Connect with us

Mandya

ಜಿಲ್ಲೆಯಲ್ಲಿ ರೈತ ಉತ್ಪಾದಕಾ ಸಂಘಗಳು ಹೆಚ್ಚಾಗಬೇಕು: ಡಾ.ಕುಮಾರ

Published

on

ಮಂಡ್ಯ : ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಬೆಲೆ ಕಟ್ಟಿ ಮಾರಾಟ ಮಾಡುವ ರೀತಿ ಬದಲಾವಣೆ ಮಾಡಿಕೊಳ್ಳಲು ರೈತ ಉತ್ಪಾದಕ ಸಂಘಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

ಅವರು ಜಿಲ್ಲಾಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ವ್ಯಾಪಾರ ಮತ್ತು ವ್ಯಾವಹಾರಿ ಅಭಿವೃದ್ಧಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ, ಕೃಷಿಯಲ್ಲಿ ತನ್ನದೇ ಆದ ವಿಶೇಷ ಮಹತ್ವವವನ್ನು ಹೊಂದಿದೆ. ರೈತರು ಆರ್ಥಿಕವಾಗಿ ಸದೃಢರಾಗಲು ರೈತರು ಬೆಳೆದ ಬೆಳೆಗಳ ಮೌಲ್ಯವರ್ಧನೆಯಾಗಬೇಕು‌ ರೈತ ಉತ್ಪದಕಾ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರೈತರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು ಎಂದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಬೇಕೆಂದರೆ, ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬೇಕು., ರೈತರು ನಿಜವಾಗಿಯೂ ಸ್ವಾವಲಂಬಿಗಳಾಗಬೇಕೆಂದರೆ ರೈತ ಉತ್ಪಾದಕರ ಸಂಸ್ಥೆಗಳ ಅವಶ್ಯಕತೆ ಇದೆ, ಇದರಿಂದ ರೈತರು ಸಹ ಕಂಪನಿಗಳು ಮಾಲೀಕರಾಗಬಹುದು.

ಸರ್ಕಾರದ ಪಿ.ಎಂ.ಎಫ್. ಇ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು, ರೈತರು ಬೆಳೆದ ಬೆಳೆಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಗ್ರಾಹಕರ ಗಮನ ಸೆಳೆಯುವ ರೀತಿ ಬ್ರ್ಯಾಡಿಂಗ್ ಆಗಬೇಕು. ಇದರಿಂದ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯ ಮತ್ತು ರಾಷ್ಟ್ರದಲ್ಲಿ ಮಾರುಕೊಟ್ಟೆ ದೊರೆಯುತ್ತದೆ ಎಂದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ , ಇದು ಜಿಲ್ಲೆಯಲ್ಲಿ ಕೃಷಿಯ ಕುರಿತು ನಡೆಸುತ್ತಿರುವ ನನ್ನ ಮೊದಲ ಕಾರ್ಯಕ್ರಮ, ದೇಶದ ಜಿ.ಡಿ.ಪಿ.ಗೆ ಸೇವಾ ವಲಯದ ಕೊಡುಗೆ ಅತಿ ಹೆಚ್ಚು, ಅದರಲ್ಲಿ ಅತಿ ಹೆಚ್ಚು ಜನ ಕೃಷಿಯ ವಲಯದ ಮೇಲೆ ಅವಲಂಬಿತರಾಗಿದ್ದಾರೆ, ಶ್ರಮ ಪಟ್ಟು ದುಡಿಯುತ್ತಿರುವ ರೈತರಿಗಿಂತ ಹೆಚ್ಚು ಕೃಷಿಗೆ ಸಂಬಂಧಿಸಿದ ಕಂಪನಿಗಳು ಆದಾಯವನ್ನು ಗಳಿಸುತ್ತಿವೆ, ರೈತರ ಆದಾಯ ಹೆಚ್ಚಬೇಕು ಎಂದರೆ ಇಂತಹಾ ಕಾರ್ಯಾಗಾರಗಳು ಮುಖ್ಯ ಮುಕ್ತ ಮನಸ್ಸಿನಿಂದ ವಿಚಾರಗಳು ವಿನಿಮಯ ಮಾಡಿಕೊಂಡು ಅದನ್ನು ಕಾರ್ಯ ಪ್ರವೃತ್ತಿಯಲ್ಲಿ ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ , ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ, ರೈತ ಉತ್ಪಾದಕ ಸಂಸ್ಥೆಗಳು ಮುಖ್ಯಸ್ಥರುಗಳಾದ ಕರಸವಾಡಿ ಮಹದೇವ್, ಹರೀಶ್, ಹನುಮಂತೇಗೌಡ, ಸುಬ್ರಹ್ಮಣ್ಯ, ಮಾಯಣ್ಣ, ಚಿಕ್ಕೇಗೌಡ, ಜಗದೀಶ್ ಬಾಬು ಮತ್ತು ಇನ್ನಿತರ ಉಪಸ್ಥಿತರಿದ್ದರು.

Continue Reading

Mandya

ಅಮಾಯಕರನ್ನು ವಂಚಿಸುತ್ತಿರುವವರ ವಿರುದ್ದ ಕ್ರಮಕ್ಕೆ ಮ.ರ.ವೇ ಒತ್ತಾಯ

Published

on

ಶ್ರೀರಂಗಪಟ್ಟಣ :ಅನಕ್ಷರಸ್ಥ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಪಡೆದು ವಂಚಿಸಿದ್ದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆAಟ್ (ಬಿಸಿ) ಯೋಗಾನಂದ ನನ್ನು ಅಮಾನತು ಗೊಳಿಸುವಂತೆ ಒತ್ತಾಯಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಮಾಡಿದರು.

ವೇದಿಕೆ ಅಧ್ಯಕ್ಷ ಶಂಕರ್‌ಬಾಬು ನೇತೃತ್ವದಲ್ಲಿ ಪದಾಧಿಕಾರಿಗಳು ಬಾಬುರಾಯನಕೊಪ್ಪಲಿನ ಬ್ಯಾಂಕ್ ಆಫ್ ಬರೋಡ ಶಾಖೆಗೆ ತೆರಳಿ ಶಾಖಾ ವ್ಯವಸ್ಥಾಪಕ ವೆಂಕಟೇಶ್‌ಬಾಬು ಅವರನ್ನ ಭೇಟಿ ಮಾಡಿ, ಸರ್ಕಾರ ವೃದ್ಧರು, ವಿಕಲಚೇತನರು ಹಾಗೂ ವಿಧವಾವೇತನ ಸೇರಿದಂತೆ ಇತರೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡುತ್ತಿದೆ. ಆದರೆ ಬ್ಯಾಂಕಿನ ಏಜೆಂಟರುಗಳು ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ತಾಲೂಕಿನಾಂದ್ಯಂತ ವಂಚಸುತ್ತಿದ್ದಾರೆ. ತಾಲೂಕಿನ ಚಂದಗಾಲು ಗ್ರಾಮದ ೭೬ವರ್ಷ ವಯಸ್ಸಿನ ವೃದ್ಧ ಅನಕ್ಷರಸ್ಥ ರಂಗಣ್ಣ ಅವರಿಗೆ ಮೇಳಾಪುರ ಗ್ರಾಮದ ಬ್ಯಾಂಕ್ ಬರೋಡ ಬ್ಯಾಂಕ್‌ನ ಬಿಸಿನೆಸ್ ಕರೆಸ್‌ಪಾಂಡೆಂಟ್ ಯೋಗಾನಂದ ಎಂಬ ವ್ಯಕ್ತಿ ೨೪೦೦-೦೦ ಹಣ ಡ್ರಾ ಮಾಡಿ, ಕೇವಲ ೧೨೦೦-೦೦ ರು. ಹಣ ನೀಡಿ ವಂಚಿಸಿರುವುದು ಸಾಕ್ಷ್ತ ಸಮೇತ ಸಾಬೀತಾಗಿದೆ ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ವೇಳ ವ್ಯವಸ್ಥಾಪಕ ವೆಂಕಟೇಶ್‌ಬಾಬು ನೋಡೋಣ, ಕಾಲಾವಕಾಶ ಕೊಡಿ, ಕ್ರಮ ವಹಿಸೋಣ ಎಂಬ ಹಾರಿಕೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಸಿಟ್ಟಿಗೆದ್ದ ಸಂಘಟನೆ ಮುಖಂಡರು, ನೆಲದ ಮೇಲೆ ಕುಳಿತು ವ್ಯವಸ್ಥಾಪಕರ ವಿರುದ್ದ ಅಸಮಧಾನ ಹೊರಹಾಕಿದರು. ವಂಚಿಸಿರುವ ವ್ಯಕ್ತಿಯೇ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದರೂ ಸಹ ವ್ಯವಸ್ಥಾಪಕರಿಂದ ಈ ರೀತಿಯ ಉಡಾಫೆ ಉತ್ತರ ಕೇಳಿಬರುತ್ತಿದೆ ಹೊರತಾಗಿ, ನ್ಯಾಯಯುತವಾಗಿ ಬಡವರ ಪರವಾದ ಒಂದೇ ಒಂದು ಮಾತು ಹೇಳದಿರುವುದು ಮಂಡ್ಯ ರಕ್ಷಣಾ ವೇದಿಕೆ ಖಂಡಿಸುತ್ತದೆ.
ಗ್ರಾಮದಲ್ಲಿನ ಬ್ಯಾಂಕ್ ರೈತರು, ಬಡವರು ಹಾಗೂ ವಿದ್ಯಾರ್ಥಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನ ನೀಡಿಲ್ಲ. ಈ ವರೆವಿಗೆ ಮುದ್ರ ಲೋನ್, ರೈತರಿಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ಕೇಳಿದರೆ ಇವರ ಬಳಿ ಯಾವುದೇ ಉತ್ತರಿವಿಲ್ಲ. ಈ ಬ್ಯಾಂಕ್ ಉಳ್ಳವರ ಪರವಾಗಿದೇ ವಿನಃ ಬಡವರ ಪರವಾಗಿಲ್ಲ. ಹಾಗಾಗಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಬೇಕು. ಮುಂದೆ ಇದೇ ರೀತಿ ಏಜಂಟರ್‌ಗಳಿಂದ ವಂಚನೆಗಳಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ, ಬ್ಯಾಂಕ್‌ನ ಸಿಬ್ಬಂದಿಗಳನ್ನೇ ನೇರ ಹೊಣೆ ಮಾಡಿ, ಬ್ಯಾಂಕ್‌ಗೆ ಮುತ್ತಿಗೆ ಹಾಕಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

Continue Reading

Mandya

ಎಂ.ಕೆ.ಸೋಮಶೇಖರ್‌ಗೆ ರಾಜ್ಯಮಟ್ಟದ ಛಾಯಗ್ರಾಹಕ ಹಾಗೂ ಕಲಾವಿದ ಪ್ರಶಸ್ತಿ ಪ್ರಧಾನ

Published

on

ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆ ವತಿಯಂದ ದಿಪುನಿತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿತ್ತು . ಈ ಸಮಾರಂಭದಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಮಾಕವಳ್ಳಿ ಗ್ರಾಮದ ಯುವ ಛಾಯಗ್ರಾಹಕ ಹಾಗೂ ಕಲಾವಿದರು ಆಗಿರುವಂತಹ ಸೋಮಶೇಖರ್ ಎಂ.ಕೆ. ರವರಿಗೆ ಯವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಸಿ.ಕೆ. ಸಂಧ್ಯಾ ಜಿಲ್ಲಾ ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್. ಸಹಾಯಕ ನಿರ್ಧೇಶಕರು ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ ಅಲ್ಪಸಂಖ್ಯಾತರ ಸಮಾಜ ಕಲ್ಯಣ ಎಲಾಖೆ, ಹಾಗೂ ನಟರು ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ನಟಿ ಇನ್ನು ಅನೇಕ ಗಣ್ಯರುಗಳು ಇದ್ದರು..

ವರದಿ ಶಂಭು‌ ಕಿಕ್ಕೇರಿ, ಕೃಷ್ಣರಾಜಪೇಟೆ

Continue Reading

Mandya

ಜಿಲ್ಲಾಧಿಕಾರಿಗಳಿಂದ ಮೇಲುಕೋಟೆ ವೈರಮುಡಿ ಉತ್ಸವದ ಸಿದ್ದತೆ ಪರಿಶೀಲನೆ

Published

on

ಮಂಡ್ಯ : ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೇಲುಕೋಟೆಯಲ್ಲಿ ನಡೆಯಲಿರುವ ವೈರಮುಡಿ ಉತ್ಸವದ ಸಿದ್ಧತೆ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದರು.

ಸಂಚಾರ ವ್ಯವಸ್ಥೆ ಪಾರ್ಕಿಂಗ್, ಭಕ್ತಾಧಿಗಳಿಗೆ ಮಾಡಿಕೊಂಡಿರುವ ಸಿದ್ಧತೆ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು

Continue Reading

Trending

error: Content is protected !!