Mandya
ಮನಸ್ಸಿಗೆ ಸಂಸ್ಕಾರ ದೊರೆತರೆ ಬದುಕು ಅರ್ಥಪೂರ್ಣ-ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
ಮಂಡ್ಯ: ಚಂಚಲವಾದ ಮನಸ್ಸಿಗೆ ಸಂಸ್ಕಾರ ಕೊಡಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಮನಸ್ಸಿಗೆ ಸಂಸ್ಕಾರ ಸಿಕ್ಕಿದರೆ ಬದುಕನ್ನು ಅರ್ಥವತ್ತಾಗಿ ಕಟ್ಟಿಕೊಳ್ಳುವಂತಹ ಅವಕಾಶ ದೊರಕುತ್ತದೆ ಎಂದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಗುರುಗಳನ್ನು ಸ್ಮರಿಸುವಂತಹ ಇಂತಹ ಕಾರ್ಯಕ್ರಮಗಳು ಮತ್ತೆ ಮತ್ತೆ ಆಗಬೇಕು. ಮಹಾತ್ಮರನ್ನು ಸ್ಮರಿಸುವುದರಿಂದ,ಹೂವನ್ನು ನೋಡುವುದರಿಂದ,ದೇವಮಂದಿರದಲ್ಲಿ ಧ್ಯಾನ ಮಾಡುವುದರಿಂದ ಮನಸ್ಸಿಗೆ ಲಾಭವಾಗುತ್ತದೆ. ಮನಸ್ಸಿಗೆ ಏಕಾಗ್ರತೆ ಬರುತ್ತದೆ.ಇಂತಹ ಯಾವುದೇ ಸಂದರ್ಭಗಳಲ್ಲಿ ಭಾಗವಹಿಸಿದರೆ ಲಾಭವಾಗುತ್ತದೆ ಎಂದರು.
ಕಾರು ಚೆನ್ನಾಗಿದ್ದರೆ ಎಲ್ಲಿಗೆ ಬೇಕಾದರೂ ಹೋಗಬಹುದು.ನಮ್ಮ ದೇಹದಲ್ಲಿರುವ ಮನಸ್ಸನ್ನು ಚೆನ್ನಾಗಿ ಇಟ್ಟುಕೊಂಡರೆ ಅದು ಜಗತ್ತನ್ನು ತೋರಿಸುತ್ತದೆ. ಅದೇ ಮನಸ್ಸು ನಮ್ಮನ್ನು ದೇವರ ಕಡೆ ಕರೆದೊಯ್ಯುತ್ತದೆ ಎಂದರು.
ಜೇನುನೊಣದಂತೆ ಕೆಲಸ ಮಾಡಿ
ನೊಣ ಕಂಡಕಂಡಲ್ಲಿ ಕೂರುತ್ತದೆ. ಅದನ್ನು ಕಂಡಾಗ ಅಸಹ್ಯವಾಗುತ್ತದೆ. ಜೇನುನೊಣ ಒಳ್ಳೆ ಪರಿಮಳವಿರುವ ಮಕರಂದ ಇರುವ ಹೂವಿನ ಮೇಲೆ ಕೂರುತ್ತದೆ. ಜೇನನ್ನು ಕಟ್ಟುತ್ತದೆ. ಅದನ್ನು ನಾವು ಪಡೆಯುತ್ತೇವೆ. ಜೇನುನೊಣದಂತಹ ಮನಸ್ಸನ್ನು ನಾವು ಕಟ್ಟಿಕೊಂಡರೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶವಾಗುತ್ತದೆ. ಬದುಕಿನ ಉದ್ದೇಶ ಮುಕ್ತಿ ಪಡೆಯುವುದಾಗಿದೆ. ಮನಸ್ಸಿಗೆ ಸತ್ಸಂಗ,ಸಜ್ಜನರ ಒಳ್ಳೆಯ ಸ್ಮರಣೆ ಆದರೆ ಆ ದಿಕ್ಕಿನಲ್ಲಿ ಸಾಗಬಹುದು. ಅದೇ ಮನಸ್ಸನ್ನು ಜಗತ್ತಿನಿಂದ ಬಿಡುಗಡೆ ಮಾಡುವ ಶಕ್ತಿ ಕೊಡುತ್ತದೆ.ಆ ಶಕ್ತಿ ಬರಬೇಕು ಎಂದರೆ ಸತ್ಸಂಗದಲ್ಲಿ ಭಾಗವಹಿಸಿ ಮನಸ್ಸನ್ನು ಹಗುರ,ತಿಳಿ, ಮಾಡಿಕೊಂಡು ಆನಂದ ತುಂಬಿಕೊಳ್ಳಬೇಕು ಎಂಬ ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಒಂದು ಚೌಕಟ್ಟು ರೀತಿ ನೀತಿ ಇರಬೇಕು. ಇದು ವಿಖ್ಯಾತವಾಗಿ ಬೆಳೆಯಬೇಕು ಎಂದರೆ ಸಂಘಕ್ಕೆ ತೂಕವಿರುವ ಒಂದಷ್ಟು ಜನರನ್ನು ಸೇರಿಸಿಕೊಂಡು,ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಂಘವನ್ನು ಕಟ್ಟಬೇಕು ಎಂದು ಕಿವಿ ಮಾತು ಹೇಳಿದರು.
ಸಮಾಜ ಸೇವಕ ಹಾಗೂ ಕ್ರೀಡಾಪಟು ಡಾ.ರೇವಣ್ಣ, ಕಾರ್ಯಪಾಲಕ ಇಂಜಿನಿಯರ್ ಜಯಂತ್, ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅವರನ್ನು ಸನ್ಮಾನಿಸಲಾಯಿತು. ಸಚಿವರು ಹಾಗೂ ಹಲವು ಜನಪ್ರತಿನಿಧಿಗಳು ಸೇರಿದಂತೆ ಒಕ್ಕಲಿಗರ ಸಂಘದ ನಿರ್ದೇಶಕರು ಸಮಾರಂಭಕ್ಕೆ ಗೈರು ಹಾಜರಾಗಿದ್ದುದು ಸಂಘಟಕರಲ್ಲಿ ಬೇಸರ ಮೂಡಿಸಿತು.
ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಗೌಡಯ್ಯನದೊಡ್ಡಿ ಹಾಜರಿದ್ದರು.
ಬಾಕ್ಸ್
ನುಡಿದಂತೆ ನಡೆಯುವ ಸರ್ಕಾರ-ರವಿಕುಮಾರ್
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗೌಡ ಗಣಿಗ ಮಾತನಾಡಿ ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಒಕ್ಕಲಿಗರನ್ನು ಒಂದೇ ವೇದಿಕೆ ಅಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಇಂತಹ ಪ್ರತಿಷ್ಠಿತ ಒಕ್ಕಲಿಗರ ಭವನಕ್ಕೆ ಮಂಡ್ಯದಲ್ಲಿ ಸ್ಥಳ ಇಲ್ಲ. ಭವನಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜಾಗ ಕೊಡಿಸುವ ಕೆಲಸ ಮಾಡೋಣ ಎಂದರು. ಮಂಡ್ಯ ನೂತನ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಶೀಘ್ರದಲ್ಲೇ ಭೂಮಿ ಪೂಜೆ ನಡೆಸಲಾಗುವುದು. ಅದೇ ರೀತಿ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿ
ದೆ. ಕೆರೆಯಂಗಳದಲ್ಲಿ ನಿರ್ಮಾಣವಾಗಿರುವ ೮೦೦ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದರು.
Mandya
ಸಹಕಾರ ಸಂಘದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು: ಕೆ.ಎಂ.ಉದಯ್
ಮದ್ದೂರು: ಸಹಕಾರ ಸಂಘದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರ ಸವಲತ್ತುಗಳು ತಲುಪುವಂತೆ ನೋಡಿಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳನ್ನು ನಗರದ ಪ್ರವಾಸಿ ಮಂದಿರದಲ್ಲ ಅಭಿನಂದಿಸಿ ಮಾತನಾಡಿದರು.

ರಾಜ್ಯ ಸರ್ಕಾರ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಗ್ರಾಮದ ಜನರ ನಂಬಿಕೆ ವಿಶ್ವಾಸಕ್ಕೆ ಕಳಂಕ ಬಾರದಂತೆ ಸಂಘದ ಮೂಲಕ ಸದಸ್ಯರಿಗೆ ಸಿಗಬಹುದಾದ ಎಲ್ಲಾ ಬಗೆಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪಾರದರ್ಶಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಸಂಘದ ಷೇರುದಾರರು ರಾಜಕೀಯ ಬೆರೆಸದೆ ಒಗ್ಗಟ್ಟಿನಿಂದ 11 ಮಂದಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸದ ಸಂಗತಿಯಾಗಿದ್ದು, ನೂತನ ಆಡಳಿತ ಮಂಡಳಿ ಸಂಘದ ಮತ್ತಷ್ಟು ಉನ್ನತಿಕರಣಕ್ಕೆ ಶ್ರಮಿಸಬೇಕೆಂದರು.

ಸಂಘದ ನೂತನ ನಿರ್ದೇಶಕರಾದ ಪಿ.ಸಂದರ್ಶ್, ರಜತ್, ಬಿ.ಪಿ.ಶಂಭೂಗೌಡ, ಸಿ.ಸಿದ್ದಯ್ಯ, ಪುಟ್ಟಸ್ವಾಮಿ, ಮಮತ, ಮಂಗಳಗೌರಮ್ಮ, ರಾಮು, ನರಸಿಂಹಮೂತರ್ಿ, ಬಿ.ಎಲ್.ಕೃಷ್ಣಪ್ಪ, ಎಸ್.ಪ್ರಸನ್ನ ಅವರುಗಳನ್ನು ಶಾಸಕ ಕೆ.ಎಂ.ಉದಯ್ ಅಭಿನಂದಿಸಿದರು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಸುಧಾಕರ್, ಪುಟ್ಟೇಗೌಡ, ಶರತ್, ಮಧು, ಶಿವರಾಂ, ಸುಧಾಕರ್, ಶ್ರೀನಿವಾಸ್, ಶೀತಲ್, ಪ್ರಭುಲಿಂಗ ಮತ್ತಿತರರು ಇದ್ದರು.
Mandya
ಅಂದಾಜು 30 ಲಕ್ಷ ರೂ. ವೆಚ್ಚದ ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದ ಕೆ.ಎಂ.ಉದಯ್
ಮದ್ದೂರು: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಜತೆಗೆ ಹಳೆಯ ವಿದ್ಯಾರ್ಥಿಗಳ, ದಾನಿಗಳು, ಸಂಘ, ಸಂಸ್ಥೆಗಳು ಹಾಗೂ ಕಾರ್ಖಾನೆಗಳ ಕೈ ಜೋಡಿಸಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಾಯಿ ಎಕ್ಸ್ ಪೊರ್ಟ್ ಪ್ರೈ.ಲಿ ವತಿಯಿಂದ ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕ್ಷೇತ್ರದಲ್ಲಿರುವ ಕಾರ್ಖಾನೆಗಳು ತಮ್ಮ ಆರ್ಥಿಕ ವಹಿವಾಟಿನಲ್ಲಿ ಶೇ.2 ರಷ್ಟು (ಸಿಎಸ್ಆರ್ ನಿಧಿ) ಹಣವನ್ನು ಕಡ್ಡಾಯವಾಗಿ ವಿವಿಧ ಸಾಮಾಜಿಕ ಅಭಿವೃದ್ಧಿಗೆ ಕಾರ್ಯಗಳಿಗೆ ಬಳಕೆ ಮಾಡಬೇಕು.
ಈ ನಿಟ್ಟಿನಲ್ಲಿ ಸಿಎಸ್ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಲು ಮೊದಲ ಪ್ರಾಶಸ್ತ್ಯ ನೀಡಲಾಗಿದೆ ಎಂದರು.
ಈಗಾಗಲೇ ಸರ್ಕಾರದ ವಿಶೇಷ ಅನುದಾನದ ಜತೆಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದಲೂ ಶಾಲಾ ಕಟ್ಟಡಗಳ ನಿರ್ಮಾಣ ಮತ್ತು ಪ್ರತಿ ವರ್ಷವೂ ಕ್ಷೇತ್ರದ ಶಾಲಾ ಮಕ್ಕಳ ಶುಲ್ಕ, ಶಾಲಾ ಬ್ಯಾಗ್ ಹಾಗೂ ಪರಿಕರಗಳ ವಿತರಣೆ ಮಾಡಲಾಗುತ್ತಿದೆ ಎಂದರು.

ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳನ್ನು ಆಗಾಧವಾದ ಪ್ರತಿಭೆಯಿದ್ದು, ಇವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಿದರೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿದ್ದಾರೆ ಎಂದರು.
ಬಿಇಒ ಧನಂಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು ಎಸ್ಡಿಎಂಸಿ ಅಧ್ಯಕ್ಷರಾದ ಕುಮಾರ್, ಲೋಕೇಶ್, ಪ್ರಾಂಶುಪಾಲ ಸೋಮಶೆಟ್ಟಿ, ಮುಖ್ಯ ಶಿಕ್ಷಕರಾದ ಆಶಾ, ನರಸಿಂಹಯ್ಯ, ಮುಖಂಡರಾದ ಮಂಜು, ಯೋಗೇಶ್, ಮಧು, ತಿಮ್ಮಯ್ಯ ಸೇರಿದಂತೆ ಇತರರಿದ್ದರು.
Mandya
ನಮ್ಮ ಸರ್ಕಾರ ಎಲ್ಲಾ ವರ್ಗದವರಿಗೂ ಗ್ಯಾರಂಟಿ ಸೌಲಭ್ಯ ವಿತರಿಸುತ್ತಿದೆ : ಶಾಸಕ ರಮೇಶ್ ಬಂಡಿಸಿದ್ದೇಗೌಡ
ಶ್ರೀರಂಗಪಟ್ಟಣ : ನಮ್ಮ ಕಾಂಗ್ರೆಸ್ ಸರ್ಕಾರ ಎಲ್ಲಾ ವರ್ಗದವರಿಗೂ ಪಕ್ಷ-ಭೇಧ ಮರೆತು ಗ್ಯಾರಂಟಿ ಸೌಲಭ್ಯಗಳನ್ನು ವಿತರಿಸುತ್ತಿರುವುದಾಗಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ಅವರು ತಾಲೂಕಿನ ಚೆನ್ನಹಳ್ಳಿ ಹಾಗೂ ಬಿದರಹಳ್ಳಿ ಗ್ರಾಮಗಳಲ್ಲಿ ಬಹುಕೋಟಿ ವೆಚ್ಚದ ಸೇತುವೆ, ಸಂಪರ್ಕನಾಲೆ ಅಭಿವೃದ್ದಿ ಹಾಗೂ ದೇವಾಲಯದ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗಗಳಿಗೂ, ಎಲ್ಲಾ ಪಕ್ಷಗಳ ಫಲಾನುಭವಿಗಳಿಗೂ ತಲುಪುತ್ತಿವೆ. ಬೇರೆ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ಇತರೆ ಪಕ್ಷಗಳ ಫಲಾನುಭವಿಗಳು ಪಡೆದುಕೊಳ್ಳುತ್ತಿಲ್ಲವಾ ಎಂದು ಪ್ರಶ್ನಿಸಿದರು.
ಹಾಗೆಯೇ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದು, ಹಂತ ಹಂತವಾಗಿ ಪ್ರತೀ ಹಳ್ಳಿಗಳ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದ್ದು, ಸಾಮಾನ್ಯ ಜನತೆಗೂ ಸ್ಪಂಧಿಸುವ ಸರ್ಕಾರವಾಗಿದೆ. ನಾನು ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಪಕ್ಷ ಭೇಧ ಮರೆತು ಮುಂದಾಗುವುದಾಗಿ ಅವರು ಭರವಸೆ ನೀಡಿದರು.
ಈ ವೇಳೆ ಆಯಾಯ ಗ್ರಾಮಗಳ ಮುಖಂಡರುಗಳು, ಹಾಲಿ, ಮಾಜಿ ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
-
Hassan23 hours agoಬಡ ಮಹಿಳೆ ಮುಂದಿಟ್ಟುಕೊಂಡು ಹನಿಟ್ರ್ಯಾಪ್: ಖಾಕಿ ಬಲೆಗೆ ಬಿದ್ದ ಖತಾರ್ನಾಕ್ ಗ್ಯಾಂಗ್
-
Manglore20 hours agoಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ,ಡಾ. ಸಿ.ಎ.ರಾಘವೇಂದ್ರ ರಾವ್ ನಿಧನ
-
Mysore23 hours agoಆರ್ಎಸ್ಎಸ್, ಬಿಜೆಪಿ ಹೀಯಾಳಿಸುವುದು ಮೂರ್ಖತನ
-
Kodagu2 hours agoಪೊಲೀಸರಿಗೆ ಹೆದರಿ ಜೀವ ಕಳೆದುಕೊಂಡ ಬೈಕ್ ಸವಾರ ಪತಿ
-
Mysore15 hours agoಬಂಡರಸಮ್ಮ ಹಬ್ಬದ ಬಂಡಿ ಉತ್ಸವದ ವೇಳೆ ಬಂಡಿಗೆ ಸಿಕ್ಕಿ ಸಾ*ವನ್ನಪ್ಪಿದ ಯುವಕ
-
Mysore17 hours agoಸಫಾರಿ ಪುನಾರಂಭಕ್ಕೆ ಒಪ್ಪಿಗೆ| ಇಂದಿನಿಂದಲೇ ಸಫಾರಿ ಪುನಾರಂಭ: ಸಚಿವ ಈಶ್ವರ್ ಖಂಡ್ರೆ
-
State19 hours agoBJP ಗೌರವದಿಂದ ನಡೆದುಕೊಳ್ಳಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್
-
Kodagu20 hours agoಕೊಡವ ಮಕ್ಕಡ ಕೂಟಕ್ಕೆ 13ನೇ ವಾರ್ಷಿಕೋತ್ಸವದ ಸಂಭ್ರಮ
