Connect with us

Hassan

ಫೆ.೧೭ ರಂದು ಹಾಸನದ ಕಲಾಭವನದಲ್ಲಿ ಸಂಭ್ರಮ ಕಾರ್ಯಕ್ರಮ

Published

on

ಹಾಸನ: ನಮ್ಮ ಹಾಸನ್ ಚಾರಿಟೇಬಲ್ ಟ್ರಸ್ಟ್ ನ ೩ನೆ ವಾರ್ಷಿಕೋತ್ಸವದ ಅಂಗವಾಗಿ ಫೆಬ್ರವರಿ ೧೭ ರಂದು ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಸಂಭ್ರಮ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಹರೀಶ್ ಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರದಂದು ಮಾತಾಡಿದ ಅವರು, ಕಾರ್ಯಕ್ರಮದಲ್ಲಿ ವಿಶೇಷ ಚೇತನರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದು ಇಡೀ ಒಟ್ಟಾರೆ ಕಾರ್ಯಕ್ರಮದ ವಿಶೇಷತೆಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಕಲಾವಿದರು ಆದ ಸೈಯದ್ ಸಲಹುದ್ದೀನ್ ಪಾಷಾ ಆಗಮಿಸುತ್ತಿದ್ದು, ಜೊತೆಗೆ ಸಮಾಜ ಸೇವಕ ಜನಸ್ನೇಹಿ ನಿರಾಶ್ರಿತರಾಶ್ರಮದ ಜನಸ್ನೇಹಿ ಯೋಗೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಜನರಿಗೆ ಒಂದೊಳ್ಳೆ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ಉದ್ದೇಶದಿಂದ, ವಿಶೇಷ ಚೇತನರಿಂದ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸುಮಾರು ೨೫ ಕ್ಕೂ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಫೆ.೧೭ ರಂದು ಶನಿವಾರ ಮಧ್ಯಾಹ್ನ ೩ ಗಂಟೆಗೆ ಜರುಗಲಿದೆ ಎಂದು ತಿಳಿಸಿದರು. ವಿಶೇಷ ಆಹ್ವಾನಿತರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು, ಅಂತರಾಷ್ಟ್ರೀಯ ಖ್ಯಾತಿವೆತ್ತ ನೃತ್ಯ ಕಲಾವಿಧರು, “ಎ” ಗ್ರೇಡ್ ಭರತನಾಟ್ಯ ಕಲಾವಿದರು ಹಾಗೂ ದೂರದರ್ಶನ ಕೇಂದ್ರನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಯ್ಯದ್ ಸಲ್ಲಾವುದ್ದಿನ್ ಪಾಷ ಮತ್ತು ಜನಸ್ನೇಹಿ ಚಾರಿಟಬಲ್ ಟ್ರಸ್ಟ್ ನ ಜನಸ್ನೇಹಿ ಯೋಗೀಶ್ ಆಗಮಿಸಲಿ ದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ ಸತ್ಯಭಾಮ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸೇರಿದಂತೆ ಇತರಿಗೆ ಆಹ್ವಾನ ನೀಡಲಿದ್ದೇವೆ ಎಂದು ತಿಳಿಸಿದರು. ನಮ್ಮ ಹಾಸನ ಚಾರಿಟ ಬಲ್ ಟ್ರಸ್ಟ್ ಕಳೆದ ಮೂರು ಚರ್ಷ ಗಳಿಂದ ೨೦ ಜನರಿಗೆ ಶಸ್ತ್ರಚಿಕಿತ್ಸೆಗೆ ಸಹಾಯ, ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿ, ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ರಕ್ತದಾನ, ಹಾಗೂ ಶಿಬಿರ, ಕೋರೊನ ಸಂದರ್ಭದಲ್ಲಿ ಫುಡ್ ಕಿಟ್ ವಿತರಣೆ, ವಿದ್ಯಾರ್ಥಿ ಗಳಿಗೆ ಕಾರ್ಯಾಗಾರ, ವಿಶೇಷ ಚೇತನರಿಗೆ ಅವಶ್ಯಕ ವಸ್ತುಗಳ ವಿತರಣೆ, ಸೇರಿದಂತೆ ಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಹೆಚ್ಚಿನ ಸಂಖ್ಯೆಯ ಜಿಲ್ಲೆಯ ಜನರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು

ಪತ್ರಿಕಾಗೋಷ್ಟಿಯಲ್ಲಿ ವಿಜಯ್, ನವೀನ್, ರಮೇಶ್, ಮಂಜು, ಕಾರ್ತಿಕ್ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Hassan

ಸತ್ಯಮಂಗಲದಲ್ಲಿ ನಮ್ಮ ಕ್ಲಿನಿಕ್ ಗೆ ಶಾಸಕ ಸ್ವರೂಪ್ ಪ್ರಕಾಶ್ ಚಾಲನೆ

Published

on

ಹಾಸನ: ಹಾಸನ ನಗರದ ಹೋರ ವಲಯದ ಸತ್ಯ ಮಂಗಲ ಬಡಾವಣೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ನಮ್ಮ ಕ್ಲಿನಿಕ್ ಉದ್ಘಾಟಿಸಿದರು.

ಅದಕ್ಕೂ ಮುನ್ನ ಕ್ಲಿನಿಕ್ ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕ್ಲಿನಿಕ್ ಗೆ ಚಾಲನೆ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಸಭೆ ನಗರಪಾಲಿಕೆಯಾಗಿ ಬೆಳೆಯುತ್ತಿವ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಸನಕ್ಕೆ ತರಲಾಗುತ್ತಿದೆ ಎಂದರು.

ಅದರಂತೆ ಸತ್ಯಮಂಗಲಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕೆಲಸಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಅಲ್ಲದೆ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಬಹಳ ಮುಖ್ಯ ಇದನ್ನು ಮನಗಂಡು ಅವರ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಬಡಾವಣೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು .

ಈ ವೇಳೆ ನಗರಸಭೆ ಅಧ್ಯಕ್ಷರು ಸದಸ್ಯರುಗಳು, ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಗ್ರಾಮದ ಮುಖಂಡರು, ಕಾರ್ಯಕರ್ತರು, ಯುವಕರು,ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು…

Continue Reading

Hassan

ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದಂದು ಮುಸ್ಲಿಂ ಕಾಜಿಯವರಿಂದ ಕುರಾನ್ ಪಟಿಸದಂತೆ ಮನವಿ

Published

on

ಬೇಲೂರು : ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಯಾವುದೇ ರೀತಿಯ ಹಿಂದು ಧರ್ಮಿಯರಿಗೆ ಅವರ ಭಾವನೆಗೆ ದಕ್ಕೆ ಬಾರದಂತೆ ಮುಸ್ಲಿಂ ಕಾಜಿಯವರಿಂದ ಕುರಾನ್ ಪಟ್ಟಣವನ್ನು ನಡೆಸದಂತೆ ಹಿಂದೂ ಸಮಾಜದ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಪೊಲೀಸ್ ಇಲಾಖೆಗೆ ಮತ್ತು ದೇಗುಲದ ಕಾರ್ಯನಿರ್ವಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮುಸ್ಲಿಂ ಕಾಜಿಯವರಿಗೆ ದೇವಾಲಯದ ವತಿಯಿಂದ ಸಂಪ್ರದಾಯದಂತೆ ನೀಡುವ ಕಾಣಿಕೆಯನ್ನು ನೀಡಲಿ ಮತ್ತು ಅವರು ಹಿಂದೆ ನಡೆಯುತ್ತಿದ್ದ ಸಂಪ್ರದಾಯದಂತೆ ದೇವರಿಗೆ ಒಂದನೇ ತಿಳಿಸಿ ಹೋಗಲಿ ಅದನ್ನು ಬಿಟ್ಟು ಕುರಾನ್ ಪಟ್ಟಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಹಿಂದೂ ಮುಖಂಡರಾದ ರಘು ಸಕಲೇಶಪುರ ಒತ್ತಾಯಿಸಿದ್ದಾರೆ ಕುರಾನ್ ಪಟ್ಟಣಕ್ಕೆ ಅವಕಾಶ ನೀಡಿದ್ದಾರೆ ಇದಕ್ಕೆ ಸಂಪೂರ್ಣ ಹೊಣೆಯನ್ನ ಜಿಲ್ಲಾ ಆಡಳಿತ ಹಾಗೂ ತಾಲೂಕು ಆಡಳಿತ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ

Continue Reading

Hassan

ಹೊಸಕೋಟೆ ಸಹಕಾರ ಸಂಘಕ್ಕೆ 12ಜನ ನೂತನ ನಿರ್ದೇಶಕರ ಆಯ್ಕೆ

Published

on

ವರದಿ ಸತೀಶ್ ಚಿಕ್ಕಕಣಗಾಲು
ಆಲೂರು: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದು 12ಜನ ನೂತನ ನಿರ್ದೇಶಕರುಗಳು ಆಯ್ಕೆಯಾದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 12ಜನ ನಿರ್ದೇಶಕ ಸದಸ್ಯ ಬಲ ಹೊಂದಿದ್ದು ನೂತನ ನಿರ್ದೇಶಕ 23 ಜನ ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಚುನಾವಣೆ ಮೂಲಕ ನೂತನ ನಿರ್ದೇಶಕರನ್ನ ಆಯ್ಕೆ ಮಾಡಲಾಯಿತು.

ಸಾಮಾನ್ಯ ಕ್ಷೇತ್ರದಿಂದ ಅವಿನಾಶ್, ವಿ.ಎಸ್ ಆನಂದ್, ಚಂದ್ರು, ಕುಬೇರಪ್ಪ, ಯೋಗೇಶ್, ಮಹಿಳಾ ಕ್ಷೇತ್ರದಿಂದ ಮಂಜುಳಾ, ಗಿರಿಜಾ, ಹಿಂದುಳಿದ ವರ್ಗ ‘ಎ’ ನಿಂದ ರವಿ ಕುಮಾರ್, ಹಿಂದುಳಿದ ವರ್ಗ ‘ಬಿ‌’ ನಿಂದ ಮೋಹನ್ ಕುಮಾರ್, ಪರಿಶಿಷ್ಟ ಜಾತಿಯಿಂದ ಪುಟ್ಟಸ್ವಾಮಿ ಆಯ್ಕೆಯಾದರೆ ಪರಿಶಿಷ್ಟ ಪಂಗಡದಿಂದ ಶಾಂತಪ್ಪ ನಾಯಕ ಅವಿರೋಧವಾಗಿ ಆಯ್ಕೆಯಾದರು, ಇನ್ನೂ ಸಾಲಗಾರರಲ್ಲದ ಕ್ಷೇತ್ರದಿಂದ ಕಿಶೋರ್ ಕುಮಾರ್ ಆಯ್ಕೆಯಾದರು 2030ರವರೆಗೆ ಚುನಾಯಿತರು ನಿರ್ದೇಶಕರಾಗಿ ಮುಂದುವರೆಯುತ್ತಾರೆ ಎಂದು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕುಮಾ‌ರ್ ತಿಳಿಸಿದರು.

ಚುನಾವಣೆ ಮೂಲಕ ನೂತನ ನಿರ್ದೇಶಕರುಗಳ ಆಯ್ಕೆ ಘೋಷಣೆ ಹೊರಬಿದ್ದ ಸಂದರ್ಭದಲ್ಲಿ ಹಾಸನ ಜಿಲ್ಲಾ ಹೆಚ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್, ಬೆಳಮೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ಎಸ್ ನಟರಾಜ್, ಪಾಳ್ಯ ಸೊಸೈಟಿ ನಿರ್ದೇಶಕ ಕಟ್ಟೆಗದ್ದೆ ನಾಗರಾಜ್, ಬಿಜೆಪಿ ಮುಖಂಡ ಕೆ.ಕೆ ಪ್ರಸಾದ್, ರುದ್ರೇಶ್ ಕಾಡ್ಲೂರು, ನಂದನ್, ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿವೇಕ್ ವೈದ್ಯನಾಥ್ ಸೇರಿದಂತೆ ಮುಂತಾದವರು ನೂತನ ನಿರ್ದೇಶಕರುಗಳನ್ನು ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪೋಟೋ ಕ್ಯಾಪ್ಶನ್: ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾಯಿತನಾದ ನೂತನ ನಿರ್ದೇಶಕರನ್ನ ಹಾಸನ ಜಿಲ್ಲಾ ಹೆಚ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಲ್ಲಿ ಜಗದೀಶ್, ಆರ್.ಎಸ್ ನಟರಾಜ್ ಕೆ.ಕೆ ಪ್ರಸಾದ್ ಸೇರಿದಂತೆ ಇತರರು ಅಭಿನಂದಿಸಿದರು.

Continue Reading

Trending

error: Content is protected !!