Connect with us

Hassan

ಯಶಸ್ವಿಗೊಂಡ ಮಕ್ಕಳ ಸಾಹಿತ್ಯ ಸಂಭ್ರಮ ಟಿ.ಎ. ಪ್ರಶಾಂತಬಾಬು

Published

on

ಹಾಸನ: ಫೆಬ್ರವರಿ – ಮಾರ್ಚ್ ತಿಂಗಳ ೨೦ ದಿನಗಳ ಅವಧಿಯಲ್ಲಿ ಇಡೀ ರಾಜ್ಯದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು ಅದೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು.

ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿ, ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಎಂದರೇ ಅದು ಎಲ್ಲವನ್ನು ಒಳಗೊಳ್ಳುವ ಗುಣ ಅದಕ್ಕೆ ಹೆಣ್ಣು ಗಂಡು ಎನ್ನುವ ಭೇದವಿಲ್ಲ. ಬಡವ ಶ್ರೀಮಂತ ಎನ್ನುವ ಭೇದವಿಲ್ಲ ದೇಶ ಭಾಷೆಗಳ ಗಡಿಗಳಿಲ್ಲ ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ದದ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳು ಈ ಆಕರಗಳನ್ನ ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನು ಕೊಟ್ಟಂತಾಗುತ್ತದೆ ಎಂದರು. ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್.ಡಿ.ಪಿ.ಆರ್. ಜೊತೆಗೂಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.

ಆರ್.ಡಿ.ಪಿ.ಆರ್. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯಗಳನ್ನು ತೆರೆದಿದೆ, ಅದಕ್ಕೆ ಬೇಕಾಗಿರುವ ಮೂಲಭೂತ ಪರಿಕರಗಳನ್ನು ಕೂಡ ಒದಗಿಸಿದೆ ಆದರೂ ಗ್ರಂಥಾಲಯಗಳಿಗೆ ಮಕ್ಕಳಾಗಲಿ, ಜನರಾಗಲಿ ಬರುತ್ತಿಲ್ಲ ಏಕೆ ಎಂದು ಯೋಚಿಸುವಾಗ ಕಂಡುಕೊಂಡ ಸತ್ಯ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಬೇಕಾದ ಪುಸ್ತಕವಿಲ್ಲ ಎಂಬುದು ಆಗಿದೆ. ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಿದ್ದರೂ ಮಕ್ಕಳ ಸಾಹಿತ್ಯ ಬಹಳ ಕಡಿಮೆ ಇರುವುದು ಕಂಡುಬಂದಿದೆ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ಮಕ್ಕಳಿಂದಲೇ ಮಾಡಿಸಬೇಕು ಎಂದು ಮನಗಂಡು ಬಿ.ಜಿ.ವಿ.ಎಸ್. ಮಕ್ಕಳಲ್ಲಿಯೇ ಸಾಹಿತ್ಯ ಸೃಷ್ಟಿಸಿ ಪುಸ್ತಕ ಮಾಡಿ ಗ್ರಂಥಾಲಯಗಳಿಗೆ ತುಂಬಬೇಕು ಎಂಬ ಮಹದಾಸೆಯಿಂದ ಮಕ್ಕಳ ಸಾಹಿತ್ಯ ಸಂಭ್ರಮವನ್ನು ಆರ್ ಡಿ ಪಿ ಆರ್ ನೇತೃತ್ವದಲ್ಲಿ ಆಯೋಜಿಸಿತ್ತು. ಕೇವಲ ೨೦ ದಿನಗಳಲ್ಲಿ ರಾಜ್ಯಾದ್ಯಂತ ೭೩ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ೮೦೦೦ ಮಕ್ಕಳು ಒಂದುವರೆ ಸಾವಿರ ಶಿಕ್ಷಕರು ಕೂಡಿಕೊಂಡು ೨೦,೦೦೦ ಪುಟಗಳ ಮಕ್ಕಳ ಸಾಹಿತ್ಯವನ್ನು ಮಕ್ಕಳು ಒಂದು ಸಾವಿರ ಪುಟಗಳ ಮಕ್ಕಳ ಸಾಹಿತ್ಯವನ್ನು ಶಿಕ್ಷಕರು ರಚಿಸಿರುವುದು ಕನ್ನಡ ಸಾಹಿತ್ಯದ ಒಂದು ಮಹತ್ವ ಘಟ್ಟವೇ ಹೌದು ಎಂದ ಅವರು ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಲ್ಲಿ ಮಾತ್ರವಲ್ಲದೆ ಪಂಚಾಯಿತಿ ಅಧಿಕಾರಿಗಳಲ್ಲೂ ಕೂಡ ಸಾಹಿತ್ಯದ ಘಮವನ್ನು ಸೃಷ್ಟಿಸಿದ್ದಂತೂ ಸತ್ಯ ಎಂದು ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷೆ ಡಾ|| ಎ. ಸಾವಿತ್ರಿ ಮಾತನಾಡಿ, ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ, ಆರೋಗ್ಯದ ಚಿಂತನೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಮಾನವೀಯ ಅಂತಃಕರಣದ ಮುತ್ತುರತ್ನಗಳು ಇವನ್ನು ಜನತೆಯಲ್ಲಿ ಅಚ್ಚೊತ್ತಿಸಲು ಸಾಹಿತ್ಯ ಪರಿಣಾಮಕಾರಿ ಮಾಧ್ಯಮ ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಅಭಿವ್ಯಕ್ತಿಯನ್ನ ಎಳೆಯದರಲ್ಲಿಯೇ ಚಿಗುರಿಸಿದರೇ ಆ ಮಗು ಆದರ್ಶ ನಾಗರಿಕನಾಗುವುದರಲ್ಲಿ ಸಂಶಯವಿಲ್ಲ ಎಂದರು. ಕೇವಲ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯ ಎಂಟು ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೯೦೦ ಮಕ್ಕಳಿಗೆ ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಬರೆಯುವ ಕೌಶಲ್ಯ ಮೂಡಿಸಿ ಸಾಹಿತ್ಯ ಸೃಷ್ಟಿಸಲು ಕಾರಣಕರ್ತರಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್, ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ ಗುರುರಾಜು, ಲಾಶಿಕ್ಷಕ ಬಿ.ಎಸ್.ದೇಸಾಯಿ, ಖ್ಯಾತ ಸಾಹಿತಿ ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಉಪಸ್ತಿತರಿದ್ದು ಶುಭಾಶಯ ಕೋರಿದರು. ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ಕಾರ್ಯಕ್ರಮ. ನಿರೂಪಿಸಿದರು, ಬಿಜಿವಿಎಸ್ ಹಾಸನ ತಾಲ್ಲೂಕು ಕಾರ್ಯದರ್ಶಿ ವನಜಾಕ್ಷಿ ಮೊದಲಿಗೆ ಎಲ್ಲರನ್ನು ಸ್ವಾಗತಿಸಿ ಬಿಜಿವಿಎಸ್ ತಾಲ್ಲೂಕು ಅಧ್ಯಕ್ಷೆ ಆರ್. ರಾಧಾ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Crime

ಯಾವ ತಪ್ಫಿಗಾಗಿ ಈ ಕೃತ್ಯ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್ ಕುಮಾರ್ ಮೇಲಿನ ಹಲ್ಲೆಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರದಾನಿ ದೇವೇಗೌಡರು

Published

on

ಹಾಸನ: ಯಾವ ತಪ್ಫಿಗಾಗಿ ಈ ಕೃತ್ಯ, ಬಿಜೆಪಿ ಮಾಧ್ಯಮ ವಕ್ತಾರ ವಿಜಯ್ ಕುಮಾರ್ ಮೇಲಿನ ಹಲ್ಲೆಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರದಾನಿ ದೇವೇಗೌಡರು
ಆರ್ ಎಎಸ್ ಎಸ್ ನವರು ನಿಸ್ವಾರ್ಥವಾಗಿ ಕೆಲಸ ಮಾಡೋರು, ದೇಶದ ತುರ್ತು ಪರಿಸ್ಥಿತಿ ವೇಳೆಯಲ್ಲೂ ಕೂಡ ದೇಶಕ್ಕಾಗಿ ಕೆಲಸ ಮಾಡಿದವರು, ನನಗೆ ಎಲ್ಲವೂ ಗೊತ್ತಿದೆ ತಿಳಿದು ಕೊಂಡಿದ್ದೇನೆ.
ನೀವು ಏನು ಮಾತಾಡಿದ್ರಿ ನಂದೂ ಒಂದು ಮತ ಅವರದು ಒಂದು ಮತ ಎಂದಿದ್ದೀರಿ,
ನೀವು ಜನರಲ್ ಆಗಿ ಮಾತಾಡಿದ್ರಿ ಅದ್ರಲ್ಲಿ ಏನು ತಪ್ಪಿದೆ, ಪ್ರೀತಂಗೌಡ ಹೆಸರು ಹೇಳದೆ ಘಟನೆ ಖಂಡಿಸಿದ ದೇವೇಗೌಡರು.
ನಾನು ಈ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳೋದಿಲ್ಲ. ಈಗ ಏನೂ ಮಾತನಾಡಲ್ಲ
ನೀವೆಲ್ಲಾ ವಾಸ್ತವಾಂಶವನ್ನು ವರದಿ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ ದೇವೇಗೌಡರು.
ಹಿಮ್ಸ್ ನಲ್ಲಿ ಗಾಯಾಳು ವಿಜಯಕುಮಾರ್ ಅರೋಗ್ಯ ವಿಚಾರಿಸಿ ನಂತರ ಮಾತನಾಡಿದ ಮಾಜಿ ಪ್ರಧಾನಿ

ನಾನು ನಿಮ್ಮ ಜೊತೆ ಇರ್ತೇನೆ ಎಂದು ವಿಜಯಕುಮಾರ್ಗೆ ಭರವಸೆ, ನಾಳೆ ಸಂಜೆ ಮತ್ತೆ ಬರ್ತೇನೆ ಪೊಲೀಸರು ಏನು ಕ್ರಮ ಕೈಗೊಳ್ತಾರೆ ತಿಳಿದುಕೊಳ್ತೇನೆ. ಕೆಲವರಿಗೆ ಜೀವ ಬೆದರಿಕೆ ಇದೆ ಎಂದು ದೇವೇಗೌಡ ರಿಗೆ ಮಾಹಿತಿ ನೀಡಿದ ಬಿಜೆಪಿ ಕಾರ್ಯಕರ್ತರು
ಇದಕ್ಕೆ ನಾನು ನಿಮ್ಮ ಜೊತೆ ಇದ್ದೇನೆ ಎಂದ ಗೌಡರು.

Continue Reading

Hassan

ಭಯೋತ್ಪಾದಕರನ್ನ ರಕ್ಷಿಸುವ ಕಾಂಗ್ರೆಸ್‌: ಆರ್‌.ಅಶೋಕ್‌ ವಾಗ್ದಾಳಿ

Published

on

ಮಂಡ್ಯ: ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದ್ದು, ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ನಗರದ ಹೊರ ವಲಯದ ಅಮರಾವತಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿದವರನ್ನು ಸಹೋದರರ ಹೆಸರಿನಲ್ಲಿ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಕ್ಷಣೆ ಮಾಡಲು ಮುಂದಾಗಿದ್ದರು ಎಂದು ಆಕ್ರೊಶ ವ್ಯಕ್ತಪಡಿಸಿದರು.

ರಾಮೇಶ್ವರಂ ಹೊಟೇಲ್ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣವನ್ನು ವ್ಯವಹಾರಿಕ ಈರ್ಷೆಯಿಂದ ಬೇರೆ ಹೊಟೇಲ್‌ನವರು ಕೃತ್ಯ ಮಾಡಿರಬಹುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದರು, ಸ್ಪರ್ಧಾತ್ಮಕ ಪೈಪೋಟಿಯಿಂದ ಬೇರೆ ಹೊಟೇಲ್‌ನವರು ಮಾಡಲು ಸಾಧ್ಯವೇ? ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗಲೂ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡಿದರು. ಬೆಂಗಳೂರಿನ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ನಾವು ಒತ್ತಾಯಿಸಿದ್ದೆವು. ಆದರೂ ಸರ್ಕಾರ ವಹಿಸಲು ಹಿಂದೇಟು ಹಾಕಿತು ಎಂದು ಆರೋಪಿಸಿದರು.

ವಿಷಯ ತಿಳಿದು ಎನ್ಐಎ ಸ್ವತಃ ಧಾವಿಸಿ ತನಿಖೆ ಆರಂಭಿಸಿತ್ತು. ಮೂರು ದಿನಗಳ ಬಳಿಕ ಸರ್ಕಾರ ಎನ್ಐಗೆ ವಹಿಸುವ ಕೆಲಸ ಮಾಡಿತು, ಬೆಂಗಳೂರಿನ ಜನ ಭಯಭೀತರಾಗಿದ್ದಾರೆ. ರಾಜ್ಯದಲ್ಲೂ ಒಂದು ರೀತಿಯಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ರಾಮೇಶ್ವರಂ ಹೊಟೇಲ್ ಬಾಂಬ್ ಬ್ಲಾಸ್ಟ್‌ನಿಂದಾಗಿ ಇಡೀ ಬೆಂಗಳೂರೇ ತಲ್ಲಣವಾಗಿದೆ, ಭಯೋತ್ಪಾದಕರನ್ನು ಸಹೋದರರು ಎನ್ನುವ ಕಾಂಗ್ರೆಸ್ಸಿಗರು ಮೃಧು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕುಟುಕಿದರು.

ಭಯೋತ್ಪಾದಕ ಘಟನೆ ಎಂದು ಬಟಾ ಬಯಲಾಗಿದ್ದರೂ ಸಹ ಅವರ ಬಗ್ಗೆ ಸಾಫ್ಟ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದರೂ ಏನೂ ಮಾಡಲಿಲ್ಲ. ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏ.14 ರಂದು ಮೈಸೂರಿಗೆ ಭೇಟಿ ನೀಡಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುವರು, ಅಂದಿನ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಲ್ಕೂ ಜಿಲ್ಲೆಗಳ ಎನ್‌ಡಿಎ ಅಭ್ಯರ್ಥಿಗಳಾದ ಮೈಸೂರಿನ ಯಧುವೀರ್, ಮಂಡ್ಯದ ಎಚ್.ಡಿ.ಕುಮಾರಸ್ವಾಮಿ, ಚಾಮರಾಜನಗರದ ಬಾಲರಾಜು, ಹಾಸನದ ಪ್ರಜ್ವಲ್ ರೇವಣ್ಣ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸುವರು ಎಂದು ವಿವರಿಸಿದರು.

ಮೋದಿ ಆಗಮನದ ಹಿನ್ನಲೆಯಲ್ಲಿಯೇ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ನಾಲ್ಕೂ ಜಿಲ್ಲೆಗಳಿಂದ ಹೆಚ್ಚಿನ ಜನರು ಆಗಮಿಸುವರು, ದೊಡ್ಡ ಮಟ್ಟದ ಕಾರ್ಯಕ್ರಮನ್ನು ರೂಪಿಸಲಾಗುವುದು. ಮಂಡ್ಯಗೆ ಕುಮಾರಣ್ಣ, ಇಂಡಿಯಾಗೆ ನರೇಂದ್ರಮೋದಿ ಎಂದು ನಾವು ಹೇಳುತ್ತೇವೆ. ಕಾಂಗ್ರೆಸ್ಸಿಗರು ಮಂಡ್ಯಕ್ಕೆ ಕಂಟ್ರಾಕ್ಟರ್, ಇಂಡಿಯಾಗೆ ರಾಹುಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಭ್ರಷ್ಟಾಚಾರದ ಕೂಪವಾಗಿದೆ. ಕಳೆದ 10 ವರ್ಷಗಳಿಂದ ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉತ್ತಮ ಸಾಧನೆ ಮಾಡಿದ್ದಾರೆ. 10 ವರ್ಷಗಳಿಂದ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ಸಿಗರು 50 ವರ್ಷ ಏನು ಮಾಡಿದ್ದಾರೆ? ಗರೀಬಿ ಹಠಾವೋ, 3ಜಿ, 4ಜಿ, ಭೂಮಿಯೊಳಗೆ, ಆಕಾಶದಲ್ಲಿ ಎಲ್ಲಕಡೆ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿಯವರು ದೇಶ ಕಾಯುವ ಕಾವಲುಗಾರನಾಗಿ ಕೆಲಸ ಮಾಡಿದ್ದಾರೆ. ಅದರಿಂದಾಗಿ ನಾವು ರಾಜ್ಯದ 28 ಕ್ಕೆ 28 ಕ್ಷೇತ್ರದಲ್ಲೂ ಗೆಲುವು ಸಾಧಿಸಲು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಪಕ್ಷದ ಸ್ಟಾರ್ ಕ್ಯಾಂಪೇನರ್ ಸುಮಲತಾ ಅಂಬರೀಷ್‌ ಆಗಿದ್ದಾರೆ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವಾಗ ದಿನಾಂಕ ಗೊತ್ತುಪಡಿಸುತ್ತಾರೋ ಅಂದು ಸುಮಲತಾ ಮಂಡ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ, ಕೇವಲ ಮಂಡ್ಯ ಮಾತ್ರವಲ್ಲದೆ, ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಶುದ್ಧ ಮನಸ್ಸಿನಿಂದ ಪ್ರಚಾರ ಮಾಡಲಿದ್ದಾರೆ. ಜೊತೆಗೆ ಮೋದಿಯವರ ಸಮಾವೇಶದಲ್ಲೂ ವೇದಿಕೆ ಮೇಲೆ ಇರಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖಂಡರಾದ ಸಿ.ಎಸ್.ಪುಟ್ಟರಾಜು, ಪ್ರತಾಪಸಿಂಹ, ಮೈ.ವಿ.ರವಿಶಂಕರ್, ಡಾ.ಎನ್.ಎಸ್.ಇಂದ್ರೇಶ್, ವಿದ್ಯಾನಾಗೇಂದ್ರ, ರೂಪ, ಎಂ.ಎಸ್.ರಘುನಂದನ್, ಬಿ.ಆರ್.ರಾಮಚಂದ್ರ, ಮುನಿರಾಜು, ವಿವೇಕ್, ಪ.ನಾ.ಸುರೇಶ್, ಅಶೋಕ್‌ಕುಮಾರ್, ಪ್ರಸನ್ನಕುಮಾರ್, ಚಾಮರಾಜು, ಕೆರಗೋಡು ಮಹೇಶ ಇದ್ದರು.

Continue Reading

Hassan

ಹೋಮ್ ಓಟಿಂಗ್ ಕಾರ್ಯ ನಿರ್ವಹಿಸುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಡಿಸಿ ಸಿ. ಸತ್ಯಭಾಮ ಕಟ್ಟುನಿಟ್ಟಿನ ಸೂಚನೆ

Published

on

ಹಾಸನ: ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ ವೃದ್ಧರು, ಅಂಗವಿಕಲರು, ಅಂಧರುಗಳ ಮತದಾರರ ಮನೆಗಳಿಗೆ ಹೋಗಿ ಡಿ ಅರ್ಜಿಗಳನ್ನು ವಿತರಿಸಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ಅಧಿಕಾರಿಗಳು ಎಚ್ಚರದಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಅಪರ ಜಿಲ್ಲಾಧಿಕಾರಿ ಶಾಂತಲಾ ಸಲಹೆ ನೀಡಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯಲ್ಲಿ ಹೋಮ್ ಓಟಿಂಗ್ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ೮೫ ವರ್ಷ ಮೇಲ್ಪಟ್ಟ (ಂಗಿSಅ) ಮತ್ತು ದಿವ್ಯಾಂಗ (ಂಗಿPಆ) ಮತದಾರರಿಗೆ ನಮೂನೆ ೧೨ಡಿ ಅರ್ಜಿಗಳನ್ನು ವಿತರಿಸಿ, ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲು ಇಚ್ಚಿಸಿದ ಮತದಾರರಿಗೆ ಅವರುಗಳ ವಾಸ ಸ್ಥಳಕ್ಕೆ ಮತಗಟ್ಟೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಚೆ ಮತ ಪತ್ರ ಮೂಲಕ ಮತದಾನ ಮಾಡಿಸುವ ವಿಧಾನವನ್ನು ಊome voಣiಟಿg ಎಂದು ಕರೆಯಲಾಗುವುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ೦೮ ವಿಧಾನಸಭಾ ಕ್ಷೇತ್ರಗಳಿದ್ದು, ಈ ಎಲ್ಲಾ ಕ್ಷೇತ್ರಗಳಿಂದ ೮೫ಕ್ಕಿಂತ ಹೆಚ್ಚು ವಯಸ್ಸು ಆಗಿರುವವರು ೧೫,೦೯೨ ದಿವ್ಯಾಂಗ ೧೮,೭೭೬ ಓಟು ಸೇರಿ ೩೩,೮೬೮ ಮತದಾರರಿಗೆ ೧೨ ಡಿ ಅರ್ಜಿಗಳನ್ನು ವಿತರಿಸಲಾಗಿರುತ್ತದೆ. ಎರಡು ವರ್ಗದ ಮತದಾರರ ಪೈಕಿ ೮೫ ವರ್ಷ ಮೇಲ್ಪಟ್ಟ ೨೬೩೫ ಮತ್ತು ದಿವ್ಯಾಂಗ ೧೩೭೩ ಸೇರಿ ಒಟ್ಟು ೪೦೦೯ ಮತದಾರರು ಅಂಚೆ ಮತ ಪತ್ರ ಮೂಲಕ ಮತದಾನ ಮಾಡಲು ಇಚ್ಚಿಸಿರುವುದರಿಂದ ಇವರುಗಳಿಗೆ ಅಂಚೆ ಮತ ಪತ್ರ ನೀಡಿ ಮತದಾನ ಮಾಡಿಸುವ ಕುರಿತು ವಿಧಾನದಂತೆ ಮತಗಟ್ಟೆ ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಅಂಚೆ ಮತಪತ್ರ ಮತದಾರರ ಸಂಖ್ಯೆ ಮತ್ತು ಸೆಕ್ಟರ್ ಆಧಾರದ ಮೇಲೆ ಮಾರ್ಗ ನಕ್ಷೆಗಳನ್ನು ಸಿದ್ಧಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ಮೊದಲೇ ನಿಗಧಿ ಪಡಿಸುವುದು. ಮತಗಟ್ಟೆಗಳಿಗೆ ಭೇಟಿ ನೀಡುವ ದಿನಾಂಕ ಮತ್ತು ಸಮಯವನ್ನು ನಿಗಧಿಪಡಿಸಿರುವ ಅನುಮೋದಿತ ಸೆಕ್ಟರ್ ಮಾರ್ಗ ನಕ್ಷೆಯನ್ನು ಅಭ್ಯರ್ಥಿಗಳೊಂದಿಗೆ ಹಂಚಿಕೊಳ್ಳಬೇಕು. ಮತಗಟ್ಟೆಗೆ ತೆರಳುವ ತಂಡದ ಜೊತೆ ಒಬ್ಬರೂ ಪಿ.ಆರ್.ಓ. ಪಿಓ, ಒಬ್ಬರು ಮೈಕ್ರೋ ಅಬ್ಸರ್ವರ್, ಓರ್ವ ಪೊಲೀಸ್ ಸಿಬ್ಬಂದಿ, ಒಬ್ಬ ವಿಡಿಯೋ ಗ್ರಾಫರ್ ಇರುತ್ತಾರೆ. ಮತದಾರರಿಂದ ಮತದಾನದ ಪ್ರಕ್ರಿಯೆಯನ್ನು ಮೇಲೆ ನೀಡಿರುವ ಸೂಚನೆಗಳಂತೆ ಹಾಗೂ ಭಾರತೀಯ ಚುನಾವಣಾ ಆಯೋಗದ ಮಾರ್ಗ ಸೂಚಿಗಳಂತೆ ಕಟ್ಟು ನಿಟ್ಟಾಗಿ ನಿರ್ವಹಿಸಲು ಸೂಚಿಸಿದೆ ಎಂದು ಹೇಳಿದರು.

Continue Reading

Trending

error: Content is protected !!