Connect with us

Mandya

ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಮೀಸಲಾತಿ ಕಾರ್ಪೊರೇಟ್ ಕಂಪನಿಗಳು ತಿರಸ್ಕರಿಸಬಾರದು

Published

on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಕಂಪನಿಗಳಲ್ಲಿ ಉದ್ಯೋಗದ ಬಗ್ಗೆ ಮೀಸಲಾತಿ ತಂದಿರುವುದನ್ನು ಯಾವುದೇ ಕಾರಣಕ್ಕೂ ಕಾರ್ಪೊರೇಟ್ ಕಂಪನಿಗಳು ತಿರಸ್ಕರಿಸಬಾರದು ಎಂದು ಕನ್ನಡ ಸೇನೆ ಕರ್ನಾಟಕ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಸಿ.ಮಂಜುನಾಥ್ ತಿಳಿಸಿದರು..

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಮಾಹಿತಿಗಳನ್ನು ತರಿಸಿಕೊಂಡು ಸರೋಜಿನಿ ಮಹಿಷಿ ವರದಿ ವ್ಯಾಪ್ತಿಯಡಿ ಕಾರ್ಪೊರೇಟ್ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇಕಡ 70ರಷ್ಟು ಉದ್ಯೋಗ ಕಲ್ಪಿಸಲು ಆದೇಶ ಮಾಡಿದ್ದಾರೆ. ಆದರೆ ಈ ಆದೇಶವನ್ನು ಖಾಸಗಿ ಕಂಪನಿಗಳು ತಿರಸ್ಕರಿಸುತ್ತಿರುವುದು ಸರಿಯಲ್ಲ ಎಂದರು .

ಸಚಿವ ಸಂಪುಟದಲ್ಲಿ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ವಿಧೇಯಕ್ಕೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ವಿಚಾರವಾಗಿದ್ದು, ಆದರೆ ಖಾಸಗಿ ಉದ್ಯಮಿಗಳ ನಿಲುವು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದರು.

ಸರೋಜಿನಿ ಮಹಿಷಿ ವರದಿಗಾಗಿ ರಾಜ್ಯದಾದ್ಯಂತ ಕನ್ನಡ ಸೇನೆ ಮತ್ತು ಹಲವಾರು ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿಕೊಂಡು ಬಂದಿದೆ .ಕನ್ನಡ ಅಭಿವೃದ್ಧಿ ಪ್ರಾಧಿಕಾರ ,ಕನ್ನಡದ ನಿಘಂಟು ತಜ್ಞರು, ವಿದ್ವಾಂಸರನ್ನು ಕರೆಸಿ ಸರೋಜಿನಿ ಮಹಿಷಿ ವರದಿ ಜಾರಿಗಾಗಿ ವಿಚಾರ ಸಂಕಿರಣವನ್ನು ನಡೆಸುತ್ತಾ ಬಂದಿದ್ದೇವೆ ಎಂದರು. ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನವನ್ನು ರಾಜ್ಯದ ಏಳು ಕೋಟಿ ಜನರು ಸ್ವಾಗತಿಸಿದ್ದಾರೆ. ಆದರೆ ಕಾರ್ಪೊರೇಟ್ ವಲಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು,‌ ಖಾಸಗಿ ಕಂಪನಿಗಳು ಮೀಸಲಾತಿಯನ್ನು ವಿರೋಧ ಮಾಡುವುದಾದರೆ ಅವರು ರಾಜ್ಯದಲ್ಲಿ ಕಂಪನಿ ನಡೆಸಲು ಯೋಗ್ಯರಲ್ಲ . ಅವರು ಕನ್ನಡದ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು .

ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಒಪ್ಪುವ ಖಾಸಗಿ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಮಾತ್ರ ರಾಜ್ಯದ ತೀರ್ಮಾನವನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಖಾಸಗಿಯವರು ಎಚ್ಚೆತ್ತುಕೊಳ್ಳಬೇಕು . ಕರ್ನಾಟಕ ಜನರನ್ನು ಎದ್ದೇಳುವ ಪರಿಸ್ಥಿತಿಗೆ ತರಬಾರದು. ಒಂದು ವೇಳೆ ಸಂಪುಟದ ತೀರ್ಮಾನವನ್ನು ವಿರೋಧಿಸಿದರೆ ಬೀದಿಗಿಳಿದು ತೀವ್ರ ಸ್ವರೂಪದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು .

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಈ ವಿಚಾರವನ್ನು ವಿಧಾನ ಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಮಂಡಿಸಿ ಅಂಗೀಕಾರ ಪಡೆಯಬೇಕು ಎಂದು ಒತ್ತಾಯಿಸಿದರು.

ಖಾಸಗಿ ಕಂಪನಿಯಲ್ಲಿ ಮೀಸಲಾತಿಯ ಬಗ್ಗೆ ಮೂರು ಪಕ್ಷಗಳು ಶಾಸಕರ ಸಭೆಯನ್ನು ನಡೆಸಬೇಕು .ತಮ್ಮ ಶಾಸಕರಿಗೆ ಸುತ್ತೋಲೆಯನ್ನು ಹೊರಡಿಸಬೇಕು. ಆ ಮೂಲಕ ಮೀಸಲಾತಿಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದರು .

ಈಗಾಗಲೇ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಎಲ್ಲಾ ಪಕ್ಷದ ನಾಯಕನನ್ನು ಭೇಟಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಮೀಸಲಾತಿಯನ್ನು ಕಡೆಗಣಿಸಬಾರದು. ಒಂದು ವೇಳೆ ಇಂತಹ ಕ್ರಮಕ್ಕೆ ಮುಂದಾದರೆ ಖಾಸಗಿ ಕಂಪನಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು .

ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಮಹಾಂತಪ್ಪ ,ಎಂ ಬೆಟ್ಟಹಳ್ಳಿ ಮಂಜುನಾಥ್, ಕಮ್ಮನಾಯಕನಹಳ್ಳಿ ಮಂಜು, ನಗರ ಸಭೆ ಸದಸ್ಯ ಸೌಭಾಗ್ಯ ಶಿವಲಿಂಗು ,ಸೂನಗಹಳ್ಳಿ ಸತೀಶ್ ಉಪಸ್ಥಿತರಿದ್ದರು.

Continue Reading

Mandya

ಕೆ.ಆರ್.ಎಸ್ ಅಣೆಕಟ್ಟೆಯಿಂದ ಹೆಚ್ಚು ನೀರು ಬಿಡುವ ಸಾಧ್ಯತೆ

Published

on

ಮಂಡ್ಯ: ಕೆ.ಆರ್.ಎಸ್ ಕನ್ನಂಬಾಡಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಳವಾಗುತ್ತಿರುವ ಹಿನ್ನಲೆ, ಅಣೆಕಟ್ಟೆಯಿಂದ ಯಾವ ಕ್ಷಣದಲ್ಲಾದ್ರೂ ಹೆಚ್ಚಿನ ನೀರು ಬಿಡಬಹುದು ಎಂದು ನದಿ ತೀರದ ನಿವಾಸಿಗಳಿಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಜಲನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ, ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಣೆಕಟ್ಟೆಯಿಂದ ಯಾವುದೇ ಕ್ಷಣದಲ್ಲಾದರೂ ಅಧಿಕ ನೀರನ್ನು ಕಾವೇರಿ ನದಿಗೆ ಬಿಡಬಹುದು ಎಂದು ಪ್ರಕಟಣೆ ಮೂಲಕ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹಾಗಾಗಿ ಕಾವೇರಿ ನದಿ ತೀರದ ತಗ್ಗು ಪ್ರದೇಶದಲ್ಲಿ ವಾಷಿಸುತ್ತಿರುವ ಜನರು ‌ಮುಂಜಾಗ್ರತೆಯಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಪ್ರಸ್ತುತ ಅಣೆಕಟ್ಟೆಗೆ 44,452 ಕ್ಯೂಸೆಕ್ ನೀರು ಒಳ ಬರುತ್ತಿದ್ದು, 2,566 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಅಣೆಕಟ್ಟೆಯ ಗರಿಷ್ಟ ಮಟ್ಟ 124.80 ಅಡಿಯಾಗಿದ್ದು, ಇಂದು 116,60 ಅಡಿ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

Mandya

ಸಿದ್ದಗಂಗಾಶ್ರೀ ಉದ್ಯಾನವನದಲ್ಲಿ ದಾಸೋಹ ಹುಣ್ಣಿಮೆ

Published

on

ಮಂಡ್ಯ : ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಪರಮಪೂಜ್ಯ ಡಾ.ಶ್ರೀಶ್ರೀ.ಶಿವಕುಮಾರ ಮಹಾಸ್ವಮೀಜಿ ಉದ್ಯಾನವನದಲ್ಲಿ ಜು.21ನೇ ಭಾನುವಾರ ಸಂಜೆ 6ಗಂಟೆಗೆ `ದಾಸೋಹ ಹುಣ್ಣಿಮೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದ್ದಾರೆ.

ಸುದೀರ್ಘ 111ವರ್ಷಗಳ ಕಾಲ ಕನ್ನಡನಾಡಿನ ನೆಲದಲ್ಲಿ ಅನ್ನ, ಅಕ್ಷರ, ಆಸರೆಯಂತಹ ತ್ರಿವಿಧ ದಾಸೋಹವನ್ನು ನಡೆಸಿ ನಡೆದಾಡುವ ದೇವರೆಂದೆ ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ಸಿದ್ದಗಂಗಾ ಶ್ರೀಗಳ ಸಂಸ್ಮರಣೆಯ ಅಂಗವಾಗಿ ಪ್ರತಿ ತಿಂಗಳ ಹುಣ್ಣಿಮೆಯಂದು ಉದ್ಯಾನವನದಲ್ಲಿ `ದಾಸೋಹ ಹುಣ್ಣಿಮೆ’ ಮೂಲಕ ಹಸಿದವರಿಗೆ ಅನ್ನದಾಸೋಹ ನಡೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ದಾಸೋಹಕ್ಕೆ ಚಾಲನೆ ನೀಡಲಿದ್ದು, ನಗರಸಭೆ ಸದಸ್ಯರಾದ ಕೆ.ವಿದ್ಯಾಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ದಾಸೋಹದ ಮಹತ್ವ ಕುರಿತು ಮಾತನಾಡಲಿದ್ದಾರೆ. ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್‌ಬೆಟ್ಟಹಳ್ಳಿ, ಆಲಕೆರೆ ಗ್ರಾ.ಪಂ.ಮಾಜಿ ಸದಸ್ಯ ತರಕಾರಿ ಮಹೇಶ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ

Continue Reading

Mandya

ದುರಸ್ಥಿಯಾಗದ ಮಹದೇವಪುರ ರಸ್ತೆ : ನೆಲಕ್ಕುರುಳುತ್ತಿರುವ ಬೈಕ್ ಸವಾರರು

Published

on

ಶ್ರೀರಂಗಪಟ್ಟಣ : ತಾಲ್ಲೂಕಿನ ಮಹದೇವಪುರ( ಬೋರೆ) ರಸ್ತೆಯು ದುರಸ್ಥಿಯಾಗದ ಕಾರಣ ಬೃಹತ್ ಗುಂಡಿಗಳಾಗಿ ಬೈಕ್ ಸವಾರರು ಆಯತಪ್ಪಿ ನೆಲಕ್ಕುರುಳುತ್ತಿದ್ದಾರೆ.

ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ರಸ್ತೆಯಲ್ಲಾ ಕೆಸರುಮಯವಾಗಿದ್ದು, ಅರಕೆರೆ – ಮೈಸೂರು ಮಾರ್ಗವಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಬಸ್ಸು, ಲಾರಿ, ಕಾರುಗಳು ಬರುವ ವೇಳೆ ಬೈಕ್ ಸವಾರರೇನಾದರೂ ಬಂದಲ್ಲಿ ಅವರ ಪರಿಸ್ಥಿತಿ ಹೇಳತೀರದಂತಾಗಿದೆ.

ಬಟ್ಟೆಯೆಲ್ಲಾ ಹಳ್ಳದಿಂದ ಚಿಮ್ಮುವ ನೀರಿನಿಂದಾಗಿ ಕೆಸರುಮಯವಾಗುವುದರ ಜೊತೆಗೆ ಸ್ವಲ್ಪ ಎಚ್ಚರ ತಪ್ಪಿದರೂ ಸ್ಕಿಡ್ ಆಗಿ ನೆಲಕ್ಕೆ ಜಾರು ಬೀಳುವುದು ಗ್ಯಾರಂಟಿ. ಈಗಾಗಲೇ ಈ ಜಾಗದಲ್ಲಿ ಹಲವಾರು ಮಂದಿ‌ ನೆಲಕ್ಕುರುಳಿ ಪೆಟ್ಟು ಮಾಡಿಕೊಂಡಿದ್ದು, ಹೆಚ್ಚಿನ ಅಚಘಢಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಗಳು ರಸ್ತೆ ದುರಸ್ಥಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Continue Reading

Trending

error: Content is protected !!