Connect with us

Hassan

ಚುನಾಯುತ ಪ್ರತಿನಿಧಿಗಳ ವೈಫಲ್ಯದಿಂದ ಕಾಡಾನೆ ಇತರೆ ಸಮಸ್ಯೆ ಬಗೆಹರಿಯುತ್ತಿಲ್ಲ ಹೆಚ್.ಎಂ. ವಿಶ್ವನಾಥ್ ಬೇಸರ

Published

on

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಸೇರಿದಂತೆ ಇತರೆ ನಾನಾ ಸಮಸ್ಯೆಗಳಿದ್ದರೂ ಇದುವರೆಗೂ ಚುನಾಯಿತ ಪ್ರತಿನಿಧಿಗಳಿಂದ ಯಾವ ಸಮಸ್ಯೆಯು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆ ಇವರ ವೈಫಲ್ಯವೇ ಕಾರಣ ಎಂದು ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಬೇಸರವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ೨೦೨೨ ರ ನವೆಂಬರ್ ನಲ್ಲಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಆನೆ ದಾಳಿಗೆ ಮನು ಎನ್ನುವ ರೈತನು ಸಾವನಪ್ಪಿದ್ದು, ಆಗ ಸಂಘರ್ಷದಲ್ಲಿ ಆಹೋರಾತ್ರಿ ಕಾಡಿನಲ್ಲಿ ಶವ ಇಟ್ಟುಕೊಂಡು ಹೋರಾಟ ಮಾಡಲಾಯಿತು. ಒಬ್ಬ ರೈತನಾಗಿ ನಾನು ಹೋಗಿದ್ದು, ಮೃತನ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಉಸ್ತುವಾರಿ ಮಂತ್ರಿಗಳು ಕೂಡ ಸ್ಥಳಕ್ಕೆ ಬಂದು ಅನೇಕ ಭರವಸೆ ನೀಡಿದ ನಂತರ ಶವ ತೆರವು ಮಾಡಿಕೊಡಲಾಯಿತು. ನಂತರದಲ್ಲಿ ಮಹಿಳೆಯರು ಸೇರಿ ಜನರು ಮೂಡಿಗೆರೆ ಶಾಸಕರ ಮೇಲೆ ಜನರೇ ಹಲ್ಲೆ ಮಾಡಿ ಪ್ರತಿಭಟನೆ ಮಾಡಿದರು. ಕಾಫಿ ರೈತರು ಸೇರಿ ದಂಗೆ ಹೇಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದರು.

ಮೇನಕ ಗಾಂಧಿ ಅವರ ಮೆಸೆಜ್ ಆಧಾರದ ಮೇಲೆ ಆಡಳಿತ ವರ್ಗದ ಜನ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ನನ್ನ ಬಂದುಕವನ್ನು ಕಾನೂನು ಬಾಹಿರವಾಗಿ ಎರಡು ವರ್ಷಗಳ ಕಾಲ ಸಸ್ಪೆಂಡ್ ಮಾಡಿ ಪೊಲೀಸರು ವಶಪಡಿಸಿಕೊಂಡರು. ಇದರ ವಿರುದ್ಧ ಜನರು ಚಳುವಳಿ ಮಾಡಿದರು. ಆನೆ ದಾಳಿಯಲ್ಲಿ ಮನು ಸಾವು ೭೮ನೇ ಸಾವಾಗಿದೆ. ೨೦೨೪ರ ವರ್ಷದಲ್ಲೆ ಹೊಸ ೧೨ ಆನೆಗಳು ಮರಿ ಹಾಕಿದೆ. ೮೪ ಆನೆ ಇದ್ದುದು ಈಗ ೯೨ ಆನೆಗಳಾಗಿದೆ. ಈ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳ ಜೊತೆ ಮಾತನಾಡಿದರೇ ಮೌನ ಉತ್ತರ ಕೊಡುತ್ತಾರೆ ಎಂದು ದೂರಿದರು. ಕಾಡಾನೆ ಕುರಿತು ಇಲಾಖೆ ತಜ್ಞರು ಕೊಟ್ಟಂತಹ ವರದಿಯನ್ನು ಮೂಲೆಗೆ ಎಸೆಯಲಾಗಿದೆ. ನಾವು ಕೂಡ ಅನೇಕ ದೇಶದ ಮಾಧರಿಯನ್ನು ಕೊಟ್ಟಿದ್ದು, ಇನ್ನು ರಾಜಕಾರಣಿಗಳು ತಮ್ಮ ಮನಸ್ಸಿಗೆ ಬಂದಂತಹ ವರದಿ ಕೊಡುತ್ತಾರೆ. ಆನೆಗಳ ಸ್ಥಳಾಂತರ ಮತ್ತು ಆನೆ ಕಾರಿಡರ್ ಮಾಡುವುದು, ಆನೆಯ ದಾಮ ಮಾಡಿ, ಯಾವಾವ ಆನೆಗಳು ದಿಕ್ಕು ದೆಸೆ ಇಲ್ಲದೇ ಕಾಡು ಬಿಟ್ಟು ನಾಡಲ್ಲಿ ತಿರುಗಾಡುತ್ತಿವೆ ಅದನ್ನು ಶ್ರೀಲಂಕಾ ಮಾದರಿಯಲ್ಲಿ ಸರಕಾರವೆ ಸಾಕಲು ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ಆಗಿದ್ದರೂ ಗಮನ ಕೊಟ್ಟಿರುವುದಿಲ್ಲ. ರಾಜ್ಯ ಸರಕಾರಕ್ಕೆ ಅರಣ್ಯ ಇಲಾಖೆ ಒಂದು ವರದಿ ಕೊಡಲಾಗಿದ್ದು, ೪೦೦ ರಿಂದ ೫೦೦ ಕಿ.ಮಿ. ಅರಣ್ಯ ಮತ್ತು ಹಳ್ಳಿಗಳ ಹಂಚಲ್ಲಿ ರೈಲ್ವೆ ಬ್ಯಾರಿಕೇಡ್ ಹಾಕಬೇಕು. ಅದಕ್ಕೆ ಬೇಕಾಗಿರುವ ೫೦೦ ಕೋಟಿ ರೂಗಳನ್ನು ರಾಜ್ಯ ಸರಕಾರ ತಕ್ಷಣ ಬಿಡುಗಡೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಉದ್ದೇಶಪೂರ್ವಕವಾಗಿ ಸರಕಾರ ಸ್ಪಂದಿಸುತ್ತಿಲ್ಲ. ರಾಜಕಾರಣಿಗಳು ಗಮನ ಕೊಡುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಈ ಹಿಂದೆ ಕಡಾನೆ ಸೆರೆ ವೇಳೆ ಅರ್ಜುನನ ಸಾವು ತಿಳಿದಿದ್ದು, ಇದೊಂದು ಭಾವನಾತ್ಮಕವಾದ ಆನೆಯಾಗಿತ್ತು. ಒಂಬತ್ತು ಬಾರಿ ಅಂಬಾರಿ ಹೊತ್ತ ಆನೆಯಾಗಿದ್ದು, ಜನ ಮನಸ್ಸಿನಲ್ಲಿ ಪ್ರೀತಿಗಳಿಸಿತ್ತು. ಅದರ ಸಾವಿನ ಸಂದರ್ಭದಲ್ಲಿ ದುಃಖದ ಸಂಗತಿ ಎಂದರು. ಆನೆ ಯಾವ ರೀತಿ ಸಾವನಪ್ಪಿತು ಬಗ್ಗೆ ಚರ್ಚೆಯೆ ಇಲ್ಲ. ಯಾವುದೋ ಸಣ್ಣ ಪ್ರಕರಣ ಇಟ್ಟುಕೊಂಡು ಹಾಸನ ಜಿಲ್ಲೆಗೆ ನಾಲ್ಕು ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುತ್ತಾರೆ. ದೊಡ್ಡ ಪ್ರಕರಣದಲ್ಲಿ ಯಾವ ಕ್ರಮಕೈಗೊಳ್ಳಲೆ ಇಲ್ಲ ಎಂದು ದೂರಿದರು. ಕಳೆದ ವರ್ಷ ಕಿಶಾನ್ ಪಾಲ್ ಗುರ್ಜಲ್ ಎನ್ನುವ ಕೇಂದ್ರದ ಮಂತ್ರಿ ಹಾಸನ ಜಿಲ್ಲೆಗೆ ಉಸ್ತುವಾರಿ ವಹಿಸಿಕೊಂಡು ಬಿಜೆಪಿ ಸಂಘಟನೆಗಾಗಿ ಇಲ್ಲಿಗೆ ಬಂದಿದ್ದರು. ಆನೆ ದಾಳಿಗೆ ಕೃಷ್ಣೇಗೌಡ ಎನ್ನುವ ವ್ಯಕ್ತಿ ಸತ್ತಾಗ ಅವರ ಮನೆಗೆ ಸಚಿವರು ಹೋಗಿದ್ದು, ಇದಕ್ಕೆ ಪರಿಹಾರ ಏನು ಎಂದು ಕೇಳಿದ್ದು, ರೈಲ್ವೆ ಬ್ಯಾರಿಕೇಡ್ ಮತ್ತು ಸೋಲಾರು ಅಳವಡಿಕೆ ಮಾಡಲು ೬೦೦ ಕೋಟಿ ಎಂದು ಸಚಿವರಿಗೆ ತಿಳಿಸಲಾಗಿತ್ತು. ಕೇಂದ್ರ ಸರಕಾರದ ಜೊತೆ ಮಾತನಾಡಿದ್ದರೇ ಉಚಿತವಾಗಿ ನಾನು ಕೊಡಿಸುತ್ತಿದ್ದೇನು. ರಾಜ್ಯ ಸರಕಾರ ಏನು ಮಾತನಾಡಿಲ್ಲ. ಇಲ್ಲಿ ಪ್ರಧಾನಿ ಕೊಟ್ಟ ಜಿಲ್ಲೆಯಾಗಿದೆ ಎಂದಿದ್ದರು. ಮಾಜಿ ಪ್ರಧಾನಿ ಅವರೊಂದಿಗೆ ಈಗಿನ ಪ್ರಧಾನಿ ಜೊತೆ ನೇರ ಸಂಬಂಧವಿದ್ದರೂ ಏನು ಮಾತನಾಡುವುದಿಲ್ಲ. ಚುನಾಯುತ ಜನಪ್ರತಿನಿಧಿಗಳ ವೈಫಲ್ಯದಿಂದ ಇಲ್ಲಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಗಂಬೀರವಾಗಿ ಆರೋಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Hassan

ರಾಷ್ಟ್ರೀಯ ಹೆದ್ದಾರಿ -75ರಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಲತಾಕುಮಾರಿ ಆದೇಶ

Published

on

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕು ಬೆಂಗಳೂರು-ಮಂಗಳೂರು NH 75ರ 222+900ರಲ್ಲಿ ಮಂಜ್ರಾಬಾದ್ ಕೋಟೆಯ ಸಮೀಪ ದೋಣಿಗಲ್ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು ಪಕ್ಕದ ಭೂಮಾಲಿಕರುಗಳು ಕಾಮಗಾರಿಯನ್ನು ತಡೆದು ನಿಲ್ಲಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ಹಾಸನ ಬೈ ಪಾಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-75ರ ದೋಣಿಗಲ್ ವಿಭಾಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಫೆಬ್ರವರಿ .9 ರಿಂದ ಮಾರ್ಚ್ 7 ರವರೆಗೆ ಬೆಂಗಳೂರು-ಮಂಗಳೂರು NH-75ರ 222+900 ರಿಂದ 223+700 ದೋಣಿಗಾಲ್ ರಸ್ತೆಯಿಂದ ಕೆಸಗನಹಳ್ಳಿ ರಸ್ತೆವರೆಗೆ ಕಾಮಗಾರಿ ನಡೆಯಲಿದ್ದು ಸದರಿ ಕಾಮಗಾರಿ ನೆಡೆದಿದ್ದು, ಕಾಮಗಾರಿ ನಡೆಯುವ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ನಿಷೇಧಿತ ಪ್ರದೇಶ ಅವಧಿಯಲ್ಲಿ 5 ಜನರಿಗಿಂತ ಹೆಚ್ಚು ಗುಂಪಾಗಿ ಸೇರುವಂತ್ತಿಲ್ಲ, ಈ ಅವಧಿಯಲ್ಲಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತ್ತಿಲ್ಲ, ಯಾವುದೇ ರೀತಿಯ ಪ್ರಚಾರ ಸಾಮಾಗ್ರಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿ ಪ್ರಚಾರ ಮಾಡಲು ಅವಕಾಶವಿರುವುದಿಲ್ಲ. ಈ ಆದೇಶವು ಕಾಮಗಾರಿ ನಡೆಸುವ ಅಧಿಕಾರಿಗಳು/ಸಿಬ್ಬಂದಿಗಳು ಹೊರತುಪಡಿಸಿ ಇತರರು ಯಾರು ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸುವಂತ್ತಿಲ್ಲ ಹಾಗೂ ಮೇಲ್ಕಂಡ ನಿಬಂಧನೆಗಳನ್ನು ಉಲಂಘಿಸಿದಲ್ಲಿ ಸಂಭಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Continue Reading

Hassan

ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ–ವೇತನ, ಬಾಡಿಗೆ ಹೆಚ್ಚಳ: ಸರ್ಕಾರದ ವಿರುದ್ಧ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಅಸಮಾಧಾನ

Published

on

ಹಾಸನ: ನಿಗಮ–ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ, ವೇತನ ಹಾಗೂ ಬಾಡಿಗೆ ಹೆಚ್ಚಳ ಮಾಡುವ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಎಂಎಲ್‌ಸಿ ಡಾ. ಸೂರಜ್ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವುದು ಇಡೀ ರಾಜ್ಯದ ಜನರಿಗೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಹೇಳಿದರು. “ನಾವೇನು ವಿಶೇಷವಾಗಿ ಹೇಳಬೇಕಿಲ್ಲ. ಒಂದೆಡೆ ಗ್ಯಾರೆಂಟಿಗಳ ಹಾವಳಿ, ಮತ್ತೊಂದೆಡೆ ಅನುದಾನದ ಅಭಾವ ಎದುರಾಗಿದೆ” ಎಂದು ಟೀಕಿಸಿದರು.


ವಿರೋಧ ಪಕ್ಷದವರು ಮಾತ್ರವಲ್ಲ, ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಿಗೆ ಅನುದಾನ ಸಿಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಪಕ್ಷದ ಸಭೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅಳಲು ತೋಡಿಕೊಳ್ಳುತ್ತಿರುವುದು ರಾಜ್ಯದ ಆರ್ಥಿಕ ಸ್ಥಿತಿಯ ಪ್ರತಿಬಿಂಬವಾಗಿದೆ. ಈ ವಿಚಾರಗಳು ಈಗ ಬಹಿರಂಗವಾಗಿ ಚರ್ಚೆಯಾಗುತ್ತಿವೆ ಎಂದು ಹೇಳಿದರು.

“ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೋ ನೋಡಬೇಕಿದೆ. ಎಲ್ಲೂ ಶಾಶ್ವತವಾದ, ಸಾರ್ವಜನಿಕರಿಗೆ ನಿಜಕ್ಕೂ ಅನುಕೂಲವಾಗುವ ಹಾಗೂ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.


ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದರು. ಆದರೆ ಇಂದಿನ ಪರಿಸ್ಥಿತಿ ಮತ್ತು ಆಗಿನ ಪರಿಸ್ಥಿತಿಯನ್ನು ಹೋಲಿಸಿ ಚಿಂತನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
“ಈ ಗ್ಯಾರೆಂಟಿಗಳೆಲ್ಲಾ ಚುನಾವಣೆಗೆ ಮಾತ್ರ ಸೀಮಿತ. ಇದರಿಂದ ರಾಜ್ಯದ ಯಾರಿಗೂ ದೀರ್ಘಾವಧಿಯಲ್ಲಿ ಒಳ್ಳೆಯದಾಗುವುದಿಲ್ಲ” ಎಂದು ಡಾ. ಸೂರಜ್ ರೇವಣ್ಣ ಹೇಳಿದರು.

ವರಿಷ್ಠರ ತೀರ್ಮಾನವೇ ಅಂತಿಮ

ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾಜಿ ಶಾಸಕ ಪ್ರೀತಂಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅದರ ಬಗ್ಗೆ ನಮ್ಮ ಪಕ್ಷದ ಹಾಗೂ ಬಿಜೆಪಿ ಪಕ್ಷದ ವರಿಷ್ಠರು ಕುಳಿತು ತೀರ್ಮಾನ ಮಾಡುತ್ತಾರೆ. ನಮ್ಮ ಅಭಿಪ್ರಾಯದಲ್ಲಿ ಪಕ್ಷ ಸದೃಢವಾಗಿ ಸಾಗುತ್ತಿದೆ” ಎಂದರು.

ಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಹುತೇಕ ಚುನಾವಣೆಗಳಲ್ಲಿ ನಮ್ಮ ಪಕ್ಷ ಮೇಲುಗೈ ಸಾಧಿಸಿದ್ದು, ಯಾವುದೇ ಒಳ–ಹೊರ ಬೆಂಬಲವಿಲ್ಲದೆ ಜಯ ಸಾಧಿಸಿ ಉತ್ತಮ ಸ್ಥಿತಿಯಲ್ಲಿ ಇದೆ ಎಂದು ಹೇಳಿದರು. ಈ ಯಶಸ್ಸನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

 

“ಅವರು ಈ ರೀತಿಯ ಹೇಳಿಕೆಗಳನ್ನು ಹೊಸದಾಗಿ ಕೊಡುತ್ತಿಲ್ಲ. ಹಿಂದೆಯೂ ನೀಡಿದ್ದಾರೆ, ಈಗಲೂ ಕೊಡುತ್ತಿದ್ದಾರೆ, ಮುಂದೆಯೂ ಕೊಡುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ” ಎಂದರು.

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಅದರ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಆದರೆ ಬಿಜೆಪಿ ಪಕ್ಷದಲ್ಲಿಯೇ ಕೆಲವರು ಈ ಪವಿತ್ರ ಮೈತ್ರಿಗೆ ತೊಂದರೆ ನೀಡುವ ದುರುದ್ದೇಶ ಹೊಂದಿದ್ದಾರೆ. ಆದರೆ ಅವರು ಅದರಲ್ಲಿ ಸಫಲರಾಗುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕುರಿತು ನಮ್ಮ ಪಕ್ಷದ ವರಿಷ್ಠರು, ಶಾಸಕರು ಹಾಗೂ ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ಮುಂದಿನ ಪ್ರತಿಕ್ರಿಯೆ ನೀಡಲಾಗುವುದು ಎಂದು ಡಾ. ಸೂರಜ್ ರೇವಣ್ಣ ಹೇಳಿದರು.

Continue Reading

Hassan

MCE ಆಡಳಿತ ಮಂಡಳಿ ಜಟಾಪಟಿ: ಫೆ. 12ಕ್ಕೆ ಅವಿಶ್ವಾಸ ನಿರ್ಣಯ ಮಂಡನೆಗೆ ಹೈಕೋರ್ಟ್ ಆದೇಶ

Published

on

ಹಾಸನ: ನಗರದ ಮಲೆನಾಡು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಜಟಾಪಟಿಗೆ ಸಂಬಂಧಿಸಿದಂತೆ ಹೈ ಕೋರ್ಟ್ ಮತ್ತೊಮ್ಮೆ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ನೀಡಿದ್ದು ಕೋರ್ಟ್ ನಿಂದಲೇ ವೀಕ್ಷಕರನ್ನು ನೇಮಕ ಮಾಡಿದೆ.

ಮಲೆನಾಡು‌ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಬಿ.ಆರ್. ಗರುದೇವ್ ಅವರ ತಂಡ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು.

ಹಾಸನ ಜಿಲ್ಲಾ ನ್ಯಾಯಾಲಯವು ಆರ್.ಟಿ. ದೇವೇಗೌಡ ಅವರನ್ನು ಅಧ್ಯಕ್ಷರಾಗಿ, ಜಗದೀಶ್ ಚೌಡುವಳ್ಳಿ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಪಾರ್ಶ್ವನಾಥ್ ಅವರನ್ನು ಖಜಾಂಚಿಗಳಾಗಿ ಮುಂದುವರಿಸಲು ಅನುಮತಿ ನೀಡಿದ್ದು, ಆಡಳಿತ ಮಂಡಳಿಯ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿ ಉಂಟುಮಾಡಬಾರದೆಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್, ಫೆಬ್ರವರಿ 12ರಂದು 2/3 ಸಂಖ್ಯಾಬಲದ ಮಾನದಂಡದಂತೆ ಮತ್ತೊಮ್ಮೆ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡಿದೆ. ಅಲ್ಲದೆ, ಅವಿಶ್ವಾಸ ನಿರ್ಣಯದ ಸಂಪೂರ್ಣ ಪ್ರಕ್ರಿಯೆಗೆ ಹೈಕೋರ್ಟ್‌ನಿಂದಲೇ ವೀಕ್ಷಕರನ್ನು ನೇಮಿಸಲಾಗಿದ್ದು, ಪ್ರಕ್ರಿಯೆಯ ಕುರಿತ ವರದಿಯನ್ನು ಫೆಬ್ರವರಿ 16ರಂದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಲೆನಾಡು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ, ಒಟ್ಟು 24 ನಿರ್ದೇಶಕರ ಪೈಕಿ ಕನಿಷ್ಠ 16 ನಿರ್ದೇಶಕರ ಬೆಂಬಲ ಅವಿಶ್ವಾಸ ನಿರ್ಣಯಕ್ಕೆ ಅಗತ್ಯವಿದೆ. ಪ್ರಸ್ತುತ ತಮ್ಮ ಪರವಾಗಿ 10 ನಿರ್ದೇಶಕರ ಸ್ಪಷ್ಟ ಬೆಂಬಲವಿದ್ದು, ಇನ್ನೂ 2–3 ನಿರ್ದೇಶಕರು ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ನಾವು ಮೊದಲ ದಿನದಿಂದಲೇ ನ್ಯಾಯಾಲಯದ ಆದೇಶಗಳನ್ನು ಗೌರವಿಸಿ, ಸಂಪೂರ್ಣ ಕಾನೂನುಬದ್ಧವಾಗಿ ಆಡಳಿತ ನಡೆಸಿಕೊಂಡು ಬಂದಿದ್ದೇವೆ. ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಗೌರವದಿಂದ ಸ್ವಾಗತಿಸುತ್ತೇವೆ. ಮುಂದಿನ ಅವಿಶ್ವಾಸ ನಿರ್ಣಯದಲ್ಲಿಯೂ ಜಯ ಸಾಧಿಸಿ, ಜನಪರ ಆಡಳಿತವನ್ನು ಮುಂದುವರೆಸುವೆವು ಎಂಬ ದೃಢ ವಿಶ್ವಾಸವಿದೆ ಎಂದು ಅವರು ಹೇಳಿದರು.

Continue Reading

Trending

error: Content is protected !!