Connect with us

Mysore

ನಂಜನಗೂಡು ತಾಲ್ಲೂಕಿನ ನಗಲೆ೯ ಗ್ರಾಮಸ್ಧರು ಶ್ರೀನಿವಾಸ್ ಪ್ರಸಾದ್ ರವರಿಗೆ ಮತ್ತು ಕೆ.ಶಿವರಾಂಗೆ ನುಡಿ ನಮನ

Published

on

ನಂಜನಗೂಡು: ಮೇ.26

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಮತ್ತು ಕೆ.ಶಿವರಾಂ ರವರ ನುಡಿ ನಮನ ಕಾರ್ಯಕ್ರಮವನ್ನು ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದಿಂದ ಆಯೋಜನೆ ಮಾಡಲಾಗಿತ್ತು.
ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಮತ್ತು ಐಎಎಸ್ ಅಧಿಕಾರಿ ಹಾಗೂ ನಟ ದಿವಂಗತ ಕೆ.ಶಿವರಾಂ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಿ ಪುಷ್ಪ ನಮನ ಸಲ್ಲಿಸಿ, ಗ್ರಾಮಸ್ಥರು ನುಡಿ ನಮನ ಸಲ್ಲಿಸಿದರು.
ಬಳಿಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ. ವಿಜಯಕುಮಾರ್ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ರವರು ಹೋರಾಟದ ಮೂಲಕವೇ ರಾಜಕಾರಣಕ್ಕೆ ಬಂದರು. ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಹರಿಕಾರ, ಚಿಂತಕ, ಸಾಮಾಜಿಕ ಸುಧಾರಕ ಎಂದರೆ ತಪ್ಪಾಗಲಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದರು. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳುತ್ತಿದ್ದರು. ಹೇಳಿದ ಕೆಲಸವನ್ನು ಚಾಚು ತಪ್ಪದೇ ಮಾಡುತ್ತಿದ್ದರು. ತಳ ಸಮುದಾಯಕ್ಕೆ ಮೊದಲ ಆದ್ಯತೆ ನೀಡಿ ಪ್ರತಿ ಸಮುದಾಯಕ್ಕೂ ಭವನ ನಿರ್ಮಾಣ ಮಾಡಲು ಸ್ಥಳವಕಾಶ ಮಾಡಿಕೊಟ್ಟು ನಿವೇಶನಗಳನ್ನು ನೀಡಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ಅವರ ಅನುಯಾಯಿಯಾಗಿ ಆದರ್ಶವನ್ನು ರೂಪಿಸಿಕೊಂಡಿದ್ದರು. ಅವರು ನಮ್ಮೊಟ್ಟಿಗೆ ಇಲ್ಲದಿದ್ದರೂ ಅವರು ಬದುಕಿದ ಬದುಕು ಇನ್ನು ಜೀವಂತವಾಗಿದೆ ಎಂದು ಸ್ಮರಿಸಿದ್ದಾರೆ.
ಗುತ್ತಿಗೆದಾರ ಮಹದೇವಸ್ವಾಮಿ ಮಾತನಾಡಿ, ಶೋಷಿತರ ಪರ ಧ್ವನಿ ಎತ್ತಿ ನ್ಯಾಯ ನೀಡುತ್ತಿದ್ದರು. ಬಡವರು ಮತ್ತು ಸಾಮಾನ್ಯರಿಗೂ ಗೌರವವನ್ನು ನೀಡುತ್ತಿದ್ದರು. ನಮ್ಮ ಸಮಾಜದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಕೆ. ಶಿವರಾಂ ಅವರ ಕೊಡುಗೆ ಅಪಾರವಾಗಿದೆ ಇಬ್ಬರು ನಾಯಕರು ಕೂಡ ನಮ್ಮಲ್ಲಿ ಜೀವಂತವಾಗಿ ಉಳಿದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮನು, ಧರ್ಮೇಂದ್ರ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್,
ಗುತ್ತಿಗೆದಾರ ಮಹದೇವಸ್ವಾಮಿ, ಯುವ ಮುಖಂಡರಾದ ಗುರುಪಾದ ಸ್ವಾಮಿ, ಪ್ರಜ್ವಲ್, ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಮುಖಂಡರಾದ ಸ್ವಾಮಿ, ಗೌರಿಶಂಕರ್, ಕೆಂಪರಾಜು, ಅಂಬೇಡ್ಕರ್ ಸಂಘದ ಅಧ್ಯಕ್ಷ ಪವನ್ ಕುಮಾರ್ ಮಾಜಿ ಗ್ರಾಪಂ ಅಧ್ಯಕ್ಷ ಇಸ್ಮಾಯಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಂಜನಗೂಡು ಮಹದೇವಸ್ವಾಮಿ ಪಟೇಲ್.

Continue Reading
Click to comment

Leave a Reply

Your email address will not be published. Required fields are marked *

Mysore

ಬ್ಯಾಳಾರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನಾಚರಣೆ

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗುತ್ತದೆ ಇದನ್ನು ತಡೆಗಟ್ಟಲು ಸಂಘಟನೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.

ನಂಜನಗೂಡು ತಾಲೂಕಿನ ಬ್ಯಾಳಾರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇವರ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ದಲಿತರ ಬೀದಿಗಳಲ್ಲಿ ಹಬ್ಬ ಹರಿ ದಿನಗಳು, ಜಾತ್ರೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಕೋಮುವಾದ ಮನೆ ಮನಗಳಿಗೆ ಹೋಗುತ್ತಿದೆ. ಬಾಬಾ ಸಾಹೇಬರು ಹೇಳಿರುವ ಹಾಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ವೈಚಾರಿಕ ಮನೋಭಾವನೆಯನ್ನು ಬೆಳೆಸಬೇಕು. ಆದರೆ ಮೂಢನಂಬಿಕೆ ಕಡೆ ನಾವು ಸಾಗುತ್ತಿದ್ದೇವೆ ಎಂದರು.

ಅಂಬೇಡ್ಕರ್ ಅವರಿಗೆ ನಾವು ದ್ರೋಹ ಮಾಡುತ್ತಿದ್ದೇವೆ. ನಾವು ಇಂದು ಬದುಕುತ್ತಿರುವ ಹೈಟೆಕ್ ಜೀವನ ಅಂಬೇಡ್ಕರ್ ಅವರ ಶ್ರಮ ಮತ್ತು ಅವರ ಮಕ್ಕಳ ಸಮಾಧಿಗಳ ಮೇಲೆ ನಾವು ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದೇವೆ ಹೊರತು ನಮ್ಮ ಶ್ರಮದಿಂದಲ್ಲ. ಅಂಬೇಡ್ಕರ್ ರವರ ಋಣದಲ್ಲಿ ಪ್ರತಿಯೊಂದು ಸಮಾಜವು ಬದುಕುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರು ಶೋಷಿತರಿಗೆ ಉದ್ಯೋಗ, ಶಿಕ್ಷಣ ಗುಣಮಟ್ಟ ಸುಧಾರಣೆ ಕಂಡಿಲ್ಲ. ಈ ದೇಶದ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೂರ್ತಿಗಳಿಂದ ಅಂಬೇಡ್ಕರ್ ಅವರು ಜೀವಂತವಾಗಿದ್ದಾರೆ. ನಮಗೆ ಅವರು ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.

ನಂತರ ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ. ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿಕೊಳ್ಳಬೇಕಿದೆ.ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು.


ಇನ್ನೂ ದಸಂಸ ಅಂಬೇಡ್ಕರ್ ವಾದ ಸಂಘಟನೆಗೆ ನೊಂದಣಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಉಪವಿಭಾಗೀಯ ಸಂಚಾಲಕ ಸಿದ್ದರಾಜು, ಕ್ರಾಂತಿಕಾರಿ ಹೋರಾಟಗಾರ ಮೂಡಹಳ್ಳಿ ಪ್ರಸಾದ್, ಮಲ್ಲಹಳ್ಳಿ ಆದರ್ಶ್, ಬಸವಟ್ಟಿಗೆ ಕೃಷ್ಣಮೂರ್ತಿ, ಹೂವಯ್ಯ, ಸುರೇಶ್, ಬ್ಯಾಳಾರು ಆನಂದ್, ಅನಿಲ್, ನಾರಾಯಣ ಸ್ವಾಮಿ, ಬಸವರಾಜು, ಶಾಂತಮ್ಮ, ಕಾವೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Continue Reading

Mysore

ಅದ್ದೂರಿಯಾಗಿ ಜರುಗಿದ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ

Published

on

ನಂಜನಗೂಡು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಡಿ. 4 ರಂದು ಗುರುವಾರ ನಡೆದ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶನಿವಾರ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವವು ಸಂಜೆ ಕಪಿಲಾ ನದಿಯಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಿತು.

ಬಣ್ಣ ಬಣ್ಣದ ಹೂವು ಹಾಗೂ ಚಿನ್ನ ವಜ್ರಾಭರಣಗಳಿಂದ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಕಪಿಲಾ ನದಿ ತೀರದ ಸ್ನಾನ ಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ತೇಲುವ ದೇವಾಲಯದ ಮಾದರಿಯಲ್ಲಿ ನಿರ್ಮಿಸಲಾದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ತೆಪ್ಪೋತ್ಸವ ನಡೆಸಲಾಯಿತು.

ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಚಲಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿ ಭಕ್ತರ ಮನಸೂರೆಗೊಂಡಿತು. ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಗಳು ದೇವಾಲಯದ ಪ್ರಧಾನ ಆಗಮಿಕರಾದ ಶ್ರೀ ನಾಗಚಂದ್ರ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ನಡೆಯಿತು.

ನಂಜನಗೂಡು ನಗರವು ಸೇರಿದಂತೆ ವಿವಿಧ ಕಡೆಯಿಂದ ಬಂದ ಸಾವಿರಾರು ಭಕ್ತರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ತಮ್ಮ ಭಕ್ತಿ ನಮನ ಸಲ್ಲಿಸಿದರು.

ನಂತರ ತಪೋತ್ಸವದಿಂದ ಹೊರ ತಂದ ಶ್ರೀ ಅವರ ಉತ್ಸವ ಮೂರ್ತಿಯನ್ನು ಸಣ್ಣ ರಥದಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸೇರಿದಂತೆ ದೇವಾಲಯದ ಅರ್ಚಕ ವೃಂದದವರು ಉಪಸ್ಥಿತರಿದ್ದರು.

Continue Reading

Mysore

ಕಳಲೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್

Published

on

ವರದಿ: ಮಹದೇವಸ್ವಾಮಿ ಪಟೇಲ್

ನಂಜನಗೂಡು:  ತಾಲೂಕಿನ ಕಳಲೆ ಗ್ರಾಮದಲ್ಲಿ 75 ಲಕ್ಷ  ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಇಂದು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ.

ನಂತರ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಾಗ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಿದ್ದರು.

ಈ ಗ್ರಾಮದಲ್ಲಿ ಹತ್ತು ಸಾವಿರ ಜನರು ವಾಸ ಇದ್ದೀರಾ. ಮೂಲಸೌಕರ್ಗಳನ್ನು ಆಗಬೇಕಾಗಿರುವುದನ್ನು ತಿಳಿಸಿದ್ದೀರಾ , ಹಂತ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ ಸಹಕಾರ ಕೊಡಿ ಅಂತ ತಿಳಿಸಿದರು.

ಗ್ರಾಮದಲ್ಲಿ ಗರಡಿ ಮನೆ ಪೂಜೆಯಾಗಿ ಕೆಲಸ ಪ್ರಾರಂಭ ಆಗಿಲ್ಲ ಅಂತ ತಿಳಿಸಿದ್ದೀರಾ, ಈಗಾಗಲೇ ಅಧ್ಯಕ್ಷರು ನನ್ನ ಬಳಿ ಮಾತನಾಡಿ ಗ್ರಾಮದ ಯಜಮಾನರು ಒಪ್ಪುತ್ತಿಲ್ಲ ಆದ್ದರಿಂದ ಲೇಟಾಗಿದೆ ಅಂತ ತಿಳಿಸಿದ್ರು, ಅಧ್ಯಕ್ಷರು ಒಂದು ವಾರ ಗಡುವು ಸಮಯ ತೆಗೆದುಕೊಂಡಿದ್ದಾರೆ. ಒಂದು ವಾರ ನಂತರ ಕೆಲಸ ಪ್ರಾರಂಭವಾಗಲಿಲ್ಲ ಅಂದರೆ ನನಗೆ ಫೋನ್ ಮಾಡಿ ಎಂದು ಕ್ರೀಡಾ ಪೈಲ್ವಾನ್ಗಳಿಗೆ ಕಿವಿ ಮಾತು ಹೇಳಿದರು.

ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿ, ಮತ್ತು ರಸ್ತೆ ಅಭಿವೃದ್ಧಿಗಳು, ವೈದ್ಯರ ಸಮಸ್ಯೆ , ಇತರೆ ಮೂಲ ಸೌಕರ್ಸೌಯ ಲಭ್ಯಗಳ ಬಗ್ಗೆ ತಿಳಿಸಿದ್ದೀರಾ. ಇವೆಲ್ಲ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಸಹಕಾರ ಸಮಯ ಕೊಡಿ ಎಂದರು.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ 50 ಕೋಟಿ ನೀಡುತ್ತಾರೆ. ನಿಮ್ಮ ಗ್ರಾಮಕ್ಕೂ ಅನುದಾನ ನೀಡಿ ಹಂತ ಹಂತವಾಗಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕಳಲೆ ಗ್ರಾಮ ಒಂದು ಇತಿಹಾಸ ಇದೆ. ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನಕ್ಕಿಂತ ಮುಂಚೆ ಕಳಲೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ದೇವಸ್ಥಾನ ಸ್ಥಾಪನೆಯಾಗಿದ್ದು, ಕಡಲೆಪುರಿ, ಮತ್ತು ಹಳೆಯ ಹೆಸರು ವೇಣುಪುರಿ ಎಂದು ಕರೆಯುತ್ತಿದ್ದರು. ಈ ಗ್ರಾಮದಲ್ಲಿ 19 ಸಮುದಾಯದ ಜನಾಂಗ ಸಮರಸ್ಯದಿಂದ ಇದ್ದಾರೆ. ಈ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಎರಡು ಕೋಟಿ ಅನುದಾನವನ್ನು ನೀಡಿದ್ದರೂ. ಅದರಲ್ಲಿ ಹಲವು ರಸ್ತೆಗಳು ಪೂರ್ಣಗೊಂಡಿವೆ. ಇನ್ನು ಅಭಿವೃದ್ಧಿ ಆಗುವ ಕೆಲಸಗಳನ್ನು ಮುಂದಿನ ತಿಂಗಳು ಜನವರಿ 26ರಂದು ಪಂಚಾಯಿತಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿ ಕೆಲವು ಅಭಿವೃದ್ಧಿಗಳಿಗೆ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಅಂತ ಭರವಸೆ ನೀಡಿದರು.

 

ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮಾತನಾಡಿ, ಈ ದಿವಸ ನಮ್ಮ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಾರ್ಯಾಲಯ ಉದ್ಘಾಟನೆ ಆಗಿರೋದು ತುಂಬಾ ಸಂತೋಷಕರ ವಿಷಯವಾಗಿದೆ. ಹಿಂದೆ ಕಟ್ಟಡ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪಕ್ಷದ ಯುವ ಶಾಸಕರ ಬಳಿ ಹೇಳಿದ ಮೇಲೆ 75 ಲಕ್ಷ ಅನುದಾನ ನೀಡಿದರು. ಈ ಕೆಲಸ ಆರೇ ತಿಂಗಳಲ್ಲಿ ಪೂರ್ಣಗೊಳಿಸಿ ಶಾಸಕ ಉದ್ಘಾಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಕೆಲಸಗಳಿಗೂ ಸ್ಪಂದಿಸುತ್ತಾರೆ ಸಹಕಾರ ನೀಡಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಡಿ. ಮಹೇಶ್ , ಉಪಾಧ್ಯಕ್ಷರಾದ ಹರೀಶ್ , ಇಒ ಜೆರಾಲ್ಡ್ ರಾಜೇಶ್ , ಸದಸ್ಯರಾದ ಮಹೇಶ್, ಶಿವಣ್ಣ , ಸುಮಾ, ಲಕ್ಷ್ಮೀ , ಶಿವಕುಮಾರಿ, ರಾಜಮ್ಮ , ವಿಶಾಲಾಕ್ಷಮ್ಮ , ಶಾಂತಮ್ಮ , ರತ್ನಮ್ಮ, ಗೀತಾ, ಶಿವರಾಮ್, ಶಿವಕುಮಾರ್, ಮುಖಂಡರಾದ ಎನ್ ಮಹದೇವು, ಬೈರ ನಾಯಕ, ಕೆ. ಡಿ ಮಂಜು ರವರು, ದೊರೆಸ್ವಾಮಿ ನಾಯಕ , ಮಂಜುನಾಥ್, ಪ್ರದೀಪ್, ರಾಚ ನಾಯಕ, ಕಳಲೆ ರಾಜೇಶ್, ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

Continue Reading

Trending

error: Content is protected !!