆ ಹಾನಿಗೆ ಮನೆ ಬಿದ್ದು ಹೋಗಿರುತ್ತದೆ. ಇದಕ್ಕೆ ನಾನು ಸರ್ಕಾರದಿಂದ ರೂ ೯೫,೦೦೦ ರೂಗಳನ್ನು ಪಡೆದುಕೊಂಡಿದೆ. ಪುನಾ: ಮನೆ ನಿರ್ಮಾಣ ಮಾಡಲು ಮುಂದಾದರೇ ನಮ್ಮ ಗ್ರಾಮದಲ್ಲಿರುವ ಕೆಲವರು ತೊಂದರೆ ಕೊಡುತ್ತಿದ್ದು, ಹಲವಾರು ಬಾರಿ ಎಲ್ಲಾ ಇಲಾಖೆಗಳಿಗೂ ದೂರು ನೀಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದ್ದು ನಮ್ಮಗಳಿಗೆ ವಾಸ ಮಾಡಲು ಮನೆ ಇರುವುದಿಲ್ಲ. ಬದುಕಲು ಕಷ್ಟವಾಗಿದ್ದು ನಮಗೆ ದಯಾಮರಣ ನೀಡಬೇಕಾಗಿರುವ ಕೋರಿದರು. ಶಿವಯೋಗಿಪುರ ಗ್ರಾಮ, ಗ್ರಾಮ ಠಾಣಾ ಜಾಗದಲ್ಲಿ ಸುಮಾರು ೨೫ ವರ್ಷಗಳಿಂದ ವಾಸವಿದ್ದು, ೨೦೨೨ನೇ ಇಸವಿಯಲ್ಲಿ ಮಳೆ ಅರೆದೃಷ್ಟಿಯಿಂದ ಮನೆ ಕುಸಿದು ಬಿದ್ದ ನಂತರ ಸರ್ಕಾರದ ಅನುದಾನದಲ್ಲಿ ಪುನರ್ ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲ್ಲೂಕು ಪಂಚಾಯಿತಿಯ ಅನುಮೋದನೆ ಪಡೆದು ಮನೆ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಬಿಸಿದ್ದು, ಕಾನೂನು ವಿರುದ್ದ ಮತ್ತು ದುರುದ್ದೇಶದಿಂದ ಕೆಲ ವ್ಯಕ್ತಿಗಳಾದ ರೌಡಿಶೀಟರ್ ತಿರುಮಲಹಳ್ಳಿ ಶಿವಕುಮಾರು, ತಿರುಮಲನಹಳ್ಳಿ ಹರೀಶ್ ಹಾಗೂ ಗ್ರಾಮದ ವ್ಯಕ್ತಿಗಳಾದ ಮಲ್ಲಿಕಾರ್ಜುನ, ಕುಸುಮ, ಸಿದ್ದಯ್ಯ, ಯಶೋದಮ್ಮ, ಶಶಿಕಲಾ, ಸಾವಿತ್ರಮ್ಮ.೮)ಶಿವಶಂಕರ, ಸುಜಾತ ಈ ವ್ಯಕ್ತಿಗಳು ದುರುದ್ದೇಶದಿಂದ ನಮಗೆ ಅಡ್ಡಿ ಉಂಟು ಮಾಡಲು ಅಂಬೇಡ್ಕರ್‌ರವರ ಪೋಟೋ ಮತ್ತು ಫ್ಲೆಕ್ಸ್ ಅನ್ನು ಇಟ್ಟಿರುತ್ತಾರೆ ಎಂದು ದೂರಿದರು. ಮನೆಯ ಅಡಿಪಾಯ ಒಳಬಾಗದಲ್ಲಿ ತಂದು ಇರಿಸಿ ಸಾರ್ವಜನಿಕವಾಗಿ ಗಲಾಟೆ ಮತ್ತು ಶಾಂತಿ ಕದಡುವ ಉದ್ದೇಶದಿಂದ ಈ ರೀತಿಯಲ್ಲಿ ನಡೆಸಿದ್ದು, ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಸಿ ಅಡಿಪಾಯವನ್ನು ದ್ವಂಸ ಮಾಡಿರುತ್ತಾರೆ. ಹಳೇಬೀಡು ಪೊಲೀಸು ಠಾಣೆಗೆ ಖುದ್ದಾಗಿ ದೂರು ನೀಡಿದ್ದು, ಎಫ್.ಐ.ಆರ್. ದಾಖಲಾಗಿರುತ್ತಿಸಿದ್ದಾರೆ. ಆದರೂ ರೌಡಿಷೀಟರ್ ಶಿವಕುಮಾರ ಮತ್ತು ಆತನ ಸಹಚರರು ಸೇರಿಕೊಂಡು ಮನೆ ನಿರ್ಮಾಣ ಮಾಡದಂತೆ ಹಾಗೂ ಕೊಲೆ ಬೆದರಿಕೆ ಹಾಕಿ ನಮ್ಮ ಕುಟುಂಬಕ್ಕೆ ಜೀವ ಬೆದಕರಿಕೆಯಿದ್ದು, ಈ ಕಾರಣದಿಂದ ನಾವುಗಳು ತಮ್ಮ ಕಛೇರಿಗೆ ಬಂದು ಅರ್ಜಿ ನೀಡಿರುತ್ತೇವೆ ಎಂದು ಹೇಳಿದರು.
ಇನ್ನು ಕೆಲ ದಿನಗಳಲ್ಲೆ ಮಳೆಗಾಲ ಆರಂಭವಾಗುತ್ತಿದ್ದು, ನಮಗೆ ವಾಸ ಮಾಡಲು ಯಾವುದೇ ಮನೆ ಇಲ್ಲ ಸಣ್ಣದೊಂದು ಗುಡಿಸಲಿಲ್ಲ ಎರಡು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದೇವೆ. ನಾವು ಬದುಕಲು ಕಷ್ಟವಾಗಿರುವುದರಿಂದ ನಾವು ಬದುಕುವುದೇ ಬೇಡ ಎಂದು ತೀರ್ಮಾನ ಮಾಡಲಾಗಿದ್ದು, ನಮ್ಮ ಕುಟುಂಬ ಸಮೇತ ನಮಗೆ ದಯಾ ಮರಣ ನೀಡಬೇಕಾಗಿ ಮನವಿ ಮಾಡಿದರು.

Hassan
ಪ್ರತಿಭೆಯೇ ಸಾಧನೆಯ ಮೂಲ ಪಾಠಶಾಲಾ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಎ.ಬಿ. ಸುರೇಂದ್ರಕುಮಾರ್
ಹಾಸನ: ಸಾಧನೆ ಮಾಡಲು ಏನು ಬೇಕಾಗಿಲ್ಲ. ನಿಮ್ಮ ಪ್ರತಿಭೆ ಒಂದೆ ಸಾಕಾಗುತ್ತದೆ. ದುಡ್ಡು ಇರುವವರ ಜೊತೆ ಹೋಗದೇ ದುಡಿಯುವರ ಜೊತೆ ಹೋದರೇ ಏನಾದರೂ ಸಾಧನೆ ಮಾಡಬಹುದು ಎಂದು ಟೈಮ್ಸ್ ಗುರುಕುಲ ಎಜುಕೇಶನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಬಿ. ಸುರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಪಾಠಶಾಲಾ ಎಜುಕೇಶನ್ ಟ್ರಸ್ಟ್ ನೀಟ್ ಅಕಾಡೆಮಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪಾಠಶಾಲಾ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಇತರರಲ್ಲೂ ಸಾಧನೆ ಮಾಡುವ ಛಲ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ನೀಟ್ ಪರೀಕ್ಷೆಗೆ ಹೋಗಲು ಕೇವಲ ಅಕಾಡೆಮಿಕ್ ಅಂಕಗಳಷ್ಟೇ ಮುಖ್ಯವಲ್ಲ, ಫಿಸಿಕ್ಸ್, ಕೆಮಿಸ್ಟ್ರಿ ಹಾಗೂ ಬಯಾಲಜಿ ವಿಷಯಗಳ ಮೇಲೆ ಪಕ್ಕಾ ಹಿಡಿತ ಅಗತ್ಯವಿದೆ ಎಂದರು. ಈ ಮೂರು ವಿಷಯಗಳಿಗೆ ಆದ್ಯತೆ ನೀಡಿ ಸಮಯವನ್ನು ಸರಿಯಾಗಿ ಬಳಸಿದರೆ ಯಶಸ್ಸು ಖಚಿತ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಮ್ಮ ತಂದೆ ಕಂಡ ಕನಸನ್ನು ನಾವು ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಆ ಕನಸನ್ನು ನನಸು ಮಾಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ ಎಂದರು. ಓದುವ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಗುರಿ ಹಾಗೂ ಛಲ ಬೆಳೆಸಿಕೊಂಡು ಮುಂದುವರಿದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಹೇಳಿದರು. ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿರುವ ತಂದೆತಾಯಿಯ ವಿಶ್ವಾಸ ಉಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಶಾಲೆ ಕಟ್ಟುವುದರ ಜೊತೆಗೆ ಗುಣಾತ್ಮಕ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದರು. ಸಾಧನೆ ಎಂಬುದು ಯಾರೊಬ್ಬರ ಸ್ವತ್ತಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಅದಕ್ಕೆ ತಕ್ಕ ಪರಿಶ್ರಮ ಅನಿವಾರ್ಯ ಎಂದು ತಿಳಿಸಿದರು. ಮಾಜಿ ಪ್ರಧಾನಿ ದೇವೇಗೌಡರು ತಾಲೂಕು ಪಂಚಾಯಿತಿಯಿಂದ ಆರಂಭಿಸಿ ಪರಿಶ್ರಮದ ಮೂಲಕ ಪ್ರಧಾನ ಹುದ್ದೆ ಅಲಂಕರಿಸಿದ್ದಾರೆ ಎಂಬ ಉದಾಹರಣೆ ನೀಡಿದರು. ಶಿಸ್ತು, ಶ್ರದ್ಧೆ ಮತ್ತು ಸ್ಪಷ್ಟ ಗುರಿ ಇದ್ದರೆ ಸಮಾಜದಲ್ಲಿ ಯಾವುದನ್ನಾದರೂ ಸಾಧಿಸಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಿಮ್ಸ್ ಪ್ರಾಂಶುಪಾಲೆ ಡಾ.ಸಿ.ವಿ. ಕವಿತಾ, ಪೋದರ್ ಶಾಲೆಯ ಉಪಪ್ರಾಂಶುಪಾಲ ಮುಸೇಬ್, ಪಾಠಶಾಲಾ ಶೈಕ್ಷಣಿಕ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಪಿ. ಸುನೀಲ್ ಕುಮಾರ್, ಕಾರ್ಯದರ್ಶಿ ಜೆ.ಎಸ್. ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು
Hassan
ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಶಾಸಕ ಹೆಚ್.ಪಿ. ಸ್ವರೂಪ್ ಚಾಲನೆ
ಹಾಸನ: ನಗರದ ಹಿಮ್ಸ್ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಲಸಿಕ ದಿನದ ಅಂಗವಾಗಿ ಐದು ವರ್ಷದ ಒಳಗಿನ ಮಕ್ಕಳಿಗೆ ಫಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಚಾಲನೆ ನೀಡಿದರು.

ನಂತರ ಉದ್ದೇಶಿಸಿ ಮಾತನಾಡಿದ ಶಾಸಕರು, ಫಲ್ಸ್ ಪೋಲಿಯೋ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಮುಂದೆ ಆರೋಗ್ಯದಲ್ಲಿ ಯಾವ ಸಮಸ್ಯೆಗಳಾಗದಂತೆ ಎಚ್ಚರ ವಹಿಸುವಂತೆ ಪೋಷಕರಿಗೆ ಸಲಹೆ ನೀಡಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೋಲಿಯೋ ಲಸಿಕೆ ಬಹಳ ಮುಖ್ಯ, ಆದುದರಿಂದ ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ತಪ್ಪದೆ ಪೊಲಿಯೋ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದೆ. ಪ್ರತಿ ಐದು ಬೂತ್‌ಗಳಿಗೆ ಒಬ್ಬರಂತೆ ಒಟ್ಟು ೧೭೪ ಮೇಲ್ವಿಚಾರಕರನ್ನು ನಿಯೋಜಿಸಿ ತಾಲ್ಲೂಕುವಾರು ಸೂಕ್ಷ್ಮ ಕ್ರಿಯಾ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಭಿಯಾನ ಮೂರು ದಿನಗಳು ಹಾಗೂ ನಗರ ಪ್ರದೇಶಗಳಲ್ಲಿ ನಾಲ್ಕು ದಿನಗಳು ನಡೆಯಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ೦೫ ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಪೋಲಿಯೋ ರೋಗದಿಂದ ರಕ್ಷಿಸುವ ಉದ್ದೇಶದಿಂದ ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು “ಎರಡು ಹನಿಗಳು ಪೋಲಿಯೋ ವಿರುದ್ಧ ನಿರಂತರ ಗೆಲುವು” ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಟ್ಟು ೧,೦೬,೭೪೭ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದು, ೪,೬೮,೪೯೩ ಮನೆಗಳನ್ನು ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು ೮೭೨ ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ನಗರ ಪ್ರದೇಶದಲ್ಲಿ ೧೪೦ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೭೩೨ ಬೂತ್‌ಗಳು ಕಾರ್ಯನಿರ್ವಹಿಸಲಿವೆ. ಪ್ರತಿಯೊಂದು ಬೂತ್‌ಗೆ ನಾಲ್ವರು ಸದಸ್ಯರಂತೆ ಒಟ್ಟು ೩,೪೮೮ ಬೂತ್ ತಂಡದ ಸದಸ್ಯರನ್ನು ನಿಯೋಜಿಸಲಾಗಿದೆ. ಜೊತೆಗೆ ಮನೆ?ಮನೆಗೆ ತೆರಳಿ ಲಸಿಕೆ ನೀಡಲು ೧,೭೪೪ ಮನೆ ಭೇಟಿ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳ ಆರೋಗ್ಯ ರಕ್ಷಣೆಗೆ ಕೈಜೋಡಿಸಬೇಕೆಂದು ಕರೆ ಕೊಟ್ಟರು.

ಐಎಂಎ ಅಧ್ಯಕ್ಷರಾದ ಡಾ. ದಿನೇಶ್ ಭೈರೇಗೌಡ ಮಾತನಾಡಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಮನವಿ ಮಾಡಿದ್ದು, ತಮ್ಮ ಮನೆಯಲ್ಲಿರುವ ೦೫ ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಹನಿಗಳನ್ನು ನೀಡಿದ್ದರೂ ಸಹ, ಡಿಸೆಂಬರ್ ೨೧ರಂದು ನಡೆಯುವ ಪಲ್ಸ್ ಪೋಲಿಯೋ ದಿನದಂದು ಕಡ್ಡಾಯವಾಗಿ ಸಮೀಪದ ಬೂತ್‌ಗಳಿಗೆ ಕರೆತಂದು ಪೋಲಿಯೋ ಹನಿಗಳನ್ನು ಹಾಕಿಸಬೇಕು ಎಂದರು.
ಇದೆ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನೀಲ್, ನಾಗಪ್ಪ, ಚನ್ನವೀರಪ್ಪ, ಮನುಪ್ರಕಾಶ್, ಶಿವಶಂಕರ್, ವಿಜಯ್, ಮೀನಾಕ್ಷಿ ಇತರರು ಉಪಸ್ಥಿತರಿದ್ದರು.
Hassan
ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದ ಡಿಸಿ ಲತಾಕುಮಾರಿ
ಹಾಸನ: ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕಾರವಾಗಿರುವ 1069 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕುರಿತು ವರದಿ ನೀಡುವುದರ ಜೊತೆಗೆ ಇಂದು ಸ್ವೀಕಾರ ಮಾಡಿರುವ 135 ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜನ ಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು ಸಾರ್ವಜನಿಕರ ಸ್ವಂತ ಜಮೀನು ಒತ್ತುವರಿ ಆಗಿದ್ದಲ್ಲಿ ನ್ಯಾಯಾಲಯದ ನಿರ್ದೇಶನವಿದ್ದರೆ ಮಾತ್ರ ಬಿಡಿಸಲು ಅವಕಾಶ ಇರುತ್ತದೆ ಎಂದು ತಿಳಿಸಿದರು.

ಕಳೆದ 20 ವರ್ಷದಿಂದ ಪಡಿತರ ಕಾರ್ಡ್ ಹೊಂದಿದ್ದು, ಆದಾಯ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ನಲ್ಲಿ ತೋರಿಸುತ್ತಿರುವುದರಿಂದ ೫ ವರ್ಷದಿಂದ ಪಡಿತರ ಕಾರ್ಡ್ ರದ್ದಾಗಿರುವುದನ್ನು ಸರಿಪಡಿಸಲು ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಅರಕಲಗೂಡು ತಾಲೂಕಿನ ಮಾದಿಹಳ್ಳಿಯಲ್ಲಿ ಏತನೀರಾವರಿಗೆ ಭೂಸ್ವಾಧೀನವಾಗಿದ್ದು, ಪರಿಹಾರ ಕೋರಿ ಬಂದ ಮನವಿಗೆ ಖುದ್ದು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.
ಪೌತಿಖಾತೆ, ಹದ್ದುಬಸ್ತು, ವಿದ್ಯುತ್ ಸಂಪರ್ಕ ಕಲ್ಪಿಸುವುದು, ಸಾಗುವಳಿ ಚೀಟಿ, ಕಂದಾಯ ಗ್ರಾಮ, ಖಾತೆ ಮಾಡುವ ಬಗ್ಗೆ, ಪೋಡಿ ದುರಸ್ತಿ, ಪಹಣಿ ತಿದ್ದುಪಡಿ, ಹೊಲಕ್ಕೆ ದಾರಿ ಬಿಡಿಸಿಕೊಡುವ ಬಗ್ಗೆ, ಶ್ರವಣಬೆಳಗೊಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ, ಇನಾಮು ರದ್ದು ಪಡಿಸುವ ಕುರಿತು, ಕೊಣನೂರು ಗ್ರಾಮ ಪಂಚಾಯಿತಿಯಲ್ಲಿ ಪೌರಕಾರ್ಮಿಕರಿಗೆ ಹಕ್ಕು ಪತ್ರ ನೀಡಲು ಮನವಿ, ಆಕಾರ ಬಂದು ತಿದ್ದುಪಡಿ ಮಾಡಿರುವವರ ಮೇಲೆ ಎಫ್.ಐ.ಆರ್ ದಾಖಲಿಸುವಂತೆ ಸೂಚಿಸಿದರಲ್ಲದೆ, ವಿದ್ಯುತ್ ಲೈನ್ ಹಾದು ಹೋಗಿರುವ ಸ್ಥಳಕ್ಕೆ ಪರಿಹಾರ ನೀಡಲು ಒಂದು ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಟ್ಟಾಯ ಗ್ರಾಮದಲ್ಲಿ ಸ್ಮಶಾನ ಜಾಗ ಒತ್ತುವರಿ ತೆರವುಗೊಳಿಸಲು, ವಸತಿ ಯೋಜನೆಯಡಿ ಮಂಜೂರಾದ ಮನೆಗೆ ಅಂತಿಮ ಬಿಲ್ ಹಣ ಪಾವತಿ ಮಾಡುವಂತೆ ಸೂಚಿಸಿದರಲ್ಲದೆ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೇಡ್ ಹಾಕಿರುವುದನ್ನು ನಿರ್ದಾಕ್ಷಿಣ್ಯವಾಗಿ ತೆರೆವುಗೊಳಿಸಲು ನಿರ್ದೇಶನ ನೀಡಿದರು.
ಬೊಮ್ಮನಹಳ್ಳಿ ಏತನೀರಾವರಿ ಯೋಜನೆಗೆ ಭೂಸ್ವಾಧೀನವಾಗಿರುವ ಜಾಗಕ್ಕೆ ಹಾಗೂ ಬೆಳೆ ಪರಿಹಾರ, ಖಾತೆ ಬದಲಾವಣೆ, ಹೊಳೆನರಸೀಪುರ ತಾಲ್ಲೂಕಿನ ಕಾಮಸಮುದ್ರದಲ್ಲಿ ಗೋಮಾಳದಲ್ಲಿ ಎರಡು ಗುಂಟೆ ಜಾಗ ಕಲ್ಪಿಸುವಂತೆ ಅಹವಾಲು ಅರ್ಜಿಗಳು ಸ್ವೀಕಾರವಾಯಿತು.

ಸಾರ್ವಜನಿಕರಿಗೆ ಕಾನೂನು ಸೇವೆಗಳ ಸಹಾಯಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಕೋಶ ತೆರೆಯಲಾಗಿದೆ ಯಾರ ಸಹಾಯವಿಲ್ಲದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
-
Mandya3 hours agoಕಡ್ಡಾಯವಾಗಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿ: ಶಾಸಕ ಪಿ. ರವಿಕುಮಾರ್
-
National - International19 hours agoವಿಶ್ವಸಂಸ್ಥೆಯಲ್ಲಿ ವಿಶ್ವ ಧ್ಯಾನ ದಿನದ ಅಂಗವಾಗಿ ವಿಶ್ವಕ್ಕೆ ಧ್ಯಾನದ ಮಹತ್ವ ಸಾರಿದ ರವಿಶಂಕರ್ ಗುರೂಜಿ
-
Mysore18 hours agoಜಿಲ್ಲಾ ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್ ಕ್ರಿಕೆಟ್: ರಾಯಲ್ ಚಾಲೆಂಜರ್ಸ್ ಚಾಂಪಿಯನ್
-
Mysore17 hours agoಎಎಸ್ಜಿ ಆಸ್ಪತ್ರೆಯಲ್ಲಿ ನಗದುರಹಿತ ಕಣ್ಣಿನ ಆರೈಕೆ ಯೋಜನೆ ಆರಂಭ
-
Chamarajanagar21 hours agoಜಾನಪದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ ಎಚ್.ಜನಾರ್ಧನ್
-
Mandya21 hours agoಕಣ್ಮನ ಸೆಳೆದ 1066ನೇ ಸುತ್ತೂರು ಜಯಂತಿ ಪ್ರಯುಕ್ತ ನಡೆದ ಭಾವೈಕ್ಯತಾ ರಥಯಾತ್ರೆ
-
Chikmagalur21 hours agoಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ
-
Mandya19 hours agoಹೈನುಗಾರಿಕೆಯನ್ನು ಲಾಭದಾಯಕಗೊಳಿಸಲು ಹಸು ಸಾಕಣಿಕೆ ಮಾಡಬೇಕು: ಎಸ್. ಪಿ .ಸ್ವಾಮಿ
