Connect with us

Hassan

ರೈತರ ನ್ಯಾಯಯುತ ಬೇಡಿಕೆ ಈಡೇರಿಸದಿದದ್ರೇ ಡಿಸಿ ಕಛೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ ನೀಡಿದ ಹೆಚ್.ಕೆ. ರಘು

Published

on

ಹಾಸನ: ರಾಜ್ಯ ಸರಕಾರದ ರೈತ ವಿರೋಧಿ ನೀತಿ, ರೈತರ ಆತ್ಮಹತ್ಯೆ ತಡೆಗಟ್ಟಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ರೈತರ ನ್ಯಾಯಯುತ ಬೇಡಿಕೆ ಈಡೇರದಿದ್ದರೇ ಮುಂದಿನ ದಿನಗಳಲ್ಲಿ ಡಿಸಿ ಕಛೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ. ರಘು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ರಾಜ್ಯದ ಜನತೆ ಬಹಳ ನಿರೀಕ್ಷೆಯೊಂದಿಗೆ ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ಭ್ರಷ್ಟಾಚಾರದಲ್ಲಿ ಮುಳುಗಿದ್ದ ಬಿ.ಜೆ.ಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು, ವಿಧಾನಸೌಧದಲ್ಲಿ ಪಕ್ಷದ ಆಡಳಿತ ಬದಲಾಗಿದೆ. ಅಧಿಕಾರ ನಡೆಸುತ್ತಿರುವವರ ಮುಖಗಳು ಬದಲಾಗಿವೆ. ಆದರೆ ಯಥಾಸ್ಥಿತಿ ಆಡಳಿತ ಮುಂದುವರೆಯುತ್ತಿದೆ. ಈ ಸರ್ಕಾರ ಬಂದು ಒಂದು ವರ್ಷದ ಅವಧಿಯಲ್ಲೇ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದ ೧೮೭ ಕೋಟಿ ಹಣ ದುರುಪಯೋಗದ ಹಗರಣದ ಆರೋಪಕ್ಕೆ ಒಳಗಾಗಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಲಂಗು ಲಗಾಮಿಲ್ಲದೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭೂ ಮಾಫಿಯಗಳ ಆಕ್ರಮಗಳು ನಿರಂತರವಾಗಿ ಸಾಗುತ್ತಲೇ ಇವೆ. ರೈತರ ಆತ್ಮಹತ್ಯೆ ಸರಣಿ ಮುಂದುವರೆಯುತ್ತಲೇ ಇದೆ. ಈ ಸರ್ಕಾರಕ್ಕೆ ಎಚ್ಚರಿಕೆ ನೀಡಿ ರೈತಪರ ನೀತಿಗಳನ್ನು ರೂಪಿಸಲು,

ರೈತರ ಆತ್ಮಹತ್ಯೆ ತಡೆಗಟ್ಟಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ರೈತರ ಪ್ರಮುಖ ಹಕ್ಕೊತ್ತಾಯಗಳು ಎಚಿದರೇ, ರೈತರು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಸ್ವತಃ ವೆಚ್ಚವನ್ನು ಭರಿಸಬೇಕೆಂದು ಸರ್ಕಾರ ತೀರ್ಮಾನಿಸಿದೆ. ಈ ತೀರ್ಮಾನವು ರೈತರಿಗೆ ಹೊರೆಯಾಗಿದ್ದು, ೨ ರಿಂದ ೩ ಲಕ್ಷ ರೂ. ದೊಡ್ಡ ಮೊತ್ತದ ವೆಚ್ಚವನ್ನು ರೈತರು ಭರಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ತೀರ್ಮಾನವನ್ನು ವಾಪಸ್ ಪಡೆದು ಹಿಂದಿನ ಪದ್ಧತಿಯನ್ನು ಮುಂದುವರೆಸಬೇಕು. ಚಳುವಳಿಯಲ್ಲಿ ರೈತ ಕುಟುಂಬದವರು ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಕಳೆದ ವರ್ಷ ಏಪ್ರಿಲ್ ನಿಂದ ಇದುವರೆಗೆ ೧೧೮೨ ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಈ ಆತ್ಮಹತ್ಯೆಗಳಲ್ಲಿ ಯುವಕರು ಹೆಚ್ಚು ಒಳಗಾಗಿರುವುದು ಆತಂಕಕ್ಕೀಡು ಮಾಡಿದೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ರೈತಪರ ಕಾರ್ಯಕ್ರಮಗಳನ್ನು ರೂಪಿಸಿ.

ರೈತ ಸಮುದಾಯಕ್ಕೆ ಆತ್ಮಸ್ಥೆರ್ಯ ತುಂಬಬೇಕು. ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕೃಷಿ ಬೆಲೆ ಆಯೋಗವನ್ನು ಸಬಲೀಕರಣಗೊಆಸಬೇಕು. ರಾಜ್ಯ ಸರ್ಕಾರವೇ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ನಿಗಧಿ ಮಾಡಿ ಖರೀದಿಸಬೇಕು. ಹಿಂದೆಂದೂ ಕಂಡರಿಯದ ಬರಗಾಲವನ್ನು ರಾಜ್ಯ ಎದುರಿಸಿದೆ. ಇಚಿತಹ ಸಚಿದರ್ಭದಲ್ಲೂ ಬ್ಯಾಂಕುಗಳು ಸಾಲ ಬಾಕಿ ವಸೂಲಿಗಾಗಿ ರೈತರಿಗೆ ಕಿರುಕುಳ ನೀಡುತ್ತಿವೆ. ಇದನ್ನು ತಪ್ಪಿಸಿ ರೈತರ ರಕಣೆಗೆ ಬರಬೇಕು ಎಂದು ಒತ್ತಾಯಿಸಿದರು.

ರೈತರ ಎಲ್ಲಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಾಭೀಮಾ ಯೋಜನೆಯನ್ನು ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆಹಾನಿ ನಿರ್ಧರಿಸಬೇಕು. ವಿಮಾ ಕಂಪನಿಗಳು ಉಳಿಸಿಕೊಂಡಿರುವ ಬಾಕಿಯನ್ನು ರೈತರ ಖಾತೆ ಕೂಡಲೇ ಹಾಕಬೇಕು. ಫಸಲು ಪಹಣಿ ದುರಸ್ಥಿ, ವಕ್ಯಾನೋಡು ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು, ಆದನ್ನು ಕೂಡಲೇ ಇಳಿಸಿ ರೈತರಿಂದ ಖರೀದಿ ಕೇಂದ್ರದ ಮೂಲಕ ಚೋಳ, ರಾಗಿ ಇತ್ಯಾದಿ ಉತ್ಪನ್ನಗಳನ್ನು ಖರೀದಿ ಮಾಡಿದ್ದು, ಇನ್ನೂ ರೈತರಿಗೆ ಹಣ ಪಾವತಿಯಾಗಿಲ್ಲ ಕೂಡಲೇ ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಬರ ಪರಿಹಾರದ ಹಣ, ವಿಮಾ ಪರಿಹಾರದ ಹಣವನ್ನೂ ಸಹ ಬ್ಯಾಂಕ್‌ನವರು ಸಾಲಕ್ಕಾಗಿ ಜಮಾ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ನವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ ಇದನ್ನು ತಪ್ಪಿಸಬೇಕು ಎಚಿದರು. ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖಾ ಕಿರುಕುಳವನ್ನು ತಪ್ಪಿಸಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೂ ಪಟ್ಟಾ ನೀಡಬೇಕು. ಕಾಡು ಪ್ರಾಣಿಗಳಿಂದ ಹಾಳಾದ ಶಸ್ತಿ, ಪ್ರಾಣ ಪಾನಿ, ನಪ್ಪವಾದ ಬೆಳೆಗಳಿಗೆ ವ್ಶೆಜ್ಞಾನಿಕ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಮತ್ತು ರೈತರ ಜಮೀನಿನಲ್ಲಿ ಬೆಳೆಯುವ ಸಾಗುವನಿ ಕಡಿತ ಮತ್ತು ಸಾಗಾಣಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಿ. ಕಬ್ಬು

ಬೆಳೆಗಾರರಿಗೆ ಕಾರ್ಖಾನೆಗಳು ಟನ್ ಒಂದಕ್ಕೆ ೧೫೦ ರೂ. ಪಾವತಿಸಬೇಕೆಂದು ಹಿಂದಿನ ಸರ್ಕಾ ತೀರ್ಮಾನಿಸಿದ್ದು, ಇದಕ್ಕಿರುವ ತಾಂತ್ರಿಕ ತೊಂದರೆಗಳನ್ನು ಕೊಡಲೇ ನಿವಾರಿಸಿ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಎಸ್.ಎ.ಪಿ ಘೋಷಿಸಬೇಕು. ಸರ್ಕಾರ ಮಾತಿನಚಿತೆ ಭೂ-ಸ್ಮಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯೆ ನಿಷೇದ ಕಾಯ್ದೆಯನ್ನು ಕೂಡಲೆ ಹಿಂಪಡೆಯಬೇಕು ಎಚಿದು ಹೇಳಿದರು. ಕಂದಾಯಗಳು, Pಯದಬಳು ರೇಷ್ಟೋಗೆ ಅವಕಾಶ ಕಲ್ಪಿಸಿ ಜಿಲ್ಲೆಯ ಎಲ್ಲಾ ಕಲ್ಲೂರು ಮಾಡಬಹುದಾದ ಸಂಬಂಧಿಸಿದಂತೇ ಗ್ಯಾಸ್ ಸಿಲಿಂಡರನ ಮೌಲ್ಯಕ್ಕಿಂತ ಹೆಚ್ಚಾಗಿ ೫೦ ರಿಂದ ೧೦೦ ರೂಗಳನ್ನು ಹೆಚ್ಚಾಗಿ ಸಾಗಾಣಿಕೆ ವೆಚ್ಚ ಪಡೆಯುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ಗೆ ೨ ಕೆಜಿ ಪಡಿತರವನ್ನು ಕಡಿಮೆ ನೀಡುತ್ತಾರೆ. ಮತ್ತು ಹೆಬ್ಬೆಟ್ಟು ಗುರುತು ಪಡೆಯಲು ಹತ್ತು ರೂಗಳನ್ನು ಪಡೆಯುತ್ತಿದ್ದು, ಸರ್ಕಾರಿ ವೈದ್ಯರು ನಿಗದಿತ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಮತ್ತು ಹೆಚ್ಚಾಗಿ ತಮ್ಮ ಖಾಸಗಿ ಕ್ಲಿನಿಕ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು. ಸರ್ಕಾರ ಹಾಲಿನ ದರ ೨+೨=೪ ರೂ ಕಡಿಮೆ ಮಾಡಿದೆ ಮತ್ತು ಪ್ರೋತ್ಸಾಹ ಧನವನ್ನು ಹಲವಾರು ತಿಂಗಳಿಂದ ಬಾಕಿ ಉಳಿಸಿ ಕೊಂಡಿದೆ ತಿಂಗಳ ಪೇಮೆಂಟ್ ಕೊಡುತ್ತಿಲ್ಲ, ಕೊಡಲೇ ದರವನ್ನು ಹೆಚ್ಚಿಸಿ ಮತ್ತು ಬಾಕಿಯಿರುವ ಹಣವನ್ನು ಬಿಡುಗಡೆ ಮಾಡಬೇಕು ಎಚಿದು ಆಗ್ರಹಿಸಿದರು. ಏನಾದರೂ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳದಿದ್ದರೇ ಡಿಸಿ ಕಛೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಚಿದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಶೆಟ್ಟಿ, ಅರಸೀಕೆರೆ ತಾಲೂಕು ಅಧ್ಯಕ್ಷ ಶಿವಮೂರ್ತಿ, ಅರಕಲಗೂಡು ತಾಲೂಕು ಅಧ್ಯಕ್ಷ ದಿನೇಶ್ Uಡ, ಹೊಳೆನರಸೀಪುರ ತಾಲೂಕು ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷ ವಾಜೀದ್ ಬೇಗ್ ಇತರರು ಉಪಸ್ಥಿತರಿದ್ದರು.

Continue Reading

Hassan

ಕಾಫಿ ಕಳ್ಳತನ ಮಾಡಿದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಹಲ್ಲೆ ಕೇಸು ಹಾಕುವ ಬೆದರಿಕೆ : ನ್ಯಾಯ ಕೊಡಿಸುವಂತೆ ಅಕ್ಷಿತಾ ಮನವಿ

Published

on

ಹಾಸನ: ಜಮೀನಿನಲ್ಲಿ ಕಾಫಿ ಕದ್ದು ಕೂಯ್ದ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಹಲ್ಲೆ ಮತ್ತು ಅಟ್ರಾಸಿಟಿ ಹಾಕುವುದಾಗಿ ಬೆದರಿಕೆ ಹಾಕಲಾಗುತ್ತಿದ್ದು, ನಮಗೆ ನ್ಯಾಯಕೊಡಿಸಬೇಕೆಂದು ಕೊಡಗಲವಾಡಿ ಗ್ರಾಮದ ಅಕ್ಷತಾ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅಕ್ಷತಾ ಕೊಡಗಲವಾಡಿ ಯಾದ ನಾನು ಸುಮಾರು ೭-೮ ವರ್ಷಗಳಿಂದ ಆಲೂರು ತಾಲೂಕಿನ ಕೊಡಗಲವಾಡಿ ಗ್ರಾಮದ ಸರ್ವೆ ನಂ ೧೭/೨ ರಲ್ಲಿ ನಮ್ಮ ಮನೆಯಲ್ಲಿ ವಾಸವಾಗಿರುತ್ತೇನೆ. ಮನೆಯ ಪಕ್ಕದಲ್ಲೇ ಕಾಫಿ ಗಿಡಗಳಿದ್ದು, ಅದರ ಕಾಫಿ ಹಣ್ಣನ್ನು ನನ್ನ ಚಿಕ್ಕಮ್ಮ ಕುಯ್ಯುತಿದ್ದಾಗ ಪಕ್ಕದ ತೋಟದ ಮಂಜುನಾಥ್ ಎಂಬುವವರ ಅಣ್ಣ ಕಾಂತಾ ಮತ್ತು ಅವರ ಮಗ ಬಾಲರಾಜ್ ಎಂಬುವವರು ಅಲ್ಲಿಗೆ ಬಂದು ನನ್ನ ಚಿಕ್ಕಮ್ಮನಿಗೆ ಅವ್ಯಾಚ ಶಬ್ದಗಳಿಂದ ಬೈದು ಅವರು ಅದಕ್ಕೆ ಯಾಕೆ ಎಂದು ಕೇಳುವಾಗ ಅವರ ತಲೆ ಕೂದಲಿಗೆ ಕೈ ಹಾಕಿ ಮುಡಿ ಎಳೆದಾಡುತ್ತಿದ್ದಾಗ ಅವರು ಕಿರುಚಡುತಿದ್ದನ್ನು ಕಂಡು ನಾನು ಮನೆಯಿಂದ ಹೋಗಿ ಬಿಡಿಸಲು ಯತ್ನಿಸಿದಾಗ ನನ್ನ ಮೇಲೂ ಹಲ್ಲೆ ಮಾಡಿ ನನ್ನನ್ನು ಕೆಳಗೆ ತಳ್ಳಿ ಬೀಳಿಸಿರುತ್ತಾರೆ ಎಂದು ದೂರಿದರು. ಅಲ್ಲೇ ಬಿದ್ದಾಗ ರಕ್ತಸ್ರಾವ ಉಂಟಾಗಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೊರಬರುವಾಗ ನನ್ನನ್ನು ಅವ್ಯಚ್ಯಾ ಶಬ್ದಗಳಿಂದ ನಿಂದಿಸಿ ನಿನ್ನ ಮನೆಯನ್ನು ಪುಡಿ ಮಾಡುವುದಾಗಿ ಮತ್ತು ಮುಂದೆ ನಾವು ಅವರು ಹೇಳಿದಂತೆ ಕೆಳದಿದ್ದರೆ ಅಟ್ರಾಸುಟಿ ಕೇಸ್ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ ಮತ್ತು ಅಲ್ಲೇ ಇದ್ದ ೬-೭ ಕಾಫಿ ಮೂಟೆಯ ಚೀಲಾಗಳನ್ನು ತೆಗೆದುಕೊಂಡು ಮುಂದೆ ನಾವು ಹೇಳಿದಂತೆ ಕೆಳದಿದ್ದರೆ ಇಲ್ಲಿರುವ ಗಿಡಗಳನ್ನು ಕಡಿದು ಬೆಂಕಿಗೆ ಹಾಕುತ್ತೆನೆಂದು ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಇದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದು, ಆಲೂರು ಪೊಲೀಸ್ ಸ್ಟೇಷನ್ ಅಲ್ಲಿ ಸುಮಾರು ೨ ಗಂಟೆಗೆ ದೂರು ದಾಖಲಾಯಿಸಲು ಹೋದಾಗ ನಮ್ಮ ದೂರನ್ನು ತೆಗೆದುಕೊಳ್ಳದೆ ೨ ಗಂಟೆಯವರೆಗೂ ಕಾಯಿಸಿರುತಾರೆ. ನನಗೆ ಹಲ್ಲೆ ಮಾಡಿದ ವ್ಯಕ್ತಿ ಬರುತ್ತಿದ್ದಾರೆ ಇರಿ ಎಂದು ಹೇಳಿದ್ದಾರೆ. ನಂತರ ನನಗೆ ಹೊಟ್ಟೆ ನೋವಾಗಿದೆ ಮತ್ತು ಸುಸ್ತು ಅಗುತಿದೆ ಹಾಗಾಗಿ ದೂರು ದಾಖಲಾಯಿಸಲು ತಡವಾದರೆ ಹಿಂಬಾರ ಕೊಡಿ ಎಂದು ಹೇಳಿದಾಗ ನನ್ನ ಚಿಕ್ಕಮ್ಮನಾ ದೂರನ್ನು ತೆಗೆದುಕೊಂಡು ಎಫ್.ಐ.ಆರ್. ಮಾಡುತ್ತಾರೆ. ನಂತರ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ನಿಮಗೆ ಪೆಟ್ಟು ಬಿದ್ದಿದ್ದರಿಂದ ಮತ್ತು ಮಾನಸಿಕ ಒತ್ತಡದಿಂದ ಹೀಗಾಗಿದೆ ಎಂದು ಎಂ.ಎಲ್.ಸಿ. ಮಾಡಿರುತಾರೆ. ನನ್ನ ೧೭/೨ ರಲ್ಲಿ ನ್ಯಾ ಲೋನ್ ಗಳಿದ್ದು ಪ್ರತಿ ವರ್ಷ ನನ್ನ ಜಾಗದ ಕಾಫಿ ಹಣ್ಣು ಕುಯುತಿದ್ದಾರೆ ಮುಂದೆ ನನ್ನ ತರ ರೈತರು ಹೇಗೆ ಜೀವನ ಮಾಡುವುದೆಂದು ಪ್ರಶ್ನೆ ಮಾಡಿದರು. ನಾನು ಒಬ್ಬ ಜನಪ್ರತಿನಿಧಿಯಾಗಿ ಒಬ್ಬ ೨೦ ರಿಂದ ೨೫ ವರ್ಷದ ಹುಡುಗ ಹೀಗೆ ಮಾಡಿದ್ದಾರೆ ಮುಂದಿನ ಆಗುಹೋಗುಗಳನ್ನು ಗಮನಿಸಿ ದೂರು ಕೊಟ್ಟಿರುತೇವೆ. ನಾನು ಅಟ್ರಾಸಿಟಿ ವಿರೋಧಿ ಅಲ್ಲ. ಇದರ ದುರುಪಯೋಗದ ವಿರೋಧಿ ಎಂದು ಹೇಳಿದರು. ಇವುಗಳನೆಲ್ಲ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಗಮನಿಸಿ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದರು.

Continue Reading

Hassan

ಸುತ್ತೂರು ಮಠದಿಂದ 2 ಲಕ್ಷಕ್ಕೂ ಅಧಿಕ ಉಪಕರಣ ಸರಕಾರಿ ವಾಣಿವಿಲಾಸ ಶಾಲೆಗೆ ಕೊಡುಗೆ

Published

on

ಹಾಸನ: ಶ್ರೀಕ್ಷೇತ್ರ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಕೃಪಾ ಆಶೀರ್ವಾದದಿಂದ ಸುಮಾರು ೨ ಲಕ್ಷಕ್ಕೂ ಅಧಿಕ ಮೊತ್ತದ ದೂರದರ್ಶಕ ಯಂತ್ರ, ಸೂಕ್ಷ್ಮ ದರ್ಶಕ ಯಂತ್ರ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿ ವಿಲಾಸ ಶಾಲೆಗೆ ನೀಡಿದ್ದಾರೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದರು.

ನಗರದ ಮಹಾವೀರ ವೃತ್ತದ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರಾದ ಮೀನಾಕ್ಷಿ ಅವರಿಗೆ ಉಪಕರಣಗಳನ್ನು ಹಸ್ತಂತರಿಸಿದ ನಂತರ ಮಾತನಾಡಿದ ಅವರು, ಸುತ್ತೂರು ಮಠದಿಂದ ಸುಮಾರು ೮೦ ಸಾವಿರ ಮೌಲ್ಯದ ದೂರದರ್ಶಕ ಯಂತ್ರ, ಸುಮಾರು ೮ ಸಾವಿರ ಮೌಲ್ಯದ ಸೂಕ್ಷ್ಮದರ್ಶಕ ಯಂತ್ರಗಳು ಮತ್ತು ಸುಮಾರು ೧ ಲಕ್ಷಕ್ಕೂ ಮೀರಿದ ಮೌಲ್ಯದ ಸಾವಿರಕ್ಕೂ ಅಧಿಕ ಮೊತ್ತದ ಶುದ್ಧ ಕುಡಿಯುವ ನೀರಿನ ಘಟಕವಾದ ಅಕ್ವಾಗಾರ್ಡ್‌ಗಳು ಸುತ್ತೂರು ಮಠದಿಂದ ಮಹಾಪ್ರಸಾದವಾಗಿ ಶಾಲೆಗೆ ದೊರೆತ ಸುದಿನವಾಗಿದೆ ಎಂದರು.

ಸಹಕಾರವನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿಯವರೊಂದಿಗೆ ಇತ್ತೀಚಗೆ ಸುತ್ತೂರು ಜಗದ್ಗುರುಗಳು ಹಾಸನದ ಧಾರ್ಮಿಕ ಕಾರ್ಯಕ್ರಮಕ್ಕೆ ಅಗಮಿಸಿದ ಸಂದರ್ಭದಲ್ಲಿ ನಮ್ಮ ಸರ್ಕಾರಿ ಪ್ರಾಥಮಿಕ ವಾಣಿವಿಲಾಸ ಶಾಲೆಯಲ್ಲಿ ವಚನ ಕಂಠಪಾಠ ಕಾರ್ಯಕ್ರಮಕ್ಕೆ ಕರೆಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಮಾಡಿದ ಅವರು ಹೆಚ್ಚಿನ ಸಹಕಾರ ನೀಡಿ ಸುತ್ತೂರು ಮಠದಿಂದ ಉಪಕರಣಗಳನ್ನು ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು. ಜೆಎಸ್‌ಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ. ಮಧು ಕುಮಾರ್ ಹಾಗೂ ಬಾಲು ಸ್ವತಃ ಶಾಲೆಗೆ ಭೇಟಿ ನೀಡಿ ದೂರದರ್ಶಕ ಯಂತ್ರ ಸೂಕ್ಷ್ಮದರ್ಶಕ ಯಂತ್ರ ಹಾಗೂ ಅಕ್ವಾಗಾರ್ಡನ್ನು ನಮ್ಮ ಶಾಲೆಗೆ ನೀಡಿದ್ದಾರೆ.

ಈ ಒಂದು ಶುಭ ಕಾರ್ಯಕ್ರಮದಲ್ಲಿ ಚಾಪು ಮೂಡಿಸಿ ಸಹಕಾರ ನೀಡಿದ ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸುತ್ತಾ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ.

ಈ ಸಂದರ್ಭದಲ್ಲಿ ಜೆಎಸ್‌ಎಸ್ ಕಾಲೇಜು ಪ್ರಾಂಶುಪಾರು ಮಧುಕುಮಾರ್, ಬಾಲು, ಶಿಕ್ಷಣಾಧಿಕಾರಿಗಳು ಜಿ.ಎನ್. ಮಂಜುಳಾ ಇವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ವಾಣಿವಿಲಾಸ ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಈ ಶಾಲೆಯ

ವಿದ್ಯಾರ್ಥಿಗಳಿಗೂ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಶಿಕ್ಷಕರೆಲ್ಲರನ್ನು ಕುರಿತು ಪ್ರಯೋಗಗಳನ್ನು ಚಾಲನೆ ಮಾಡುವಂತೆ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಪ್ರಶಂಸೆ ವ್ಯಕ್ತಪಡಿಸಿದರು. ವಸ್ತುಗಳನ್ನು ನೀಡುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಹಾಗೂ ವಿಶೇಷವಾಗಿ ಪರಮಪೂಜ್ಯ ಸ್ವಾಮೀಜಿ ಅವರಿಗೆ ಶಾಲೆಯ ಪರವಾಗಿ ವೈಯಕ್ತಿಕವಾಗಿ ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆ ಸಲ್ಲಿಸಿ ಕೋಟಿ ನಮನಗಳನ್ನು ಪಾದಕಮಲಗಳಿಗೆ ಅರ್ಪಿಸುತ್ತೇನೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಎಂ.ಎಚ್. ಮೀನಾಕ್ಷಿ ಕೃತಜ್ಞತೆ ಸಲ್ಲಿಸಿದರು.

 

Continue Reading

Hassan

ಪತ್ನಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಪತಿ

Published

on

ಹಾಸನ : ಪತ್ನಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಪತಿ

ಪತ್ನಿಯ ಅಂಗಾಗಗಳನ್ನು ದಾನ ಮಾಡಿದ ಪತಿ

ಜ.9 ರಂದು ಪತಿ ಮಂಜೇಗೌಡ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದ ಮತ್ತೊಂದು ಬೈಕ್

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಮ್ಯಾ (28)

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಹೋಬಳಿ, ಕಾವಲುಬಾರೆ ಗ್ರಾಮದ ಬಳಿ ನಡೆದಿದ್ದ ಘಟನೆ

ಹೊನ್ನಶೆಟ್ಟಿಹಳ್ಳಿ ಗ್ರಾಮದ ಮಂಜೇಗೌಡ ಅವರ ಪತ್ನಿ ರಮ್ಯಾ

ತೀವ್ರವಾಗಿ ಗಾಯಗೊಂಡಿದ್ದ ರಮ್ಯಾ ಅವರನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿದ್ದ ಮಂಜೇಗೌಡ

ತಲೆಗೆ ತೀವ್ರವಾದ ಗಾಯವಾಗಿದ್ದರಿಂದ ನಿಷ್ಕ್ರಿಯಗೊಂಡಿದ್ದ ಮೆದುಳು

ರಮ್ಯಾ ಅಂಗಾಗಳನ್ನು ದಾನ ಮಾಡಿದ ಪತಿ ಮಂಜೇಗೌಡ ಹಾಗೂ ಪೋಷಕರು

ಆದಿಚುಂಚನಗಿರಿ ಆಸ್ಪತ್ರೆ ಅಂಗಾಂಗಗಳನ್ನು ದಾನ ಮಾಡಿದ ಪೋಷಕರು

Continue Reading

Trending

error: Content is protected !!